ಅಂಡರ್-19 ಏಕದಿನ ಕ್ರಿಕೆಟ್: ಶ್ರೀಲಂಕಾ ವಿರುದ್ಧ ಭಾರತಕ್ಕೆ ಸರಣಿ ಗೆಲುವು


Updated:August 10, 2018, 8:31 PM IST
ಅಂಡರ್-19 ಏಕದಿನ ಕ್ರಿಕೆಟ್: ಶ್ರೀಲಂಕಾ ವಿರುದ್ಧ ಭಾರತಕ್ಕೆ ಸರಣಿ ಗೆಲುವು
ಭಾರತೀಯ ಕಿರಿಯ ಕ್ರಿಕೆಟಿಗರು

Updated: August 10, 2018, 8:31 PM IST
- ನ್ಯೂಸ್18 ಕನ್ನಡ

ಮೊರಾಟುವಾ(ಆ. 10): ಭಾರತ ಅಂಡರ್-19 ಕ್ರಿಕೆಟ್ ತಂಡವು ಶ್ರೀಲಂಕಾ ಪ್ರವಾಸದಲ್ಲಿ ಯುವ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ ಸರಣಿಗಳೆರಡನ್ನೂ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಶ್ರೀಲಂಕಾ ವಿರುದ್ಧದ 5 ಯೂತ್ ಓಡಿಐ ಸರಣಿಯನ್ನು ಭಾರತೀಯರು 3-2ರಿಂದ ಗೆದ್ದುಕೊಂಡಿದ್ದಾರೆ. ಇಂದು ನಡೆದ ಸರಣಿಯ 5ನೇ ಪಂದ್ಯದಲ್ಲಿ ಭಾರತ ಅಂಡರ್-19 ತಂಡ 8 ವಿಕೆಟ್​ಗಳಿಂದ ಗೆಲುವು ಪಡೆಯಿತು. ಯಶಸ್ವಿ ಜೈಸ್ವಾಲ್ ಅಜೇಯ ಶತಕ ಭಾರಿಸಿ ತಂಡಕ್ಕೆ ಸುಲಭ ಗೆಲುವು ತಂದಿತ್ತರು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಲಂಕನ್ನರು ನಿಗದಿತ 50 ಓವರ್​ನಲ್ಲಿ 9 ವಿಕೆಟ್ ನಷ್ಟಕ್ಕೆ 212 ರನ್ ಗಳಿಸಿದರು. ಇದಕ್ಕೆ ಪ್ರತಿಯಾಗಿ ಭಾರತೀಯ ಕಿರಿಯರು 43ನೇ ಓವರ್​ನಲ್ಲೇ ಗುರಿ ಮುಟ್ಟಿದರು. ಜೈಸ್ವಾಲ್ ಅಜೇಯ 114 ರನ್ ಗಳಿಸಿದರು. ಪಡಿಕ್ಕಲ್, ಪವನ್ ಶಾ ಮತ್ತು ಜುಯಲ್ ಅವರೂ ಉತ್ತಮವಾಗಿ ಬ್ಯಾಟ್ ಮಾಡಿದರು.

ಶ್ರೀಲಂಕಾದ ಇನ್ನಿಂಗ್ಸಲ್ಲಿ ನಿಶಾನ್ ಫರ್ನಾಂಡೋ 95 ರನ್ ಗಳಿಸಿದರು. ನುವನಿಡು ಫರ್ನಾಂಡೋ 56 ರನ್ ಕಲೆಹಾಕಿದರು. ಸೂರ್ಯಬಂಡಾರ 20 ರನ್, ಪರಣವಿತಾನ 17 ರನ್ ಗಳಿಸಿದರು. ಈ ನಾಲ್ವರನ್ನು ಬಿಟ್ಟು ಉಳಿದವರು ಎರಡಂಕಿ ಮೊತ್ತ ಕೂಡ ದಾಖಲಿಸಲಿಲ್ಲ. ಹೀಗಾಗಿ ಲಂಕಾ ಅಂಡರ್-19 ತಂಡ ಸಾಧಾರಣ ಮೊತ್ತ ಗಳಿಸಿ ಭಾರತಕ್ಕೆ ಗೆಲುವನ್ನು ಧಾರೆ ಎರೆದರು.

ಭಾರತ ಅಂಡರ್-19 ತಂಡ ಈ 5 ಪಂದ್ಯಗಳ ಸರಣಿಯಲ್ಲಿ ಮೊದಲ ಪಂದ್ಯ ಹಾಗೂ ಕೊನೆಯ ಎರಡು ಪಂದ್ಯಗಳನ್ನ ಗೆದ್ದು ಸರಣಿಯನ್ನು ವಶಪಡಿಸಿಕೊಂಡಿದೆ. ಏಕದಿನ ಕ್ರಿಕೆಟ್ ಸರಣಿಗೆ ಮುನ್ನ ನಡೆದ ಎರಡೂ ಯುವ ಟೆಸ್ಟ್ ಪಂದ್ಯಗಳನ್ನು ಭಾರತೀಯರೇ ಗೆದಿದ್ದರು. ಎರಡನ್ನೂ ಇನ್ನಿಂಗ್ಸ್ ಅಂತರದಲ್ಲಿ ಭಾರತ ಗೆದ್ದಿತ್ತು.

ಸ್ಕೋರು ವಿವರ:

ಶ್ರೀಲಂಕಾ ಅಂಡರ್-19 ತಂಡ 50 ಓವರ್ 212/9
(ಕೆ. ಫರ್ನಾಂಡೋ 95, ಎನ್. ಫರ್ನಾಂಡೋ 56, ಸೂರಿಯಬಂಡಾರ 20, ಪರಣವಿತಾನ 17 ರನ್ – ಎಂ. ಜಿಂಗ್ರಾ 30/2)
Loading...

ಭಾರತ ಅಂಡರ್-19 ತಂಡ 42.4 ಓವರ್ 214/2
(ವೈ. ಜೈಸ್ವಾಲ್ ಅಜೇಯ 114, ಡಿ. ಪಡಿಕ್ಕಲ್ 38, ಪವನ್ ಶಾ 38, ಎ. ಜುಯಲ್ ಅಜೇಯ 22 ರನ್)
First published:August 10, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ