Jasprit Bumrah: ಟಿ20 ವಿಶ್ವಕಪ್​ಗೂ ಮುನ್ನ ಭಾರತ ತಂಡಕ್ಕೆ ಗುಡ್​ ನ್ಯೂಸ್​, ಟೀಂ ಇಂಡಿಯಾಗೆ ಕಂಬ್ಯಾಕ್​ ಮಾಡಲಿದ್ದಾರೆ ಬಲಗೈ ವೇಗಿ

jasprit bumrah: ಬೆನ್ನು ನೋವಿನ ಸಮಸ್ಯೆಯಿಂದ ಇಂಡಿಯಾ ತನ್ನ ಪ್ರಮುಖ ವೇಗದ ಬೌಲರ್‌ ಜಸ್‌ಪ್ರೀತ್‌ ಬುಮ್ರಾ ಅವರ ಅಲಭ್ಯತೆಯಲ್ಲಿ ಏಷ್ಯಾ ಕಪ್​ ಆಡುತ್ತಿದೆ. ಆದರೆ ಇದೀಗ ಬುಮ್ರಾ ಫಿಟ್​ ಆಗಿದ್ದಾರೆ ಎಂದು ತಿಳಿದುಬಂದಿದೆ.

ಬೂಮ್ರಾ

ಬೂಮ್ರಾ

  • Share this:
ಟೀಂ ಇಂಡಿಯಾ ಸದ್ಯ ಏಷ್ಯಾ ಕಪ್​ ಟೂರ್ನಿಯಲ್ಲಿ ತೊಡಗಿಕೊಂಡಿದೆ. ಇದಾದ ಬಳಿಕ ಆಸ್ಟ್ರೇಲಿಯಾ (Australia) ಮತ್ತು  ದಕ್ಷಿಣ ಆಫ್ರಿಕಾ (South Africa) ತಂಡಗಳು ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ಭಾರತ (Team India) ಪ್ರವಾಸ ಮಾಡಲಿವೆ. ಇದೇ ವೇಳೆ ಆರು ಟಿ20 ಹಾಗೂ ಮೂರು ಏಕದಿನ ಪಂದ್ಯಗಳು ನಡೆಯಲಿವೆ. ಸೆಪ್ಟೆಂಬರ್ ಎರಡನೇ ವಾರದಲ್ಲಿ ಟಿ20 ಸರಣಿಗಾಗಿ ಆಸ್ಟ್ರೇಲಿಯಾ (Australia) ತಂಡ ಭಾರತಕ್ಕೆ ಬರಲಿದೆ. ಮೂರು ಪಂದ್ಯಗಳ ಸರಣಿಯು ನಾಗ್ಪುರ, ಮೊಹಾಲಿ ಮತ್ತು ಹೈದರಾಬಾದ್‌ನಲ್ಲಿ ನಡೆಯಲಿದೆ. ಈ ಸರಣಿ ಮುಗಿದ ತಕ್ಷಣ, ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ (South Africa) ವಿರುದ್ಧ ಆಡಲಿದೆ. ಆಪ್ರಿಕಾ ವಿರುದ್ಧ ಮೂರು ಟ್ವೆಂಟಿ-20 ಹಾಗೂ ಮೂರು ಏಕದಿನ ಪಂದ್ಯಗಳು ನಡೆಯಲಿವೆ. ಆದರೆ ಈ ಎಲ್ಲಾ ಮಹತ್ವದ ಸರಣಿಗಳಿಗೆ ಟೀಂ ಇಂಡಿಯಾದ ಪ್ರಮುಖ ವೇಗದ ಬೌಲರ್​ ಅಲಭ್ಯತೆ ಇಷ್ಟು ದಿನಗಳ ಕಾಲ ಕಾಡುತ್ತಿತ್ತು. ಆದರೆ ಇದೀಗ ಸ್ಟಾರ್​ ಬೌಲರ್ ಫಿಟ್​ ಆಗಿದ್ದು, ಮತ್ತೆ ಟೀಂ ಇಂಡಿಯಾಗೆ ಕಂಬ್ಯಾಕ್ ಮಾಡಲಿದ್ದಾರೆ.

ಟೀಂ ಇಂಡಿಯಾಗೆ ಕಂಬ್ಯಾಕ್ ಮಾಡಲಿರುವ ಬುಮ್ರಾ:

ಹೌದು, ಬೆನ್ನು ನೋವಿನ ಸಮಸ್ಯೆಯಿಂದಾಗಿ ಜಸ್​ಪ್ರಿತ್ ಬುಮ್ರಾ (Jasprit Bumrah) ಅವರು ಏಷ್ಯಾ ಕಪ್​ 2022ರಿಂದ ಹೊರಗುಳಿದಿದ್ದಾರೆ. ಹೀಗಾಗಿ ಅವರು ಸದ್ಯ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿನ ಎನ್‌ಸಿಎ ಅಲ್ಲಿ ಅಭ್ಯಾಸ ನಡೆಸುತ್ತಿದ್ದು, ಮುಂಬರುವ  ಆಸ್ಟ್ರೇಲಿಯಾ ಅಥವಾ ಆಫ್ರಿಕಾ ವಿರುದ್ಧದ ಸರಣಿಗೆ ಲಭ್ಯರಾಗಲಿದ್ದಾರೆ ಎಂದು ಬಿಸಿಸಿಐ ಆಯ್ಕೆ ಸಮಿತಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಹೀಗಾಗಿ ಮುಂಬರುವ ಸರಣಿ ಮತ್ತು ಮಹತ್ವದ ಟಿ20 ವಿಶ್ವಕಪ್​​ ವೇಳೆಗೆ ಬುಮ್ರಾ ಟೀಂ ಇಂಡಿಯಾಗೆ ಕಂಬ್ಯಾಕ್​ ಮಾಡುತ್ತಿರುವುದು ಅಭಿಮಾನಿಗಳಲ್ಲಿ ಮತ್ತು ತಂಡದಲ್ಲಿ ಸಂತಸ ಮೂಡಿಸಿದೆ. ಅವರ ಆರೋಗ್ಯದ ಕುರಿತು ಮಾಹಿತಿ ನೀಡಿರುವ ಅಧಿಕಾರಿಯೊಬ್ಬರು, ‘ಜಸ್‌ಪ್ರೀತ್‌ ಬುಮ್ರಾ ಉತ್ತಮವಾಗಿ ಚೇತರಿಸುತ್ತಿದ್ದಾರೆ. ಫಿಸಿಯೋ ಜೊತೆಗೆ ನಿತ್ಯ ಸಂಪರ್ಕದಲ್ಲಿರುವ ಅವರು ಆಫ್ರಿಕಾ ಅಥವಾ ಆಸೀಸ್​ ಸರಣಿಗೆ ಭಾರತ ತಂಡವನ್ನು ಸೇರಿಕೊಳ್ಳಲಿದ್ದಾರೆ‘ ಎಂದು ಹೇಳಿದ್ದಾರೆ.

ಇದನ್ನೂ ಓದಿ: IND vs PAK Asia Cup 2022: ಈ ವಾರ ಮತ್ತೆ ಭಾರತ-ಪಾಕ್​ ಮುಖಾಮುಖಿ, ಕುತೂಹಲ ಹೆಚ್ಚಿಸಿದ ಏಷ್ಯಾ ಕಪ್​ ಟೂರ್ನಿ

ಆಸ್ಟ್ರೇಲಿಯ, ದಕ್ಷಿಣ ಆಫ್ರಿಕಾದ ಭಾರತ ಪ್ರವಾಸದ ವೇಳಾಪಟ್ಟಿ:
 ಭಾರತ Vs ಆಸ್ಟ್ರೇಲಿಯಾ :

ಸೆಪ್ಟೆಂಬರ್ 20, 1ನೇ ಟಿ20 (ಮೊಹಾಲಿ)
ಸೆಪ್ಟೆಂಬರ್ 23, 2ನೇ ಟಿ20 (ನಾಗ್ಪುರ)
ಸೆಪ್ಟೆಂಬರ್ 25, 3ನೇ ಟಿ20 (ಹೈದರಾಬಾದ್)

ಭಾರತ Vs ದಕ್ಷಿಣ ಆಫ್ರಿಕಾ :

ಸೆಪ್ಟೆಂಬರ್ 28, 1ನೇ ಟಿ20 (ತಿರುವನಂತಪುರಂ)
ಅಕ್ಟೋಬರ್ 2, 2 ನೇ ಟಿ20 (ಗುವಾಹಟಿ)
4 ಅಕ್ಟೋಬರ್, 3ನೇ T20I (ಇಂಧೋರ್)

ಭಾರತ Vs ದಕ್ಷಿಣ ಆಫ್ರಿಕಾ :

ಅಕ್ಟೋಬರ್ 6, 1 ನೇ ODI (ಲಕ್ನೋ)
ಅಕ್ಟೋಬರ್ 9, ಎರಡನೇ ODI (ರಾಂಚಿ)
11 ಅಕ್ಟೋಬರ್, ಮೂರನೇ ODI (ದೆಹಲಿ)

ಇದನ್ನೂ ಓದಿ: Asia Cup 2022: ದಾಖಲೆ ಬರೆದ ಇಂಡೋ-ಪಾಕ್​ ಕದನ, ಆದ್ರೂ RCB ರೆಕಾರ್ಡ್​ ಹತ್ರ ಬರೋಕೇ ಎರಡು ಗುಂಡಿಗೆ ಬೇಕು!

ಏಷ್ಯಾ ಕಪ್​ನಲ್ಲಿ ಭಾರತ ಶುಭಾರಂಭ:

ಇನ್ನು, ಏಷ್ಯಾ ಕಪ್​ 20222ರಲ್ಲಿ ಭಾರತ ತಂಡವು ಪಾಕ್​ ವಿರುದ್ಧ ಗೆಲ್ಲುವ ಮೂಲಕ ಟೂರ್ನಿಯಲ್ಲಿ ಉತ್ತಮ ಆರಂಭ ಪಡೆದುಕೊಂಡಿದೆ. ಪಾಕಿಸ್ತಾನದ ವಿರುದ್ಧ ಭಾರತವು 5 ವಿಕೆಟ್​ಗಳ ಜಯ ದಾಖಲಿಸಿದೆ. ಇದೀಗ ನಾಳೆ ಅಂದರೆ ಆಗಸ್ಟ್ 31ರಂದು ಭಾರತ ತಂಡವು ಹಾಂಕ್​ಕಾಂಗ್​ ವಿರುದ್ಧ ಸೆಣಸಾಡಲಿದೆ. ಇದರ ನಡುವೆ ಒಂದು ಲೆಕ್ಕಾಚಾರದ ಪ್ರಕಾರ ಟೀಂ ಇಂಡಿಯಾ ಮತ್ತು ಪಾಕಿಸ್ತಾನ ಇದೇ ವಾರದಲ್ಲಿ ಸೂಪರ್ 4 ಹಂತದಲ್ಲಿ ಮತ್ತೆ ಮುಖಾಮುಖಿಯಾಗುವ ಸಾಧ್ಯತೆ ಇದೆ.
Published by:shrikrishna bhat
First published: