ಪ್ರೋ ಕಬಡ್ಡಿಯ (Pro Kabaddi) ಇತ್ತೀಚಿನ ಟ್ವೀಟ್ 'ಜಬ್ ನಾಮ್ ಮೇ ಹಿ 'ಮನಿ' ಹೈ ತೋ ಪ್ಲೇಯರ್ ಪೈಸಾ ವಸೂಲ್ ಹೋಗಾ ಹೀ ನಾ!’ (ಹೆಸರಲ್ಲೇ ಮನಿ ಇರುವಾಗ ಆ ಆಟಗಾರ ಪೈಸಾ ವಸೂಲ್ ಆಗಲೇ ಬೇಕಲ್ವೆ). ಮಣಿಂದರ್ ಸಿಂಗ್ ಅವರು ತಾವು ಗಳಿಸಿದ 12 ರೇಡ್ ಪಾಯಿಂಟ್ಗಳಿಗಾಗಿ ಮತ್ತು ಒಟ್ಟು 800 ರೇಡ್ ಪಾಯಿಂಟ್ ಮಾರ್ಕ್ ಅನ್ನು ಪೂರ್ಣ ಗೊಳಿಸಿದ ಸಲುವಾಗಿ ನಮ್ಮ ದಿನದ ರೈಡರ್ ಆಗಿದ್ದಾರೆ ! ಎಂದು ಪ್ರೋ ಕಬಡ್ಡಿ ಟ್ವೀಟ್ ( Tweeted) ಮಾಡಿದೆ. ಪ್ರೋ ಕಬಡ್ಡಿ ಲೀಗ್ (PKL) 2021-22 ಜನವರಿ 3, ಸೋಮವಾರದಂದು ಬೆಂಗಳೂರಿನ ಶೆರಾಟನ್ ಗ್ರ್ಯಾಂಡ್ ( Sheraton Grand Whitefield) ವೈಟ್ಫೀಲ್ಡ್ನಲ್ಲಿ 'ಡಬಲ್-ಪಂಗಾ' (Double-Panga) ಘರ್ಷಣೆಗಳೊಂದಿಗೆ ಪುನರಾರಂಭಗೊಂಡಿತು.
30ನೇ ಪಂದ್ಯ
ಸೋಮವಾರ ನಡೆದ ಪ್ರೋ ಕಬಡ್ಡಿ ಲೀಗ್ನ 8ನೇ ಆವೃತ್ತಿಯ 30ನೇ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ 31-28ರಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವನ್ನು ಸೋಲಿಸಿತು. ಈ ಪಂದ್ಯದಲ್ಲಿ, ಅರ್ಜುನ್ ದೇಶ್ವಾಲ್ ಗರಿಷ್ಠ 16 ರೇಡ್ ಪಾಯಿಂಟ್ಗಳನ್ನು ಗಳಿಸಿದರೆ, ನಾಯಕ ಮಣಿಂದರ್ ಸಿಂಗ್ ಬೆಂಗಾಲ್ ವಾರಿಯರ್ಸ್ನಿಂದ 13 ರೇಡ್ ಪಾಯಿಂಟ್ಗಳನ್ನು ಗಳಿಸಿದರು. ಈ ಪಂದ್ಯದಲ್ಲಿ ಮಣಿಂದರ್ ತಮ್ಮ ವೃತ್ತಿಜೀವನದ 800ನೇ ರೇಡ್ ಪಾಯಿಂಟ್ ಕೂಡ ಪಡೆದರು.
ಇದನ್ನೂ ಓದಿ: Pro Kabaddi: ಕಬಡ್ಡಿ ಅಂಗಳ ಅಳತೆ, ವಿವಿಧ ನಿಯಮಗಳು, ಫೌಲ್, ಎಲ್ಲಾ ಡೀಟೇಲ್ಸ್
ಜೈಪುರ ಆಲೌಟ್
ಜೈಪುರ ಪಿಂಕ್ ಪ್ಯಾಂಥರ್ಸ್ ಟಾಸ್ ಗೆದ್ದು ಬೆಂಗಾಲ್ ನಾಯಕ ಮಣಿಂದರ್ ಸಿಂಗ್ ಮೊದಲ ದಾಳಿಯಲ್ಲಿ ಟಚ್ ಪಾಯಿಂಟ್ ಪಡೆಯುವ ಮೂಲಕ ತಂಡದ ಖಾತೆ ತೆರೆದರು. ದೀಪಕ್ ನಿವಾಸ್ ಹೂಡಾ ಅದ್ಭುತ ರೇಡ್ನೊಂದಿಗೆ ಪಿಂಕ್ ಪ್ಯಾಂಥರ್ಸ್ ಖಾತೆಯನ್ನು ತೆರೆದರು. ಮೊಹಮ್ಮದ್ ನಬಿಬಕ್ಷ್ ಅವರನ್ನು ಎದುರಿಸುವ ಮೂಲಕ ಸಾಹುಲ್ ಕುಮಾರ್ ಪ್ಯಾಂಥರ್ಸ್ಗೆ ಎರಡನೇ ಪಾಯಿಂಟ್ ನೀಡಿದರು. ತನ್ನ ಮುಂದಿನ ದಾಳಿಯಲ್ಲಿ, ನಬಿಬಕ್ಷ್ ಇಬ್ಬರು ಡಿಫೆಂಡರ್ಗಳನ್ನು ಔಟ್ ಮಾಡಿ ಬೆಂಗಾಲ್ ಅನ್ನು ಮಟ್ಟ ಹಾಕಿದರು. ಅಮಿತ್ ನಿರ್ವಾಲ್ ಅವರು ದೀಪಕ್ ನಿವಾಸ್ರನ್ನು ನಿಭಾಯಿಸಿ ಜೈಪುರವನ್ನು ಆಲೌಟ್ ಮಾಡಿದರು.
Jab naam mein hi 'Mani' hai toh player 𝑷𝒂𝒊𝒔𝒂 𝒗𝒂𝒔𝒐𝒐𝒍 hoga hi na! 😎👑
For his 12 raid points & for crossing the 800 raid point mark...Maninder Singh is our Raider of the Day! 🙌#BENvJPP #SuperhitPanga @BengalWarriors pic.twitter.com/Hr2H26OcBq
— ProKabaddi (@ProKabaddi) January 4, 2022
ಪಾಯಿಂಟ್ಸ್ ಪಟ್ಟಿಯಲ್ಲಿ ಐದನೇ ಸ್ಥಾನ
ದ್ವಿತೀಯಾರ್ಧದ ಮೊದಲ ರೇಡ್ನಲ್ಲಿ, ಮಣಿಂದರ್ ಸಿಂಗ್ ಟಚ್ ಪಾಯಿಂಟ್ ತೆಗೆದುಕೊಳ್ಳುವ ಮೂಲಕ ತಮ್ಮ ವೃತ್ತಿಜೀವನದ 800ನೇ ರೇಡ್ ಪಾಯಿಂಟ್ ಪಡೆದರು ಮತ್ತು ಈ ಪಂದ್ಯದಲ್ಲಿ ಸೂಪರ್ 10 ಅನ್ನು ಪೂರ್ಣಗೊಳಿಸಿದರು. ಇದರ ನಂತರ, ಜೈಪುರ ಪಿಂಕ್ ಪ್ಯಾಂಥರ್ಸ್ ನ ಅರ್ಜುನ್ ದೇಶ್ವಾಲ್ ಅವರು ರೇಡ್ ಪಾಯಿಂಟ್ ತೆಗೆದುಕೊಳ್ಳುವ ಮೂಲಕ ಋತುವಿನ ಐದನೇ ಸೂಪರ್ 10 ರೇಡ್ ಅನ್ನು ಪೂರ್ಣಗೊಳಿಸಿದರು. ಇದರ ಬೆನ್ನಲ್ಲೇ ಮಣಿಂದರ್ ಸಿಂಗ್ಗೆ ಸೂಪರ್ ಟ್ಯಾಕಲ್ ಜೈಪುರ್ ರಿಟರ್ನ್ ಸಿಗ್ನಲ್ ನೀಡಿತು ಮತ್ತು ಅಬೋಜರ್ ಮಿಘಾನಿ ಅವರನ್ನು ರೆಫರಿ ಅಮಾನತುಗೊಳಿಸಿದರು.
ಇದನ್ನೂ ಓದಿ: PKL 8: ಅಂಕಪಟ್ಟಿ, ಅತಿಹೆಚ್ಚು ಯಶಸ್ವಿ ರೇಡ್, ಟ್ಯಾಕಲ್ನಲ್ಲಿ ಬಂಗಳೂರು ಬುಲ್ಸ್ ಮುಂದು
ಬೆಂಗಾಲ್ ವಾರಿಯರ್ಸ್ ತಂಡದ ನಾಯಕ ಮಣಿಂದರ್ ಸಿಂಗ್ ಅವರನ್ನು ನಾಲ್ಕು ಮಂದಿ ಯಶಸ್ವಿ ಟ್ಯಾಕಲ್ಗಳನ್ನು ಮಾಡಿ , ಸಾಹುಲ್ ಕುಮಾರ್ ಆರಂಭಿಕ ಟ್ಯಾಕಲ್ನೊಂದಿಗೆ, ಮತ್ತು ಅರ್ಜುನ್ ದೇಶ್ವಾಲ್ ಮ್ಯಾಟ್ಗೆ ಹಿಂತಿರುಗಿ ಬಂದು ಅಮಿತ್ ನಿರ್ವಾಲ್ ಮೇಲೆ ಟಚ್ ಪಾಯಿಂಟ್ ತೆಗೆದುಕೊಂಡಿದ್ದು ಆಟದ ರೋಚಕ ಕ್ಷಣವಾಗಿತ್ತು . ಈ ಪಂದ್ಯದ ಗೆಲುವಿನ ನಂತರ ಹಾಲಿ ಚಾಂಪಿಯನ್ ಬೆಂಗಾಲ್ ವಾರಿಯರ್ಸ್ ಪಾಯಿಂಟ್ಸ್ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೇರಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ