ಇಂದು ಐಪಿಎಲ್ ಹರಾಜು: ಎಲ್ಲಿ?, ಎಷ್ಟು ಆಟಗಾರರು?: ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್​

ಈ ಬಾರಿಯ ಐಪಿಎಲ್​ಗೆ ದಾಖಲೆ ಎಂಬಂತೆ 746 ಭಾರತೀಯರು ಹಾಗೂ 232 ವಿದೇಶಿ ಆಟಗಾರರ ಸಹಿತ ಒಟ್ಟು 1003 ಅರ್ಜಿಗಳು ಬಂದಿವೆ. ಇದರಲ್ಲಿ 346 ಕ್ರಿಕೆಟಿಗರ ಅಂತಿಮ ಪಟ್ಟಿ ಸಿದ್ದವಾಗಿದ್ದು, ಭಾರತದ 227 ಆಟಗಾರರು ಸ್ಥಾನ ಪಡೆದುಕೊಂಡಿದ್ದಾರೆ.

IPL 2019

IPL 2019

  • News18
  • Last Updated :
  • Share this:
ಬೆಂಗಳೂರು: ವಿಶ್ವ ಕ್ರಿಕೆಟ್​​ನ ಅತೀ ರಂಗುರಂಗಿನ ಟೂರ್ನಿ ಐಪಿಎಲ್​ನ 12ನೇ ಋತುವಿಗೆ ಇನ್ನೇನು ಕೆಲವು ತಿಂಗಳುಗಳಷ್ಟೆ ಬಾಕಿ ಉಳಿದಿವೆ. ಈ ಮಧ್ಯೆ ಇಂದು ಐಪಿಎಲ್ ಹರಾಜು ಪ್ರಕ್ರಿಯೆ ನಡೆಯಲಿದೆ.

ಈ ಬಾರಿಯ ಐಪಿಎಲ್​ಗೆ ದಾಖಲೆ ಎಂಬಂತೆ 746 ಭಾರತೀಯರು ಹಾಗೂ 232 ವಿದೇಶಿ ಆಟಗಾರರ ಸಹಿತ ಒಟ್ಟು 1003 ಅರ್ಜಿಗಳು ಬಂದಿವೆ. ಇದರಲ್ಲಿ 346 ಕ್ರಿಕೆಟಿಗರ ಅಂತಿಮ ಪಟ್ಟಿ ಸಿದ್ದವಾಗಿದ್ದು, ಭಾರತದ 227 ಆಟಗಾರರು ಸ್ಥಾನ ಪಡೆದುಕೊಂಡಿದ್ದಾರೆ. ಒಟ್ಟು 9 ಆಟಗಾರರ ಮೂಲಬೆಲೆಯನ್ನು 2 ಕೋಟಿ ಎಂದು ನಿಗದಿ ಪಡಿಸಲಾಗಿದೆ. 346 ಆಟಗಾರರಲ್ಲಿ ಮೂರು ವಿಭಾಗ ಮಾಡಲಾಗಿದ್ದು, ಬ್ಯಾಟ್ಸ್​ಮನ್​​, ಬೌಲರ್​ ಹಾಗೂ ಆಲ್ರೌಂಡರ್ ಎಂದು ವಿಭಜಿಸಲಾಗಿದೆ. ಇದರಲ್ಲಿ ಎಲ್ಲಾ 8 ಫ್ರಾಂಚೈಸಿಗಳು ಒಟ್ಟು 70 ಆಟಗಾರರನ್ನು ಖರೀದಿಸಲಿದ್ದು, ಇದರಲ್ಲಿ 50 ಭಾರತೀಯ ಹಾಗೂ 20 ವಿದೇಶಿ ಆಟಗಾರರು ಸೇರಿದ್ದಾರೆ.

ಇದನ್ನೂ ಓದಿ3ನೇ ದಿನದಾಟಕ್ಕೆ ಆಸ್ಟ್ರೇಲಿಯಾ 132/4: ಉತ್ತಮ ಮುನ್ನಡೆಯತ್ತ ಕಾಂಗರೂ ಪಡೆ

ಆಟಗಾರರ ಹರಾಜು ದಿನಾಂಕ: 18 ಡಿಸೆಂಬರ್ 2018

ಸ್ಥಳ: ಜೈಪುರ, ರಾಜಸ್ತಾನ

ಸಮಯ: ಮಧ್ಯಾಹ್ನ 2:30ಕ್ಕೆ

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್​​​ ನೆಟ್​​ವರ್ಕ್​​​ ಮತ್ತು ಹಾಟ್ ಸ್ಟಾರ್

ಈ ಬಾರಿ ಐಪಿಎಲ್​ನಲ್ಲಿ 1.5 ಕೋಟಿಗಿಂತ ಅಧಿಕ ಮೂಲ ಬೆಲೆ ಭಾರತದ ಯಾವೊಬ್ಬ ಆಟಗಾರ ಹೊಂದಿಲ್ಲ. ಯುವರಾಜ್ ಅವರ ಮೂಲ ಬೆಲೆ 1 ಕೋಟಿ ನಿಗದಿ ಪಡಿಸಲಾಗಿದೆ. ಜೊತೆಗೆ  ಹಿಂದಿನ ಆವೃತ್ತಿಯಲ್ಲಿ ಅತಿ ಹೆಚ್ಚು ಬೆಲೆಗೆ ಮಾರಾಟವಾಗಿದ್ದ ಜೈದೇವ್ ಉನಾದ್ಕಟ್ ಅವರ ಈ ಬಾರಿಯ ಬೆಲೆಯು 1.5 ಕೋಟಿ ಒದೆ. ಇನ್ನು ಇವರ ಜೊತೆಯಲ್ಲಿ ಅಕ್ಷರ್ ಪಟೇಲ್, ವೃದ್ದಿಮಾನ್ ಸಾಹ, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ ಅವರ ಮೂಲ ಬೆಲೆ ಒಂದು ಕೋಟಿ ನಿಗದಿಪಡಿಸಲಾಗಿದೆ.

ಯಾರ ಬಳಿ ಎಷ್ಟು ಹಣ ಇದೆ..?

ಕಿಂಗ್ಸ್​​ ಇಲೆವೆನ್​ ಪಂಜಾಬ್​- 36.20 ಕೋಟಿ ರೂ.

ದೆಹಲಿ ಕ್ಯಾಪಿಟಲ್ಸ್​​ – 25.50 ಕೋಟಿ ರೂ.

ರಾಜಸ್ಥಾನ್​ ರಾಯಲ್ಸ್​​ – 20.95 ಕೋಟಿ ರೂ.

ಆರ್​​​​ಸಿಬಿ – 18.15 ಕೋಟಿ ರೂ.

ಕೆಕೆಆರ್ – 15.20 ಕೋಟಿ ರೂ.

ಮುಂಬೈ ಇಂಡಿಯನ್ಸ್​ – 11.15 ಕೋಟಿ ರೂ.

ಸನ್​ರೈಸರ್ಸ್​ ಹೈದ್ರಾಬಾದ್​ – 9.70 ಕೋಟಿ ರೂ.

ಚೆನ್ನೈ ಸೂಪರ್​​ ಕಿಂಗ್ಸ್​ – 8.40 ಕೋಟಿ ರೂ.

2 ಕೋಟಿ ರೂ ಆರಂಭಿಕ ದರ

ಬ್ರೆಂಡನ್​ ಮೆಕಲಮ್​ ( ನ್ಯೂಜಿಲ್ಯಾಂಡ್), ಕ್ರಿಸ್​ ವೋಕ್ಸ್​ (ಇಂಗ್ಲೆಂಡ್​), ಲಸಿತ್​ ಮಾಲಿಂಗಾ (ಶ್ರೀಲಂಕಾ),  ಶಾನ್ ಮಾರ್ಶ್​( ಆಸ್ಟ್ರೇಲಿಯಾ), ಸ್ಯಾಮ್​ ಕರನ್ ​( ಇಂಗ್ಲೆಂಡ್), ಕಾಲಿನ್​ ಇನ್​ಗ್ರಾಂ ( ನ್ಯೂಜಿಲ್ಯಾಂಡ್), ಆಂಗ್ಲೋ ಮ್ಯಾಥೀವ್ಸ್​​ ( ಶ್ರೀಲಂಕಾ), ಡಿ ಆರ್ಕಿ ಶಾರ್ಟ್​ (ಆಸ್ಟ್ರೇಲಿಯಾ).

ತನ್ನಲ್ಲೆ ಉಳಿಸಿಕೊಂಡಿರುವ ಆಟಗಾರರ ವಿವರ:

ರಾಯಲ್ ಚಾಲೆಂಜರ್ಸ್​ ಬೆಂಗಳೂರು:

ವಿರಾಟ್ ಕೊಹ್ಲಿ, ಎಬಿ ಡಿ ವಿಲಿಯರ್ಸ್, ಮಾರ್ಕಸ್ ಸ್ಟಾಯ್ನಿಸ್, ಯುಜವೇಂದ್ರ ಚಹಾಲ್, ಉಮೇಶ್ ಯಾದವ್, ವಾಷಿಂಗ್ಟನ್ ಸುಂದರ್, ನವದೀಪ್ ಸೈನಿ, ಮೊಹಮ್ಮದ್ ಸಿರಾಜ್, ಕಾಲಿನ್ ಡಿ ಗ್ರಾಂಡ್ ಹೋಮ್, ನೇತನ್ ಕೌಲ್ಟರ್-ನೈಲ್, ಮೊಯೀನ್ ಅಲಿ, ಪಾರ್ಥೀವ್ ಪಟೇಲ್, ಟಿಮ್ ಸೌದೀ, ಪವನ್ ನೇಗಿ, ಕುಲವಂತ್ ಖೆಜ್ರೋಲಿಯಾ.

ಚೆನ್ನೈ ಸೂಪರ್ ಕಿಂಗ್ಸ್​:

ಮಹೇಂದ್ರ ಸಿಂಗ್ ಧೋನಿ, ಸುರೇಶ್ ರೈನಾ, ಕೇದಾರ್ ಜಾಧವ್, ರವೀಂದ್ರ ಜಡೇಜಾ, ಡ್ವೇನ್ ಬ್ರಾವೋ, ಕರ್ಣ ಶರ್ಮಾ, ಶೇನ್ ವ್ಯಾಟ್ಸನ್, ಶಾರ್ದೂಲ್ ಠಾಕುರ್, ಅಂಬಾಟಿ ರಾಯುಡು, ಹರ್ಭಜನ್ ಸಿಂಗ್, ಮುರಳಿ ವಿಜಯ್, ಡೆವಿಡ್ ವಿಲ್ಲಿ, ಫಾಫ್ ಡುಪ್ಲೆಸಿಸ್, ಸ್ಯಾಮ್ ಬಿಲ್ಲಿಂಗ್ಸ್, ಮುಹಮ್ಮದ್ ಇಮ್ರಾನ್ ತಾಹಿರ್, ದೀಪಕ್ ಚಾಹರ್, ಮಿಷೆಲ್ ಸ್ಯಾಂಟ್ನರ್, ಲುಂಗಿಸಾನಿ ನಿಡಿ, ಅಸಿಫ್ ಕೆಎಂ, ಜಗದೀಶನ್ ನಾರಾಯಣ್, ಧ್ರುವ್ ಶೋರೆ, ಮೋನು ಸಿಂಗ್, ಚೈತನ್ಯ ಬಿಶ್ನೋಯ್.

ದೆಹಲಿ ಕ್ಯಾಪಿಟಲ್ಸ್​​ ​:

ರಿಶಬ್ ಪಂತ್, ಕ್ರಿಸ್ ಮಾರಿಸ್, ಶ್ರೇಯಸ್ ಅಯ್ಯರ್, ಶಿಖರ್ ಧವನ್, ಕಾಗಿಸೋ ರಬಡ, ಅಮಿತ್ ಮಿಶ್ರಾ, ರಾಹುಲ್ ತೆವಾಟಿಯಾ, ಟ್ರೆಂಟ್ ಬೌಲ್ಟ್, ಕಾಲಿನ್ ಮನ್ರೋ, ಪೃಥ್ವಿ ಶಾ, ಅವೇಶ್ ಖಾನ್, ಜಯಂತ್ ಯಾದವ್, ಹರ್ಶಲ್ ಪಟೇಲ್, ಮಂಜೋತ್ ಕಲ್ರಾ, ಸಂದೀಪ್ ಲಮಿಚ್ಚಾನೆ.

ಇದನ್ನೂ ಓದಿ: ಐಪಿಎಲ್​​ನಲ್ಲಿ ಈವರೆಗೆ ದಾಖಲಾದ ದಾಖಲೆಗಳು ಏನೆಲ್ಲಾ ಗೊತ್ತಾ..?

ಸನ್​​ರೈಸರ್ಸ್​​ ಹೈದರಾಬಾದ್:

ಡೆವಿಡ್ ವಾರ್ನರ್, ಮನೀಶ್ ಪಾಂಡೆ, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಸಿದ್ಧಾರ್ಥ್ ಕೌಲ್, ದೀಪಕ್ ಹೂಡಾ, ವಿಜಯ್ ಶಂಕರ್, ಶಾಬಾಜ್ ನದೀಮ್, ಕೇನ್ ವಿಲಿಯಂಸ್, ಸೈಯದ್ ಖಲೀಲ್ ಅಹ್ಮದ್, ಸಂದೀಪ್ ಶರ್ಮಾ, ಶಕೀಬ್ ಹಸನ್, ಯುಸೂಫ್ ಪಠಾಣ್, ಮೊಹಮ್ಮದ್ ನಬಿ, ಶ್ರೀವತ್ಸ ಗೋಸ್ವಾಮಿ, ಬಾಸಿಲ್ ಥಂಪಿ, ಅಭಿಷೇಕ್ ಶರ್ಮಾ, ಬಿಲ್ಲಿ ಸ್ಟಾನ್ಲೇಕ್, ಟಿ ನಟರಾಜನ್, ರಿಕ್ಕಿ ಭುಯಿ.

ಕೋಲ್ಕತ್ತಾ ನೈಟ್ ರೈಡರ್ಸ್​:

ಸುನೀಲ್ ನರೇನ್, ಕ್ರಿಸ್ ಲಿನ್, ಆಂಡ್ರೆ ರಸೆಲ್, ದಿನೇಶ್ ಕಾರ್ತಿಕ್, ರಾಬಿನ್ ಉತ್ತಪ್ಪ, ಕುಲದೀಪ್ ಯಾದವ್, ಪಿಯೂಶ್ ಚಾವ್ಲಾ, ನಿತೀಶ್ ರಾಣಾ, ಕಮಲೇಶ್ ನಗರಕೋಟಿ, ಶಿವಂ ಮಾವಿ, ಶುಬ್ಮನ್ ಗಿಲ್, ರಿಂಕು ಸಿಂಗ್, ಪ್ರಸಿದ್ಧ ಕೃಷ್ಣ.

ಮುಂಬೈ ಇಂಡಿಯನ್ಸ್​:

ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯಾ, ಕೃಣಾಲ್ ಪಾಂಡ್ಯಾ, ಜಸ್ಪ್ರೀತ್ ಬುಮ್ರಾ, ಇಶಾಂತ್ ಕಿಶನ್, ಕೀರನ್ ಪೊಲ್ಲಾರ್ಡ್, ಎವಿನ್ ಲೂಯಿಸ್, ಸೂರ್ಯ ಕುಮಾರ್ ಯಾದವ್, ಕ್ವಿಂಟನ್ ಡಿಕಾಕ್, ಬೆನ್ ಕಟ್ಟಿಂಗ್, ರಾಹುಲ್ ಚಾಹರ್, ಮಿಷೆಲ್ ಮ್ಯಾಕ್ಲೆನಗನ್, ಜೇಸ್ ಬೆಹೆರೆನ್ಡ್ರಾಫ್, ಆಡಮ್ ಮಿಲ್ನೆ, ಸಿದ್ದೇಶ್ ಲಾಡ್, ಆದಿತ್ಯ ತಾರೆ, ಮಾಯಾಂಕ್ ಮಾರ್ಕಂಡೆ, ಅನುಕೂಲ್ ರಾಯ್.

ಕಿಂಗ್ಸ್​ ಎಲೆವನ್ ಪಂಜಾಬ್:

ಕೆಎಲ್ ರಾಹುಲ್, ರವಿಚಂದ್ರನ್ ಅಶ್ವಿನ್, ಆಂಡ್ರ್ಯೂ ಟೈ, ಕರುಣ್ ನಾಯರ್, ಮುಜೀಬ್ ಜದ್ರನ್, ಡೆವಿಡ್ ಮಿಲ್ಲರ್, ಅಂಕಿತ್ ಸಿಂಗ್ ರಜಪೂತ್, ಕ್ರಿಸ್ ಗೇಲ್, ಮನದೀಪ್ ಸಿಂಗ್, ಮಯಾಂಕ್ ಅಗರವಾಲ್.

ರಾಜಸ್ತಾನ ರಾಯಲ್ಸ್​:

ಬೆನ್ ಸ್ಟೋಕ್ಸ್, ಸ್ಟೀವ್ ಸ್ಮಿತ್, ಸಂಜು ಸ್ಯಾಮ್ಸನ್, ಜಾಫರ್ ಆರ್ಚರ್, ಗೌತಮ್ ಕೃಷ್ಣಪ್ಪ, ಜೋಸ್ ಬಟ್ಲರ್, ಅಜಿಂಕ್ಯಾ ರಹಾನೆ, ರಾಹುಲ್ ತ್ರಿಪಾಠಿ, ಧವಳ್ ಕುಲಕರ್ಣಿ, ಸ್ಟುವರ್ಟ್​​ ಬಿನ್ನಿ, ಇಶ್ ಸೋಧೀ, ಆರ್ಯಮನ್ ವಿಕ್ರಮ್, ಪ್ರಶಾಂತ್ ಚೋಪ್ರಾ, ಶ್ರೇಯಸ್ ಗೋಪಾಲ್, ಮಹಿಪಾಲ್ ಲಮ್ರೋರ್, ಮಿಧುನ್ ಎಸ್.

First published: