• ಹೋಂ
 • »
 • ನ್ಯೂಸ್
 • »
 • ಕ್ರೀಡೆ
 • »
 • IPL 2023: ಈ ಆಟಗಾರನ ಮೇಲೆ ಕೊಹ್ಲಿಗೆ ಅಪಾರ ನಂಬಿಕೆಯಂತೆ, ಆರ್​ಸಿಬಿ ಪರ ಮಿಂಚಲು ರೆಡಿಯಾಗಿದ್ದಾರೆ ಯಂಗ್​ ಪ್ಲೇಯರ್​

IPL 2023: ಈ ಆಟಗಾರನ ಮೇಲೆ ಕೊಹ್ಲಿಗೆ ಅಪಾರ ನಂಬಿಕೆಯಂತೆ, ಆರ್​ಸಿಬಿ ಪರ ಮಿಂಚಲು ರೆಡಿಯಾಗಿದ್ದಾರೆ ಯಂಗ್​ ಪ್ಲೇಯರ್​

IPl 2023

IPl 2023

IPL 2023: ಆಲ್ ರೌಂಡರ್ ಶಹಬಾಜ್ ಅಹ್ಮದ್ ಇತ್ತೀಚಿನ ದಿನಗಳಲ್ಲಿ ತಮ್ಮ ಬ್ಯಾಟಿಂಗ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

 • Share this:

ಕೋಲ್ಕತ್ತಾ: ಇದೇ ಮಾರ್ಚ್ 31ರಿಂದ ಐಪಿಎಲ್​ 16ನೇ (IPl 2023) ಸೀಸನ್​ ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಗುಜರಾತ್ ಟೈಟನ್ಸ್ ಮತ್ತು ಚೆನ್ನೈ ಸೂಪರ್​ ಕಿಂಗ್ಸ್ (GT vs CSk) ಸೆಣಸಾಡಲಿದೆ. ಬರೋಬ್ಬರಿ 4 ವರ್ಷಗಳ ಬಳಿಕ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ರಶ್ಮಿಕಾ ಮಂದಣ್ಣ (Rashmika Mandanna) ಸಹ ಇರಲಿದ್ದಾರೆ ಎನ್ನಲಾಗುತ್ತಿದೆ. ಇದರ ನಡುವೆ ಆಲ್ ರೌಂಡರ್ ಶಹಬಾಜ್ ಅಹ್ಮದ್ ಇತ್ತೀಚಿನ ದಿನಗಳಲ್ಲಿ ತಮ್ಮ ಬ್ಯಾಟಿಂಗ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಹರಿಯಾಣದ ಮಾಯನ್ ಪ್ರದೇಶದ ಶಹಬಾಜ್ ಅಹ್ಮದ್ (Shahbaz Ahmed) ರಣಜಿ ಟ್ರೋಫಿಯಲ್ಲಿ ಬಂಗಾಳದ ಪರವಾಗಿ ಆಡಿದರು ಮತ್ತು ಕಳೆದ ಕೆಲವು ವರ್ಷಗಳಿಂದ ಬಂಗಾಳ ತಂಡಕ್ಕೆ ವಿಶ್ವಾಸಾರ್ಹ ಆಟಗಾರರಾಗಿದ್ದಾರೆ.


ಶಹಬಾಜ್ ಕ್ರಿಕೆಟ್​ ದಾಖಲೆ:


ಇದಕ್ಕೂ ಮುನ್ನ ಆಂಡ್ರೆ ರಸೆಲ್ ಎಸೆತದಲ್ಲಿ ಸತತ ಎರಡು ಸಿಕ್ಸರ್ ಬಾರಿಸಿ ಸುದ್ದಿಯಾಗಿದ್ದರು. ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಮೊದಲು, ರಣಜಿ ಟ್ರೋಫಿಯಲ್ಲಿ ಬಂಗಾಳದ ಪರವಾಗಿ ಶಹಬಾಜ್ ಅಹ್ಮದ್ ಅದ್ಭುತ ಪ್ರದರ್ಶನ ನೀಡಿದ್ದರು. ದೇಶೀಯ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಬ್ಯಾಟಿಂಗ್‌ ಮೂಲಕ ತಂಡದ ನಂಬಿಕೆಗೆ ಪಾತ್ರರಾಗಿದ್ದಾರೆ. ಶಹಬಾಜ್ ಬೌಲಿಂಗ್‌ನಲ್ಲೂ ಉತ್ತಮ ಪ್ರದರ್ಶನ ನೀಡಿದ್ದಾರೆ. ಶಹಬಾಜ್ ಕಳೆದ ಮೂರು ವರ್ಷಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಿದ್ದಾರೆ. ಎಡಗೈ ಬ್ಯಾಟ್ಸ್‌ಮನ್ ಮತ್ತು ಎಡಗೈ ಸ್ಪಿನ್ನರ್ ಶಹಬಾಜ್ ಐಪಿಎಲ್‌ನಲ್ಲಿ 15 ಪಂದ್ಯಗಳನ್ನು ಆಡಿದ್ದಾರೆ. ಅವರು 15 ಓವರ್‌ಗಳಲ್ಲಿ 10.88 ಸರಾಸರಿಯಲ್ಲಿ 87 ರನ್‌ಗಳನ್ನು ಸಿಡಿಸಿದ್ದಾರೆ. 7.18 ರ ಎಕಾನಮಿಯಲ್ಲಿ ಶಹಬಾಜ್ ರಣಜಿ ಟ್ರೋಫಿಯಲ್ಲಿ ಹ್ಯಾಟ್ರಿಕ್ ಸಾಧಿಸಿದ್ದಾರೆ.


ಜಡೇಜಾ ರೋಲ್ ಮಾಡೆಲ್:


ಶಹಬಾಜ್​ ಅವರಿಗೆ ಭಾರತೀಯ ಆಲ್‌ರೌಂಡರ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್‌ನ ತಂಡದ ಆಟಗಾರ ರವೀಂದ್ರ ಜಡೇಜಾ ಅವರನ್ನು ತಮ್ಮ ರೋಲ್ ಮಾಡೆಲ್ ಎಂದು ಹೇಳಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ಶಹಬ್ಬಾಸ್ ಗೆ ದೊಡ್ಡ ಸರ್ಟಿಫಿಕೇಟ್ ಸಹ ನೀಡಿದ್ದಾರೆ. ಎಲ್ಲಾ ಮೂರು ವಿಭಾಗಗಳಲ್ಲಿ ಶಹಬ್ಬಾಸ್ ಮಿಂಚುತ್ತಾರೆ ಎಂದು ವಿರಾಟ್ ಅಭಿಪ್ರಾಯಪಟ್ಟಿದ್ದಾರೆ. ಮನೋಜ್ ತಿವಾರಿ ಅವರನ್ನು ಕ್ಲಬ್ ಕ್ರಿಕೆಟ್‌ನಿಂದ ಕಂಡುಕೊಂಡರು. RCB ಪರ ಆಡಿದ್ದಲ್ಲದೆ, ಶಹಬಾಜ್ ಭಾರತೀಯ ರಾಷ್ಟ್ರೀಯ ತಂಡದ ಜೆರ್ಸಿಯಲ್ಲಿ ಮೂರು ಪಂದ್ಯಗಳನ್ನು ಆಡಿದರು. ಅವರು ದಕ್ಷಿಣ ಆಫ್ರಿಕಾ ವಿರುದ್ಧ ಪದಾರ್ಪಣೆ ಮಾಡಿದ್ದರು.


ಇದನ್ನೂ ಓದಿ: IPL 2023: ಐಪಿಎಲ್​ ಆರಂಭಕ್ಕೂ ಮುನ್ನ ಆರ್‌ಸಿಬಿಗೆ ಹೊಸ ಟೆನ್ಶನ್, ಸ್ಟಾರ್ ಪ್ಲೇಯರ್ ಕಣಕ್ಕಿಳಿಯೋದೇ ಡೌಟ್!


ದೇಶೀಯ ಕ್ರಿಕೆಟ್‌ನಲ್ಲಿ ಶಹಬಾಜ್ 15 ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿದ್ದಾರೆ ಮತ್ತು 600 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಬ್ಯಾಟಿಂಗ್ ಸರಾಸರಿ 39.54 ಆಗಿದೆ. ಅವರು ಲಿಸ್ಟ್ ‘ಎ’ ಕ್ರಿಕೆಟ್‌ನಲ್ಲಿ 20ಕ್ಕೂ ಹೆಚ್ಚು ವಿಕೆಟ್‌ಗಳನ್ನು ಪಡೆದಿದ್ದಾರೆ. ಇತ್ತೀಚೆಗೆ ಈಡನ್‌ನಲ್ಲಿ ನಡೆದ ರಣಜಿ ಫೈನಲ್‌ನಲ್ಲಿ ಬಂಗಾಳದ ಪರ ಹೋರಾಟದ ಇನ್ನಿಂಗ್ಸ್‌ ಆಡಿದ್ದರು.
ಬೆಂಗಳೂರು ರಾಯಲ್​ ಚಾಲೆಂಜರ್ಸ್​ ತಂಡ:

top videos


  ಫಾಫ್ ಡು ಪ್ಲೆಸಿಸ್ (ಸಿ), ಫಿನ್ ಅಲೆನ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಸುಯಶ್ ಪ್ರಭುದೇಸಾಯಿ, ವಿಲ್ ಜ್ಯಾಕ್ಸ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ವನಿಂದು ಹಸರಂಗ, ಮಹಿಪಾಲ್ ಲೊಮ್ರೋರ್, ಗ್ಲೆನ್ ಮ್ಯಾಕ್ಸ್‌ವೆಲ್, ಶಹಬಾಜ್ ಅಹ್ಮದ್, ಸೋನು ಯಾದವ್. ಮನೋಜ್ ಭಾಂಡಗೆ, ಆಕಾಶ್ ಭಾಂಡಗೆ, ಜೋ ಹ್ಯಾಜಲ್‌ವುಡ್, ಸಿದ್ದಾರ್ಥ್ ಕೌಲ್, ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್, ಕರ್ಣ್ ಶರ್ಮಾ, ಡೇವಿಡ್ ವಿಲ್ಲಿ (ಇಎನ್‌ಜಿ), ಅವಿನಾಶ್ ಸಿಂಗ್, ರಾಜನ್ ಕುಮಾರ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ.

  First published: