ಇಂಡಿಯನ್ ಪ್ರೀಮಿಯರ್ ಲೀಗ್ನ ಟಿವಿ ಮತ್ತು ಡಿಜಿಟಲ್ ಪ್ರಸಾರದ (IPL Media Rights) ಮುಂದಿನ ಐದು ವರ್ಷಗಳ ಮಾಧ್ಯಮ ಹಕ್ಕುಗಳನ್ನು ತೀವ್ರ ಬಿಡ್ಡಿಂಗ್ (IPL Rights Bidding) ಹಣಾಹಣಿಯಲ್ಲಿ ಎರಡು ಪ್ರತ್ಯೇಕ ಸಂಸ್ಥೆಗಳು ಪಡೆದುಕೊಂಡಿವೆ. ಎಂದು ವರದಿಯಾಗಿದೆ. ಐಪಿಎಲ್ ಪ್ರಸಾರದ ಡಿಜಿಟಲ್ ಹಕ್ಕುಗಳನ್ನು 20,500 ಕೋಟಿಗೆ ರಿಲಾಯನ್ಸ್-ವಯಾಕಾಮ್ 18 ಪಡೆದುಕೊಂಡಿದೆ. ಅಂದರೆ ತಲಾ ಒಂದು ಪಂದ್ಯಕ್ಕೆ 50 ಕೋಟಿ ಆದಂತಾಗಿದೆ! ಇವುಗಳ ಪೈಕಿ ಟಿವಿ ಹಕ್ಕುಗಳು 23,575 ಕೋಟಿ ರೂ.ಗೆ ಮಾರಾಟವಾಗಿದ್ದರೆ, ಡಿಜಿಟಲ್ ಹಕ್ಕುಗಳು 20,500 ಕೋಟಿ ರೂ.ಗೆ ಮಾರಾಟವಾಗಿದೆ. ಹೀಗಾಗಿ ಟಿವಿ ಮತ್ತು ಡಿಜಿಟಲ್ ಎರಡರ ಮೂಲಕ ಬಿಸಿಸಿಐ ಪ್ರತಿ ಐಪಿಎಲ್ ಪಂದ್ಯದಿಂದ 100 ಕೋಟಿ ರೂ. ಪಡೆಯಲಿದೆ!
ಮೂಲಗಳ ಪ್ರಕಾರ ಪ್ಯಾಕೇಜ್ ಎ ಅಂದರೆ ಟಿವಿ ಹಕ್ಕುಗಳು ಮತ್ತು ಪ್ಯಾಕೇಜ್ ಬಿ ಅಂದರೆ ಡಿಜಿಟಲ್ ಹಕ್ಕುಗಳ ಬೆಲೆ ಒಟ್ಟು 44,075 ಕೋಟಿ ರೂ. ಗೆ ಮಾರಾಟವಾಗಿವೆ. ಸೋನಿ ನೆಟ್ವರ್ಕ್ ಐಪಿಎಲ್ ಟಿವಿ ಪ್ರಸಾರದ ಹಕ್ಕುಗಳನ್ನು ಗೆದ್ದಿದ್ದು ಡಿಜಿಟಲ್ ಹಕ್ಕುಗಳನ್ನು ವಯಾಕಾಮ್ 18 ತನ್ನದಾಗಿಸಿಕೊಂಡಿದೆ.
ಸ್ಟಾರ್ ಇಂಡಿಯಾ ಬಳಿಯಿತ್ತು ಹಕ್ಕು ಸೆಪ್ಟೆಂಬರ್ 2017 ರಲ್ಲಿ ಟಿವಿ ಮತ್ತು ಡಿಜಿಟಲ್ ಎರಡಕ್ಕೂ ರೂ 16,347.50 ಕೋಟಿ ನೀಡಿ ಸ್ಟಾರ್ ಇಂಡಿಯಾ 2017-22 ರ IPL ಹಕ್ಕುಗಳನ್ನು ಕಾಯ್ದುಕೊಂಡಿತ್ತು. ಅದಕ್ಕೂ ಮುನ್ನ ಸೋನಿ ಪಿಕ್ಚರ್ಸ್ ನೆಟ್ವರ್ಕ್ 8,200 ಕೋಟಿ ರೂ. ಬಿಡ್ನೊಂದಿಗೆ ಪಂದ್ಯಾವಳಿಯ ಪ್ರಾರಂಭದ ಅವಧಿಯ 10 ವರ್ಷಗಳ ಅವಧಿಯ ಐಪಿಎಲ್ ಪ್ರಸಾರವನ್ನು ಪಡೆದುಕೊಂಡಿತ್ತು.
ಇನ್ನೂ ಏನೆಲ್ಲ ವಿಭಾಗಗಳಿವೆ? ಪ್ಯಾಕೇಜ್ ಎ ಮತ್ತು ಪ್ಯಾಕೇಜ್ ಬಿ ಬಿಟ್ಟು ಪ್ಯಾಕೇಜ್ ಸಿ ಎಂಬ ಇನ್ನೊಂದು ವಿಭಾಗವೂ ಇದೆ. ಪ್ಯಾಕೇಜ್ ಸಿ ಐಪಿಎಲ್ ಸರಣಿಯ ಮೊದಲ ಪಂದ್ಯ, ಫೈನಲ್ ಪಂದ್ಯ, ಮೂರು ಪ್ಲೇ-ಆಫ್ಗಳು ಮತ್ತು ಕೆಲವು ವಾರಾಂತ್ಯದ ಪಂದ್ಯಗಳನ್ನು ಒಳಗೊಂಡಿರುವ 18 ಪಂದ್ಯಗಳ ಡಿಜಿಟಲ್ ಪ್ರಸಾರದ ಹಕ್ಕುಗಳನ್ನು ಒಳಗೊಂಡಿದೆ.
ವರದಿಗಳ ಪ್ರಕಾರ ಪ್ಯಾಕೇಜ್ C ಬಿಡ್ಡಿಂಗ್ ಮೊತ್ತವು ಅಂದಾಜು 1700 ಕೋಟಿ ರೂ ಆಗಿದೆ. ನಾಳೆ ಹರಾಜು ನಡೆಯಲಿದ್ದು ಹರಾಜಿನಲ್ಲಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಹೆಚ್ಚಾಗಿದೆ.
ಈ ವರ್ಷ ಎರಡು ಹೊಸ ತಂಡಗಳ ಸೇರ್ಪಡೆ
2022 ರ ಐಪಿಎಲ್ ಸರಣಿಯಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಸೇರ್ಪಡೆಗೊಂಡಿದೆ. ಹೀಗಾಗಿ ಈ ವರ್ಷದ ಐಪಿಎಲ್ ಸರಣಿಯಿಂದ ಎಂಟು ತಂಡಗಳಿಂದ ಹತ್ತು ತಂಡಗಳಿಗೆ ವಿಸ್ತರಣೆಯಾಗಿದೆ.
ಪ್ಯಾಕೇಜ್ ಸಿ ಸಹ ಇದೆ!
ಪ್ಯಾಕೇಜ್ D ಪಂದ್ಯಗಳು ಸಾಗರೋತ್ತರ ದೇಶಗಳಲ್ಲಿ ಸಂಯೋಜಿತ ಟಿವಿ ಮತ್ತು ಡಿಜಿಟಲ್ ಹಕ್ಕುಗಳನ್ನು ಒಳಗೊಂಡಿರುತ್ತದೆ.
ಎಲ್ಲಾ ಬಿಡ್ಡರ್ಗಳು ಪ್ರತಿ ಪ್ಯಾಕೇಜ್ಗೆ ಪ್ರತ್ಯೇಕ ಬಿಡ್ಗಳನ್ನು ಮಾಡಿದ್ದರು. ಪ್ಯಾಕೇಜ್ A ಗಾಗಿ ಬಿಡ್ ಮಾಡುವವರು ರೂ 1,000 ಕೋಟಿ ನಿವ್ವಳ ಮೌಲ್ಯವನ್ನು ಹೊಂದಿರಬೇಕು. ಇತರ ಪ್ಯಾಕೇಜ್ಗಳಿಗೆ ಬಿಡ್ ಮಾಡುವವರಿಗೆ ಇದು 500 ಕೋಟಿ ರೂ. ಆಗಿತ್ತು ಎಂದು ಬಿಸಿಸಿಐ ನಿರ್ಣಯಿಸಿತ್ತು. ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಅನ್ನು ಪ್ರಸಾರ ಮಾಡುವ ಹಕ್ಕನ್ನು ಗಳಿಸಲು ವಿವಿಧ ಕಂಪನಿಗಳು ಹೋರಾಡುತ್ತಿವೆ.
Published by:guruganesh bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ