ಲಾರ್ಡ್ಸ್​ ಅಂಗಳದಲ್ಲಿ ದಾಖಲೆ ಬರೆದ ಬೌಲಿಂಗ್ ಲೆಜೆಂಡ್ ಆ್ಯಂಡರ್ಸನ್

news18
Updated:August 13, 2018, 6:58 PM IST
ಲಾರ್ಡ್ಸ್​ ಅಂಗಳದಲ್ಲಿ ದಾಖಲೆ ಬರೆದ ಬೌಲಿಂಗ್ ಲೆಜೆಂಡ್ ಆ್ಯಂಡರ್ಸನ್
news18
Updated: August 13, 2018, 6:58 PM IST
ನ್ಯೂಸ್ 18 ಕನ್ನಡ

ನಿನ್ನೆಯಷ್ಟೆ ಲಾರ್ಡ್ಸ್​ ಮೈದಾನದಲ್ಲಿ ಮುಕ್ತಾಯಗೊಂಡ ಭಾರತ-ಇಂಗ್ಲೆಂಡ್ ನಡುವಣ 2ನೇ ಟೆಸ್ಟ್​ನಲ್ಲಿ ಆಂಗ್ಲರು ಜಯ ಸಾಧಿಸಿ 2-0ಯ ಮುನ್ನಡೆ ಸಾಧಿಸಿದೆ. ಲಾರ್ಡ್ಸ್​​ನಲ್ಲಿ ಅದ್ಭುತ ಬೌಲಿಂಗ್ ಮೂಲಕ ಮಿಂಚಿದ ಇಂಗ್ಲೆಂಡ್ ಬೌಲಿಂಗ್ ಲೆಜೆಂಡ್ ಜೇಮ್ಸ್ ಆ್ಯಂಡರ್ಸನ್​ ಈ ಪಂದ್ಯದಲ್ಲಿ ದಾಖಲೆ ಬರೆದಿದ್ದಾರೆ.

2ನೇ ಇನ್ನಿಂಗ್ಸ್​ನಲ್ಲಿ ಮುರಳಿ ವಿಜಯ್ ವಿಕೆಟ್ ಪಡೆಯುತ್ತಿದ್ದಂತೆ ಆ್ಯಂಡರ್ಸನ್ ಟೆಸ್ಟ್​ ಕ್ರಿಕೆಟ್​ನಲ್ಲಿ 550ನೇ ವಿಕೆಟ್ ಸಂಪಾದಿಸಿದ್ದಾರೆ. ಇದರ ಜೊತೆಗೆ ಲಾರ್ಡ್ಸ್​ ಅಂಗಳದಲ್ಲಿ 100 ವಿಕೆಟ್ ಪಡೆದ ಸಾಧನೆ ಮಾಡಿದರು. ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಹೊರತುಪಡಿಸಿ ಒಂದೇ ಮೈದಾನದಲ್ಲಿ 100 ಟೆಸ್ಟ್​ ವಿಕೆಟ್​ ಪಡೆದ ಎರಡನೇ ಬೌಲರ್​ ಎಂಬ ಹೆಗ್ಗಳಿಕೆಗೆ ಆಂಡರ್ಸನ್ ಪಾತ್ರರಾಗಿದ್ದಾರೆ.

 


Loading...

First published:August 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ