ಇಶಾನ್ ಕಿಶನ್ ಭಾರತ ತಂಡದ ಯುವ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್ಮನ್ ಆಗಿ ಗುರುತಿಸಿಕೊಂಡಿದ್ದಾರೆ. ಅಲ್ಲದೇ ಕಡಿಮೆ ಸಮಯದಲ್ಲಿ ಇಶಾನ್ (Ishan Kishan) ಟೀಂ ಇಂಡಿಯಾದಲ್ಲಿ ಗುರುತಿಸಿಕೊಂಡಿದ್ದು, ಸಾಲು ಸಾಲು ಸರಣಿಗಳಲ್ಲಿ ಭಾರತದ (Team India) ಪರ ಕಣಕ್ಕಿಳಿಯುತ್ತಿದ್ದಾರೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಬಾಂಗ್ಲಾದೇಶ (IND vs BAN) ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲಿ ದ್ವಿಶತಕ ಬಾರಿಸುವ ಮೂಲಕ ಎಲ್ಲರ ಗಮನ ಸೆಳೆದರು. ಅವರು 131 ಎಸೆತಗಳಲ್ಲಿ 210 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಇನ್ನು, ಇಶಾನ್ ಕಿಶನ್ 32 ನಂಬರ್ ಜರ್ಸಿ ಧರಿಸಿ ಟೀಂ ಇಂಡಿಯಾ ಪರ ಕಣಕ್ಕಿಳಿಯುತ್ತಾರೆ. ಇದರ ಹಿಂದಿನ ಕಾರಣ ಕುತೂಹಲಕಾರಿಯಾಗಿದೆ. ಈ ವಿಷಯವನ್ನು ಸ್ವತಃ ಅವರೇ ಬಹಿರಂಗಪಡಿಸಿದ್ದಾರೆ.
32 ಜೆರ್ಸಿ ಕಹಾನಿ:
ಬಿಸಿಸಿಐ ಟ್ವಿಟರ್‌ನಲ್ಲಿ ಅಪ್‌ಲೋಡ್ ಮಾಡಿರುವ ವಿಡಿಯೋದಲ್ಲಿ ಇಶಾನ್ ಕಿಶನ್ ತಮ್ಮ ಜೆರ್ಸಿಯ ಹಿಂದಿನ ಕಹಾನಿಯನ್ನು ಬಹಿರಂಗಪಡಿಸಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ‘ನಾನು 23 ನಂಬರ್ ಜರ್ಸಿಯನ್ನು ಧರಿಸಲು ಬಯಸಿದ್ದೆ. ಆದರೆ ಈಗಾಗಲೇ ಕುಲದೀಪ್ ಯಾದವ್ ಅವರು ಆ ನಂಬರ್ನ್ನು ಆಯ್ಕೆ ಮಾಡಿಕೊಂಡಿದ್ದರು. ನಂತರ ನಾನು ನನ್ನ ತಾಯಿಗೆ ಕರೆ ಮಾಡಿ ಯಾವ ನಂಬರ್ ತೆಗೆದುಕೊಳ್ಳಬೇಕು ಎಂದು ಕೇಳಿದೆ. 32 ತೆಗೆದುಕೊಳ್ಳಿ ಎಂದು ತಾಯಿ ಹೇಳಿದರು. ನಂತರ ನಾನು ಏನೂ ಯೋಚಿಸದೆ ಜರ್ಸಿ ನಂಬರ್ 32 ಅನ್ನು ಧರಿಸಲು ಪ್ರಾರಂಭಿಸಿದೆ‘ ಎಂದು ಹೇಳಿದ್ದಾರೆ.
Secret behind jersey number 🤔
Getting the legendary @msdhoni's autograph ✍️
Favourite cuisine 🍱
Get to know @ishankishan51 ahead of #INDvNZ T20I opener in Ranchi 👌🏻👌🏻#TeamIndia pic.twitter.com/neltBDKyiI
— BCCI (@BCCI) January 26, 2023
ಇಶಾನ್ ಕಿಶನ್ ಅಂತಾರಾಷ್ಟ್ರೀಯ ವೃತ್ತಿಜೀವನ:
ಇಶಾನ್ ಕಿಶನ್ ಇದುವರೆಗೆ ಟೀಂ ಇಂಡಿಯಾ ಪರ 24 ಟಿ20 ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ ಅವರು 27.5 ಸರಾಸರಿಯಲ್ಲಿ 629 ರನ್ ಗಳಿಸಿದ್ದಾರೆ. ಐಪಿಎಲ್‌ನಲ್ಲಿ 75 ಪಂದ್ಯಗಳಲ್ಲಿ 1870 ರನ್ ಗಳಿಸಿದ್ದಾರೆ. ಅದೇ ODI ಬಗ್ಗೆ ಮಾತನಾಡುತ್ತಾ, ಅವರು 13 ODIಗಳಲ್ಲಿ 46 ರ ಸರಾಸರಿಯಲ್ಲಿ 507 ರನ್ ಗಳಿಸಿದ್ದಾರೆ.
ದ್ವಿಶತಕ ಗಳಿಸಿದರೂ 3 ಪಂದ್ಯದಿಂದ ಔಟ್:
ಬಿಸಿಸಿಐ ನಡೆಸಿದ ಸಂದರ್ಶನದ ವೇಳೆ ರೋಹಿತ್, ದ್ವಿಶತಕ ಬಾರಿಸಿದ ನಂತರ ನೀವು ಮೂರು ಪಂದ್ಯಗಳನ್ನು ಆಡಲಿಲ್ಲ ಎಂದು ಇಶಾನ್‌ಗೆ ಕೇಳಿದ್ದಾರೆ. ಈ ಬಗ್ಗೆ ಇಶಾನ್ ಉತ್ತರಿಸಿದ್ದು, ಸಹೋದರ ನೀನು ಕ್ಯಾಪ್ಟನ್ ಎನ್ನುವ ಮೂಲಕ ತಮಾಷೆಯಾಗಿ ಉತ್ತರಿಸಿದ್ದಾರೆ. ಇದನ್ನು ಕೇಳಿದ ರೋಹಿತ್ ಮತ್ತು ಗಿಲ್ ಜೋರಾಗಿ ನಕ್ಕು ಸುಮ್ಮನಾಗಿದ್ದಾರೆ. ಇಶಾನ್ ಕಿಶನ್ ಇತ್ತೀಚೆಗೆ ಬಾಂಗ್ಲಾದೇಶ ವಿರುದ್ಧದ ಏಕದಿನ ಪಂದ್ಯದಲ್ಲಿ ದ್ವಿಶತಕ ಸಿಡಿಸಿದ್ದರು. ಆದರೆ ಆ ನಂತರ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ ಒಂದೇ ಒಂದು ಅವಕಾಶ ಸಿಗಲಿಲ್ಲ. ಸದ್ಯ ಕಿಶನ್ ನ್ಯೂಜಿಲ್ಯಾಂಡ್ ವಿರುದ್ಧದ ಟಿ20 ಸರ್ಣಿಯ ಭಾಗವಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ