• Home
  • »
  • News
  • »
  • sports
  • »
  • RCB ಅಭಿಮಾನಿಗಳಿಗೆ ಭರ್ಜರಿ ಗುಡ್​ ನ್ಯೂಸ್, ಕರ್ನಾಟಕದ ಈ 4 ನಗರಗಳಲ್ಲಿ ನಡೆಯಲಿದೆ IPL

RCB ಅಭಿಮಾನಿಗಳಿಗೆ ಭರ್ಜರಿ ಗುಡ್​ ನ್ಯೂಸ್, ಕರ್ನಾಟಕದ ಈ 4 ನಗರಗಳಲ್ಲಿ ನಡೆಯಲಿದೆ IPL

ಸಾದರ್ಭಿಕ ಚಿತ್ರ

ಸಾದರ್ಭಿಕ ಚಿತ್ರ

BCCI: ಬಿಸಿಸಿಐ ನೂತನ ಅಧ್ಯಕ್ಷರಾಗಿ ಆಯ್ಕೆ ಆಗಿರುವ ರೋಜರ್ ಬಿನ್ನಿ (Roger Binny) ಐಪಿಎಲ್ ಕುರಿತು ಮಹತ್ವದ ಹೇಳಿಕೆ ನೀಡಿದ್ದು, ಆರ್​ಸಿಬಿ (RCB) ಅಭಿಮಾನಿಗಳಿಗೆ ಇದು ಭರ್ಜರಿ ಸಂತಸ ತಂದಿದೆ.

  • News18 Kannada
  • Last Updated :
  • New Delhi, India
  • Share this:

ಐಪಿಎಲ್‌ 2023ರ (IPL-2023) ಹರಾಜು ಪ್ರಕ್ರಿಯೆಗೆ  ಈಗಾಗಲೇ ಮೂಹೂರ್ತ ಫಿಕ್ಸ್‌ ಆಗಿದ್ದು, ಡಿಸೆಂಬರ್‌ 16 ರಂದು ನಡೆಯಲಿದೆ ಎಂದು ವರದಿಗಳು ತಿಳಿಸಿವೆ. ಇತ್ತ ಬಿಸಿಸಿಐ (BCCI) ಐಪಿಎಲ್‌ 2022ರ ಹರಾಜು (Auction) ಪ್ರಕ್ರಿಯೆಯಲ್ಲಿ ಖರೀದಿಯಾಗದ ಮತ್ತು ಉಳಿದುಕೊಂಡಿರುವ ಆಟಗಾರರ ಪಟ್ಟಿಯನ್ನು ನವೆಂಬರ್ 15 ರೊಳಗೆ ಸಲ್ಲಿಸಲು ಎಲ್ಲಾ ಹತ್ತು ಐಪಿಎಲ್‌ ಫ್ರಾಂಚೈಸಿಗಳನ್ನು (IPL Franchise) ಕೇಳಿದೆ. ಇದರ ನಡುವೆ ಬಿಸಿಸಿಐ ನೂತನ ಅಧ್ಯಕ್ಷರಾಗಿ ಆಯ್ಕೆ ಆಗಿರುವ ರೋಜರ್ ಬಿನ್ನಿ (Roger Binny) ಐಪಿಎಲ್ ಕುರಿತು ಮಹತ್ವದ ಹೇಳಿಕೆ ನೀಡಿದ್ದು, ಆರ್​ಸಿಬಿ (RCB) ಅಭಿಮಾನಿಗಳಿಗೆ ಇದು ಭರ್ಜರಿ ಸಂತಸ ತಂದಿದೆ.


RCB ಅಭಿಮಾನಿಗಳಿಗೆ ಭರ್ಜರಿ ಗುಡ್​ ನ್ಯೂಸ್:


ಹೌದು, ಈಗಾಗಲೇ ತಿಳಿಸಿದಂತೆ ಬಿಸಿಸಿಐ ನೂತನ ಅಧ್ಯಕ್ಷರಾಗಿ ಆಯ್ಕೆ ಆದ ಕನ್ನಡಿಗ ರೋಜರ್ ಬಿನ್ನಿ ಇದೀಗ ಆರ್​ಸಿಬಿ ಅಭಿಮಾನಿಗಳಿಗೆ ಸಂತಸದ ಸುದ್ದಿಯೊಂದನ್ನು ನೀಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಅಲ್ಲಿ ಮಾತನಾಡಿದ ಅವರು, ಇಷ್ಟು ದಿನಗಳ ಕಾಲ ಕೇವಲ ಐಪಿಎಲ್ ಪಂದ್ಯಗಳನ್ನು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಸಲಾಗುತ್ತಿತ್ತು. ಮುಂಬರುವ ಐಪಿಎಲ್ ಪಂದ್ಯಗಳನ್ನು ಬೆಂಗಳೂರಿನಲ್ಲಲಿ ಮಾತ್ರವಲ್ಲದೇ ರಾಜ್ಯದ ಮೈಸೂರು, ಹುಬ್ಬಳ್ಳಿ ಮತ್ತು ಬೆಳಗಾವಿ ಮೈದಾನಗಳಲ್ಲಿಯೂ ನಡೆಸಲು ಚಿಂತನೆ ಮಾಡಲಾಗುತ್ತಿದೆ. ಈ ನಗರಗಳಲ್ಲಿ ಐಪಿಎಲ್ ಪಂದ್ಯಗಳನ್ನು ಆಯೋಜಿಸಲು ಬೇಕಾದ ಮೈದಾನಗಳು ಹಾಗೂ ಎಲ್ಲಾ ಮೂಲ ಸೌಕರ್ಯಗಳೂ ಇವೆ. ಹೀಗಾಗಿ ಆರ್​ಸಿಬಿ ಪಂದ್ಯಗಳನ್ನು ಇಲ್ಲಿಯೂ ಆಯೋಜಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.


ಮಿನಿ ಹರಾಜಿಗೆ ಡೇಟ್​ ಫಿಕ್ಸ್:


ಮಿನಿ ಹರಾಜಿನಲ್ಲಿ ಅಂತಹ ಆಯ್ಕೆ ಇರುವುದಿಲ್ಲ. ತಂಡ ಹಿಂದಿನ ಹರಾಜಿನಲ್ಲಿ ಖರ್ಚು ಮಾಡಿದ ಹಣದ ಮೇಲೆ ಹೆಚ್ಚುವರಿಯಾಗಿ 5 ಕೋಟಿ ರೂಪಾಯಿ (ಅಂದಾಜು US $607,000) ಖರ್ಚು ಮಾಡಲು ಈ ಬಾರಿ ಅವಕಾಶವಿದೆ. ಇದು ಒಟ್ಟಾರೆ 95 ಕೋಟಿ ರೂಪಾಯಿ (ಸುಮಾರು US $ 11.5 ಮಿಲಿಯನ್) ಮೀರಬಾರದು ಎಂಬ ಷರತ್ತುಗಳನ್ನು ಹೊಂದಿದೆ.


ಇದನ್ನೂ ಓದಿ: IND vs PAK: ಬ್ಯಾಟರ್​ vs ಬೌಲರ್ಸ್, ಹೇಗಿರಲಿದೆ ಭಾರತ-ಪಾಕಿಸ್ತಾನ ಕದನ?


ಯಾವ ತಂಡದ ಬಳಿ ಎಷ್ಟು ಹಣ ಬಾಕಿಯಿದೆ?:


ಕಳೆದ ವರ್ಷದ ಹರಾಜಿನ ನಂತರ ಪಂಜಾಬ್ ಕಿಂಗ್ಸ್‌ ತಂಡ 3.45 ಕೋಟಿ ರೂಪಾಯಿ ಉಳಿಸಿಕೊಂಡಿದ್ದು, ಹೆಚ್ಚು ಹಣವನ್ನು ಉಳಿಸಿಕೊಂಡ ತಂಡವಾಗಿದೆ. ಆದರೆ ಇತ್ತ ಲಕ್ನೋ ಸೂಪರ್ ಜೈಂಟ್ಸ್ ತನ್ನ ಎಲ್ಲಾ ಹಣವನ್ನು ಬಿಡ್‌ನಲ್ಲಿ ಬಳಸಿಕೊಂಡು ಖಜಾನೆಯನ್ನು ಬರಿದು ಮಾಡಿಕೊಂಡಿದೆ. ಉಳಿದಂತೆ ಚೆನ್ನೈ ಸೂಪರ್ ಕಿಂಗ್ಸ್ 2.95 ಕೋಟಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು 1.55 ಕೋಟಿ, ರಾಜಸ್ಥಾನ್ ರಾಯಲ್ಸ್ 0.95 ಕೋಟಿ ಮತ್ತು ಕೋಲ್ಕತ್ತಾ ನೈಟ್‌ ರೈಡರ್ಸ್ 0.45 ಕೋಟಿ, ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ 0.15 ಕೋಟಿಯನ್ನು ಉಳಿಸಿಕೊಂಡಿದ್ದರೆ, ಮುಂಬೈ ಇಂಡಿಯನ್ಸ್, ಸನ್‌ರೈಸರ್ಸ್ ಹೈದರಾಬಾದ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಲಾ 0.10 ಕೋಟಿ ರೂಪಾಯಿ ಹಣವನ್ನು ಹೊಂದಿದೆ.


ಇದನ್ನೂ ಓದಿ: IND vs PAK: ಪಾಕ್ ಪಂದ್ಯಕ್ಕೂ ಮುನ್ನ ಪ್ಲೇಯಿಂಗ್ 11 ಬಗ್ಗೆ ಶಾಕಿಂಗ್​ ಹೇಳಿಕೆ ನೀಡಿದ ರೋಹಿತ್!


ಮುಂದಿನ ಐಪಿಎಲ್ ತವರು ಮೈದಾನದಲ್ಲಿ:


ಕೊರೋನಾ ಕಾರಣ ಕಳೆದ 2 ಸೀಸನ್​ಗಳು ಬೆಂಗಳೂರಿನಲ್ಲಿ ನಡೆಯಲಿಲ್ಲ. ಇದರಿಂದಾಗಿ ಆರ್​ಸಿಬಿ ಅಭಿಮಾನಿಗಳಿಗೆ ತೀರ್ವ ನಿರಾಸೆ ಉಂಟಾಗಿತ್ತು. ಆದರೆ 2023 ಐಪಿಎಲ್​ ಎಲ್ಲಾ ತಂಡಗಳ ತವರಿನಲ್ಲಿಯೂ ನಡೆಯುವ ಕಾರಣ ಆರ್​ಸಿಬಿ ಪಂದ್ಯಗಳು ಬೆಂಗಳೂರಿನಲ್ಲಿ ನಡೆಯಲಿದೆ. ಇದಿಂದಾಗಿ 2ವರ್ಷಗಳ ನಂತರ ಅಭಿಮಾನಿಗಳಿಗೆ ತಮ್ಮ ಮೆಚ್ಚಿನ ತಂಡವನ್ನು ಚಿಯರ್ಸ್​ ಮಾಡುವ ಅವಕಾಶ ದೊರಕುತ್ತಿದೆ.

Published by:shrikrishna bhat
First published: