5ನೇ ಟೆಸ್ಟ್​: ಮೊದಲ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ 198/7

news18
Updated:September 8, 2018, 12:11 AM IST
5ನೇ ಟೆಸ್ಟ್​: ಮೊದಲ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ 198/7
  • Advertorial
  • Last Updated: September 8, 2018, 12:11 AM IST
  • Share this:
ನ್ಯೂಸ್ 18 ಕನ್ನಡ

ಲಂಡನ್​ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಣ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲ ದಿನವೇ ಆಂಗ್ಲರ ವಿರುದ್ಧ ಪ್ರಾಬಲ್ಯ ಮೆರೆದಿದೆ. ಪರಿಣಾಮ ಮೊದಲ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ 198 ರನ್ ಕಲೆಹಾಕಿ 7 ವಿಕೆಟ್ ಕೈ ಚೆಲ್ಲಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಆಂಗ್ಲರು ಉತ್ತಮ ಆರಂಭವನ್ನೇ ಪಡೆದರು. ಮೊದಲನೇ ವಿಕೆಟ್​ಗೆ ಅಲೆಸ್ಟರ್ ಕುಕ್ ಹಾಗೂ ಜೆನ್ನಿಂಗ್ಸ್​ 60 ರನ್​ಗಳ ಜೊತೆಯಾಟ ನೀಡಿದರು. ಆದರೆ ಜೆನ್ನಿಂಗ್ಸ್​ 23 ರನ್ ಗಳಿಸಿರುವಾಗ ಜಡೇಜಾಗೆ ವಿಕೆಟ್ ಒಪ್ಪಿಸಿ ಔಟ್ ಆದರು. ಬಳಿಕ ಮೊಯೀನ್ ಅಲಿ ಜೊತೆಯಾದ ಕುಕ್ ಎಚ್ಚರಿಕೆಯ ಆಟಕ್ಕೆ ಮುಂದಾದರು. ವಿದಾಯದ ಪಂದ್ಯವನ್ನು ಆಡಿದ ಅಲೆಸ್ಟರ್ ಕುಕ್ ಅರ್ಧಶತಕ ಬಾರಿಸಿ ಸಂಭ್ರಮಿಸಿದರು. ಆದರೆ 71 ರನ್ ಗಳಿಸಿರುವಾಗ ಕುಕ್ ಅವರು ಬುಮ್ರಾ ಎಸೆತದಲ್ಲಿ ಬೌಲ್ಡ್​ ಆಗುವ ಮೂಲಕ ತಮ್ಮ ಇನ್ನಿಂಗ್ಸ್ ಕೊನೆಗೊಳಿಸಿದರು. ಈ ಮೂಲಕ ಇವರಿಬ್ಬರ ಜೊತೆಯಾಟ 71 ರನ್​ಗೆ ಅಂತ್ಯವಾಯಿತು. ಬಳಿಕ ಬಂದ ಬೆನ್ನಲ್ಲೆ ನಾಯಕ ಜೋ ರೂಟ್ ಹಾಗೂ ಜಾನಿ ಬೈರ್ಸ್ಟೋ  ಶೂನ್ಯಕ್ಕೆ ನಿರ್ಗಮಿಸಿ ಆಘಾತ ನೀಡಿದರೆ, ಬೆನ್ ಸ್ಟೋಕ್ಸ್ ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲದೆ 11 ರನ್​ಗೆ ಪೆವಿಲಿಯನ್ ಸೇರಿಕೊಂಡರು. ಇತ್ತ ಕ್ರಿಸ್ ಕಚ್ಚಿ ಆಡುತ್ತಿದ್ದ ಮೊಯೀನ್ ಅಲಿ ಕೂಡ 50 ರನ್​ಗೆ ಸುಸ್ತಾಗಿ ಔಟ್ ಆದರೆ, 4ನೇ ಟೆಸ್ಟ್​ನಲ್ಲಿ ಮಿಂಚಿದ್ದ ಸ್ಯಾಮ್ ಕುರ್ರನ್ ಸೊನ್ನೆ ಸುತ್ತಿಕೊಂಡರು. ಸದ್ಯ ಜಾಸ್ ಬಟ್ಲರ್ 11 ಹಾಗೂ ಆದಿಲ್ ರಶೀದ್ 4 ರನ್ ಬಾರಿಸಿ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ

ಭಾರತ ಪರ ಇಶಾಂತ್ ಶರ್ಮಾ 3 ವಿಕೆಟ್ ಕಿತ್ತು ಮಿಂಚಿದರೆ, ​​ಜಸ್​ಪ್ರೀತ್ ಬುಮ್ರಾ ಹಾಗೂ ಜಡೇಜಾ ತಲಾ 2 ವಿಕೆಟ್ ಪಡೆದಿದ್ದಾರೆ.
First published:September 7, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ