ಚಿನ್ನದ ಹುಡುಗ ನೀರಜ್ ಚೋಪ್ರಾ (Olympic Gold Medalist Neeraj Chopra) ಇತ್ತೀಚಿನ ದಿನಗಳಲ್ಲಿ ಕೇವಲ ಕ್ರೀಡೆಯಿಂದ ಮಾತ್ರವಲ್ಲ ಅವರ ಸರಳತೆ, ಸಭ್ಯತೆ, ಪ್ರತಿಯೊಬ್ಬರಿಗೂ ಗೌರವ ಕೂಡ ರೀತಿಯಿಂದಲೂ ಜನರಿಗೆ ಅಚ್ಚುಮೆಚ್ಚಿನ ವರೆನಿಸಿಕೊಂಡಿದ್ದಾರೆ. ಈ ಹಿಂದೆ ನೀರಜ್ ಚೋಪ್ರಾ ಅವರು ತನ್ನ ತಂದೆ ತಾಯಿಯ ಜೊತೆಗಿನ ಮೊದಲ ಬಾರಿ ವಿಮಾನಯಾನದ ಖುಷಿಯನ್ನು ಇವರು ಹಂಚಿಕೊಂಡಿದ್ದರು. ಸಣ್ಣ ಸಣ್ಣ ಖುಷಿಗಳನ್ನು ಸಂಭ್ರಮಿಸುವ ನೀರಜ್ ಚೋಪ್ರಾ ಅವರ ವ್ಯಕ್ತಿತ್ವ ಎಲ್ಲರಿಗೂ ಮಾದರಿ.
ಇದೀಗ ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಅವರ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಜಾಲತಾಣವಾದ ಟ್ವಿಟರ್ ನಲ್ಲಿ ವೈರಲ್ (Viral in Twitter) ಆಗಿದೆ. 23 ವರ್ಷದ ಜಾವೆಲಿನ್ ತಾರೆ ತಮ್ಮ ಚಿನ್ನದ ಪದಕದೊಂದಿಗೆ ಒಲಿಂಪಿಕ್ ಇತಿಹಾಸದ ಪುಟಗಳಲ್ಲಿ ತಮ್ಮ ಹೆಸರನ್ನು ಕೆತ್ತಿದ್ದಾರೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಕೂಡ ಅವರ ಸರಳತೆಗೆ ಸಾಕ್ಷಿ ಎಂಬಂತಿದೆ.
हमारे favourite तो आप ही हो 😊 @Neeraj_chopra1
Look at the simplicity of this man, interacting with kids at Panipat Sports Stadium today .
Way to go Champion 👍 @dsya_haryana pic.twitter.com/eKcjRjeDLI
— Pankaj Nain IPS (@ipspankajnain) October 27, 2021
ಚಿಕ್ಕ ಹುಡುಗಿಯೊಂದಿಗಿನ ಅವರ ಸಭ್ಯ ಮತ್ತು ಆರಾಧ್ಯ ಸ್ವಭಾವದಿಂದ ಆನ್‍ಲೈನ್‍ನಲ್ಲಿ ಸಾವಿರಾರು ಹೃದಯಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಐಪಿಎಸ್ ಅಧಿಕಾರಿ ಪಂಕಜ್ ನಯಿನ್ ಅವರು ಟ್ವಿಟರ್‍ನಲ್ಲಿ ಹಂಚಿಕೊಂಡಿರುವ ಈ ವಿಡಿಯೋ ಜನರ ಮನ ಗೆದ್ದಿದೆ.
ನೀರಜ್ ಚೋಪ್ರಾ ಚಿಕ್ಕ ಹುಡುಗಿಯೊಂದಿಗೆ ಬಾಗಿ ನಗುನಗುತ್ತಾ ಮಾತನಾಡುವ ವಿಡಿಯೋ ಜನರಿಗೆ ಇಷ್ಟವಾಗುತ್ತಿದ್ದು, ಇದು ಅವರ ಸರಳತೆಗೆ ಹಿಡಿದ ಕೈಗನ್ನಡಿ ಎನ್ನುತ್ತಿದ್ದಾರೆ. ಹುಡುಗಿ "ಮೇರಾ ಫೇವರಿಟ್ ತೋ ಆಪ್ ಹೀ ಹೋ (ನೀವು ನನ್ನ ನೆಚ್ಚಿನವರು)" ಎಂದು ಹೇಳುತ್ತಾಳೆ. ಇದಕ್ಕೆ ನೀರಜ್ ಮುಗುಳ್ನಗುತ್ತಾ ಹುಡುಗಿಯ ಕೆನ್ನೆಯನ್ನು ಪ್ರೀತಿಯಿಂದ ತಟ್ಟುತ್ತಾನೆ. ನಂತರ ಆಕೆಯೊಂದಿಗೆ ಹೆಜ್ಜೆ ಹಾಕುತ್ತಾರೆ.
ಇದನ್ನೂ ಓದಿ: Sania Mirza: ಪಾಕ್ ಕ್ರಿಕೆಟಿಗ ಮೊಹಮ್ಮದ್ ಹಫೀಜ್ ಅವರಿಂದ ಏಂಜಲ್ ಎಂದು ಕರೆಸಿಕೊಂಡ ಸಾನಿಯಾ ಮಿರ್ಜಾ!
"ಇಂದು ಪಾಣಿಪತ್ ಸ್ಪೋರ್ಟ್ಸ್ ಸ್ಟೇಡಿಯಂನಲ್ಲಿ ಮಕ್ಕಳೊಂದಿಗೆ ಸಂವಹನ ನಡೆಸಿದ ಚಿನ್ನದ ಹುಡುಗ ನೀರಜ್ ಚೋಪ್ರಾ ಅವರ ಸರಳತೆಯನ್ನು ನೋಡಿ. ಇದೇ ಅವರು ಚಾಂಪಿಯನ್ ಆಗಲು ದಾರಿ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೆಯಾಗಿರುವ ವಿಡಿಯೋಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.
ಇವರು ಮಕ್ಕಳೊಂದಿಗೆ ನಡೆದುಕೊಳ್ಳುತ್ತಿರುವ ರೀತಿ ನಿಜಕ್ಕೂ ಖುಷಿ ತರುತ್ತದೆ. ಕ್ಯಾಮರದ ಮುಂದೆ ಯವುದೇ ತೋರ್ಪಡಿಕೆ ಇಲ್ಲ. ನಿಜವಾದ ಸಭ್ಯ ವ್ಯಕ್ತಿ ಎಂದು ಶಿವದತ್ತ ಪಾಲ್ ಎಂಬುವರು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: T20 records- ಟಿ20 ಕ್ರಿಕೆಟ್ನಲ್ಲಿ ಸೋಲೇ ಕಾಣದ 2 ತಂಡಗಳು; 10 ಇಂಟರೆಸ್ಟಿಂಗ್ ಸಂಗತಿಗಳು
ಇದನ್ನೂ ಓದಿ: Hardik Pandya: ಹಾರ್ದಿಕ್ ಪಾಂಡ್ಯ ಈಗಲೂ ಗೇಮ್ ಚೇಂಜರ್; ಅವರ ಕ್ರಮಾಂಕದಲ್ಲಿ ಬದಲಾವಣೆ ಸಾಧ್ಯತೆ
ವಾವ್ ಹೃದಯಸ್ಪರ್ಶಿ ವಿಡಿಯೋ, ಗ್ರೇಟ್ ನೀರಜ್ ಸರ್ ಎಂದು ಹೃತಿಕ್ ಪಾಂಡೆ ಟ್ವೀಟ್ ಮಾಡಿದ್ದಾರೆ. ಆ ಸಣ್ಣ ಹುಡುಗಿ ಹೇಳುವ ರೀತಿಯಲ್ಲಿ ಪ್ರತಿಯೊಬ್ಬರು ಹೇಳಬೇಕು. ಅಂತಹ ಅದ್ಭುತ ಆತ್ಮ ನೀವು ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.
ನೀರಜ್ ಚೋಪ್ರಾ ಅವರು ಆಗಸ್ಟ್ 7 ರಂದು ಜಪಾನ್‍ನ ರಾಜಧಾನಿ ಟೋಕಿಯೋ ನಗರದಲ್ಲಿ ನಡೆದ ಒಲಿಂಪಿಕ್ಸ್ ಸ್ಪರ್ಧೆಯಲ್ಲಿ 87.58 ಮೀಟರ್ ದೂರ ಜಾವೆಲಿನ್ ಎಸೆದು ಚಿನ್ನ ಗೆದ್ದಿದ್ದರು. ಒಲಿಂಪಿಕ್ಸ್ ಇತಿಹಾಸದಲ್ಲೇ ಭಾರತ ಅಥ್ಲೆಟಿಕ್ಸ್‍ನಲ್ಲಿ ಗೆದ್ದ ಮೊದಲ ಚಿನ್ನದ ಪದಕ ಅದಾಗಿತ್ತು. ಶೂಟರ್ ಅಭಿನವ್ ಬಿಂದ್ರಾ ನಂತರ ಒಲಿಂಪಿಕ್ ಕ್ರೀಡಾಕೂಟದಲ್ಲಿ ವೈಯಕ್ತಿಕವಾಗಿ ಚಿನ್ನದ ಪದಕ ಗೆದ್ದ ಎರಡನೇ ಭಾರತೀಯ ಎಂಬ ಸಾಧನೆ ಚೋಪ್ರಾದ್ದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ