Women's T20 Challenge: ಮಹಿಳಾ T20 ಚಾಲೆಂಜ್‌ನ ತಂಡಗಳ ಘೋಷಣೆ, ಟೀಂ ಇಂಡಿಯಾದ ಅನುಭವಿಗಳಿಗೆ ಕೋಕ್!

ಐಪಿಎಲ್ 2022ರಲ್ಲಿ ನಡೆಯಲಿರುವ ಮಹಿಳಾ ಟಿ20 ಚಾಲೆಂಜ್‌ಗೆ ಬಿಸಿಸಿಐ (BCCI) ನೂತನ 3 ತಂಡಗಳನ್ನು ಪ್ರಕಟಿಸಿದೆ.

ಮಹಿಳಾ ಟಿ20 ಚಾಲೆಂಜ್

ಮಹಿಳಾ ಟಿ20 ಚಾಲೆಂಜ್

  • Share this:
ಐಪಿಎಲ್ 2022ರಲ್ಲಿ ನಡೆಯಲಿರುವ ಮಹಿಳಾ ಟಿ20 ಚಾಲೆಂಜ್‌ಗೆ ಬಿಸಿಸಿಐ (BCCI) ನೂತನ 3 ತಂಡಗಳನ್ನು ಪ್ರಕಟಿಸಿದೆ. ವಿಶೇಷ ಎಂಬಂತೆ ಇದರಲ್ಲಿನ 3 ತಂಡಗಳಿಗೂ ಭಾರತೀಯ ಮಹಿಳಾ ಕ್ರಿಕೆರ್​ಗಳೇ ನಾಯಕಿಯರಾಗಿದ್ದಾರೆ. ಬಿಸಿಸಿಐ ನೂತನವಾಗಿ ಸೂಪರ್‌ನೋವಾಜಾ (Supernovas), ಟ್ರೇಲ್‌ಬ್ಲೇಜರ್ಸ್ (Trailblazers), ವೆಲೋಸಿಟಿ (Velocity) ತಂಡಗಳು ಸೆಣಸಾಡಲಿವೆ. ಹರ್ಮನ್‌ಪ್ರೀತ್ ಕೌರ್ ಸೂಪರ್‌ನೋವಾಜಾ ತಂಡವನ್ನು ಮುನ್ನಡೆಸಿದರೆ, ಸ್ಮೃತಿ ಮಂಧಾನ ಟ್ರೇಲ್‌ಬ್ಲೇಜರ್ಸ್ ಮತ್ತು ದೀಪ್ತಿ ಶರ್ಮಾ ವೆಲೋಸಿಟಿ ತಂಡವನ್ನು ಮುನ್ನಡೆಸಲಿದ್ದಾರೆ. ಪ್ರತಿ ತಂಡದಲ್ಲಿ 16 ಆಟಗಾರರು ಇದ್ದು, ಐಪಿಎಲ್ 2022 ರ ಕೊನೆಯ ವಾರದಲ್ಲಿ ಮಹಿಳೆಯರ T20 ಚಾಲೆಂಜ್ ಅನ್ನು ಆಯೋಜಿಸಲಾಗಿದೆ. ಇದು ಸ್ಪರ್ಧೆಯ ಐದನೇ ಸೀಸನ್ ಆಗಿದೆ. ಎಲ್ಲಾ ಪಂದ್ಯಗಳು ಪುಣೆಯ ಎಂಸಿಎ ಕ್ರೀಡಾಂಗಣದಲ್ಲಿ ಮೇ 23 ರಿಂದ 28ರ ವರೆಗೆ ನಡೆಯಲಿದೆ.

5 ತಂಡಗಳ ಆಟಗಾರ್ತಿಯರು ಭಾಗಿ:

ಇನ್ನು, ಮಹಿಳಾ T20 ಚಾಲೆಂಜ್​ ನಲ್ಲಿ ಈ ಬಾರಿ 5 ದೇಶದ ಆಟಗಾರ್ತಿಯರು ಪಾಲ್ಗೊಳ್ಳಲಿದ್ದಾರೆ. ಮಹಿಳಾ ಟಿ20 ಚಾಲೆಂಜ್‌ನಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡವನ್ನು ಹೊರತುಪಡಿಸಿ, ಇಂಗ್ಲೆಂಡ್, ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳಿಂದ 12 ಮಹಿಳಾ ಆಟಗಾರರು ಭಾಗವಹಿಸಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ. ಆದರೆ ಬಿಸಿಸಿಐ ಈ ಬಾರಿ ಭಾರತ ತಂಡದ ನಾಯಕಿ ಮಿಥಾಲಿ ರಾಜ್ ಮತ್ತು ವೇಗದ ಬೌಲರ್ ಜೂಲನ್ ಗೋಸ್ವಾಮಿ ಅವರಿಗೆ ಟೂರ್ನಿಯಿಂದ ವಿಶ್ರಾಂತಿ ನೀಡಿದೆ.

ಮಹಿಳೆಯರ T20 ಚಾಲೆಂಜ್‌ನ ವೇಳಾಪಟ್ಟಿ:

ಮಹಿಳೆಯರ T20 ಚಾಲೆಂಜ್‌ನ ಆರಂಭಿಕ ಪಂದ್ಯವು ಮೇ 23 ರಂದು ಸೂಪರ್ನೋವಾಸ್ ಮತ್ತು ಟ್ರೈಲ್ಬ್ಲೇಜರ್ಸ್ ನಡುವೆ ನಡೆಯಲಿದೆ. ಪಂದ್ಯ ರಾತ್ರಿ 7.30ಕ್ಕೆ ಆರಂಭವಾಗಲಿದೆ. ಮೇ 24ರಂದು ಮಧ್ಯಾಹ್ನ 3.30ಕ್ಕೆ ಸೂಪರ್‌ನೋವಾ ಮತ್ತು ವೆಲಾಸಿಟಿ ನಡುವೆ ಪಂದ್ಯ ನಡೆಯಲಿದೆ. ವೆಲೋಸಿಟಿ ಮತ್ತು ಟ್ರೈಲ್‌ಬ್ಲೇಜರ್ಸ್ ನಡುವಿನ ಮೂರನೇ ಪಂದ್ಯ ಮೇ 26 ರಂದು ನಡೆಯಲಿದೆ. ಮೇ 28ರ ಭಾನುವಾರದಂದು ಟಿ20 ಚಾಲೆಂಜ್‌ನ ಫೈನಲ್ ಪಂದ್ಯ ನಡೆಯಲಿದೆ.

ಇದನ್ನೂ ಓದಿ: IPL 2022 SRH vs MI: ಹೈದರಾಬಾದ್ ತಂಡಕ್ಕೆ ಮುಂಬೈ ಸವಾಲ್, ಹೇಗಿರಲಿದೆ ಉಭಯ ತಂಡಗಳ ಪ್ಲೇಯಿಂಗ್ 11

ಮಹಿಳಾ T20 ಚಾಲೆಂಜ್​ನ 3 ತಂಡಗಳ ಆಟಗಾರ್ತಿಯರು:

ಸೂಪರ್‌ನೋವಾಜಾ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ತಾನಿಯಾ ಭಾಟಿಯಾ, ಎಲಾನಾ ಕಿಂಗ್, ಆಯುಷಿ ಸೋನಿ, ಚಂದು ವಿ, ಡಿಯಾಂಡ್ರಾ ಡೋಟಿನ್, ಹರ್ಲೀನ್ ಡಿಯೋಲ್, ಮೇಘನಾ ಸಿಂಗ್, ಮೋನಿಕಾ ಪಟೇಲ್, ಮುಸ್ಕಾನ್ ಮಲಿಕ್, ಪೂಜಾ ವಸ್ತ್ರಾಕರ್, ಪ್ರಿಯಾ ಪುನಿಯಾ, ರಾಶಿ ಕನೋಜಿಯಾ, ಸೋಫಿ ಎಕ್ಲೆಸ್ಟೋನ್, ಸನ್ ಲೂಸ್ ಮಾನ್ಸಿ ಜೋಶಿ.

ಇದನ್ನೂ ಓದಿ: IPL 2022: ಅಯ್ಯೋ! ನೋವಾಯ್ತಾ? ಆರ್​ಸಿಬಿ ಆಟಗಾರ ಸಿಡಿಸಿದ ಸಿಕ್ಸರ್ ಅಭಿಮಾನಿಯ ತಲೆಗೇ ಬಡೀತು!

ಟ್ರೇಲ್‌ಬ್ಲೇಜರ್ಸ್: ಸ್ಮೃತಿ ಮಂಧಾನ (ನಾಯಕಿ), ಪೂನಂ ಯಾದವ್, ಅರುಂಧತಿ ರೆಡ್ಡಿ, ಹ್ಯಾಲಿ ಮ್ಯಾಥ್ಯೂಸ್, ಜೆಮಿಮಾ ರೋಡ್ರಿಗಸ್, ಪ್ರಿಯಾಂಕಾ ಪ್ರಿಯದರ್ಶಿನಿ, ರಾಜೇಶ್ವರಿ ಗಾಯಕ್ವಾಡ್, ರೇಣುಕಾ ಸಿಂಗ್, ರಿಚಾ ಘೋಷ್, ಎಸ್ ಮೇಘನಾ, ಸೈಕಾ ಇಶಾಕ್, ಸಲ್ಮಾ ಖಾತೂನ್, ಶರ್ಮಿನ್ ಅಖ್ತರ್, ಸುಕರ್ ಬಿ ಪೋತರ್, ಸೋಫಿ ಅಖ್ತರ್ .

ವೆಲೋಸಿಟಿ: ದೀಪ್ತಿ ಶರ್ಮಾ (ನಾಯಕಿ), ಸ್ನೇಹಾ ರಾಣಾ, ಶೆಫಾಲಿ ವರ್ಮಾ, ಅಯಾಬೊಂಗಾ ಖಾಕಾ, ಕೆಪಿ ನವಗೀರ್, ಕ್ಯಾಥರೀನ್ ಕ್ರಾಸ್, ಕೀರ್ತಿ ಜೇಮ್ಸ್, ಲಾರಾ ವೊಲ್ವರ್ಡ್, ಮಾಯಾ ಸೋನಾವಾನೆ, ನತ್ತಕನ್ ಚಂತಮ್, ರಾಧಾ ಯಾದವ್, ಆರತಿ ಕೇದಾರ್, ಶಿವಾಲಿ ಶಿಂಧೆ, ಸಿಮ್ರಾನ್ ಬಹದ್ದೂರ್, ಯಸ್ತ್ ಬಹದ್ದೂರ್ ಪ್ರಣವಿ ಚಂದ್ರ.
Published by:shrikrishna bhat
First published: