• Home
  • »
  • News
  • »
  • sports
  • »
  • IPL 2023 Mini Auction: ಇಂದು ಐಪಿಎಲ್ 2023 ಮಿನಿ ಹರಾಜು, ಎಷ್ಟು ಗಂಟೆಗೆ ಆರಂಭ? ಲೈವ್​ ಸ್ಟ್ರೀಮಿಂಗ್​ ಎಲ್ಲಿ? ಇಲ್ಲಿದೆ ಸಂಪೂರ್ಣ ವಿವರ

IPL 2023 Mini Auction: ಇಂದು ಐಪಿಎಲ್ 2023 ಮಿನಿ ಹರಾಜು, ಎಷ್ಟು ಗಂಟೆಗೆ ಆರಂಭ? ಲೈವ್​ ಸ್ಟ್ರೀಮಿಂಗ್​ ಎಲ್ಲಿ? ಇಲ್ಲಿದೆ ಸಂಪೂರ್ಣ ವಿವರ

 ಐಪಿಎಲ್ ಮಿನಿ ಹರಾಜು

ಐಪಿಎಲ್ ಮಿನಿ ಹರಾಜು

IPL 2023 Mini Auction: ಇಂದು ಐಪಿಎಲ್ 2023ರ ಮಿನಿ ಹರಾಜು ನಡೆಯಲಿದೆ. ಐಪಿಎಲ್ 16ನೇ ಆವೃತ್ತಿಗೆ ಆಟಗಾರರ ಹರಾಜು ಪ್ರಕ್ರಿಯೆ ಇಂದು ಕೇರಳದ ಕೊಚ್ಚಿ ನಗರದಲ್ಲಿ ನಡೆಯಲಿದ್ದು, ಭಾರತೀಯ ಕಾಲಮಾನ ಮಧ್ಯಾಹ್ನ 2:30ಕ್ಕೆ ಆರಂಭವಾಗಲಿದೆ.

  • Share this:

ಇಂದು ಇಂಡಿಯನ್ ಪ್ರೀಮಿಯರ್ ಲೀಗ್​ನ (IPL 2023) 16ನೇ ಆವೃತ್ತಿಗೆ ಆಟಗಾರರ ಹರಾಜು ನಡೆಯಲಿದೆ. ಈ ಬಾರಿ ಹರಾಜಿನಲ್ಲಿ ಬರೋಬ್ಬರಿ 273 ಭಾರತೀಯ ಹಾಗೂ 132 ವಿದೇಶಿ ಆಟಗಾರರು ಸೇರಿದಂತೆ ಒಟ್ಟು 405 ಆಟಗಾರರು ಅಂತಿಮ ಹಂತಕ್ಕೆ ತೇಗರ್ಗಡೆಗೊಂಡಿದ್ದಾರೆ.  ಆಟಗಾರರ ಹರಾಜು (IPL 2023 Mini Auction) ಕೊಚ್ಚಿಯಲ್ಲಿ ಮಧ್ಯಾಹ್ನ 2:30ಕ್ಕೆ ಪ್ರಾರಂಭವಾಗಲಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಇದನ್ನು ಆಯೋಜಿಸುತ್ತಿದ್ದು, ಈಗಾಗಲೇ ಈ ಮೆಗಾ ಈವೆಂಟ್​ಗೆ ಭರ್ಜರಿ ಸಿರ್ದಧತೆ ನಡೆಸಿದೆ. ಅಲ್ಲದೇ ಈ ಬಾರಿ ಐಪಿಎಲ್​ ಹರಾಜಿನಲ್ಲಿ ಯಾವೆಲ್ಲಾ ಆಟಗಾರರು ದೊಡ್ಡ ಮೊತ್ತಕ್ಕೆ ಬಿಡ್​ ಆಗಲಿದ್ದಾರೆ ಎಂಬ ಕುತೂಹಲ ಹೆಚ್ಚಿರುವುದರ ಜೊತೆಗೆ ಯಾವೆಲ್ಲಾ ಆಟಗಅರರು ಯಾವ ತಂಡಕ್ಕೆ ಸೇರಿಕೊಳ್ಳಲಿದ್ದಾರೆ ಎಂಬ ಪ್ರಶ್ನೆ ಕಾಡುತ್ತಿದೆ. 


ಒಂದು ಕೋಟಿ ರೂಪಾಯಿ ಮೂಲ ಬೆಲೆಯನ್ನ ಹೊಂದಿದ್ದ ಮಯಾಂಕ್ ಅಗರ್ವಾಲ್ ಅವರನ್ನು, 8.25 ಕೋಟಿ ರೂಪಾಯಿಗೆ ಬಿಡ್​ ಮಾಡಿ ಹೈದರಾಬಾದ್ ಖರೀದಿ ಮಾಡಿದೆ. ಕಳೆದ ವರ್ಷ ಪಂಜಾಬ್ ಕಿಂಗ್ಸ್​ ತಂಡದ ಪರ ಆಡಿದ್ದ ಮಯಾಂಕ್​ ಅವರನ್ನು, ಪಂಜಾಬ್ ಪ್ರಾಂಚೈಸಿ ತಂಡದಿಂದ ಕೈ ಬಿಟ್ಟಿತ್ತು.


ಐಪಿಎಲ್ ಮಿನಿ ಹರಾಜಿನ ಸಂಪೂರ್ಣ ವಿವರ:


ಇಂದು ಐಪಿಎಲ್ 2023ರ ಮಿನಿ ಹರಾಜು ನಡೆಯಲಿದೆ. ಐಪಿಎಲ್ 16ನೇ ಆವೃತ್ತಿಗೆ ಆಟಗಾರರ ಹರಾಜು ಪ್ರಕ್ರಿಯೆ ಇಂದು ಕೇರಳದ ಕೊಚ್ಚಿ ನಗರದಲ್ಲಿ ನಡೆಯಲಿದ್ದು, ಭಾರತೀಯ ಕಾಲಮಾನ ಮಧ್ಯಾಹ್ನ 2:30ಕ್ಕೆ ಆರಂಭವಾಗಲಿದೆ. ಈ ಕಾರ್ಯಕ್ರಮದ ನೇರ ಪ್ರಸಾರವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೋಡಬಹುದಾಗಿದೆ. ಅಲ್ಲದೇ ಈ ಹರಾಜನ್ನು ನೀವು ಉಚಿತವಾಗಿ ಲೈವ್ ಸ್ಟ್ರೀಮಿಂಗ್ ಅನ್ನು JioCinema ಅಪ್ಲಿಕೇಶನ್‌ನಲ್ಲಿ ನೋಡಬಹುದು.


ಇದನ್ನೂ ಓದಿ: 


ಐಪಿಎಲ್ ಹರಾಜಿನ ನಿಯಮಗಳು:


ಐಪಿಎಲ್ ಮಿನಿ ಹರಾಜಿಗೂ ಮುನ್ನ ಬಿಸಿಸಿಐ ಎಲ್ಲಾ ಫ್ರಾಂಚೈಸಿ 6 ನಿಯಮಗಳನ್ನು ಪಾಲಿಸುವಂತೆ ಸೂಚಿಸಿದೆ. ಇದು ಹಾರಜಿನಲ್ಲಿ ಆಟಗಾರರ ಬಿಡ್ಡಿಂಗ್​ಗೆ ಹೆಚ್ಚು ಸಂಬಂಧಿಸಿದೆ. ಅವುಗಳು ಯಾವವು ಎಂದು ನೋಡೋಣ ಬನ್ನಿ.


1. ಫ್ರಾಂಚೈಸಿಗಳು ಪ್ರಮುಖವಾಗಿ, ತಮ್ಮ ಬಳಿ ಉಳಿದಿರುವ (95 ಕೋಟಿ ರೂ. ನಿಗದಿಪಡಿಸಲಾಗಿತ್ತು) ಹಣಕ್ಕಿಂತ ಹೆಚ್ಚಿನ ಹಣವನ್ನು ಖರ್ಚು ಮಾಡುವಂತಿಲ್ಲ. ಆದರೆ ಲಭ್ಯವಿರುವ 75 ಶೇಕಡಾ ಹಣವನ್ನು ಮಾತ್ರ ಬಳಸಬಹುದಾಗಿದೆ.


2. ಫ್ರಾಂಚೈಸಿಗಳು ರೈಟ್ ಟು ಮ್ಯಾಚ್ ಕಾರ್ಡ್​ನ್ನು ಬಳಸುವಂತಿಲ್ಲ ಎಂದು ಬಿಸಿಸಿಐ ತಿಳಿಸಿದೆ. ಜೊತೆಗೆ ಪ್ರತಿಯೊಂದು ತಂಡವು ಕನಿಷ್ಠ 18 ಮತ್ತು ಗರಿಷ್ಠ 25 ಆಟಗಾರರನ್ನು ಹೊಂದಿರಬಹುದು.


3. ಪ್ರತಿ ತಂಡದಲ್ಲಿಯೂ ಕನಿಷ್ಠ 17 ಹಾಗೂ ಗರಿಷ್ಠ 25 ಭಾರತೀಯ ಪ್ಲೇಯರ್ಸ್​ ಇರಲೇಬೇಕು. ಅಲ್ಲದೇ ಪ್ರತಿಯೊಂದು ತಂಡವೂ ಸಹ ಗರಿಷ್ಠ 8 ವಿದೇಶಿ ಆಟಗಾರರನ್ನು ಹೊಂದಿರಬಹುದಾಗಿದೆ.


ಇದನ್ನೂ ಓದಿ: IPL 2023 Auction: ಆರ್​ಸಿಬಿ ಹತ್ರ ಇರೋದು ಇಷ್ಟೇ ಹಣ! ಇನ್ನುಳಿದ ತಂಡಗಳ ಬಳಿ ಎಷ್ಟಿದೆ ? ಇನ್ನೇಷ್ಟು ಆಟಗಾರರು ಬೇಕು ನೋಡಿ


ಐಪಿಎಲ್ 2023ಗೆ ಇಂಪ್ಯಾಕ್ಟ್ ಪ್ಲೇಯರ್ ರೂಲ್ಸ್:


ಟಿ20 ಮಾದರಿಯನ್ನು ಇನ್ನಷ್ಟು ಆಸಕ್ತಿದಾಯಕವಾಗಿಸಲು ಬಿಸಿಸಿಐ ಹೊಸ ಯೋಜನೆ ರೂಪಿಸುತ್ತಿದೆ. ಇಂಪ್ಯಾಕ್ಟ್ ಪ್ಲೇಯರ್' ಪರಿಕಲ್ಪನೆಯೊಂದಿಗೆ, ಐಪಿಎಲ್ ಅನ್ನು ಹೆಚ್ಚು ಆಸಕ್ತಿಕರಗೊಳಿಸಲಾಗುವುದು. ಈ ಪರಿಣಾಮ ಆಟಗಾರನನ್ನು ಈಗಾಗಲೇ ದೇಶೀಯ ಕ್ರಿಕೆಟ್ ಟೂರ್ನಿಯಾದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಬಳಸಲಾಗಿದೆ.


ಸರಳವಾಗಿ ಹೇಳುವುದಾದರೆ, ಬದಲಿ ಆಟಗಾರನನ್ನು ಇಂಪ್ಯಾಕ್ಟ್ ಪ್ಲೇಯರ್ ಎಂದು ವಿವರಿಸಲಾಗಿದೆ. ಈಗಾಗಲೇ ಫುಟ್ಬಾಲ್ ಮತ್ತು ರಗ್ಬಿ ಆಟಗಳನ್ನು ವೀಕ್ಷಿಸುವವರಿಗೆ ಇಂಪ್ಯಾಕ್ಟ್ ಪ್ಲೇಯರ್ ಏನೆಂದು ಅರ್ಥವಾಗುತ್ತದೆ. ಪ್ರಸ್ತುತ, ಟಾಸ್ ನಂತರ ಘೋಷಿಸಲಾದ ಅಂತಿಮ ತಂಡದ (11) ಆಟಗಾರರಿಗೆ ಮಾತ್ರ ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡಲು ಅವಕಾಶವಿದೆ. ಮಧ್ಯದಲ್ಲಿ ಯಾರಾದರೂ ಗಾಯಗೊಂಡರೆ, ಬದಲಿ ಆಟಗಾರ ಕೇವಲ ಫೀಲ್ಡಿಂಗ್‌ಗೆ ಸೀಮಿತವಾಗಿರುತ್ತದೆ. ಅವರಿಗೆ ಬೌಲಿಂಗ್ ಮತ್ತು ಬ್ಯಾಟಿಂಗ್ ಆಯ್ಕೆ ಇಲ್ಲ. ಆದರೆ ಇಂಪ್ಯಾಕ್ಟ್ ಪ್ಲೇಯರ್ ನಿಯಮದಡಿ ಬದಲಿ ಆಟಗಾರನು ಕೇವಲ ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡಬಹುದು ಎಂದು ಬಿಸಿಸಿಐ ತಿಳಿಸಿದೆ. ಆದರೆ ಈ ನಿಯದ ಜಾರಿ ಕುರಿತು ಅಧಿಕೃತ ಮಾಹಿತಿ ಬಿಸಿಸಿಐ ಬಿಡುಗಡೆ ಮಾಡಿಲ್ಲ.

Published by:shrikrishna bhat
First published: