ಐಪಿಎಲ್ ಮುಗಿದು ಅನೇಕ ದಿನಗಳೇ ಕಳೆದಿದೆ. ಇದೀಗ ಭಾರತ ತಂಡ ಏಷ್ಯಾ ಕಪ್ ಮತ್ತು ಐಸಿಸಿ ಟಿ20 ವಿಶ್ವಕಪ್ ಕಡೆ ಹೆಚ್ಚಿನ ಮಹತ್ವ ನೀಡುತ್ತಿದೆ. ಇದರ ನಡುವೆ ಐಪಿಎಲ್ನ ಪ್ರಮುಖ ತಂಡವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡದ ಕುರಿತು ವಿಶೇಷವಾಗಿ ಹೇಳಬೇಕಾಗಿಲ್ಲ. ತನ್ನದೇ ಆದ ಅಭಿಮಾನಿಗಳ ಬಳಗವನ್ನು ಹೊಂದಿರುವ RCB ಸಾಮಾಜಿಕ ಜಾಲತಾಣದಲ್ಲಿ (Social Media) ಅತೀ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. ಟ್ವಿಟರ್, ಫೇಸ್ಬುಕ್, ಯೂಟ್ಯೂಬ್ ಚಾನಲ್ಗಳಲ್ಲಿ ಲಕ್ಷಗಟ್ಟಲೇ ಫಾಲೋವರ್ಸ್ ಗಳನ್ನು ಹೊಂದಿರುವ RCB, ತನ್ನೆಲ್ಲಾ ಮಾಹಿತಿಗಳನ್ನು ಈ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತೊರುತ್ತದೆ. ಆದರೆ ಇದೀಗ RCB ಅಧಿಕೃತ ಯೂಟ್ಯೂಬ್ ಚಾನೆಲ್ (YouTube channel) ಹ್ಯಾಕ್ ಆಗಿದೆ. ಅಲ್ಲದೇ ಆರ್ಸಿಬಿಯ ಯೂಟ್ಯೂಬ್ ನಲ್ಲಿದ್ದ ಎಲ್ಲಾ ವಿಡಿಯೋಗಳನ್ನೂ ಡಿಲೀಟ್ ಮಾಡಲಾಗಿದೆ.
RCB ಅಧಿಕೃತ ಯೂಟ್ಯೂಬ್ ಚಾನೆಲ್ ಹ್ಯಾಕ್:
ಹೌದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಧಿಕೃತ ಯೂಟ್ಯೂಬ್ ವಾಹಿನಿಯನ್ನು ಕಿಡಿಗೇಡಿಗಳು ಹ್ಯಾಕ್ ಮಾಡಿದ್ದಾರೆ. ಅಲ್ಲದೇ ಈ ಮೊದಲು ಇದ್ದಂತಹ ಎಲ್ಲಾ ವಿಡಿಯೋಗಳನ್ನೂ ಡಿಲೀಟ್ ಮಾಡಿದ್ದಾರೆ. ಮೈಕ್ರೋ ಸ್ಟ್ರಾಟಜಿ ಎಂಬ ಕ್ರಿಪ್ಟೋಕರೆನ್ಸಿ ಕಂಪನಿಯೊಂದು RCB ಯೂಟ್ಯೂಬ್ ಚಾನಲ್ ಅನ್ನು ಹ್ಯಾಕ್ ಮಾಡಿದೆ ಎಂದು ವರದಿಯಾಗಿದೆ. ಸದ್ಯ ಈ ಕುರಿತು ಆರ್ಸಿಬಿ ಫ್ರ್ಯಾಂಚೈಸ್ ಯಾವ ನಿರ್ಧಾರವನ್ನು ಕೈಗೊಳ್ಳಲಿದೆ ಎಂದು ಕಾದುನೋಡಬೇಕಿದೆ. ಅಲ್ಲದೇ ಹಳೆಯ ವಿಡಿಯೋಗಳು ಮತ್ತೆ ಅಪ್ಲೋಡ್ ಆಗಲಿದೆಯೇ ಎಂಬುದರ ಕುರಿತು ಯಾವುದೇ ಮಾಹಿತಿ ದೊರಕಿಲ್ಲ.
ಹ್ಯಾಕ್ ಆಗಿತ್ತು ಟ್ವಿಟರ್:
ಆರ್ಸಿಬಿ ತಂಡದ ಯೂಟ್ಯೂಟ್ ಚಾನಲ್ ಇದೀಗ ಹ್ಯಾಕ್ ಆಗಿದ್ದು, ಹಳೆಯ ಎಲ್ಲಾ ವಿಡಿಯೋಗಳು ಡಿಲೀಟ್ ಆಗಿದೆ. ಆದರೆ ಈ ರೀತಿ ಹ್ಯಾಕ್ ಆಗುತ್ತಿರುವುದು ಆರ್ಸಿಬಿ ಗೆ ಹೊಸದಲ್ಲ. ಇದಕ್ಕೂ ಮೊದಲು ಆರ್ಸಿಬಿ ಟ್ವಿಟರ್ ಖಾತೆ ಹ್ಯಾಕ್ ಮಾಡಲಾಗಿತ್ತು. ಕಳೆದ ವರ್ಷ RCB ಟ್ವಿಟರ್ ಖಾತೆ ಹ್ಯಾಕ್ ಆಗಿತ್ತು. ಇದನ್ನು ಸರಿಪಡಿಸಲು ತಾಂತ್ರಿಕ ತಂಡಕ್ಕೆ ಕೆಲವು ಗಂಟೆಗಳೇ ಬೇಕಾಯಿತು. ನಂತರ ಅದನ್ನು ಸರಿಪಡಿಸಿ RCB ಸ್ಪಷ್ಟನೆ ನೀಡಿತ್ತು. ಹ್ಯಾಕರ್ಗಳು ಹಾಕಿರುವ ಟ್ವೀಟ್ ಅನ್ನು ನಾವು ಖಂಡಿಸುತ್ತೇವೆ. ಉಂಟಾದ ಅನಾನುಕೂಲತೆಗಾಗಿ ನಾವು ವಿಷಾದಿಸುತ್ತೇವೆ ಎಂದು ಟ್ವೀಟ್ ಮಾಡುವ ಮೂಲಕ ತಿಳಿಸಿತ್ತು.
ಇದನ್ನೂ ಓದಿ: Mithali Raj: ಮಿಥಾಲಿ ರಾಜ್ ಮದುವೆಯಾಗದೇ ಇರುವುದಕ್ಕೆ ಇದೇ ಕಾರಣಾನಾ? ಇಲ್ಲಿದೆ ಕುತೂಹಲಕಾರಿ ಸಂಗತಿ
ಹೇಗಿದೆ ಆರ್ಸಿಬಿ ಸೋಶಿಯಲ್ ಮೀಡಿಯಾ:
ಇನ್ನು, ಐಪಿಎಲ್ ನಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡವೆಂದರೆ ಅದು ಆರ್ಇಸಿಬಿ. ಹೀಗಾಗಿ ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿಯೂ ಅಷ್ಟೇ ಫಾಲೋವರ್ಸ್ ಗಳು ಇದ್ದಾರೆ. RCB ಟ್ವಿಟರ್ನಲ್ಲಿ ಸುಮಾರು 4.8 ಮಿಲಿಯನ್, ಫೇಸ್ಬುಕ್ನಲ್ಲಿ 9.4 ಮಿಲಿಯನ್ ಮತ್ತು ಇನ್ಸ್ಟಾಗ್ರಾಮ್ನಲ್ಲಿ 6.9 ಮಿಲಿಯನ್ ಅನುಯಾಯಿಗಳನ್ನು ಹೊಂದಿದೆ.
ಇದನ್ನೂ ಓದಿ: Urvashi Rautela: ನೆಟ್ಟಗೆ ಬ್ಯಾಟ್ ಬಾಲ್ ಜೊತೆ ಆಟವಾಡು, ಖ್ಯಾತ ಕ್ರಿಕೆಟಿಗನಿಗೆ ಬಾಲಿವುಡ್ ನಟಿ ಶಾಕಿಂಗ್ ಕಾಮೆಂಟ್
ಐಪಿಎಲ್ನಲ್ಲಿ RCB ತಂಡ:
ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್ವೆಲ್, ಮೊಹಮ್ಮದ್ ಸಿರಾಜ್, ಫಾಫ್ ಡುಪ್ಲೆಸಿಸ್ (ನಾಯಕ), ವನಿಂದು ಹಸರಂಗ, ದಿನೇಶ್ ಕಾರ್ತಿಕ್ (ವಿ.ಕೀ), ಹರ್ಷಲ್ ಪಟೇಲ್, ಜೋಶ್ ಹ್ಯಾಝಲ್ ವುಡ್, ಶಹಬಾಜ್ ಅಹ್ಮದ್, ಅನೂಜ್ ರಾವತ್, ಆಕಾಶ್ ದೀಪ್, ಮಹಿಪಾಲ್ ಲೊಮ್ರೋರ್, ಫಿನ್ ಆಲೆನ್, ಶೆರ್ಫೇನ್ ರುದರ್ಫೋರ್ಡ್, ಜೇಸನ್ ಬೆಹ್ರೆನ್ಡಾರ್ಫ್, ಸುಯಶ್ ಪ್ರಭುದೇಸಾಯ್, ಚಮ ಮಿಲಿಂದ್, ಅನೀಶ್ವರ್ ಗೌತಮ್, ಕರಣ್ ಶರ್ಮಾ, ಸಿದ್ಧಾರ್ಥ್ ಕೌಲ್, ಡೇವಿಡ್ ವಿಲ್ಲಿ, ರಜತ್ ಪಾಟಿದಾರ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ