ಫಿಫಾ ವಿಶ್ವಕಪ್ 2018: ನಾಕೌಟ್ ಹಂತಕ್ಕೇರಲು ಜಪಾನ್-ಸೆನೆಗಲ್ ಸೆಣೆಸಾಟ

news18
Updated:June 24, 2018, 2:21 PM IST
ಫಿಫಾ ವಿಶ್ವಕಪ್ 2018: ನಾಕೌಟ್ ಹಂತಕ್ಕೇರಲು ಜಪಾನ್-ಸೆನೆಗಲ್ ಸೆಣೆಸಾಟ
news18
Updated: June 24, 2018, 2:21 PM IST
ನ್ಯೂಸ್ 18 ಕನ್ನಡ

ಮಾಸ್ಕೋ (ಜೂ. 24): 21ನೇ ಆವೃತ್ತಿಯ ಫಿಫಾ ವಿಶ್ವಕಪ್​ನಲ್ಲಿಂದು ಒಟ್ಟು ಮೂರು ಪಂದ್ಯಗಳು ನಡೆಯಲಿದ್ದು, ಮೊದಲ ಪಂದ್ಯ ಇಂಗ್ಲೆಂಡ್ ಹಾಗೂ ಪನಾಮಾ ನಡುವೆ ಸೆಣೆಸಾಟ ನಡೆಯಲಿದೆ.

ಮೊದಲ ಪಂದ್ಯದಲ್ಲಿ ಗೆದ್ದ ವಿಶ್ವಸಾದಲ್ಲಿರುವ ಇಂಗ್ಲೆಂಡ್ ತಂಡ ಇಂದಿನ ಪಂದ್ಯ ಗೆದ್ದು ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸುವ ತವಕದಲ್ಲಿದೆ. ಕಳೆದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಇಂಗ್ಲೆಂಡ್ ತಂಡದ ಹ್ಯಾರಿ ಕೇನ್ ಅವರು ಇಂದಿನ ಪಂದ್ಯದಲ್ಲೂ ಮಿಂಚುವ ವಿಶ್ವಸಾದಲ್ಲಿದ್ದು, ಸಾಕಷ್ಟು ಕುತೂಹಲ ಕೆರಳಿಸಿದೆ. ಇತ್ತ ಕಳೆದ ಪಂದ್ಯದಲ್ಲಿ ಸೋಲುಂಡು ಇಂದಿನ ಪಂದ್ಯದಲ್ಲಿ ಕಮ್​ಬ್ಯಾಕ್ ಮಾಡುವ ಕನಸಲ್ಲಿ ಕಣಕ್ಕಿಳಿಯಲಿದೆ ಪನಾಮಾ ತಂಡ. ರೋಮನ್ ಟೋರೆಸ್, ಗ್ಯಾಬ್ರಿಯಲ್ ಗೋಮೆಜ್, ಲೂಯಿಸ್ ಟೆಜೆಡರಂತಹ ಅನುಭವಿ ಆಟಗಾರರನ್ನು ಪನಾಮಾ ತಂಡ ಹೊಂದಿದೆ.

ಇಂದು ನಡೆಯಲಿರುವ ಎರಡನೇ ಪಂದ್ಯದಲ್ಲಿ ಜಪಾನ್ ಹಾಗೂ ಸೆನೆಗಲ್ ತಂಡ ಮುಖಾಮುಖಿ ಆಗಲಿದೆ. ಈಗಾಗಲೆ ಎರಡೂ ತಂಡಗಳು ತಲಾ ಒಂದೊಂದು ಪಂದ್ಯ ಗೆದ್ದಿದ್ದು, ನಾಕೌಟ್​ ಹಂತ್ಕಕೇರಲು ಇಂದಿನ ಪಂದ್ಯ ಮುಖ್ಯವಾಗಲಿದೆ. ಕಳೆದ ಪಂದ್ಯದಲ್ಲಿ ಕೊಲಂಬಿಯಾ ವಿರುದ್ಧ 2-1 ಅಂತರದಿಂದ ಜಪಾನ್ ಜಯ ಸಾಧಿಸಿದ್ದರೆ, ಪೊಲೆಂಡ್ ವಿರುದ್ಧ ಸೆನೆಗಲ್ ತಂಡವು 2-1 ಅಂತರದಿಂದ ಗೆದ್ದಿತ್ತು. ಎರಡೂ ತಂಡ ಬಲಿಷ್ಠವಾಗಿದ್ದು ಆಕ್ರಮಣಕಾರಿ ಆಟನಡೆಯುವ ನಿರೀಕ್ಷೆಯಿದೆ.

ಇನ್ನು ಇಂದು ನಡೆಯಲಿರುವ ಮೂರನೇ ಪಂದ್ಯದಲ್ಲಿ ಪೋಲೆಂಡ್ ಹಾಗೂ ಕೊಲಂಬಿಯಾ ತಂಡಗಳು ಸೆಣೆಸಾಟ ನಡೆಸಲಿದ್ದು, ಪಂದ್ಯ ರೋಚಕತೆಯಿಂದ ಕೂಡಿದೆ. ಎರಡೂ ತಂಡಕ್ಕೆ ಇಂದಿನ ಪಂದ್ಯ ಮುಖ್ಯವಾಗಿದ್ದು, ನಾಕೌಟ್ ಆಸೆ ಉಳಿಸಿಕೊಳ್ಳುಲು  ಇದು ಕೊನೆಯ ಅವಕಾಶವಾಗಿದೆ.
First published:June 24, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ