ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯಲ್ಲಿ ನ್ಯೂಜಿಲೆಂಡ್ ತಂಡ ಭರ್ಜರಿ ಜಯದೊಂದಿಗೆ ಆರಂಭ ಪಡೆದುಕೊಂಡಿದೆ.
ಬ್ಯಾಟ್ಸ್ಮನ್ಗಳ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಮೊದಲ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ 45 ರನ್ಗಳ ಜಯ ಸಾಧಿಸಿದೆ. ಅದರಲ್ಲು ನ್ಯೂಜಿಲೆಂಡ್ನ ಆಲ್ರೌಂಡರ್ ಆಟಗಾರ ಜಿಮ್ಮಿ ನೀಶಮ್ ಅವರು ಒಂದೇ ಓವರ್ನಲ್ಲಿ ಐದು ಸಿಕ್ಸ್ ಸಿಡಿಸಿದ ಸಾಧನೆ ಮಾಡಿದ್ದಾರೆ.
ಕೊನೆಯ 50ನೇ ಓವರ್ನ ಪೆರೆರಾ ಅವರ 6 ಎಸೆತದಲ್ಲಿ ನೀಶಮ್ ಅವರು '6 6 6 6 2NB 6 1' ಒಟ್ಟು 34 ರನ್ ಚಚ್ಚಿದ್ದಾರೆ. ಇದರೊಂದಿಗೆ ಏಕದಿನ ಕ್ರಿಕೆಟ್ನ ಒಂದೇ ಓವರ್ನಲ್ಲಿ ಅತಿ ಹೆಚ್ಚು ರನ್ ಬಾರಿಸಿದವರ ಸಾಲಿನಲ್ಲಿ ನೀಶಮ್ ಅವರು ಮೂರನೆಯವರಾಗಿದ್ದಾರೆ.
ಇದನ್ನೂ ಓದಿ: ಐಪಿಎಲ್ 2019 ವೇಳಾಪಟ್ಟಿ ಸೋರಿಕೆ: ಘೋಷಣೆಗೂ ಮುನ್ನ ಇಂಟರ್ನೆಟ್ನಲ್ಲಿ ವೈರಲ್..!
ಈ ಹಿಂದೆ 2006ರಲ್ಲಿ ದಕ್ಷಿಣ ಆಫ್ರಿಕಾದ ಹರ್ಷಲ್ ಗಿಬ್ಸ್ ಅವರು ಆರು ಎಸೆತದಲ್ಲಿ ಆರು ಸಿಕ್ಸ್ ಸಿಡಿಸಿ ದಾಖಲೆ ಬರೆದಿದ್ದರು. ಬಳಿಕ ಪೆರೆರಾ ಅವರು ಒಂದು ಓವರ್ನಲ್ಲಿ 35 ರನ್ ಬಾರಿಸಿದ್ದರು. ಸದ್ಯ ನೀಶಮ್ ಅವರು 34 ರನ್ ಸಿಡಿಸಿದ್ದಾರೆ. ನೀಶಮ್ ಅವರು ಶ್ರೀಲಂಕಾ ವಿರುದ್ಧ ಒಟ್ಟು 13 ಎಸೆತಗಳಲ್ಲಿ 47 ರನ್ ಗಳಿಸಿ ಅಜೇಯರಾಗಿ ಉಳಿದರು.
🔥🔥🔥 WOW! What an over of batting from @JimmyNeesh!
6 6 6 6 2nb 6 1 - 34 runs off it! Crowd on their feet at @BayOvalOfficial! pic.twitter.com/ScNUYYkefE
— BLACKCAPS (@BLACKCAPS) January 3, 2019
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡ ಮಾರ್ಟಿನ್ ಗಪ್ಟಿಲ್ ಅವರ 138, ಕೇನ್ ವಿಲಿಯಮ್ಸನ್ ಅವರ 76, ರೋಸ್ ಟೇಲರ್ ಅವರ 54 ರನ್ಗಳ ನೆರವಿನಿಂದ ನಿಗದಿತ 50 ಓವರ್ನಲ್ಲಿ 371 ರನ್ ಕಲೆಹಾಕಿತ್ತು. ಈ ಗುರಿ ಬೆನ್ನತ್ತಿದ ಲಂಕಾನ್ನರು 49 ಓವರ್ನಲ್ಲಿ 326 ರನ್ಗೆ ಆಲೌಟ್ ಆಗುವ ಮೂಲಕ ಸೋಲೊಪ್ಪಿಗೊಂಡರು.
🔥 6 6 6 6 2nb 6 1 🔥
New Zealand all-rounder Jimmy Neesham smashed an incredible 34 runs in one over in the first #NZvSL ODI!
Details 👇 https://t.co/y63eGUnd6D pic.twitter.com/QJcYIPAhfB
— ICC (@ICC) January 3, 2019
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ