IPL 2022 GT vs CSK: ಬಲಿಷ್ಠ ಗುಜರಾತ್ ತಂಡಕ್ಕೆ ಚೆನ್ನೈ ಸವಾಲು, ಪಾಂಡ್ಯ ಗೆಲುವಿನ ಓಟಕ್ಕೆ ಬ್ರೇಕ್ ಹಾಕ್ತಾರಾ ಜಡ್ಡು?

ಐಪಿಎಲ್ 2022ರ (IPL 2022) 15ನೇ ಆವೃತ್ತಿಯಲ್ಲಿ ಇಂದು ಎರಡು ಪಂದ್ಯಗಳು ನಡೆಯಲಿದೆ. 2ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟನ್ಸ್ (CSK vs GT) ವಿರುದ್ಧ ಸೆನಸಾಡಲಿದೆ.

CSK vs GT

CSK vs GT

  • Share this:
ಐಪಿಎಲ್ 2022ರ (IPL 2022) 15ನೇ ಆವೃತ್ತಿಯಲ್ಲಿ ಇಂದು ಎರಡು ಪಂದ್ಯಗಳು ನಡೆಯಲಿದೆ. ಮೊದಲನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್​ ತಂಡವು ಸನ್ ರೈಸರ್ಸ್ ಹೈದರಾಬಾದ್ (PBKS vs SRH) ತಂಡವನ್ನು ಎದುರಿಸಲಿದೆ. ಹಾಗೂ 2ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟನ್ಸ್ (CSK vs GT) ವಿರುದ್ಧ ಸೆನಸಾಡಲಿದೆ. ಇನ್ನು, ಚೆನ್ನೈ ಮತ್ತು ಗುಜರಾತ್ ಪಂದ್ಯವು ಪುಣೆಯ MCA ಸ್ಟೇಡಿಯಂನಲ್ಲಿ ನಡೆಯಲಿದೆ. ಈ ವರ್ಷ ಈ ಸ್ಥಳದಲ್ಲಿ ಸಿಎಸ್‌ಕೆ ಆಡುತ್ತಿರುವ ಮೊದಲ ಪಂದ್ಯ ಇದಾಗಿದೆ. ನಾಲ್ಕು ಸತತ ಸೋಲಿನ ನಂತರ ಚೆನ್ನೈ ಅಂತಿಮವಾಗಿ ಒಂದು ಜಯ ದಾಖಲಿಸಿದ್ದು, ಇಂದಿನ ಪಂದ್ಯವನ್ನು ಗೆಲ್ಲುವ ನಿರೀಕ್ಷೆಯಲ್ಲಿದೆ. ಇದರ ನಡುವೆ ಉಭಯ ತಂಡಗಳ ಹೆಡ್​ ಟು ಹಡ್​ ಹೇಗಿದೆ ಎಂಬುದನ್ನು ನೋಡೋಣ.

ಪಂದ್ಯದ ವಿವರ:

ಇಂದು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟನ್ಸ್ ತಂಡಗಳು ಪುಣೆಯ MCA ಸ್ಟೇಡಿಯಂನಲ್ಲಿ ಮುಖಾಮಿಖಿಯಾಗಲಿವೆ. ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಟಾಸ್ ಮತ್ತು 7:30ಕ್ಕೆ ಪಂದ್ಯ ಆರಂಭವಾಗಲಿದೆ.

ಪಿಚ್ ವರದಿ:

ಈ ಋತುವಿನಲ್ಲಿ ಇದುವರೆಗೆ ಎಂಸಿಎ ಸ್ಟೇಡಿಯಂನಲ್ಲಿ ಮೊದಲ ಇನ್ನಿಂಗ್ಸ್ ಸರಾಸರಿ ಸ್ಕೋರ್ 178 ರನ್ ಆಗಿದೆ. ವಿಕೆಟ್ ಸಾಮಾನ್ಯವಾಗಿ ಕೆಲವು ವೇಗ ಮತ್ತು ಬೌನ್ಸ್‌ನೊಂದಿಗೆ ವೇಗಿಗಳಿಗೆ ಉತ್ತಮ ನೆರವು ನೀಡುತ್ತದೆ. ಮತ್ತೊಂದೆಡೆ, ಸ್ಪಿನ್ನರ್‌ಗಳು ಎಂಸಿಎ ಟ್ರ್ಯಾಕ್‌ನಲ್ಲಿ ಉತ್ತಮ ಪ್ರದರ್ಶನ ನೀಡಬೇಕಾದರೆ ವಿಕೆಟ್ ಟು ವಿಕೆಟ್ ಲೈನ್‌ಗಳನ್ನು ಬೌಲ್ ಮಾಡಬೇಕು.

ಇದನ್ನೂ ಓದಿ: Deepak Chahar: ಚೆನ್ನೈ ತಂಡಕ್ಕೆ ಶಾಕ್, ಈ ಬಾರಿ ಐಪಿಎಲ್​ನಿಂದ ಹೊರಗುಳಿದ ಸ್ಟಾರ್ ಬೌಲರ್

GT vs CSK ಹೆಡ್-ಟು-ಹೆಡ್:

ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟನ್ಸ್ ತಂಡಗಳು ಇದೇ ಮೊದಲ ಬಾರಿಗೆ ಮುಖಾಮುಖಿಯಾಗುತ್ತಿದೆ. ಹೀಗಾಗಿ ಹಿಂದಿನ ಯಾವುದೇ ದಾಖಲೆಗಳು ಇಲ್ಲವಾಗಿದೆ. ಆದರೆ ಈ ಆವೃತ್ತಿಯ ಉಭಯ ತಂಡಗಳ ಪ್ರದರ್ಶನದ ಅಂಕಿಅಂಶ ಪ್ರಮುಖವಾಗುತ್ತದೆ.

ಐಪಿಎಲ್ 2022ರಲ್ಲಿ ಉಭಯ ತಂಡಗಳ ಪ್ರದರ್ಶನ:

ಈ ಸೀಸನ್​ ನಲ್ಲಿ ಗುಜರಾಥ್ ತಂಡವು ಹೊಸ ತಂಡವಾಗಿದ್ದು, ಭರ್ಜರಿ ಪ್ರದರ್ಶನ ನೀಡುತ್ತಿದೆ. ಈವರೆಗೆ ಆಡಿರುವ 5 ಪಂದ್ಯಗಳಲ್ಲಿ ಗುಜರಾತ್ ತಂಡವು 4ರಲ್ಲಿ ಗೆದ್ದು, ಕೇವಲ 1ರಲ್ಲಿ ಸೋಲನ್ನು ಅನುಭವಿಸಿದೆ. ಈ ಮೂಲಕ ಐಪಿಎಲ್ 2022ರ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಆದರೆ 4 ಬಾರಿ ಚಾಂಫಿಯನ್ ಆದ ಚೆನ್ನೈ ತಂಡವು ಈ ಬಾರಿ ಕಳಪೆ ಪ್ರದರ್ಶನದಿಂದ ಆಡಿರುವ 5 ಪಂದ್ಯಗಳಲ್ಲಿ 4ರಲ್ಲಿ ಸೋತು 1ರಲ್ಲಿ ಗೆಲ್ಲುವ ಮೂಲಕ ಪಾಯಿಂಟ್ ಟೇಬಲ್​ ನಲ್ಲಿ 9ನೇ ಸ್ಥಾನದಲ್ಲಿದೆ. ಅಂಕಿಅಂಶಗಳ ಪ್ರಕಾರ ಗುಜರಾತ್ ತಂಡ ಹೆಚ್ಚು ಬಲಿಷ್ಠವಾಗಿದೆ. ಆದರೆ ಚೆನ್ನೈ ತಂಡದವು ಕೊನೆಯ ಪಂದ್ಯವನ್ನು ಗೆದ್ದಿದ್ದು, ಯಾವಾಗ ಬೇಕಾದರೂ ತಿರುಗಿ ಬೀಳುವ ಸಾಮರ್ಥ್ಯವಿದೆ. ಹೀಗಾಗಿ ಇಂದಿನ ಪಂದ್ಯ ಹೆಚ್ಚು ಜಿದ್ದಾಜಿದ್ದನಿಂದ ಕೂಡಿರಲಿದೆ.

ಇದನ್ನೂ ಓದಿ: IPL 2022 RCB vs CSK: ಅಂತೂ ಇಂತೂ RCB ವಿರುದ್ಧ ಭರ್ಜರಿಯಾಗೇ ಗೆದ್ದ CSK

CSK vs GT ಸಂಬಾವ್ಯ ಪ್ಲೇಯಿಂಗ್ 11:

ಚೆನ್ನೈ ಸೂಪರ್ ಕಿಂಗ್ಸ್: ರುತುರಾಜ್ ಗಾಯಕ್ವಾಡ್, ರಾಬಿನ್ ಉತ್ತಪ್ಪ, ಮೊಯಿನ್ ಅಲಿ, ಅಂಬಟಿ ರಾಯುಡು, ಶಿವಂ ದುಬೆ, ರವೀಂದ್ರ ಜಡೇಜಾ (c), ಎಂಎಸ್ ಧೋನಿ (WK), ಡ್ವೇನ್ ಬ್ರಾವೋ, ಕ್ರಿಸ್ ಜೋರ್ಡಾನ್, ಮಹೇಶ್ ತೀಕ್ಷಣ.

ಗುಜರಾತ್ ಟೈಟನ್ಸ್: ವೃದ್ಧಿಮಾನ್ ಸಹಾ (WK), ಶುಭಮನ್ ಗಿಲ್ , ವಿಜಯ್ ಶಂಕರ್, ಹಾರ್ದಿಕ್ ಪಾಂಡ್ಯ (C), ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ಅಭಿನವ್ ಮನೋಹರ್, ರಶೀದ್ ಖಾನ್, ಲಾಕಿ ಫರ್ಗುಸನ್, ಮೊಹಮ್ಮದ್ ಶಮಿ, ಅಲ್ಜಾರಿ ಜೋಸೆಫ್.
Published by:shrikrishna bhat
First published: