ಕೊರೋನಾ ವೈರಸ್ ಭೀತಿ: ಟೋಕಿಯೊ ಒಲಿಂಪಿಕ್ಸ್ ಮುಂದೂಡಿಕೆ

12ನೇ ಒಲಿಂಪಿಕ್ಸ್ ಟೋಕಿಯೊದಲ್ಲಿ ಸೆಪ್ಟೆಂಬರ್ 21 ರಿಂದ 1940 ರ ಅಕ್ಟೋಬರ್ 6 ರವರೆಗೆ ನಡೆಯಬೇಕಿತ್ತು. ಆದರೆ ಎರಡನೇ ಮಹಾಯುದ್ಧದ ಕಾರಣ, ಅಂತಿಮವಾಗಿ ಈ ಒಲಿಂಪಿಕ್ಸ್ ಅನ್ನು ರದ್ದುಗೊಳಿಸಬೇಕಾಯಿತು.

ಈಗಾಗಲೆ ಟೋಕಿಯೋದಲ್ಲಿ ನಡೆಯಬೇಕಿದ್ದ 2020ರ ಒಲಿಂಪಿಕ್ ಕ್ರೀಡಾಕೂಟ ಕೂಡ ಕೊವಿಡ್-19ಗೆ ಬಲಿಯಾಗಿ 12 ತಿಂಗಳು ಮುಂದೂಡಲಾಗಿದೆ.

ಈಗಾಗಲೆ ಟೋಕಿಯೋದಲ್ಲಿ ನಡೆಯಬೇಕಿದ್ದ 2020ರ ಒಲಿಂಪಿಕ್ ಕ್ರೀಡಾಕೂಟ ಕೂಡ ಕೊವಿಡ್-19ಗೆ ಬಲಿಯಾಗಿ 12 ತಿಂಗಳು ಮುಂದೂಡಲಾಗಿದೆ.

  • Share this:
ಕರೋನಾ ವೈರಸ್‌ ಭೀತಿಯಿಂದ ಟೋಕಿಯೊ ಒಲಿಂಪಿಕ್ಸ್- 2020 ಅನ್ನು ಒಂದು ವರ್ಷಕ್ಕೆ ಮುಂದೂಡಲಾಗಿದೆ. ಇಂದು ಜಪಾನ್‌ನ ಪ್ರಧಾನಿ ಶಿಂಜೊ ಅಬೆ ಅವರು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯೊಂದಿಗೆ (ಐಒಸಿ) ದೂರವಾಣಿ ಮೂಲಕ ಚರ್ಚಿಸಿ ಈ ನಿರ್ಧಾರ ಪ್ರಕಟಿಸಿದ್ದಾರೆ.

ಐಒಸಿ ಜೊತೆ ನಡೆಸಿದ ಚರ್ಚೆಯಲ್ಲಿ  ಒಲಿಂಪಿಕ್ಸ್‌ ಸಮಿತಿ ಸಹಮತ ಸೂಚಿಸಿದ ಹಿನ್ನೆಲೆಯಲ್ಲಿ ಟೋಕಿಯೊ ಒಲಿಂಪಿಕ್ಸ್ ಅನ್ನು 2021ಕ್ಕೆ ಮುಂದೂಡಲಾಗಿದೆ ಎಂದು ಜಪಾನ್ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ. ಇದಕ್ಕೂ ಮುನ್ನ ಟೋಕಿಯೊ ಒಲಿಂಪಿಕ್ಸ್ ಮುಂದೂಡುವಂತೆ ಕೆನಡಾ, ಆಸ್ಟ್ರೇಲಿಯಾ, ಇಂಗ್ಲೆಂಡ್‌ನಂತಹ ಅನೇಕ ದೇಶಗಳು ಒತ್ತಡ ಹೇರಿತ್ತು. ಪ್ರಸ್ತುತ ಸನ್ನಿವೇಶದಲ್ಲಿ ಕ್ರೀಡಾಕೂಟದಲ್ಲಿ ಭಾಗವಹಿಸಲು ಅನೇಕ ಕ್ರೀಡಾಪಟುಗಳು ಕೂಡ ನಿರಾಕರಿಸಿದ್ದರು.

ಜುಲೈನಿಂದ ಪ್ರಾರಂಭವಾಗಬೇಕಿದ್ದ ಕ್ರೀಡಾಕೂಟ:
ಟೋಕಿಯೊ ಒಲಿಂಪಿಕ್ ಕ್ರೀಡಾಕೂಟ ಈ ವರ್ಷ ಜುಲೈ 24 ರಿಂದ ಆಗಸ್ಟ್ 9 ರವರೆಗೆ ನಡೆಯಬೇಕಿತ್ತು. ಕೆಲ ದಿನಗಳ ಹಿಂದೆಯಷ್ಟೇ ಗ್ರೀಸ್​ನಿಂದ ಒಲಿಂಪಿಕ್ ಕ್ರೀಡಾ ಜ್ಯೋತಿ ಟೋಕಿಯೊ ಪ್ರವೇಶಿಸಿತು. ಇದರ ಬೆನ್ನಲ್ಲೇ ಅನೇಕ ದೇಶಗಳು ಪ್ರಸ್ತುತ ಪರಿಸ್ಥಿತಿಯಲ್ಲಿ ಕ್ರೀಡಾಕೂಟದಿಂದ ಹಿಂದೆ ಸರಿಯುವುದಾಗಿ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಒಲಿಂಪಿಕ್​ನ್ನು ಒಂದು ವರ್ಷ ಮುಂದೂಡಲಾಗಿದೆ.

ಒಲಿಂಪಿಕ್ ಅನ್ನು 3 ಬಾರಿ ರದ್ದುಪಡಿಸಲಾಗಿದೆ..!
ಸಾಂಕ್ರಾಮಿಕ ರೋಗದ ಭೀತಿಯಿಂದ ಇದೇ ಮೊದಲ ಬಾರಿಗೆ ಒಲಿಂಪಿಕ್ ಕ್ರೀಡಾಕೂಟವನ್ನು ಮುಂದೂಡಲಾಗಿದೆ. ಆದರೆ, ಇದಕ್ಕೂ ಮುನ್ನ ಒಲಿಂಪಿಕ್ ಕ್ರೀಡಾಕೂಟವನ್ನು 3 ಬಾರಿ ರದ್ದುಪಡಿಸಲಾಗಿದೆ.

1916 ಬರ್ಲಿನ್ ಒಲಿಂಪಿಕ್: ಇತಿಹಾಸದಲ್ಲಿ ಮೊದಲ ಬಾರಿಗೆ, 1916 ರ ಒಲಿಂಪಿಕ್ಸ್ ರದ್ದುಗೊಂಡಿತು. ಮೊದಲ ವಿಶ್ವಯುದ್ಧದಿಂದಾಗಿ ಒಲಿಂಪಿಕ್ಸ್ ರದ್ದುಗೊಳಿಸಬೇಕಾಯಿತು.

1940 ಟೋಕಿಯೊ ಒಲಿಂಪಿಕ್: 12ನೇ ಒಲಿಂಪಿಕ್ಸ್ ಟೋಕಿಯೊದಲ್ಲಿ ಸೆಪ್ಟೆಂಬರ್ 21 ರಿಂದ 1940 ರ ಅಕ್ಟೋಬರ್ 6 ರವರೆಗೆ ನಡೆಯಬೇಕಿತ್ತು. ಆದರೆ ಎರಡನೇ ಮಹಾಯುದ್ಧದ ಕಾರಣ, ಅಂತಿಮವಾಗಿ ಈ ಒಲಿಂಪಿಕ್ಸ್ ಅನ್ನು ರದ್ದುಗೊಳಿಸಬೇಕಾಯಿತು. ಇದರ ನಂತರ ಫಿನ್​ಲ್ಯಾಂಡ್​ನಲ್ಲಿ 1952 ರಲ್ಲಿ ಬೇಸಿಗೆ ಒಲಿಂಪಿಕ್ಸ್ ಆಯೋಜಿಸಲಾಗಿತ್ತು.

1944 ಲಂಡನ್ ಒಲಿಂಪಿಕ್ಸ್: 13ನೇ ಒಲಿಂಪಿಕ್ಸ್ ಅನ್ನು ಲಂಡನ್ ಆಯೋಜಿಸಲಾಗಿತ್ತು. ಆದರೆ ಇದೇ ವೇಳೆ ಎರಡನೆಯ ಮಹಾಯುದ್ಧ ನಡೆಯುತ್ತಿದ್ದ ಕಾರಣ ಈ ಒಲಿಂಪಿಕ್ಸ್ ಸಹ ರದ್ದುಗೊಂಡಿತು. ಆ ಬಳಿಕ 1948 ರಲ್ಲಿ ಲಂಡನ್​ನಲ್ಲಿ 13ನೇ ಒಲಿಂಪಿಕ್ಸ್​ ಆಯೋಜಿಸಲಾಯಿತು.
First published: