• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • Kichcha Sudeep: ಸುದೀಪ್​ ಜನ್ಮದಿನಕ್ಕೆ ಕನ್ನಡದಲ್ಲಿ ವಿಶ್​ ಮಾಡಿದ ರಾಜಸ್ಥಾನ್​ ರಾಯಲ್ಸ್, ಕೊನೆಗೂ ರಿವೀಲ್​ ಆಯ್ತಾ ಕಿಚ್ಚನ ಜೆರ್ಸಿ ನಂಬರ್?

Kichcha Sudeep: ಸುದೀಪ್​ ಜನ್ಮದಿನಕ್ಕೆ ಕನ್ನಡದಲ್ಲಿ ವಿಶ್​ ಮಾಡಿದ ರಾಜಸ್ಥಾನ್​ ರಾಯಲ್ಸ್, ಕೊನೆಗೂ ರಿವೀಲ್​ ಆಯ್ತಾ ಕಿಚ್ಚನ ಜೆರ್ಸಿ ನಂಬರ್?

ಕಿಚ್ಚ ಸುದೀಪ್​

ಕಿಚ್ಚ ಸುದೀಪ್​

Kichcha Sudeep: ಅಭಿನಯ ಚಕ್ರವರ್ತಿ ಸುದೀಪ್​ಗೆ ಕನ್ನಡದಲ್ಲಿ ಐಪಿಎಲ್ ಪ್ರಾಂಚೈಸಿಯಾದ ರಾಜಸ್ಥಾನ್ ರಾಯಲ್ಸ್ ತಂಡ ಶುಭಕೋರಿದೆ. ಸುದೀಪ್​ ಅವರು ರಾಜಸ್ಥಾನ್​ ರಾಯಲ್ಸ್ ಜರ್ಸಿಯನ್ನು ಹಿಡಿದುಕೊಂಡಿರುವ ಫೋಟೋವನ್ನು ಹಂಚಿಕೊಂಡಿದೆ.

  • Share this:

ಸ್ಯಾಂಡಲ್​ವುಡ್​ ಬಾದ್​ಷಾ (Sandalwood Badshah) ಕಿಚ್ಚ ಸುದೀಪ್ (Kiccha Sudeep)​ ಗೆ ಇಂದು ಜನ್ಮದಿನದ ಸಂಭ್ರಮ. ಸುದೀಪ್​ ಇಂದು ತಮ್ಮ 49ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಸುದೀಪ್ ಅವರ ಇಂಡಸ್ಟ್ರಿ ಸ್ನೇಹಿತರು, ಆಪ್ತರು ಸಹ ಬಾದ್‌ಶಾ ಬರ್ತಡೇಗೆ ಪ್ರೀತಿಯಿಂದ ಶುಭಕೋರಿದ್ದಾರೆ. ಇದರ ನಡುವೆ ವಿಶೇಷವಾಗಿ ಐಪಿಎಲ್ ಪ್ರಂಚೈಸಿಗಳಲ್ಲಿ ಒಂದಾದ ರಾಜಸ್ಥಾನ್​ ರಾಯಲ್ಸ್  (Rajastan Royals) ತಂಡ ಸಹ ಕಿಚ್ಚನಿಗೆ ಶುಭಕೋರಿದೆ. ಅದೂ ಸಹ ಕನ್ನಡದಲ್ಲಿ ವಿಶ್​ ಮಾಡಿದೆ. ಇನ್ನು, ಸಿನಿಮಾ ಮಾತ್ರವಲ್ಲದೇ ಸುದೀಪ್​ ಗೆ ಕ್ರಿಕೆಟ್​ ಮೇಲೆ ಹೆಚ್ಚಿನ ಆಸಕ್ತಿಯಿದೆ.ಐಪಿಎಲ್ ಮತ್ತು ಟೀಂ ಇಂಡಿಯಾದ (Team India) ಪಂದ್ಯಗಳನ್ನೂ ನೋಡಲು ಮೈದಾನಕ್ಕೆ ಹೋಗುತ್ತಿರುತ್ತಾರೆ.


ಕನ್ನಡದಲ್ಲಿ ಕಿಚ್ಚನಿಗೆ RR ವಿಶ್:


ಹೌದು, ಅಭಿನಯ ಚಕ್ರವರ್ತಿ ಸುದೀಪ್​ಗೆ ಕನ್ನಡದಲ್ಲಿ ಐಪಿಎಲ್ ಪ್ರಾಂಚೈಸಿಯಾದ ರಾಜಸ್ಥಾನ್ ರಾಯಲ್ಸ್ ತಂಡ ಶುಭಕೋರಿದೆ. ಸುದೀಪ್​ ಅವರು ರಾಜಸ್ಥಾನ್​ ರಾಯಲ್ಸ್ ಜರ್ಸಿಯನ್ನು ಹಿಡಿದುಕೊಂಡಿರುವ ಫೋಟೋವನ್ನು ಹಂಚಿಕೊಂಡಿದ್ದು, ‘ಜನ್ಮದಿನದ ಶುಭಾಶಯಗಳು ದಂತಕಥೆ! Have a good day, Anna‘ ಎಂದು ಬರೆದುಕೊಂಡಿದೆ. ಇದರ ಜೊತೆಗೆ ಕಿಚ್ಚನ ಅಭಿಮಾನಿಗಳಿಗೆ ಮತ್ತೊಮ್ಮೆ ಸುದೀಪ್​ ಅವರ ಜೆರ್ಸಿ ನಂಬರ್​ 7 ಎಂದು ತಿಳದುಬಂದಿದೆ. ಇದೇ ಅವರ ಜೆರ್ಸಿ ನಂಬರ್​ ಎನ್ನಲಾಗುತ್ತಿದೆ.ರಾಜಸ್ಥಾನ್​ ತಂಡದ ನಡುವೆ ಸುದೀಪ್​ ಮೊದಲಿನಿಂದಲೂ ಉತ್ತಮ ಸ್ನೇಹವನ್ನು ಹೊಂದಿದ್ದಾರೆ. ಇದಕ್ಕೂ ಮೊದಲು ರಾಜಸ್ಥಾನ್ ರಾಯಲ್ಸ್ ತಂಡವು ಸುದೀಪ್ ಕರ್ನಾಟಕ ಪ್ರೀಮಿಯರ್ ಲೀಗ್ ನಲ್ಲಿ ಭಾಗವಹಿಸಿದ ಪೋಟೋವೊಂದನ್ನು ಟ್ವಿಟರ್​ ನಲ್ಲಿ ಹಂಚಿಕೊಂಡಿತ್ತು.


ಇದನ್ನೂ ಓದಿ: Hardik Pandya: ಕೋಟಿ ಕೋಟಿ ಸಂಭಾವನೆ ಹೆಚ್ಚಿಸಿಕೊಂಡ ಹಾರ್ದಿಕ್, ಡಬಲ್ ಆಯ್ತು ಪಾಂಡ್ಯ ವ್ಯಾಲ್ಯೂ


ಕಿಚ್ಚನಿಗೆ ಬ್ಯಾಟ್ ಗಿಫ್ಟ್ ನೀಡಿದ್ದ ಬಟ್ಲರ್:


ಹೌದು ಸ್ವತಃ ಇಂಗ್ಲೆಂಡ್ ಕ್ರಿಕೆಟರ್ ಜೋಸ್ ಬಟ್ಲರ್ ನಟ ಸುದೀಪ್ ಗೆ ತಮ್ಮ ಬ್ಯಾಟ್​ ಅನ್ನು ಗಿಫ್ಟ್ ಆಗಿ ನೀಡಿದ್ದರು. 2022ನೇ ಐಪಿಎಲ್ ಆವೃತ್ತಿಯಲ್ಲಿ ಸಾಕಷ್ಟು ಸದ್ದು ಮಾಡಿದ್ದ ಬ್ಯಾಟ್ಸಮನ್ ಜೋಸ್ ಬಟ್ಲರ್  ಹೀಗೆ ತಾವು ಟೂರ್ನಿಯಲ್ಲಿ ಆಡಲು ಬಳಸಿದ್ದ ಬ್ಯಾಟ್ ಮೇಲೆ ಸಹಿ ಮಾಡಿ ಅದನ್ನು ಕಿಚ್ಚ ಸುದೀಪ್ ಗೆ ಕೊಡುಗೆಯಾಗಿ ನೀಡಿದ್ದಾರೆ. ಕೊಡುಗೆಯಿಂದ ಖುಷಿಯಾಗಿದ್ದು ಪೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು.ಈ ಗಿಫ್ಟ್ ಗೆ ಕಿಚ್ಚ ಸುದೀಪ್ ಸಖತ್ ಖುಷಿಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಫೋಟೋ ಒಂದನ್ನು ಹಂಚಿಕೊಂಡಿದ್ದು, ಬಟ್ಲರ್​ಗೆ ಧನ್ಯವಾದ ತಿಳಿಸಿದ್ದರು. ಅಲ್ಲದೇ ಈ ಬಗ್ಗೆ ಮಾತನಾಡಿ, ‘ನಾನು ನೀರಿಕ್ಷೆ ಮಾಡದಂತಹ ಗಿಫ್ಟ್ ಇಂದು ನನ್ನ ಕೈ ಸೇರಿದೆ. ಇದನ್ನು ಸಾಧ್ಯವಾಗಿಸಿದ್ದಕ್ಕೆ ಸ್ನೇಹಿತ ಕೆ.ಸಿ ಕಾರ್ಯಪ್ಪ ಗೆ ಥ್ಯಾಂಕ್ಸ್ ಹೇಳಲು ಬಯಸುತ್ತೇನೆ. ಜೋಶ್ ಬಟ್ಲರ್ ಸಲುವಾಗಿ ನಾನು ಈ ವಿಡಿಯೋ ಮಾಡಿದ್ದೇನೆ. ವೈಯಕ್ತಿಕವಾಗಿ ತಾವು ಸಹಿ ಮಾಡಿದ ಬ್ಯಾಟ್ ನನಗೆ ನೀಡಿದ್ದಕ್ಕೆ ಧನ್ಯವಾದ. ಇದನ್ನು ನಾನು ತುಂಬ ಪ್ರೀತಿಯಿಂದ ಸ್ವೀಕರಿಸಿದ್ದೇನೆ. ನಿಮಗೆ ಧನ್ಯವಾದ ಹೇಳಲು ಈ ವಿಡಿಯೋ ಮಾಡಿದ್ದೇನೆ‘ ಎಂದು ಸುದೀಪ್ ಹೇಳಿದ್ದರು.

top videos
    First published: