(VIDEO): ಆಸ್ಟ್ರೇಲಿಯಾದಲ್ಲಿ ಸಂಚಲನ ಮೂಡಿಸಿದೆ ಬುಮ್ರಾ ಬೌಲಿಂಗ್ ಶೈಲಿ

ಸ್ಟ್ರೇಲಿಯಾದಲ್ಲಿ ಬುಮ್ರಾ ಬೌಲಿಂಗ್ ಮಾಡುವ ಶೈಲಿ ಸಂಚಲನ ಮೂಡಿಸಿದ್ದು, ಪುಟ್ಟ ಬಾಲಕನೊಬ್ಬ ಥೇಟ್ ಬುಮ್ರಾ ರೀತಿಯೆ ಬೌಲಿಂಗ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ.

Pic: Twitter

Pic: Twitter

  • News18
  • Last Updated :
  • Share this:
ಆಸ್ಟ್ರೇಲಿಯಾ ಪ್ರವಾಸದಲ್ಲಿರು ಟೀಂ ಇಂಡಿಯಾ ಐತಿಹಾಸಿಕ ಟೆಸ್ಟ್​ ಸರಣಿ ಗೆದ್ದು ಏಕದಿನ ಸರಣಿಗೆ ಸಜ್ಜಾಗುತ್ತಿದೆ. ಟೆಸ್ಟ್​ ಪಂದ್ಯಗಳಲ್ಲಿ ಭಾರತದ ಸ್ಟಾರ್ ಬೌಲರ್, ಯಾರ್ಕರ್ ಸ್ಪೆಷಲಿಸ್ಟ್​​​ ಜಸ್​ಪ್ರೀತ್ ಬುಮ್ರಾ ಬೆಂಕಿಯ ಚೆಂಡಿಗೆ ಕಾಂಗರೂಗಳು ಪೆವಿಲಿಯನ್ ಹಾದಿ ಹಿಡಿದಿರುವುದನ್ನು ಕಂಡಿದ್ದೇವೆ.

ಇದರಿಂದಲೆ ಆಸ್ಟ್ರೇಲಿಯಾದಲ್ಲಿ ಬುಮ್ರಾ ಬೌಲಿಂಗ್ ಮಾಡುವ ಶೈಲಿ ಸಂಚಲನ ಮೂಡಿಸಿದೆ. ಆಸ್ಟ್ರೇಲಿಯಾದ ಪುಟ್ಟ ಬಾಲಕ ಒಬ್ಬ ಥೇಟ್ ಬುಮ್ರಾ ಶೈಲಿಯಲ್ಲೆ ಬೌಲಿಂಗ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ.

 ಇದನ್ನ ಮನಗಂಡು ಬುಮ್ರಾ ಈ ವಿಡಿಯೋಗೆ ರಿಪ್ಲೇ ಮಾಡಿದ್ದು, 'ಮುದ್ದಾದ ಮಗುವಿಗೆ ನನ್ನ ಶುಭಾಶಯಗಳು' ಎಂದು ಹೇಳಿದ್ದಾರೆ. ಅಷ್ಟೆಅಲ್ಲದೆ ಇದಕ್ಕೆ ಐಸಿಸಿ ಕೂಡ ಟ್ವೀಟ್ ಮಾಡಿದ್ದು, '2034ರಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಸರಣಿ ಕಬ್ಬಿಣದ ಕಡಲೆಯಂತೆ ಇರಲಿದೆ' ಎಂದು ಹೇಳಿ ಚಮಕ್ ನೀಡಿದೆ.

ಇದನ್ನೂ ಓದಿ: ಆಸೀಸ್​ ನಾಯಕ ಆಯ್ತು ಈಗ ರೋಹಿತ್ ಸರದಿ: ಪಂತ್​​ರನ್ನು 'ಬೇಬಿ ಸಿಟ್ಟರ್​' ಎಂದ ಹಿಟ್​ಮ್ಯಾನ್

  ಆಸ್ಟ್ರೇಲಿಯಾ ಟೆಸ್ಟ್​ ಸರಣಿಯಲ್ಲಿ ಒಟ್ಟು 21 ವಿಕೆಟ್ ಕಿತ್ತು ಬುಮ್ರಾ ಅವರು ಅದ್ಭುತ ಪ್ರದರ್ಶನ ತೋರಿದ್ದರು. ಸದ್ಯ ಬುಮ್ರಾಗೆ ವಿಶ್ರಾಂತಿ ನೀಡಲಾಗಿದ್ದು, ಆಸ್ಟ್ರೇಲಿಯಾ ವಿರುದ್ಧದ ಏಕದಿನ ಹಾಗೂ ನ್ಯೂಜಿಲೆಂಡ್ ವಿರುದ್ಧದ ಟಿ-20 ಸರಣಿಯಿಂದ ಹೊರಗಿಡಲಾಗಿದೆ. ಇವರ ಬದಲು ಏಕದಿನ ಸರಣಿಗೆ ಮೊಹಮ್ಮದ್ ಸಿರಾಜ್ ಹಾಗೂ ಟಿ-20 ಸರಣಿಗೆ ಸಿದ್ಧಾರ್ಥ್​​ ಕೌಲ್ ಅವರನ್ನು ಆಯ್ಕೆ ಮಾಡಲಾಗಿದೆ.

First published: