ಜೈಪುರ ಪಿಂಕ್ ಪ್ಯಾಂಥರ್ಸ್ ಪ್ರೊ ಕಬಡ್ಡಿ ಲೀಗ್ 2022ರ ( PKL 2022)ಋತುವಿನ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಒಂದು ತಿಂಗಳಿಗಿಂತ ಹೆಚ್ಚು ಕಾಲ ನಡೆದ ಪ್ರೋ ಕಬಡ್ಡಿ ಲೀಗ್ 2022ಗೆ ಇಂದು ತೆರೆಬಿದ್ದಿದ್ದು, ಜಿದ್ದಾಜಿದ್ದಿನ ಹೋರಾಟದ ಕೊನೆಯಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ (Jaipur Pink Panthers) ಜಯಭೇರಿ ಬಾರಿಸಿತು. ಈ ಋತುವಿನಲ್ಲಿ ಅಬ್ಬರಿಸಿದ ಜೈಪುರ ಪಿಂಕ್ ಪ್ಯಾಂಥರ್ಸ್ ಅಂತಿಮ ಹೋರಾಟದಲ್ಲೂ ಅದೇ ವೇಗವನ್ನು ಮುಂದುವರಿಸಿತು. ಪುಣೇರಿ ಪಲ್ಟನ್ (Puneri Paltan) ಅನ್ನು 33-29 ಅಂಕಗಳಿಂದ ಸೋಲಿಸಿತು ಮತ್ತು PKL 2022ರ ಚಾಂಪಿಯನ್ ಆಯಿತು. ಪಿಂಕ್ ಪ್ಯಾಂಥರ್ಸ್‌ನಲ್ಲಿ ಅರ್ಜುನ್ ದೇಸ್ವಾಲ್ ಮತ್ತು ಅಜಿತ್ ಕುಮಾರ್ ಆರು ರೈಡಿಂಗ್ ಪಾಯಿಂಟ್‌ಗಳೊಂದಿಗೆ ಹೀರೋ ಆದರು. ಸುನೀಲ್ ಕುಮಾರ್ ಮತ್ತೊಬ್ಬ ಜೈಪುರ ಹೀರೋ ಆದರು. ಅವರು ಐದು ಟ್ಯಾಕಲ್‌ಗಳೊಂದಿಗೆ ಒಟ್ಟು ಆರು ಪಾಯಿಂಟ್‌ಗಳನ್ನು ಗಳಿಸಿದರು. ಜೈಪುರ ಪಿಂಕ್ಸ್ ಪ್ಯಾಂಥರ್ಸ್‌ಗೆ ಇದು ಎರಡನೇ ಪಿಕೆಎಲ್ ಪ್ರಶಸ್ತಿಯಾಗಿದೆ.
ಹಾಗೆಯೇ ಪುಣೇರಿ ಪಲ್ಟಾನ್ ನಲ್ಲಿ ಆದಿತ್ಯ ಶಿಂಧೆ ಐದು ರೇಡ್ ಪಾಯಿಂಟ್ ಗಳೊಂದಿಗೆ ಮಿಂಚಿದರು.ಆಕಾಶ್ ಶಿಂಧೆ ನಾಲ್ಕು ರೇಡ್ ಪಾಯಿಂಟ್ಸ್ ಗಳಿಸಿದರು. ಅಭಿನೇಶ್ ಮತ್ತು ಇಸ್ಮಾಯಿಲ್ ನಭಿಬಕ್ಷ್ ನಾಲ್ಕು ಟ್ಯಾಕಲ್ ಪಾಯಿಂಟ್ ಗಳಿಸಿದರೂ ಸಹ ಪುಣೇರಿ ಪಲ್ಟನ್ ಅವರನ್ನು ವಿಜೇತರನ್ನಾಗಿ ಮಾಡಲು ಸಾಧ್ಯವಾಗಲಿಲ್ಲ.
ಮಿಂಚಿದ ಜೈಪುರ ತಂಡ:
ಈ ಬಿರುಸಿನ ಹೋರಾಟದ ಮೊದಲಾರ್ಧದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ 14-12 ರಿಂದ ಮುನ್ನಡೆ ಸಾಧಿಸಿತು. ಮೊದಲಾರ್ಧದಲ್ಲಿ ಯಾವುದೇ ತಂಡದ ಪರವಾಗಿ ಪಂದ್ಯ ನಿಲ್ಲಲಿಲ್ಲ. ಮೊದಲಾರ್ಧದಲ್ಲಿ ಜೈಪುರ ಏಳು ರೇಡ್ ಪಾಯಿಂಟ್ಸ್ ಗಳಿಸಿದರೆ, ಪುಣೇರಿ ಪಲ್ಟನ್ ಮೂರು ಪಾಯಿಂಟ್ಸ್ ಗಳಿಸಿತು. ಇನ್ನು, ಟ್ಯಾಕಲ್ಸ್ ವಿಚಾರಕ್ಕೆ ಬಂದರೆ, ಜೈಪುರ ಆರು ಅಂಕ ಗಳಿಸಿತು. ಪುಣೇರಿ ಪಲ್ಟಾನ್ ಏಳು ಅಂಕ ಗಳಿಸಿತು. ಪುಣೇರಿ 2 ಹೆಚ್ಚುವರಿ ಅಂಕ ಪಡೆದರೆ, ಜೈಪುರ ಒಂದು ಅಂಕ ಮಾತ್ರ ಪಡೆಯಿತು. ಅಲ್ಲದೆ ದ್ವಿತೀಯಾರ್ಧದಲ್ಲಿ ಉಭಯ ತಂಡಗಳು ತೀವ್ರ ಮುಖಾಮುಖಿಯಾದವು. ಆದರೆ, ದ್ವಿತೀಯಾರ್ಧದಲ್ಲಿ ಪುಣೇರಿ ಪಲ್ಟನ್ ಆಲ್ ಔಟಾದ ನಂತರ ಜೈಪುರ ಪಿಂಕ್ ಪ್ಯಾಂಥರ್ಸ್ ಎರಡು ಅಂಕ ಗಳಿಸಿತು.
🏆 🏆 🏆 🏆 🏆
🏆 Jaipur 🏆
🏆 Pink 🏆
🏆 Panthers 🏆
🏆 🏆 🏆 🏆 🏆
JAIPUR PINK PANTHERS ARE CROWNED CHAMPIONS OF SEASON 9 🙌#JPPvPUN #vivoProKabaddi #FantasticPanga #vivoPKL2022Final #JaipurPinkPanthers #vivoProKabaddi2022Final #Champions pic.twitter.com/h2Fa7VeI24
— ProKabaddi (@ProKabaddi) December 17, 2022
ಇನ್ನು, ಇಂದಿನ ಪ್ರೋ ಕಬಡ್ಡಿ ಫೈನಲ್ ಪಂದ್ಯದ ರಂಗನ್ನು ಆಟಗಾರರು ಮಾತ್ರವಲ್ಲದೇ ಸಿನಿಮಾ ತಾರೆಯರೂ ಹೆಚ್ಚಿಸಿದರು. ಫೈನಲ್ ಪಂದ್ಯದಲ್ಲಿ ಸಿನಿಮಾ ತಾರೆಯರು ಸದ್ದು ಮಾಡಿದರು. ಅಭಿಷೇಕ್ ಬಚ್ಚನ್, ಐಶ್ವರ್ಯ ರೈ, ರಣವೀರ್ ಸಿಂಗ್,ಪೂಜಾ ಹೆಗ್ಡೆ, ರೋಹಿತ್ ಶೆಟ್ಟಿಯಂತಹ ಸಿನಿ ಗಣ್ಯರ ಇಂದಿನ ಪ್ರೊ ಕಬಡ್ಡಿಯ ಫೈನಲ್ ಪಂದ್ಯದ ರಂಗನ್ನು ಹೆಚ್ಚಿಸಿದ್ದರು.
ಇದನ್ನೂ ಓದಿ: World Test ChampionShip: ಟೀಂ ಇಂಡಿಯಾಗೆ ಈ 2 ತಂಡಗಳ ಪೈಪೋಟಿ, ಹೇಗಿದೆ WTC ಲೆಕ್ಕಾಚಾರ?
ಕಳೆದ ಸೆಮಿಫೈನಲ್ ಕದನದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ 29-49 ಅಂಕಗಳಿಂದ ಮಾಜಿ ಚಾಂಪಿಯನ್ ಬೆಂಗಳೂರು ಬುಲ್ಸ್ ಅನ್ನು ಸೋಲಿಸಿತು. ಅದೇ ಸಮಯದಲ್ಲಿ ಪುಣೇರಿ ಪಲ್ಟನ್ ತನ್ನ ಸೆಮಿಫೈನಲ್‌ನಲ್ಲಿ ತಮಿಳ್ ತಲೈವಾಸ್ ಅನ್ನು 39-37 ರಿಂದ ಸೋಲಿಸಿ ಫೈನಲ್ಗೆ ಲಗ್ಗೆ ಇಟ್ಟಿದ್ದವು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ