• Home
  • »
  • News
  • »
  • sports
  • »
  • IPL 2023: ಹೆಚ್ಚಾಯ್ತು ಐಪಿಎಲ್​ ಬ್ರ್ಯಾಂಡ್ ಮೌಲ್ಯ, ಸಾವಿರ ಕೋಟಿಗಳು ಇದಕ್ಕೆ ಲೆಕ್ಕಾನೇ ಇಲ್ಲ!

IPL 2023: ಹೆಚ್ಚಾಯ್ತು ಐಪಿಎಲ್​ ಬ್ರ್ಯಾಂಡ್ ಮೌಲ್ಯ, ಸಾವಿರ ಕೋಟಿಗಳು ಇದಕ್ಕೆ ಲೆಕ್ಕಾನೇ ಇಲ್ಲ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

IPL 2023: ಐಪಿಎಲ್​ ಕೊನೆಯ ಋತುವಿನಲ್ಲಿ, 2 ಹೊಸ ತಂಡಗಳು ಟೂರ್ನಿಗೆ ಎಂಟ್ರಿಕೊಟ್ಟವು. ಲಕ್ನೋ ಸೂಪರ್ ಜೈಂಟ್ಸ್ ಮತ್ತು ಗುಜರಾತ್ ಜೈಂಟ್ಸ್‌ನಲ್ಲಿ ದೊಡ್ಡ ಬಿಡ್‌ಗಳು ಸಹ ನಡೆದವು.

  • Share this:

ಐಪಿಎಲ್ ಮತ್ತೊಂದು ದೊಡ್ಡ ಸಾಧನೆ ಮಾಡಿದೆ. ಕಳೆದ ಒಂದು ವರ್ಷದಲ್ಲಿ ಇದರ ಬ್ರ್ಯಾಂಡ್ ಮೌಲ್ಯ ಶೇ.75ರಷ್ಟು ಹೆಚ್ಚಾಗಿದೆ. 90 ಸಾವಿರ ಕೋಟಿ ದಾಟಿದೆ. ಕಳೆದ ವರ್ಷ ಐಪಿಎಲ್​ ಟೂರ್ನಿಗೆ 2 ತಂಡಗಳು ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ಮತ್ತು ಗುಜರಾತ್ ಟೈಟಾನ್ಸ್ (Gujarat Titans) ಸೇರಿಕೊಂಡಿದ್ದವು. ಇದಲ್ಲದೇ ಮಾಧ್ಯಮದ ಹಕ್ಕು ಕೂಡ ದುಬಾರಿಯಾಗಿ ಮಾರಾಟವಾಗಿತ್ತು. D&P ಅಡ್ವೈಸರಿಯ ವರದಿಯ ಪ್ರಕಾರ, IPL  2022ರ ಮೌಲ್ಯವು $ 10.9 ಬಿಲಿಯನ್‌ಗೆ ಏರಿದೆ. ಒಂದು ವರ್ಷದ ಹಿಂದೆ 2021ರಲ್ಲಿ ಇದು $ 6.2 ಬಿಲಿಯನ್ ಆಗಿತ್ತು. ಟಿ20 ಲೀಗ್ 2008ರಲ್ಲಿ ಆರಂಭವಾಯಿತು.  15 ವರ್ಷಗಳಲ್ಲಿ ಇದೀಗ IPL​ ವಿಶ್ವಮಟ್ಟದಲ್ಲಿ ಉನ್ನತ ಸ್ಥಾನವನ್ನು ಹೊಂದಿದೆ.


ದುಬಾರಿ ಬೆಲೆಗೆ ಮಾರಾಟವಾದ ಮಾಧ್ಯಮ ಹಕ್ಕು:


ಐಪಿಎಲ್‌ನ ಮಾಧ್ಯಮ ಹಕ್ಕುಗಳನ್ನು ಈ ಹಿಂದೆ $6.2 ಬಿಲಿಯನ್‌ಗೆ ಮಾರಾಟ ಮಾಡಲಾಗಿತ್ತು. ಇದರಿಂದ ಟಿ20 ಲೀಗ್‌ಗೂ ಲಾಭವಾಗಿತ್ತು. ಗುಜರಾತ್ ಟೈಮ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಲ್ಲಿ ಒಟ್ಟು $1.6 ಬಿಲಿಯನ್ ಬಿಡ್ ಮಾಡಿತ್ತು. ನಾವು ಪ್ರತಿ ಪಂದ್ಯದ ಪ್ರಸಾರ ಶುಲ್ಕವನ್ನು ನೋಡಿದರೆ, ಐಪಿಎಲ್ ವಿಶ್ವದ ಎರಡನೇ ಅತಿದೊಡ್ಡ ಕ್ರೀಡಾ ಲೀಗ್ ಆಗಿದೆ. ಪ್ರಸಕ್ತ ಋತುವಿನ ಹರಾಜು ಡಿಸೆಂಬರ್ 23ರಂದು ನಡೆಯಲಿದೆ. ಇದಕ್ಕಾಗಿ ಪ್ರತಿ ಪ್ರಾಂಚೈಸಿಗಳಿಗೆ ಬರೋಬ್ಬರಿ 95 ಕೋಟಿ ಖರ್ಚು ಮಾಡಲು ಅವಕಾಶ ನೀಡಲಾಗಿತ್ತು.


ಮಾಧ್ಯಮ ಹಕ್ಕುಗಳ ಮಹತ್ವದ ಕೊಡುಗೆ:


ಪ್ರಮುಖ ಸಲಹಾ ಸಂಸ್ಥೆ ಡಿ&ಪಿಯ ವ್ಯವಸ್ಥಾಪಕ ಪಾಲುದಾರ ಎನ್. ಸಂತೋಷ್, ಬಿಯಾಂಡ್ 22 ಯಾರ್ಡ್ಸ್ ವರದಿಯಲ್ಲಿ, ‘2008ರಲ್ಲಿ ಪ್ರಾರಂಭವಾದಾಗಿನಿಂದ ಐಪಿಎಲ್ ದೇಶದಲ್ಲಿ ಉತ್ತಮ ಸ್ಥಾನವನ್ನು ಸಾಧಿಸಿದೆ. ಇದರಿಂದಾಗಿ IPL 2022ರಲ್ಲಿ ಕೆಲವು ದೊಡ್ಡ ಫಲಿತಾಂಶಗಳನ್ನು ನೋಡಲಾಗಿದೆ. ಹೊಸ ಮಾಧ್ಯಮ ಹಕ್ಕುಗಳು ಅದರ ಬ್ರಾಂಡ್ ಮೌಲ್ಯವನ್ನು ಹೆಚ್ಚಿಸುವಲ್ಲಿ ಬಹಳಷ್ಟು ಕೊಡುಗೆ ನೀಡಿವೆ. ಐಪಿಎಲ್ ಕ್ರಿಕೆಟ್‌ಗೆ ಗಮನಾರ್ಹ ಕೊಡುಗೆ ನೀಡುವುದನ್ನು ಮುಂದುವರಿಸುತ್ತದೆ ಮತ್ತು ಮುಂಬರುವ ವರ್ಷಗಳಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಆಕರ್ಷಿಸುತ್ತದೆ ಎಂಬುದು ಇದರಿಂದ ಸ್ಪಷ್ಟವಾಗಿದೆ‘ ಎಂದು ಹೇಳಿದ್ದಾರೆ.


ಇದನ್ನೂ ಓದಿ: IPL Auction 2023: ಹರಾಜಿಗೂ ಮುನ್ನ RCB ಯಾವೆಲ್ಲಾ ಆಟಗಾರರನ್ನು ಉಳಿಸಿಕೊಂಡಿದೆ? ಎಷ್ಟು ಹಣ ಉಳಿದಿದೆ?


ಜಾಹೀರಾತು ದರ ಎಷ್ಟಿದೆ?:


NFL ಅಥವಾ EPL ನಂತಹ ಕೆಲವು ಇತರ ಕ್ರೀಡಾ ಲೀಗ್‌ಗಳಿಗೆ ಹೋಲಿಸಿದರೆ ಜಾಹೀರಾತು ದರಗಳ ವಿಷಯದಲ್ಲಿ IPL ಇನ್ನೂ ಹಿಂದುಳಿದಿದೆ. IPL 2022ರ ಸಮಯದಲ್ಲಿ ಜಾಹೀರಾತಿಗಾಗಿ 10-ಸೆಕೆಂಡ್ ಸ್ಲಾಟ್‌ನ ಬೆಲೆ ಸುಮಾರು US$20,000 ಆಗಿತ್ತು ಅಂದರೆ ಭಾರತೀಯ ರೂಪಾಯಿ ಮೌಲ್ಯದಲ್ಲಿ ಸುಮಾರು 16 ಕೋಟಿ 55 ಲಕ್ಷಕ್ಕೂ ಹೆಚ್ಚಿನ ಹಣವಾಗುತ್ತದೆ. NFL, EPL ಮತ್ತು ಮೇಜರ್ ಲೀಗ್ ಬೇಸ್‌ಬಾಲ್‌ನಲ್ಲಿ ಅದೇ ಸಮಯದ ಸ್ಲಾಟ್‌ನ ಜಾಹೀರಾತು ದರಗಳು US$100,000 ಮೀರಿದೆ. ಈ ಹೋಲಿಕೆಯ ವರದಿಯು ಭವಿಷ್ಯದಲ್ಲಿ ಐಪಿಎಲ್ ಹೇಗೆ ಬೆಳೆಯಲು ಸಾಕಷ್ಟು ಜಾಗವನ್ನು ಹೊಂದಿದೆ ಎಂಬುದನ್ನು ಎತ್ತಿ ತೋರಿಸುತ್ತದೆ.


ಐಪಿಎಲ್ ಮಿನಿ ಹರಾಜಿಗೆ ಕ್ಷಣಗಣನೆ:


ಇಂಡಿಯನ್ ಪ್ರೀಮಿಯರ್ ಲೀಗ್ (IPL 2023) 16ನೇ ಆವೃತ್ತಿಗೆ ಆಟಗಾರರ ಹರಾಜಿಗೆ ಕ್ಷಣಗಣನೆ ಪ್ರಾರಂಭವಾಗಿದೆ. ಈ ಬಾರಿ ಹರಾಜಿನಲ್ಲಿ 273 ಭಾರತೀಯ ಹಾಗೂ 132 ವಿದೇಶಿ ಆಟಗಾರರು ಸೇರಿದಂತೆ ಒಟ್ಟು 405 ಆಟಗಾರರು ಭಾಗವಹಿಸಲಿದ್ದಾರೆ. ಡಿಸೆಂಬರ್ 23ರಂದು, ಆಟಗಾರರ ಹರಾಜು (IPL 2023 Mini Auction) ಕೊಚ್ಚಿಯಲ್ಲಿ ಮಧ್ಯಾಹ್ನ 2:30ಕ್ಕೆ ಪ್ರಾರಂಭವಾಗಲಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಇದನ್ನು ಖಚಿತಪಡಿಸಿದೆ. ಐಪಿಎಲ್‌ನಲ್ಲಿ 10 ಫ್ರಾಂಚೈಸಿಗಳು ಸೇರಿದಂತೆ 87 ಸ್ಲಾಟ್‌ಗಳು ಖಾಲಿ ಇವೆ. ಅಂದರೆ ಡಿಸೆಂಬರ್ 23ರ ಹರಾಜಿನಲ್ಲಿ 405 ಆಟಗಾರರ ಪೈಕಿ ಗರಿಷ್ಠ 87 ಆಟಗಾರರನ್ನು ಮಾತ್ರ ಖರೀದಿಸಬಹುದಾಗಿದೆ.

Published by:shrikrishna bhat
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು