ಭಾರತ-ಇಂಗ್ಲೆಂಡ್; ಎರಡನೇ ಟೆಸ್ಟ್ ಪಂದ್ಯಕ್ಕೂ ಬುಮ್ರಾ ಡೌಟ್

news18
Updated:August 6, 2018, 10:10 PM IST
ಭಾರತ-ಇಂಗ್ಲೆಂಡ್; ಎರಡನೇ ಟೆಸ್ಟ್ ಪಂದ್ಯಕ್ಕೂ ಬುಮ್ರಾ ಡೌಟ್
news18
Updated: August 6, 2018, 10:10 PM IST
ನ್ಯೂಸ್ 18 ಕನ್ನಡ

ಭಾರತ-ಇಂಗ್ಲೆಂಡ್ ನಡುವಣ ಎರಡನೇ ಟೆಸ್ಟ್​ ಪಂದ್ಯ ಆಗಸ್ಟ್ 9ರಿಂದ ಕ್ರಿಕೆಟ್ ಕಾಶಿ ಲಾರ್ಡ್ಸ್​​​ ಮೈದಾನದಲ್ಲಿ ಆರಂಭವಾಗಲಿದ್ದು ಟೀಂ ಇಂಡಿಯಾಕ್ಕೆ ಈ ಪಂದ್ಯ ಗೆಲ್ಲಲೇ ಬೇಕಾಗಿದೆ. ಆದರೆ ಎರಡನೇ ಟೆಸ್ಟ್ ಪಂದ್ಯಕ್ಕೂ ಭಾರತದ ಪ್ರಮುಖ ವೇಗಿ ಜಸ್ ಪ್ರೀತ್ ಬೂಮ್ರಾ ಅಲಭ್ಯರಾಗುವ ಸಾಧ್ಯತೆ ಕಂಡು ಬಂದಿದೆ.

ಐರ್ಲೆಂಡ್ ವಿರುದ್ಧದ ಟಿ-20 ಸರಣಿ ವೇಳೆ ಬುಮ್ರಾ ಅವರ ಹೆಬ್ಬೆರಳಿಗೆ ಗಾಯವಾಗಿತ್ತು. ಹೀಗಾಗಿ ಇಂಗ್ಲೆಂಡ್ ವಿರುದ್ಧದ ಟಿ-20 ಹಾಗೂ ಏಕದಿನ ಸರಣಿಯಿಂದ ಹೊರಗುಳಿದಿದ್ದರು. ಜುಲೈ 4ರಂದು ಬುಮ್ರಾ ಅವರಿಗೆ ಚಿಕಿತ್ಸೆ ನೀಡಲಾಗಿತ್ತಾದರು, ಚಿಕಿತ್ಸೆಯಿಂದ ಚೇತರಿಸಿಕೊಳ್ಳದ ಕಾರಣ ವಿಶ್ರಾಂತಿಗಾಗಿ ಭಾರತಕ್ಕೆ ಕಳುಹಿಸಲಾಗಿತ್ತು. ಬಳಿಕ ಎರಡನೇ ಟೆಸ್ಟ್​​ಗೆ ಬುಮ್ರಾ ಅವರು ಭಾರತ ತಂಡ ಸೇರಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಹೆಬ್ಬೆರಳು ಗಾಯದಿಂದ ಬೂಮ್ರಾ ಅವರು ಇನ್ನೂ ಗುಣಮುಖರಾಗಿಲ್ಲ. ಹೀಗಾಗಿ ಮುಂದಿನ ಟೆಸ್ಟ್​ನಲ್ಲೂ ಬುಮ್ರಾ ಕಣಕ್ಕಿಳಿಯುವುದು ಅನುಮಾನವಾಗಿದೆ.
First published:August 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...