ಭಾರತೀಯರ 120 ವರ್ಷಗಳ ಕನಸು ನನಸು ಮಾಡಿದ ಚಿನ್ನದ ಹುಡುಗ ನೀರಜ್ ಚೋಪ್ರಾಗೆ ಎಲ್ಲೆಡೆ ಅಭಿನಂದನೆ ವ್ಯಕ್ತವಾಗುತ್ತಿದೆ. ಅವರ ಸಾಧನೆ ಪ್ರಶಂಸಿ ಪ್ರಧಾನಿ ನರೇಂದ್ರ ಮೋದಿಯಿಂದ ದೇಶದ ಪ್ರತಿಯೊಬ್ಬರು ಅವರಿಗೆ ಶುಭ ಕೋರುತ್ತಿದ್ದಾರೆ. ಒಲಂಪಿಕ್ಸ್ ಇತಿಹಾಸದಲ್ಲಿಯೇ ಅಥ್ಲೆಟಿಕ್ಸ್ ವಿಭಾಗದ ಜಾವೆಲಿನ್ ಥ್ರೋದಲ್ಲಿ ಬಂಗಾರ ಪದಕ ಗೆಲ್ಲುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಅವರ ಈ ಸಾಧನೆಗೆ ಈಗ ಅನೇಕ ರಾಜ್ಯ ಸರ್ಕಾರ, ವಿವಿಧ ಸಂಸ್ಥೆಗಳು ನಗದು ಬಹುಮಾನ ಘೋಷಿಸಿ ಪುರಸ್ಕಾರ ಮಾಡಲು ಮುಂದಾಗಿವೆ. ಈ ಮೂಲಕ ನೀರಜ್ ಚೋಪ್ರಾ ಸಾಧನೆ ಕೊಂಡಾಡಲು ಮುಂದಾಗಿವೆ. ಟೋಕಿಯೋ ಒಲಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾಗೆ ಯಾವ ರಾಜ್ಯಗಳು ಎಷ್ಟು ನಗದು ಬಹುಮಾನ ಘೋಷಿಸಿವೆ. ಅವರಿಗೆ ಸಿಕ್ಕ ಉಡುಗೊರೆ ಏನು ಎಂಬ ವಿವರ ಇಲ್ಲಿದೆ
ಹರಿಯಾಣ ಮೂಲಕ ನೀರಜ್ ಚಿನ್ನ ಗೆಲ್ಲುತ್ತಿದ್ದಂತೆ ಸಿಎಂ ಎಂಎಲ್ ಕಟ್ಟರ್ ಆರು ಕೋಟಿ ನಗದು ಬಹುಮಾನ ಘೋಷಿಸಿದರು. ಜೊತೆಗೆ , ಪಂಚಕುಲದ ಸೆಂಟರ್ ಫಾರ್ ಎಕ್ಸ್ಲೆನ್ಸ್ನ ಮುಖ್ಯಸ್ಥರನ್ನಾಗಿ ಮಾಡಲಾಗುವುದು. ಭಾರತದ ಕ್ರೀಡಾ ನಿಯಮ ಅನುಸಾರವಾಗಿ ನೀರಜ್ ಚೋಪ್ರಾ 6 ಕೋಟಿ ನಗದು ಬಹುಮಾನ ಪಡೆಯಲಿದ್ದು, ಕ್ಲಾಸ್ 1 ಹುದ್ದೆ ಪಡೆಯಲಿದ್ದಾರೆ ಜೊತೆಗೆ ರಿಯಾಯಿತಿ ದರದಲ್ಲಿ ಭೂಮಿ ಕೂಡ ಪಡೆಯಲಿದ್ದಾರೆ ಎಂದು ತಿಳಿಸಿದ್ದಾರೆ
ಜೊತೆಗೆ ಟೋಕಿಯೋ ಒಲಂಪಿಕ್ಸ್ನಲ್ಲಿ ಮತ್ತೆರಡು ಪದಕ ಗೆದ್ದಿದ್ದ ಕುಸ್ತಿಪಟುಗಳಾದ ರವಿ ದಹಿಯಾ ಮತ್ತು ಭಜರಂಗ್ ಪುನಿಯಾ ಅವರ ಸ್ಥಳೀಯ ಗ್ರಾಮದಲ್ಲಿ ಒಳಾಂಗಣ ಕುಸ್ತಿ ಕ್ರೀಡಾಂಗಣಗಳನ್ನು ನಿರ್ಮಿಸಲಾಗುವುದು ಎಂದು ಖಟ್ಟರ್ ಘೋಷಿಸಿದರು.
ಕಂಚು ಗೆದ್ದ ಪೂನಿಯಾ ಅವರಿಗೆ, 2.5 ಕೋಟಿ ರೂಪಾಯಿ ನಗದು ಬಹುಮಾನ, ರಿಯಾಯಿತಿ ದರದಲ್ಲಿ ಭೂಮಿ ಮತ್ತು ರಾಜ್ಯ ಸರ್ಕಾರಿ ಉದ್ಯೋಗ ನೀಡಲಾಗುವುದು. ಇನ್ನು ಬೆಳ್ಳಿ ಗೆದ್ದ ಕುಸ್ತಿಪಟು ರವಿ ದಹಿಯಾಗೆ 4 ಕೋಟಿ ನಗದು ಬಹುಮಾನ, ಕ್ಲಾಸ್ 1 ಉದ್ಯೋಗ ನೀಡುವುದಾಗಿ ತಿಳಿಸಿದ್ದಾರೆ.
ನೀರಜ್ ಚೋಪ್ರಾಗೆ ಪಂಜಾಬ್ ಸರ್ಕಾರ ವಿಶೇಷವಾಗಿ 2 ಕೋಟಿ ಬಹುಮಾನ ನೀಡುವುದಾಗಿ ತಿಳಿಸಿದೆ. ಬಿಸಿಸಿಐ ಚೋಪ್ರಾಗೆ ಒಂದು ಕೋಟಿ ಬಹುಮಾನ ಘೋಷಿಸಿದೆ, ಚೆನ್ನೈ ಸೂಪರ್ ಕಿಂಗ್ಸ್ ಪ್ರಾಂಚೈಸಿ ತಂಡ ಒಂದು ಕೋಟಿ ಬಹುಮಾನ ಘೋಷಿಸಿದೆ. ಜೊತೆಗೆ ನೀರಜ್ ಚೋಪ್ರಾ ಅವರ ಗೌರವಾರ್ಥವಾಗಿ 8758 ಸಂಖ್ಯೆಯ ವಿಶೇಷ ಜರ್ಸಿಯನ್ನು ರಚಿಸಲಿದೆ
ಇದನ್ನು ಓದಿ: ಚಿನ್ನದ ಹುಡುಗ ನೀರಜ್ಗೆ ತರಬೇತಿ ನೀಡಿದ್ದ ಕನ್ನಡಿಗ ಕಾಶಿನಾಥ್ ನಾಯ್ಕ್ಗೆ ರಾಜ್ಯ ಸರ್ಕಾರದಿಂದ 10 ಲಕ್ಷ ಬಹುಮಾನ ಘೋಷಣೆ
ಎಲನ್ ಗ್ರೂಪ್ ಅಧ್ಯಕ್ಷ ರಾಕೇಶ್ ಕಪೀರ್ 25 ಲಕ್ಷ ನಗದು ಬಹುಮಾನ ಘೋಷಿಸಿದ್ದು, ಇಂಡಿಗೋ ಸಂಸ್ಥೆ ಉಚಿತ ಟಿಕೆಟ್ ಸೌಲಭ್ಯ ನೀಡಿದ್ದು, ಒಂದು ವರ್ಷ ಉಚಿತ ಪ್ರಯಾಣದ ಸೌಲಭ್ಯ ಘೋಷಿಸಿದೆ
ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹಾಕಿ ಆಟಗಾರರಾದ ವಿವೇಕ್ ಸಾಗರ್ ಮತ್ತು ನೀಲಕಂಠ ಶರ್ಮಾ ಅವರಿಗೆ ತಲಾ ಒಂದು ಕೋಟಿ ಬಹುಮಾನವನ್ನು ಘೋಷಿಸಿದ್ದಾರೆ. ಮಿಜೋರಾಂ ಸರ್ಕಾರವು ರಾಜ್ಯದ ಮಹಿಳಾ ಹಾಕಿ ತಾರೆ ಲಾಲ್ರೆಮ್ಸಿಯಾಮಿಗೆ ಸರ್ಕಾರಿ ಉದ್ಯೋಗ ಮತ್ತು ನಿವೇಶನದ ಜೊತೆಗೆ 25 ಲಕ್ಷ ನಗದು ಬಹುಮಾನ ಘೋಷಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ