News18 India World Cup 2019

18ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟಕ್ಕೆ ಚಾಲನೆ

news18
Updated:August 18, 2018, 3:29 PM IST
18ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟಕ್ಕೆ ಚಾಲನೆ
news18
Updated: August 18, 2018, 3:29 PM IST
ನ್ಯೂಸ್ 18 ಕನ್ನಡ

ಇಂಡೋನೇಷ್ಯಾದಲ್ಲಿ ನಡೆಯಲಿರುವ 18ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟಕ್ಕೆ ಕ್ಷಣಗಣನೆ ಶುರುವಾಗಿದೆ. ಈಗಾಗಲೇ ಎಲ್ಲಾ ಸಿದ್ಧತೆಗಳು ಮುಕ್ತಾಯಗೊಂಡಿದ್ದು, ಕ್ರೀಡಾಪಟುಗಳು ಕಣಕ್ಕಿಳಿಯುವುದಷ್ಟೇ ಬಾಕಿ ಉಳಿದಿದೆ. ಆಗಸ್ಟ್ 18 ರಿಂದ ಸೆಪ್ಟೆಂಬರ್ 2ರವರೆಗೆ ಕ್ರೀಡಾ ಹಬ್ಬ ಜರುಗಲಿವೆ. ರಾಜಧಾನಿ ಜಕಾರ್ತ ಮತ್ತು ಪಲೆಮ್‍ಬ್ಯಾಂಗ್ ನಗರಗಳಲ್ಲಿ ನಡೆಯುವ ಏಷ್ಯನ್ ಗೇಮ್ಸ್​ನಲ್ಲಿ 40 ಕ್ರೀಡಾ ವಿಭಾಗಗಳಲ್ಲಿ ಒಟ್ಟು 465 ಸ್ಪರ್ಧೆಗಳು ನಡೆಯಲಿವೆ. 45 ದೇಶಗಳ 11,000ಕ್ಕೂ ಹೆಚ್ಚು ಕ್ರೀಡಾಪಟುಗಳು ಈ ಕ್ರೀಡೋತ್ಸವದಲ್ಲಿ ಪದಕಗಳನ್ನು ಗೆಲ್ಲಲು ತೀವ್ರ ಪೈಪೋಟಿ ನಡೆಸಲಿದ್ದಾರೆ.

ರಾಜಧಾನಿ ಜಕಾರ್ತದ ಗೆಲೋರಾ ಬಂಗ್ ಕರ್ನೊ ಕ್ರೀಡಾಂಗಣದಲ್ಲಿ ಇಂದು ಏಷ್ಯಾ ಕ್ರೀಡಾಕೂಟದ ವರ್ಣರಂಜಿತ ಉದ್ಘಾಟನಾ ಸಮಾರಂಭ ಜರುಗಲಿದೆ. ಇನ್ನು ಇದೇ ಕ್ರೀಡಾಂಗಣದಲ್ಲಿ ಕ್ರೀಡಾಕೂಟಕ್ಕೆ ಸೆಪ್ಟೆಂಬರ್ 2 ರಂದು ತೆರೆ ಬೀಳಲಿದೆ. ಇಂಡೋನೇಷ್ಯಾದಲ್ಲಿ ಎರಡು ನಗರಗಳು ಏಷ್ಯನ್ ಗೇಮ್ಸ್ ಆತಿಥ್ಯ ವಹಿಸಿರುವುದು ಇದೇ ಮೊದಲು. 1962ರ ನಂತರ ಜಕಾರ್ತದಲ್ಲಿ ಏಷ್ಯಾ ಕ್ರೀಡಾಕೂಟ ನಡೆಯುತ್ತಿದ್ದು, ಜಕಾರ್ತದ ಜೊತೆಗೆ ದಕ್ಷಿಣ ಸುಮಾತ್ರದ ಪ್ರಾಂತೀಯ ರಾಜಧಾನಿ ಪಲೆಮ್‍ಬ್ಯಾಂಗ್ ನಗರಿಯೂ ಕ್ರೀಡಾಹಬ್ಬದ ಆತಿಥ್ಯ ವಹಿಸುತ್ತಿರುವುದು ವಿಶೇಷ. ಈ ಕ್ರೀಡಾಕೂಟದಲ್ಲಿ ಭಾರತ ಸೇರಿದಂತೆನ 45 ದೇಶಗಳು ಪದಕಕ್ಕಾಗಿ ಪೈಪೋಟಿ ನಡೆಸಲಿವೆ. ಭಾರತದಿಂದ 524 ಕ್ರೀಡಾಪಟುಗಳು 36 ಕ್ರೀಡೆಗಳಲ್ಲಿ ಭಾಗವಹಿಸಲಿದ್ದಾರೆ. ಇದರಲ್ಲಿ 277 ಪುರುಷರು ಹಾಗೂ 247 ಮಹಿಳಾ ಸ್ಫರ್ಧಿಗಳಿದ್ದಾರೆ.

ಒಟ್ಟಿನಲ್ಲಿ ಈ ಕ್ರೀಡಾಕೂಟದಲ್ಲಿ ಭಾಗವಹಿಸಲು ಎಲ್ಲಾ ಕ್ರೀಡಾಪಟುಗಳು ಎದುರು ನೋಡುತ್ತಿದ್ದು, ಉತ್ತಮ ಪ್ರದರ್ಶನದೊಂದಿಗೆ ಪದಕಗಳನ್ನು ಗೆಲ್ಲಲು ತುದಿಗಾಲಲ್ಲಿ ನಿಂತಿದ್ದಾರೆ. 16 ದಿನಗಳು ನಡೆಯುವ ಕ್ರೀಡಾ ಉತ್ಸವಕ್ಕೆ ಇಂಡೋನೆಷ್ಯಾ ಕೂಡ ಸಕಲ ಸಿದ್ಧತೆಗಳನ್ನು ಕೈಗೊಂಡಿದೆ. ಉಗ್ರರ ದಾಳಿಯ ಆತಂಕದ ಹಿನ್ನೆಲೆಯಲ್ಲಿಯೂ ವಿಶೇಷ ಭದ್ರತಾ ಏರ್ಪಾಡುಗಳನ್ನು ಮಾಡಲಾಗಿದೆ. ಭಯೋತ್ಪಾದನೆ ನಿಗ್ರಹ ದಳದ ಕಮ್ಯಾಂಡೋಗಳು ಹಾಗೂ ಶಾರ್ಪ್‍ಶೂಟರ್ಗಳನ್ನು ಕ್ರೀಡಾಂಗಣಗಳು ಹಾಗೂ ಸೂಕ್ಷ್ಮ ಸ್ಥಳಗಳಲ್ಲಿ ನಿಯೋಜಿಲಾಗಿದೆ.
First published:August 17, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...