ಐಪಿಎಲ್: ತಂಡಕ್ಕೆ ಹೊಸ ಕೋಚ್​ ಆಯ್ಕೆ ಮಾಡಿದ ಆರ್​ಸಿಬಿ

news18
Updated:August 30, 2018, 7:55 PM IST
ಐಪಿಎಲ್: ತಂಡಕ್ಕೆ ಹೊಸ ಕೋಚ್​ ಆಯ್ಕೆ ಮಾಡಿದ ಆರ್​ಸಿಬಿ
news18
Updated: August 30, 2018, 7:55 PM IST
ನ್ಯೂಸ್ 18 ಕನ್ನಡ

ಐಪಿಎಲ್​​ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಹೊಸ ಕೋಚಿಂಗ್ ತಂಡ ಕಟ್ಟಲು ಮುಂದಾಗಿದೆ ಎಂಬ ಮಾತುಗಳು ಈ ಹಿಂದೆ ಕೇಳಿ ಬಂದಿದ್ದವು. ಸದ್ಯ ಇದಕ್ಕೀಗ ಉತ್ತಮ ಸಿಕ್ಕಿದ್ದು ಗ್ಯಾರಿ ಕರ್ಸಟನ್ ಆರ್​ಸಿಬಿ ತಂಡದ ನೂತನ ಕೋಚ್ ಆಗಿ ಆಯ್ಕೆ ಆಗಿದ್ದಾರೆ.

ಈ ಹಿಂದೆ ಆರ್​ಸಿಬಿ ಕೋಚ್ ಆಗಿದ್ದ ಡೇನಿಯಲ್ ವೆಟ್ಟೋರಿ ಅವರ ಬದಲು ದಕ್ಷಿಣ ಆಫ್ರಿಕಾ ತಂಡ ಮಾಜಿ ಆಟಗಾರ ಕರ್ಸಟನ್ ಅವರನ್ನು ಆಯ್ಕೆ ಮಾಡಲಾಗಿದ್ದು, ಮುಂಬರುವ ಐಪಿಎಲ್​​​ಗೆ ಆರ್​ಸಿಬಿ ಹೊಸ ಕೋಚ್​​ ಮೂಲಕ ಕಣಕ್ಕಿಳಿಯಲಿದೆ. ಗ್ಯಾರಿ ಅವರು ಎಲ್ಲಾ ಮಾಧರಿಯ ಕ್ರಿಕೆಟ್​ನಲ್ಲಿ ಒಟ್ಟು 700 ಪಂದ್ಯಗಳನ್ನು ಆಡಿದ್ದು, 40,000ಕ್ಕೂ ಅಧಿಕ ರನ್​​ ಕಲೆಹಾಕಿದ್ದಾರೆ.

ಆರ್​​ಸಿಬಿ ಕಳೆದ 11 ವರ್ಷದಿಂದ ಐಪಿಎಲ್ ಪ್ರಶಸ್ತಿಗೆ ಮುತ್ತಿಕ್ಕಲು ಹೋರಾಡುತ್ತಲೇ ಇದೆ. ಆದರೆ ಆ ಕನಸು ಮಾತ್ರ ಈ ವರೆಗೆ ನನಸಾಗಿಲ್ಲ. ಸದ್ಯ ಕೋಚ್ ಬದಲಾವಣೆಯಿಂದಾದರು 2019ರ ಐಪಿಎಲ್ ಟೂರ್ನಿಯಲ್ಲಿ ಪ್ರಶಸ್ತಿ ಪಡೆಯುತ್ತ ಎಂಬುದು ಕಾದುನೋಡಬೇಕಿದೆ.
First published:August 30, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...