ಇಂಗ್ಲೆಂಡ್ ಎ ವಿರುದ್ಧದ ಅನಧಿಕೃತ ಕ್ರಿಕೆಟ್ ಸರಣಿ: ಭಾರತ ಎ ಶುಭಾರಂಭ

ಇಂಗ್ಲೆಂಡ್ ಎ ವಿರುದ್ಧದ ಐದು ಅನಧಿಕೃತ ಏಕದಿನ ಪಂದ್ಯಗಳ ಕ್ರಿಕೆಟ್ ಸರಣಿಯಲ್ಲಿ ಭಾರತ ಎ ತಂಡ 1-0 ಮುನ್ನಡೆ ಪಡೆದಿದೆ.

Vijayasarthy SN | news18
Updated:January 23, 2019, 5:44 PM IST
ಇಂಗ್ಲೆಂಡ್ ಎ ವಿರುದ್ಧದ ಅನಧಿಕೃತ ಕ್ರಿಕೆಟ್ ಸರಣಿ: ಭಾರತ ಎ ಶುಭಾರಂಭ
ಇಶಾನ್ ಕಿಶನ್
  • News18
  • Last Updated: January 23, 2019, 5:44 PM IST
  • Share this:
ತಿರುವನಂತಪುರಂ(ಜ. 23): ಮಾಜಿ ಟೀಮ್ ಇಂಡಿಯಾ ಅಂಡರ್-19 ತಂಡದ ಕ್ಯಾಪ್ಟನ್ ಇಶಾನ್ ಕಿಶನ್ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಭಾರತ ಎ ತಂಡ ಇಂದಿಲ್ಲಿ ಮುಕ್ತಾಯಗೊಂಡ ಇಂಗ್ಲೆಂಡ್ ಲಯನ್ಸ್ ವಿರುದ್ಧದ ಸರಣಿಯ ಮೊದಲ ಪಂದ್ಯದಲ್ಲಿ ರೋಚಕ ಗೆಲುವು ಸಾಧಿಸಿದೆ. ಗೆಲ್ಲಲು 286 ರನ್ ಗುರಿ ಪಡೆದ ಭಾರತೀಯರು 3 ವಿಕೆಟ್​ಗಳಿಂದ ಎದುರಾಳಿಗಳನ್ನು ಸೋಲಿಸಿದ್ದಾರೆ. ನಾಯಕ ಅಜಿಂಕ್ಯ ರಹಾನೆ ಮತ್ತು ಇಶಾನ್ ಕಿಶನ್ ಭರ್ಜರಿ ಶತಕ ಭಾರಿಸಿದರೆ, ಶ್ರೇಯಸ್ ಅಯ್ಯರ್, ಅನ್ಮೋಲ್ ಪ್ರೀತ್ ಸಿಂಗ್ ಮತ್ತು ಕೃಣಾಲ್ ಪಾಂಡ್ಯ ಕೂಡ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ ಗೆಲುವನ್ನು ಸುಗಮಗೊಳಿಸಿದರು. ಇಶಾನ್ ಕಿಶನ್ 48 ಎಸೆತಗಳಲ್ಲಿ ಅಜೇಯ 57 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

ಇದಕ್ಕೆ ಮುನ್ನ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಲಯನ್ಸ್ ತಂಡ ನಿಗದಿತ 50 ಓವರ್​ನಲ್ಲಿ 7 ವಿಕೆಟ್ ನಷ್ಟಕ್ಕೆ 285 ರನ್ ಪೇರಿಸಿತು. ನಾಯಕ ಸ್ಯಾಮ್ ಬಿಲ್ಲಿಂಗ್ಸ್ ಅಜೇಯ 108 ರನ್ ಗಳಿಸಿದರು. ಓಪನರ್ ಅಲೆಕ್ಸ್ ಡೇವೀಸ್ 54 ರನ್ ಗಳಿಸಿದರು. ಭಾರತೀಯ ಬೌಲರ್​ಗಳ ಪೈಕಿ ಸಿದ್ದಾರ್ಥ್ ಕೌಲ್, ಮಯಂಕ್ ಮರ್ಕಂಡೆ, ಅಕ್ಷರ್ ಪಟೇಲ್ ತಲಾ 2 ವಿಕೆಟ್ ಕಬಳಿಸಿ ಎದುರಾಳಿ ತಂಡ 300 ರನ್ ಗಡಿ ಮುಟ್ಟದಂತೆ ನೋಡಿಕೊಂಡರು.

ಭಾರತ ಎ ತಂಡ ತಂಡ 5 ಅನಧಿಕೃತ ಏಕದಿನ ಪಂದ್ಯಗಳ ಈ ಕ್ರಿಕೆಟ್ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ. ನಾಳೆ ಎರಡನೇ ಪಂದ್ಯ ನಡೆಯಲಿದೆ. ಸರಣಿಯ ಎಲ್ಲಾ ಐದು ಪಂದ್ಯಗಳೂ ತಿರುವನಂತಪುರಮ್​ನಲ್ಲೇ ನಡೆಯಲಿವೆ. ಇದಾದ ಬಳಿಕ 2 ಅನಧಿಕೃತ ಟೆಸ್ಟ್ ಪಂದ್ಯಗಳ ಸರಣಿ ಕೂಡ ನಡೆಯಲಿದೆ.

ಭಾರತದಲ್ಲಿ ಕ್ರಿಕೆಟ್ ಪ್ರವಾಸದಲ್ಲಿರುವ ಇಂಗ್ಲೆಂಡ್ ಲಯನ್ಸ್ ತಂಡ ಇವತ್ತಿನ ಅನಧಿಕೃತ ಏಕದಿನ ಪಂದ್ಯಕ್ಕೆ ಮುನ್ನ ಆಡಿದ ಎರಡು ಅಭ್ಯಾಸ ಪಂದ್ಯಗಳಲ್ಲೂ ಭಾರತೀಯ ತಂಡಗಳಿಗೆ ಶರಣಾಗಿತ್ತು.

ಸ್ಕೋರು ವಿವರ:

ಇಂಗ್ಲೆಂಡ್ ಲಯನ್ಸ್ ತಂಡ 50 ಓವರ್ 285/7
(ಸ್ಯಾಮ್ ಬಿಲ್ಲಿಂಗ್ಸ್ ಅಜೇಯ 108, ಅಲೆಕ್ಸ್ ಡೇವಿಸ್ 54, ಬಿ. ಡುಕೆಟ್ 23, ವಿಲ್ ಜ್ಯಾಕ್ಸ್ 22, ಸ್ಯಾಮ್ ಹೇನ್ 21 ರನ್ – ಅಕ್ಸರ್ ಪಟೇಲ್ 52/2, ಮಯಂಕ್ ಮರ್ಕಂಡೆ 45/2, ಸಿದ್ಧಾರ್ಥ್ ಕೌಲ್ 54/2)ಭಾರತ ಎ ತಂಡ 49.1 ಓವರ್ 288/7
(ಅಜಿಂಕ್ಯ ರಹಾನೆ 59, ಇಶಾನ್ ಕಿಶನ್ ಅಜೇಯ 57, ಶ್ರೇಯಸ್ ಅಯ್ಯರ್ 45, ಅನ್ಮೋಲ್​ಪ್ರೀತ್ ಸಿಂಗ್ 33, ಕೃಣಾಲ್ ಪಾಂಡ್ಯ 29 ರನ್ – ಚ್ಯಾಪೆಲ್ 84/.3, ಡಿ. ಬ್ರಿಗ್ಸ್ 31/2, ಎಲ್. ಗ್ರೆಗೋರಿ 45/2)
First published: January 23, 2019, 5:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading