ಪಂದ್ಯದ ವೇಳೆ ಅನುಚಿತ ವರ್ತನೆ: ಇಶಾಂತ್ ಶರ್ಮಾ ಮೇಲೆ ದಂಡ ವಿಧಿಸಿದ ಐಸಿಸಿ

news18
Updated:August 4, 2018, 8:17 PM IST
ಪಂದ್ಯದ ವೇಳೆ ಅನುಚಿತ ವರ್ತನೆ: ಇಶಾಂತ್ ಶರ್ಮಾ ಮೇಲೆ ದಂಡ ವಿಧಿಸಿದ ಐಸಿಸಿ
India's Ishant Sharma, left, celebrates after dismissing England's Dawid Malan, right, during the third day of the first test cricket match between England and India at Edgbaston in Birmingham, England, Friday, Aug. 3, 2018. (AP Photo/Rui Vieira)
news18
Updated: August 4, 2018, 8:17 PM IST
ನ್ಯೂಸ್ 18 ಕನ್ನಡ

ಇಂಗ್ಲೆಂಡ್​​ನ ಎಡ್ಜ್​​ಬಾಸ್ಟನ್​​ನಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್​​ ನಡುವಣ ಮೊದಲ ಟೆಸ್ಟ್​ ಪಂದ್ಯದಲ್ಲಿ ಭಾರತ ಸೋಲುಂಡಿದೆ. ಈ ಮಧ್ಯೆ ಪಂದ್ಯದ ವೇಳೆ ಅನುಚಿತ ವರ್ತನೆ ತೋರಿ ನೀತಿ ಉಲ್ಲಂಘಿಸಿದ ಕಾರಣಕ್ಕೆ ಟೀಂ ಇಂಡಿಯಾ ವೇಗಿ ಇಶಾಂತ್ ಶರ್ಮಾ ಅವರ ಮೇಲೆ ಐಸಿಸಿ ದಂಡ ವಿಧಿಸಿದೆ.

ದ್ವಿತೀಯ ಇನ್ನಿಂಗ್ಸ್​​ನಲ್ಲಿ ಇಂಗ್ಲೆಂಡ್ ಬ್ಯಾಟ್ಸ್​​ಮನ್​​​ ಡೇವಿಡ್ ಮಲಾನ್ ಅವರು ಇಶಾಂತ್ ಶರ್ಮಾ ಎಸೆತದಲ್ಲಿ ಔಟ್ ಆಗಿದ್ದರು. ಈ ಸಂದರ್ಭ ಇಶಾಂತ್ ಅವರ ಸಂಭ್ರಮಾಚರಣೆ ಮಿತಿ ಮೀರಿದ್ದು ಅನುಚಿತ ವರ್ತನೆ ಮಾಡಿದ್ದಾರೆ. ಇಶಾಂತ್ ಅವರ ಈ ವರ್ತನೆ ಐಸಿಸಿ ಕೋಡ್ 2.1.7 ಅನ್ನು ಉಲ್ಲಂಘನೆಯಾಗಿದ್ದು, ಸಂಭಾವನೆಯ ಶೇ. 15 ರಷ್ಟು ದಂಡ ವಿಧಿಸಲಾಗಿದೆ ಎಂದು ಐಸಿಸಿ ತಿಳಿಸಿದೆ.

ಎದುರಾಳಿ ಆಟಗಾರ ಔಟ್ ಆದ ವೇಳೆ ಬೌಲರ್ ತನ್ನ ಭಾಷೆ, ವರ್ತನೆ ಮತ್ತು ಭಂಗಿಯ ಮೂಲಕ ಎದುರಾಳಿಯನ್ನು ಸಿಟ್ಟಿಗೆ ಪ್ರೇರೆಪಿಸುವಂತಿದ್ದರೆ ಅದು ಐಸಿಸಿ ನಿಯಮದ ಪ್ರಕಾರ ತಪ್ಪಾಗಿರುತ್ತದೆ. ಇದೇ ರೀತಿ ಇಶಾಂತ್ ಶರ್ಮಾ ಮಲಾನ್ ಔಟ್ ಆದ ವೇಳೆ ಮಾಡಿದ್ದಾರೆ. ಹಾಗಾಗಿ ಇಶಾಂತ್ ಶರ್ಮಾ ಮೇಲೆ ದಂಡ ವಿಧಿಸಿಲಾಗಿದೆ ಎಂದು ಐಸಿಸಿ ಹೇಳಿದೆ.
First published:August 4, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...