• Home
  • »
  • News
  • »
  • sports
  • »
  • IPL Auction 2023 Live Updates: ಹೈದರಾಬಾದ್ ಪಾಲಾದ ಕನ್ನಡಿಗ ಮಯಾಂಕ್ ಅಗರ್ವಾಲ್​​; ಆರ್​ಸಿಬಿ ಪ್ರಯತ್ನ ವಿಫಲ

IPL Auction 2023 Live Updates: ಹೈದರಾಬಾದ್ ಪಾಲಾದ ಕನ್ನಡಿಗ ಮಯಾಂಕ್ ಅಗರ್ವಾಲ್​​; ಆರ್​ಸಿಬಿ ಪ್ರಯತ್ನ ವಿಫಲ

ಮಯಾಂಕ್ ಅಗರ್ವಾಲ್

ಮಯಾಂಕ್ ಅಗರ್ವಾಲ್

ಒಂದು ಕೋಟಿ ರೂಪಾಯಿ ಮೂಲ ಬೆಲೆಯನ್ನ ಹೊಂದಿದ್ದ ಮಯಾಂಕ್ ಅಗರ್ವಾಲ್ ಅವರನ್ನು, 8.25 ಕೋಟಿ ರೂಪಾಯಿಗೆ ಬಿಡ್​ ಮಾಡಿ ಹೈದರಾಬಾದ್ ಖರೀದಿ ಮಾಡಿದೆ. ಕಳೆದ ವರ್ಷ ಪಂಜಾಬ್ ಕಿಂಗ್ಸ್​ ತಂಡದ ಪರ ಆಡಿದ್ದ ಮಯಾಂಕ್​ ಅವರನ್ನು, ಪಂಜಾಬ್ ಪ್ರಾಂಚೈಸಿ ತಂಡದಿಂದ ಕೈ ಬಿಟ್ಟಿತ್ತು.

  • Share this:

2023ರ ಐಪಿಎಲ್​ ಹರಾಜು (IPL Auction 2022) ಪ್ರಕ್ರಿಯೆಯಲ್ಲಿ ಟೀಂ ಇಂಡಿಯಾ (Team India) ಆಟಗಾರ, ಕನ್ನಡಿಗ ಮಯಾಂಕ್ ಅಗರ್ವಾಲ್ (Mayank Agarwal) ಅವರನ್ನು ಸನ್​​ರೈಸರ್ಸ್​​ ಹೈದರಾಬಾದ್ ( Sunrisers Hyderabad) ತಂಡ ಖರೀದಿ ಮಾಡಿದೆ. ಒಂದು ಕೋಟಿ ರೂಪಾಯಿ ಮೂಲ ಬೆಲೆಯನ್ನ ಹೊಂದಿದ್ದ ಮಯಾಂಕ್ ಅಗರ್ವಾಲ್ ಅವರನ್ನು, 8.25 ಕೋಟಿ ರೂಪಾಯಿಗೆ ಬಿಡ್​ ಮಾಡಿ ಹೈದರಾಬಾದ್ ತಂಡ ಖರೀದಿ ಮಾಡಿದೆ. ಕಳೆದ ವರ್ಷ ಪಂಜಾಬ್ ಕಿಂಗ್ಸ್​ ತಂಡದ (Punjab Kings) ಪರ ಆಡಿದ್ದ ಮಯಾಂಕ್​ ಅವರನ್ನು, ಪಂಜಾಬ್ ಪ್ರಾಂಚೈಸಿ ತಂಡದಿಂದ ಕೈ ಬಿಟ್ಟಿತ್ತು.


ಮಯಾಂಕ್ ಹರಾಜು ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಪಂಜಾಬ್​ ಕಿಂಗ್ಸ್​ ಹಾಗೂ ಆರ್​ಸಿಬಿ ಫ್ರಾಂಚೈಸಿಗಳು ಮಯಾಂಕ್ ಖರೀದಿಗೆ ಬಿಡ್​ ಮಾಡಿದರು. ಬಿಡ್​ ಮೊತ್ತ 3 ಕೋಟಿ ರೂಪಾಯಿಗೆ ಹೆಚ್ಚಳವಾಗುತ್ತಿದ್ದಂತೆ ಎಂಟ್ರಿ ಕೊಟ್ಟ ಚೆನ್ನೈ ಸೂಪರ್ ಕಿಂಗ್ಸ್​ ಮೂರು ಬಾರಿ ಆರಂಭಿಕ ಬ್ಯಾಟರ್​ಗಾಗಿ ಬಿಡ್​ ಮಾಡಿತ್ತು. ಈ ನಡುವೆ ಬಿಡ್​​ಗೆ ಸೇರ್ಪಡೆಯಾದ ಹೈದರಾಬಾದ್ ಫ್ರಾಂಚೈಸಿ 4 ಕೋಟಿ ರೂಪಾಯಿ ಬಿಡ್​​ ನೀಡಿತ್ತು. ಸನ್​ರೈಸರ್ಸ್​ ತಂಡ ಬಿಡ್​ ಆರಂಭ ಮಾಡುವ ಮುನ್ನ ಎರಡು ತಂಡಗಳು ಮಯಾಂಕ್​​ಗಾಗಿ ಪೈಪೋಟಿ ನಡೆಸಿದ್ದರು, ಮಯಾಂಕ್ ಕೊನೆಗೂ ಎಸ್​ಆರ್​ಎಚ್​ ತಂಡ ಪಾಲಾದರು.


ಇದನ್ನೂ ಓದಿ: IPL 2023 Mini Auction: ಕಳೆದ ಸೀಸನ್​ 14 ಕೋಟಿ, ಈಗ 8 ಕೋಟಿ! ಮಯಾಂಕ್​ಗೆ 6 ಕೋಟಿ ಕಡಿಮೆಯಾಗಿದ್ದು ಇದೇ ಕಾರಣಕ್ಕಾ?


16 ಫೆಬ್ರವರಿ 1991 ರಂದು ಕರ್ನಾಟಕದ ಬೆಂಗಳೂರಿನಲ್ಲಿ ಜನಿಸಿದರು. ಮಯಾಂಕ್ ಅವರ ತಂದೆ ಅನುರಾಗ್ ಅಗರ್ವಾಲ್ ಹೆಲ್ತ್ಕೇರ್ ಕಂಪನಿಯ ಸಿಇಒ ಆಗಿದ್ದಾರೆ. ಅವರ ತಾಯಿ ಸುಚಿತ್ರಾ ಸಿಂಗ್ ಗೃಹಿಣಿಯಾಗಿದ್ದಾರೆ. 2022ರ ಹರಾಜಿಗೂ ಮುನ್ನಪಂಜಾಬ್ 12 ಕೋಟಿ ರೂಪಾಯಿಗೆ ಮಯಾಂಕ್ ಅವರನ್ನು ಉಳಿಸಿಕೊಂಡಿತ್ತು. ಅಲ್ಲದೇ ತಂಡದ ನಾಯಕತ್ವವನ್ನು ನೀಡಿತ್ತು.


31 ವರ್ಷದ ಮಯಾಂಕ್ ಟೀಂ ಇಂಡಿಯಾ ಪರ 21 ಟೆಸ್ಟ್​ ಪಂದ್ಯಗಳನ್ನು ಆಡಿದ್ದು 1,488 ರನ್ ಕಲೆ ಹಾಕಿದ್ದಾರೆ. ಉಳಿದಂತೆ ಕೇವಲ ಐದು ಏಕದಿನ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದು, 86 ರನ್ ಗಳಿಸಿದ್ದಾರೆ. ಟಿ20 ಮಾದರಿಯಲ್ಲಿ 185 ಪಂದ್ಯಗಳನ್ನು ಆಡಿರುವ ಮಯಾಂಕ್ 4,278 ರನ್ ಪೇರಿಸಿದ್ದಾರೆ. ಐಪಿಎಲ್​​ ಟೂರ್ನಿಯಲ್ಲಿ 107 ಪಂದ್ಯಗಳನ್ನು ಆಡಿರೋ ಮಯಾಂಕ್ 2,327 ರನ್ ಗಳಿಸಿದ್ದಾರೆ. 2020 ಮತ್ತು 2021ರ ಐಪಿಎಲ್​ನಲ್ಲಿ ಉತ್ತಮ ಪ್ರದರ್ಶ ನೀಡಿದ್ದ ಮಯಾಂಕ್, 2022ರ ಆವೃತ್ತಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ಉಳಿದಂತೆ ಐಪಿಎಲ್​​ನಲ್ಲಿ 2018 ರಿಂದಲೂ ಮಯಾಂಕ್​ ಅಗರ್ವಾಲ್​, ಪಂಜಾಬ್​ ಕಿಂಗ್ಸ್​ ತಂಡದ ಪರ ಆಡುತ್ತಿದ್ದರು.


Congratulations to @mayankcricket who will play for the @SunRisersಇದನ್ನೂ ಓದಿ: IPL 2023 Auction: ಐಪಿಎಲ್​ ಇತಿಹಾಸದಲ್ಲೇ ಹೊಸ ದಾಖಲೆ ನಿರ್ಮಿಸಿದ ಸ್ಯಾಮ್​ ಕರನ್, 18.50 ಕೋಟಿಗೆ ಪಂಜಾಬ್​ ಪಾಲಾದ ಇಂಗ್ಲೆಂಡ್​ ಆಟಗಾರ!


ಕೇರಳ ಕೊಚ್ಚಿಯಲ್ಲಿ ಐಪಿಎಲ್​​ ಹರಾಜು ಪ್ರಕ್ರಿಯೆ


ಐಪಿಎಲ್​ 2023ರ ಮಿನಿ ಹರಾಜು ಪ್ರಕ್ರಿಯೆ ಕೇರಳದ ಕೊಚ್ಚಿಯಲ್ಲಿ ಆರಂಭವಾಗಿದೆ. ಒಟ್ಟು 991 ಆಟಗಾರರ ಹೆಸರು ಹರಾಜಿಯಲ್ಲಿ ನೋಂದಣಿಯಾಗಿದೆ. ಇದರಲ್ಲಿ ಐಪಿಎಲ್ ಫ್ರಾಂಚೈಸಿಗಳು 405 ಮಂದಿ ಆಟಗಾರರ ಲಿಸ್ಟ್​​​ ಅನ್ನು ಫೈನಲ್​​ ಮಾಡಿದ್ದಾರೆ. ಈ ಪಟ್ಟಿಯಲ್ಲಿ ಹೆಚ್ಚು ಎಂದರೇ, 87 ಆಟಗಾರರಿಗೆ ಮಾತ್ರ ಅವಕಾಶ ಲಭ್ಯವಾಗಲಿದೆ. ಇದರಲ್ಲಿ 30 ಸ್ಥಾನಗಳು ವಿದೇಶಿ ಆಟಗಾರರಿಗೆ, 57 ಸ್ಥಾನಗಳು ಭಾರತದ ಆಟಗಾರರಿಗೆ ಲಭ್ಯವಾಗಲಿದೆ. ಪಟ್ಟಿ ಮಾಡಿರುವ 405 ಆಟಗಾರರನ್ನು 5 ವಿಭಾಗಗಳಾಗಿ ವಿಭಜನೆ ಮಾಡಲಾಗಿದೆ.

Published by:Sumanth SN
First published: