Kevin O Brien: ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ ಖ್ಯಾತ ಕ್ರಿಕೆಟಿಗ

ಐರ್ಲೆಂಡ್ ಆಲ್​ರೌಂಡರ್ ಕೆವಿನ್ ಒ’ಬ್ರಿಯಾನ್ (Kevin O Brien) ತಮ್ಮ ಕ್ರಿಕೆಟ್​ ಜೀವನಕ್ಕೆ ವಿದಾಯ ಹೇಳಿದ್ದಾರೆ. ಹೌದು, ಐರ್ಲೆಂಡ್ ಆಲ್​ರೌಂಡರ್ ಕೆವಿನ್ ಒ’ಬ್ರಿಯಾನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.

 ಕೆವಿನ್ ಒ’ಬ್ರಿಯಾನ್

ಕೆವಿನ್ ಒ’ಬ್ರಿಯಾನ್

  • Share this:
ಕೊರೋನಾ ನಂತರ ಇದೀಗ ಮತ್ತೆ ಕ್ರಿಕೆಟ್ (Cricket)​ ಲೋಕವು ಚಿಗುರುತ್ತಿದ್ದು, ಮತ್ತೆ ತಮ್ಮ ಹಳೆಯ ಚಾರ್ಮಿಗೆ ಬರುತ್ತಿದೆ. ಅದರಲ್ಲಿಯೂ ಸಾಲು ಸಾಲು ಟೂರ್ನಿಗಳನ್ನು ಎಲ್ಲಾ ದೇಶಗಳು ಸಂಯೋಜಿಸುತ್ತಿದೆ. ಇದರ ನಡುವೆ ಐಸಿಸಿ (ICC) ಸಹ ಈ ಬಾರಿ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ (T20 World Cup)​​ ಅನ್ನು ಆಯೋಜಿಸಿದೆ. ಇವೆಲ್ಲದರ ನಡುವೆ ಐರ್ಲೆಂಡ್ ಆಲ್​ರೌಂಡರ್ ಕೆವಿನ್ ಒ’ಬ್ರಿಯಾನ್ (Kevin O Brien) ತಮ್ಮ ಕ್ರಿಕೆಟ್​ ಜೀವನಕ್ಕೆ ವಿದಾಯ ಹೇಳಿದ್ದಾರೆ. ಹೌದು, ಐರ್ಲೆಂಡ್ ಆಲ್​ರೌಂಡರ್ ಕೆವಿನ್ ಒ’ಬ್ರಿಯಾನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಈ ಕುರಿತು ಸ್ವತಃ ಅವರೇ ಟ್ವೀಟ್​ ಮಾಡುವ ಮೂಲಕ ತಿಳಿಸಿದ್ದಾರೆ. ಅಲ್ಲದೇ ಐರ್ಲೆಂಡ್ ಕ್ರಿಕೆಟ್​ ಸಂಸ್ಥೆ ಸಹ ಟ್ವೀಟ್​ ಮೂಲಕ ಧನ್ಯವಾದ ತಿಳಿಸಿದೆ.

ಕೆವಿನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ:

ಐರ್ಲೆಂಡ್​ ಕ್ರಿಕೆಟ್​ನ ದಂತಕಥೆಯಾದ ಕೆವಿನ್ ಒ’ಬ್ರಿಯಾನ್ ಇಂದು ತಮ್ಮ ವೃತ್ತಿ ಜಿವನದಿಂದ ಹೊರಬಂದಿದ್ದಾರೆ. ಏಕದಿನ ವಿಶ್ವಕಪ್‌ನಲ್ಲಿ ಅತಿ ವೇಗದ ಶತಕ ಬಾರಿಸಿ ದಾಖಲೆ ಬರೆಯುವ ಮೂಲಕ ಕ್ರಿಕೆಟ್​ ಜಗತ್ತೇ ಒಮ್ಮೆ ತಿರುಗಿ ನೋಡುವಂತೆ ಮಾಡಿದ್ದ ಕೆವಿನ್​, ಇಂದು ತಮ್ಮ ಅಮತರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ. ಐರ್ಲೆಂಡ್ ಪರ 16 ವರ್ಷಗಳ ಕಾಲ ಆಟವಾಡಿದ್ದ ಕೆವಿನ್​ ಭಾವನಾತ್ಮಕ ಪತ್ರವನ್ನು ಬರೆಯುವ ಮೂಲಕ ನಿವೃತ್ತಿಯನ್ನು ಘೋಷಿಸಿದ್ದಾರೆ.

ಟ್ವೀಟ್​ ಮೂಲಕ ಭಾವನಾತ್ಮಕ ಪತ್ರಬರೆದ ಕೆವಿನ್​:

ಹೌದು, ಐರ್ಲೆಂಡ್​ನ ಆಲ್​ ರೌಂಡರ್​ ಕೆವಿನ್​ ಒ’ಬ್ರಿಯಾನ್ ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ ಮೂಲಕ ನನ್ನ ವೃತ್ತಿಜೀವನಕ್ಕೆ ವಿದಾಯ ಹೇಳಲು ಬಯಸಿದ್ದೆ. ಆದರೆ ನಾನು ಸದ್ಯ ಐರ್ಲೆಂಡ್‌ನ ಟಿ20 ತಂಡಕ್ಕೆ ಆಯ್ಕೆಯಾಗಿಲ್ಲ. ಹೀಗಾಗಿ ನಿವೃತ್ತಿ ನೀಡಲು ಮುಂದಾಗಿದ್ದಾನೆ. ಅಲ್ಲದೇ ಐರಿಶ್​ ತಂಡದ ಪರ 16 ವರ್ಷ ಆಟವಾಡಿರುವೆ. ಇಲ್ಲಿ ಆಡುವ ಪ್ರತಿ ನಿಮಿಷವನ್ನು ಆನಂದಿಸಿದ್ದೇನೆ. ದೇಶಕ್ಕಾಗಿ 389 ಪಂದ್ಯಗಳನ್ನು ಆಡಿರುವೆ. ಆದರೆ, ಕಳೆದ ವರ್ಷದಿಂದ ನನ್ನನ್ನು ಟಿ20 ತಂಡಕ್ಕೆ ಆಯ್ಕೆ ಮಾಡದ ಕಾರಣ ಈ ನಿವೃತ್ತಿಯನ್ನು ನೀಡುತ್ತಿರುವೆ‘ ಎಂದು ಬರೆದುಕೊಂಡಿದ್ದಾರೆ.





ಇಷ್ಟು ಮಾತ್ರವಲ್ಲದೆ, ಇದೀಗ ನನ್ನ ವೃತ್ತಿ ಜೀವನವನ್ನು ಮುಂದಿನ ಹಂತಕ್ಕೆ ಹೋಗಲು ಸರಿಯಾದ ಸಮಯವಾಗಿದೆ. ಹೀಗಾಗಿ ಈ ವಿದಾಯ ಸರಿಯಾದ ಸಮಯ ಎಂದು ಭಾವಿಸುತ್ತೇನೆ. ಈ ನಿವೃತ್ತಿಯ ನಂತರ ಐರ್ಲೆಂಡ್‌ನಲ್ಲಿ ನನ್ನ ಸ್ವಂತ ಕೋಚಿಂಗ್ ಅಕಾಡೆಮಿ ಸ್ಥಾಪಿಸಲು ನಿರ್ಧರಿಸಿರುವೆ. ಪಂದ್ಯದ ವೇಳೆ ಅನೇಕ ಉತ್ತಮ ಕ್ಷಣಗಳು ಇಂದಿಗೂ ನನಗೆ ನೆನಪಿನಲ್ಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Hasin Jahan: ಭಾರತವನ್ನು ಇಂಡಿಯಾ ಅಂತ ಕರೆಯೋದು ಬೇಡ! ಮೋದಿಗೆ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗನ ಪತ್ನಿ ಮನವಿ

ಕೆವಿನ್ ವೃತ್ತಿ ಜೀವನದ ಸಾಧನೆ:

ಕೆವಿನ್ ಐರ್ಲೆಂಡ್ ಪರ 3 ಟೆಸ್ಟ್, 153 ಏಕದಿನ ಮತ್ತು 110 ಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, ಆಲ್​ ರೌಂಡರ್ ಆಗಿ ಮಿಂಚಿದ್ದಾರೆ. ಇವರು ಒಟ್ಟಾರೆಯಾಗಿ 5850 ರನ್ ಹಾಗೂ 172 ವಿಕೆಟ್‌ಗಳನ್ನು ಪಡೆದಿದ್ದಾರೆ. 2011ರಲ್ಲಿ ನಡೆದ ಏಕದಿನ ವಿಶ್ವಕಪ್​ ವೇಳೆ ಕೆವಿನ್ ವಿಶ್ವಕಪ್​ ಇತಿಹಾಸದಲ್ಲಿಯೇ ವೇಗದ ಶತಕ ಸಿಡಿಸಿ ಮಿಂಚಿದ್ದರು. ಇಂಗ್ಲೆಂಡ್ ವಿರುದ್ಧ ನಡೆದ ಏಕದಿನ ವಿಶ್ವಕಪ್​ ಪಂದ್ಯದಲ್ಲಿ 50 ಎಸೆತಗಳಲ್ಲಿ ಶತಕ ಪೂರೈಸಿದ್ದರು. ಇಂದಿಗೂ ಈ ದಾಖಲೆಯನ್ನು ಯಾರಿಂದಲೂ ಮುರಿಯಲು ಸಾಧ್ಯವಾಗಲಿಲ್ಲ.
Published by:shrikrishna bhat
First published: