70 ಸ್ಥಾನಗಳಿಗೆ ಸಾವಿರ ಆಟಗಾರರ ಪೈಪೋಟಿ: ಈ ಬಾರಿಯ ಐಪಿಎಲ್​​ನಲ್ಲಿ ಅಮೆರಿಕನ್​ ಆಟಗಾರ?

ಏಕದಿನ ವಿಶ್ವಕಪ್ ಮೇ ಅಂತ್ಯದಲ್ಲಿ ಆರಂಭವಾಗುವುದರಿಂದ ಈ ಬಾರಿಯ ಐಪಿಎಲ್​ ಗೊಂದಲಮಯವಾಗಿರಲಿದೆ.

zahir | news18
Updated:December 7, 2018, 9:29 PM IST
70 ಸ್ಥಾನಗಳಿಗೆ ಸಾವಿರ ಆಟಗಾರರ ಪೈಪೋಟಿ: ಈ ಬಾರಿಯ ಐಪಿಎಲ್​​ನಲ್ಲಿ ಅಮೆರಿಕನ್​ ಆಟಗಾರ?
ಸಾಂದರ್ಭಿಕ ಚಿತ್ರ
zahir | news18
Updated: December 7, 2018, 9:29 PM IST
ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೂ ಮುನ್ನವೇ ಭಾರೀ ಸದ್ದು ಮಾಡುತ್ತಿದೆ. ಡಿಸೆಂಬರ್ 18 ರಂದು ನಡೆಯಲಿರುವ ಹರಾಜು ಪ್ರಕ್ರಿಯೆಗೆ ಈಗಾಗಲೇ 1003 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಎಂಟು ಫ್ರಾಂಚೈಸಿಯಲ್ಲಿ ಲಭ್ಯವಿರುವ 70 ಸ್ಥಾನಗಳಿಗೆ ಸಾವಿರಕ್ಕೂ ಹೆಚ್ಚಿನ ಆಟಗಾರರು ಹೆಸರು ಸೂಚಿಸಿ ಅಚ್ಚರಿ ಮೂಡಿಸಿದ್ದಾರೆ.

800 ಹೊಸ ಆಟಗಾರರು
ಅದರಲ್ಲೂ ಮುಖ್ಯವಾಗಿ 800 ಹೊಸ ಆಟಗಾರರು ತಮ್ಮ ಕ್ರಿಕೆಟ್​ ಕೆರಿಯರ್​ನ ಅದೃಷ್ಟ ಪರೀಕ್ಷೆಗಾಗಿ ಐಪಿಎಲ್​ನ್ನು ಆರಿಸಿಕೊಂಡಿದ್ದಾರೆ. ಇದರಲ್ಲಿ 746 ಭಾರತೀಯ ಆಟಗಾರರಿರುವುದು ವಿಶೇಷ. ಹಾಗೆಯೇ ಅಂತರಾಷ್ಟ್ರೀಯ ಕ್ರಿಕೆಟ್ ಆಡಿರುವ 200 ಆಟಗಾರರು ಈ ಪಟ್ಟಿಯಲ್ಲಿದ್ದು, ಮೂವರು ಅಸೋಸಿಯೇಟ್ ನೇಷನ್​ ಆಟಗಾರರು ಹೆಸರು ನೋಂದಣಿ ಮಾಡಿಕೊಂಡಿದ್ದಾರೆ.

9 ರಾಜ್ಯಗಳ ಹೊಸ ಆಟಗಾರರು

ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅರುಣಾಚಲ ಪ್ರದೇಶ, ಬಿಹಾರ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ಉತ್ತರಾಖಂಡ್, ಪುದುಚೇರಿ ರಾಜ್ಯಗಳ ಕ್ರಿಕೆಟಿಗರು ಹೆಸರು ನೋಂದಾಯಿಸಿದ್ದು, ಈ ಮೂಲಕ ತಮ್ಮ ಪ್ರತಿಭೆಯನ್ನು ವಿಶ್ವದ ಮುಂದೆ ಅನಾವರಣಗೊಳಿಸಲು ಸಜ್ಜಾಗಿದ್ದಾರೆ.

ಅಮೆರಿಕನ್ ಆಟಗಾರ
ವಿಶ್ವದ ಅತ್ಯಂತ ಜನಪ್ರಿಯ ಟಿ20 ಲೀಗ್​​ನ ಹರಾಜು ಪ್ರಕ್ರಿಯೆಯಲ್ಲಿ ಇನ್ನು ಕ್ರಿಕೆಟ್​ ಜಗತ್ತಿನಲ್ಲಿ ಅಂಬೆಗಾಲಿಡುತ್ತಿರುವ ದೇಶಗಳ ಆಟಗಾರರು ಹೆಸರು ನೀಡಿದ್ದಾರೆ. ಈ ಪಟ್ಟಿಯಲ್ಲಿ  ಅಮೆರಿಕದ ಆಟಗಾರ ಹಾಗೂ ಯುಎಈ ಆಟಗಾರ ಹೆಸರು ನೋಂದಾಯಿಸಿರುವುದು ವಿಶೇಷ. ಇವರೊಂದಿಗೆ ಯುವ ಪ್ರತಿಭೆಗಳನ್ನು ಒಳಗೊಂಡ ಅಫ್ಘಾನಿಸ್ತಾನದ 27 ಆಟಗಾರರು ಹೆಸರು ನೀಡಿ ಆಯ್ಕೆನ್ನು ಮತ್ತಷ್ಟು ಜಟಿಲಗೊಳಿಸಿದ್ದಾರೆ.
Loading...

ಇದನ್ನೂ ಓದಿ: ಇದು ವಜ್ರದ ವಿಮಾನ; ಆದರೆ ಅಸಲಿ ವಿಷಯ ಗೊತ್ತಾದರೆ ಅಚ್ಚರಿ ಪಡುತ್ತೀರಿ..!

ಇನ್ನೂ ನಿಗದಿಯಾಗದ ವೇಳಾಪಟ್ಟಿ
12ನೇ ಆವೃತ್ತಿಯ ಐಪಿಎಲ್​ ವೇಳಾಪಟ್ಟಿ ಇನ್ನೂ ನಿಗದಿಯಾಗಿಲ್ಲ. ಸದ್ಯ ಮಾರ್ಚ್​ 29 ರಿಂದ ಮೇ 19 ರವರೆಗೆ ನಡೆಯಲಿದೆ ಎನ್ನಲಾಗುತ್ತಿದೆ. ದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿರುವ ಹಿನ್ನಲೆಯಲ್ಲಿ ಟೂರ್ನಿಯನ್ನು ವಿದೇಶದಲ್ಲಿ ನಡೆಸಲಾಗುತ್ತದೆ ಎಂದು ಹೇಳಲಾಗಿದೆ. ಮತ್ತೊಂದೆಡೆ ಏಕದಿನ ವಿಶ್ವಕಪ್ ಮೇ ಅಂತ್ಯದಲ್ಲಿ ಆರಂಭವಾಗುವುದರಿಂದ ಈ ಬಾರಿಯ ಐಪಿಎಲ್​ ಗೊಂದಲಮಯವಾಗಿರಲಿದೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿದೆ.

ಇದನ್ನೂ ಓದಿ: SBI ಗ್ರಾಹಕರಿಗೆ ಸಿಹಿ ಸುದ್ದಿ: ಈ ಆ್ಯಪ್ ಬಳಸಿದರೆ 5 ಲೀಟರ್ ಪೆಟ್ರೋಲ್ ಉಚಿತ

ನೋಂದಣಿ ಮಾಡಿಸಿಕೊಂಡ ಒಟ್ಟು ವಿದೇಶಿ ಆಟಗಾರರುದೇಶ ಆಟಗಾರರ ಸಂಖ್ಯೆ
ದಕ್ಷಿಣ ಆಫ್ರಿಕಾ 59
ಆಸ್ಟ್ರೇಲಿಯಾ 35
ವೆಸ್ಟ್​ ಇಂಡೀಸ್ 33
ಶ್ರೀಲಂಕಾ 28
ಅಫ್ಘಾನಿಸ್ತಾನ 27
ನ್ಯೂಜಿಲ್ಯಾಂಡ್ 17
ಇಂಗ್ಲೆಂಡ್ 14
ಬಾಂಗ್ಲಾದೇಶ 10
ಜಿಂಬಾಬ್ವೆ 5
ಹಾಂಕಾಂಗ್ 1
ನೆದರ್​​ಲ್ಯಾಂಡ್ 1
ಐರ್ಲೆಂಡ್ 1
ಯುಎಈ 1
ಯುಎಸ್ಎ 1

First published:December 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...