ಟೀಂ ಇಂಡಿಯಾ ವಿರುದ್ಧ ಅಬ್ಬರಿಸಿದ ಬಳಿಕ ಹಲ್ಲು ಮುರಿದುಕೊಂಡ ಇಂಗ್ಲೆಂಡ್ ಆಟಗಾರ

news18
Updated:August 6, 2018, 5:46 PM IST
ಟೀಂ ಇಂಡಿಯಾ ವಿರುದ್ಧ ಅಬ್ಬರಿಸಿದ ಬಳಿಕ ಹಲ್ಲು ಮುರಿದುಕೊಂಡ ಇಂಗ್ಲೆಂಡ್ ಆಟಗಾರ
news18
Updated: August 6, 2018, 5:46 PM IST
ನ್ಯೂಸ್ 18 ಕನ್ನಡ

ಟೀಮ್ ಇಂಡಿಯಾ ವಿರುದ್ಧ ಮೊದಲ ಟೆಸ್ಟ್​ ಪಂದ್ಯ ಗೆದ್ದು ಜಾಲಿ ಮೂಡ್​ನಲ್ಲಿರುವ ಇಂಗ್ಲೆಂಡ್​ ಆಟಗಾರರು ಬಿಡುವಿನ ವೇಳೆಯಲ್ಲಿ ಗಾಲ್ಫ್ ಆಡಲು ತೆರಳಿದ್ದರು. ಈ ವೇಳೆಯಲ್ಲಿ ಇಂಗ್ಲೆಂಡ್​ನ ಅನುಭವಿ ವೇಗಿ ಜೇಮ್ಸ್​ ಆ್ಯಂಡರ್ಸನ್ ಅವರು​ ಗಾಲ್ಫ್​ ಆಡುವಾಗ ತಾವು ಬಾರಿಸಿದ ಚೆಂಡು ತಮಗೆ ಬಡಿದು ಹಲ್ಲು ಮುರಿದುಕೊಂಡಿದ್ದಾರೆ.

ಈ ಕುರಿತು ವಿಡಿಯೋ ಹಂಚಿಕೊಂಡಿರುವ ಸ್ಟುವರ್ಟ್ ಬ್ರಾಡ್​, ಮೊಬೈಲ್​​​ನಲ್ಲಿ ರೆಕಾರ್ಡ್​ ಮಾಡಿದ್ದ ವಿಡಿಯೋವನ್ನು ತಮ್ಮ ಟ್ವಿಟರ್​​ನಲ್ಲಿ ಹರಿಬಿಟ್ಟಿದ್ದಾರೆ. ಸದ್ಯ ಆ್ಯಂಡರ್ಸನ್​​ಗೆ ಯಾವುದೇ ಗಂಭೀರ ಗಾಯವಾಗಿಲ್ಲ ಹಲ್ಲು ಅಷ್ಟೇ ಮುರಿದಿದೆ ಎಂದು ನಗುತ್ತಾ ಟ್ವೀಟ್ ಮಾಡಿದ್ದಾರೆ.

 
ಸ್ವಿಂಗ್ ಬೌಲಿಂಗ್​​​​​​​ ಮಾಡುವುದರಲ್ಲಿ ಸಖತ್ ಫೇಮಸ್​ ಇರುವ ಆ್ಯಂಡರ್ಸನ್​​ಗೆ ಇದೀಗ ತಾವು ಬಾರಿಸಿದ ಗಾಲ್ಫ್​ ಚೆಂಡು ತಮಗೇ ಸ್ವಿಂಗ್ ಆಗಿ ಬಡಿದಿರುವುದು ಬ್ರಾಡ್​​ಗೆ ಹೊಟ್ಟೆ ಹುಣ್ಣಾಗುವಂತೆ ನಗಿಸಿದೆ. ಸದ್ಯ ಈ ವಿಡಿಯೋ ಸಾಮಾಜಿಕ ತಾಣಗಳಲ್ಲಿ ಭಾರೀ ವೈರಲ್ ಆಗಿದೆ.
First published:August 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...