IPL 2023: ಈ ವರ್ಷವೇ ನಡೆಯುತ್ತಾ ಐಪಿಎಲ್​ ಆಟಗಾರರ ಹರಾಜು? RCB ಗೆ ಬರ್ತಾರಾ CSKಕೀ ಪ್ಲೇಯರ್​?

IPL 2023: IPLನ 16 ನೇ ಋತುವಿನ ಬಗ್ಗೆ ಎಲ್ಲರೂ ಉತ್ಸುಕರಾಗಿದ್ದಾರೆ. ಅದರಲ್ಲಿ ಮುಂಬರುವ ಋತುವಿನಲ್ಲಿ ಆಟಗಾರರ ಹರಾಜಿನ ಕುರಿತು ಅಪ್‌ಡೇಟ್‌ ಹೊರಬಿದ್ದಿದೆ.

IPL 2023

IPL 2023

  • Share this:
ಐಪಿಎಲ್ 16ನೇ (IPL 2023) ಸೀಸನ್ ಗಾಗಿ ಪ್ರಾಂಚೈಸಿಗಳು ಈಗಾಗಲೇ ಭರ್ಜರಿ ತಯಾರಿ ನಡೆಸುತ್ತಿದೆ. ಮುಂದಿನ ಋತುವಿನಲ್ಲಿ ಹತ್ತು ತಂಡಗಳು ಟ್ರೋಫಿಗಾಗಿ ಸೆಣಸಾಡಲಿದೆ. ಕೊರೋನಾದಿಂದಾಗಿ (Corona) ಈ ವರ್ಷದ IPL ಪಂದ್ಯಗಳು ಸೀಮಿತ ನಗರಗಳಲ್ಲಿ ನಡೆದವು. ಆದರೆ ಮುಂದಿನ ಋತುವಿನಲ್ಲಿ, ಪ್ರತಿ ತಂಡಗಳ ಹೋಂ ಪಿಚ್​ಗಳಲ್ಲಿ ಪಂದ್ಯಗಳು ನಡೆಯಲಿದೆ. ಹಾಗಾಗಿ ಮತ್ತೆ ಐಪಿಎಲ್ ಉತ್ಸಾಹ ದೇಶಾದ್ಯಂತ ಕಾಣಲಿದೆ. ಅದರಲ್ಲಿ ಮುಂಬರುವ ಋತುವಿನಲ್ಲಿ ಆಟಗಾರರ ಹರಾಜಿನ ಕುರಿತು ಇದೀಗ ಬಿಗ್​ ಅಪ್‌ಡೇಟ್‌ ಹೊರಬಿದ್ದಿದೆ. 

ಡಿಸೆಂಬರ್‌ನಲ್ಲಿ ಆಟಗಾರರ ಹರಾಜು ?:

ಮಾರ್ಚ್ ಅಂತ್ಯದ ವೇಳೆಗೆ ಐಪಿಎಲ್ 16ನೇ ಸೀಸನ್ ಆರಂಭವಾಗುವ ಸಾಧ್ಯತೆ ಇದೆ. ಆದರೆ ಅದಕ್ಕೂ ಮುನ್ನ ಡಿ.16ರಂದು ಆಟಗಾರರ ಹರಾಜು ನಡೆಯಲಿದೆ ಎಂಬ ಮಾಹಿತಿ ಇದೆ. ಈ ಹರಾಜಿನಲ್ಲಿ ಪ್ರತಿ ತಂಡಕ್ಕೆ 95 ಕೋಟಿ ರೂ. ನೀಡಲಾಗಿದ್ದು, ಕಳೆದ ವರ್ಷಕ್ಕಿಂತ ಈ ಮೊತ್ತ ಐದು ಕೋಟಿಗೂ ಹೆಚ್ಚು ನೀಡಲಾಗಿದೆ.





ಆದರೆ ಈ ಕುರಿತು ಬಿಸಿಸಿಐ ಯಾವುದೇ ಅಧಿಕೃತ ಮಾಹಿತಿ ನೀಡಲ್ಲವಾದರೂ, ಬಲ್ಲಮೂಲಗಳ ಪ್ರಕಾರ ಈ ಬಾರಿ ಡಿಸೆಂಬರ್​ನಲ್ಲಿ ಐಪಿಎಲ್ ಹರಾಜು ನಡೆಯುವುದು ಪಕ್ಕಾ ಎನ್ನಲಾಗುತ್ತಿದೆ.

ಇದನ್ನೂ ಓದಿ: T20 World Cup 2022: ಟಿ20 ವಿಶ್ವಕಪ್​ಗೆ ದ್ರಾವಿಡ್​ ಮಾಸ್ಟರ್​ ಪ್ಲ್ಯಾನ್​, ಆಸೀಸ್​ಗೆ ತೆರಳಲು ಟೀಂ ಇಂಡಿಯಾ ಡೇಟ್​ ಫಿಕ್ಸ್

RCBಗೆ ಸೇರ್ತಾರಾ CSK ಸ್ಟಾರ್​ ಪ್ಲೇಯರ್​?:

ಈ ಬಾರಿ ಐಪಿಎಲ್​ 2023 ಹಾರಾಜು ಪ್ರಕ್ರಿಯೆ ಇದೇ ಡಿಸೆಂಬರ್​ 16ರಂದು ನಡೆಯಲಿದೆ ಎಂದು ಹೇಳಲಾಗಿದೆ. ಹೀಗಾಗಿ ಕೋಟಿ ಕೋಟಿ ಹಣಗಳನ್ನು ಆಟಗಾರರಿಗೆ ನೀಡಲು ಪ್ರಾಂಚೈಸಿಗಳು ತುದಿಗಾಲಲ್ಲಿ ನಿಂತಿದೆ. ಆದರೆ ಇದೀಗ ಆರ್​ಸಿಬಿ ತಂಡವು ಸಿಎಸ್​ಕೆ ತಂಡದ ಸ್ಟಾರ್​ ಪ್ಲೇಯರ್​ ರವೀಂದ್ರ ಜಡೇಜಾ ಅವರನ್ನು ಖರೀದಿಸಲು ಹೆಚ್ಚು ಆಸಕ್ತವಾಗಿದೆ ಎಂದು ತಿಳಿದುಬಂದಿದೆ. ಆದರೆ ಜಡ್ಡು ಅವರನ್ನು ಚೆನ್ನೈ ಹರಾಜಿಗೆ ಬಿಡುತ್ತದೆಯೋ? ಇ್ಲಲವೋ? ಎಂದು ಕಾದುನೋಡಬೇಕಿದೆ. ಏನದರು ಜಡ್ಡು ಹರಾಜಿನಲ್ಲಿ ಕಾಣಿಸಿಕೊಂಡಲ್ಲಿ ಈ ಬಾರಿ ಅತೀ ಹೆಚ್ಚು ಹಣಕ್ಕೆ ಸೇಲ್​ ಆಗುವ ಆಟಗಾರ  ಆಗುವ ಸಾಧ್ಯತೆಯೂ ಇದೆ.

2023ರಲ್ಲಿ ಐಪಿಎಲ್ ತವರು ಮೈದಾನದಲ್ಲಿ ನಡೆಯಲಿದೆ:

ಇನ್ನು, ಗಂಗೂಲಿ ರಾಜ್ಯ ಅಸೋಸಿಯೇಷನ್‌ಗೆ ಕಳುಹಿಸಿರುವ ಸಂದೇಶದಲ್ಲಿ, ‘ಮುಂದಿನ ವರ್ಷದಿಂದ ತವರು ನೆಲದಲ್ಲಿ ಮತ್ತು ಎದುರಾಳಿ ತಂಡದ ಮೈದಾನದಲ್ಲಿ ಪಂದ್ಯಗಳನ್ನು ಆಡುವ ಮಾದರಿಯಲ್ಲಿ ಐಪಿಎಲ್ ಆಯೋಜಿಸಲಾಗುವುದು. ಎಲ್ಲಾ 10 ತಂಡಗಳು ತಮ್ಮ ತವರು ಪಂದ್ಯಗಳನ್ನು ತಮ್ಮ ಗೊತ್ತುಪಡಿಸಿದ ಸ್ಥಳದಲ್ಲಿ ಆಡುತ್ತವೆ‘ ಎಂದು ತಿಳಿಸಿದ್ದಾರಂತೆ.

ಇದನ್ನೂ ಓದಿ: Pakistan Cricket: ಟಿ20 ವಿಶ್ವಕಪ್​ಗೆ ಪಾಕಿಸ್ತಾನ ತಂಡದ ಹೊಸ ಜೆರ್ಸಿ, ಇದು ಕಲ್ಲಂಗಡಿ ಹಣ್ಣು ಎಂದ ಪಾಕ್​ ಮಾಜಿ ಆಟಗಾರ

ಆರ್​ಸಿಬಿ ಅಭಿಮಾನಿಗಳಿಗೆ ಗುಡ್​ ನ್ಯೂಸ್:

ಕೊರೋನಾ ಕಾರಣ ಕಳೆದ 2 ಸೀಸನ್​ಗಳು ಬೆಂಗಳೂರಿನಲ್ಲಿ ನಡೆಯಲಿಲ್ಲ. ಇದರಿಂದಾಗಿ ಆರ್​ಸಿಬಿ ಅಭಿಮಾನಿಗಳಿಗೆ ತೀರ್ವ ನಿರಾಸೆ ಉಂಟಾಗಿತ್ತು. ಆದರೆ 2023 ಐಪಿಎಲ್​ ಎಲ್ಲಾ ತಂಡಗಳ ತವರಿನಲ್ಲಿಯೂ ನಡೆಯುವ ಕಾರಣ ಆರ್​ಸಿಬಿ ಪಂದ್ಯಗಳು ಬೆಂಗಳೂರಿನಲ್ಲಿ ನಡೆಯಲಿದೆ. ಇದಿಂದಾಗಿ 2ವರ್ಷಗಳ ನಂತರ ಅಭಿಮಾನಿಗಳಿಗೆ ತಮ್ಮ ಮೆಚ್ಚಿನ ತಂಡವನ್ನು ಚಿಯರ್ಸ್​ ಮಾಡುವ ಅವಕಾಶ ದೊರಕುತ್ತಿದೆ.
Published by:shrikrishna bhat
First published: