ಐಪಿಎಲ್ 2023ರಲ್ಲಿ (IPL 2023) ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಮೊದಲ ಸೋಲು ಕಂಡಿದೆ. ಕೋಲ್ಕತ್ತಾ ನೈಟ್ ರೈಡರ್ಸ್‌ನ (KKR) ಈ ಬಾರಿಯ ಐಪಿಎಲ್‌ನಲ್ಲಿ ಮೊದಲ ಗೆಲುವು ದಾಖಲಿಸಿದೆ. ವಿರಾಟ್ ಕೊಹ್ಲಿಯಿಂದ (Virat Kohli) ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಕ್ಯಾಪ್ಟನ್ ಫಾಫ್ ಡುಪ್ಲೆಸಿಯವರೆಗೆ ಎಲ್ಲರೂ ಸುಲಭವಾಗಿ ಸ್ಪಿನ್ನರ್‌ಗಳಿಗೆ ಶರಣಾದರು. ಕೊಹ್ಲಿ ಉತ್ತಮವಾಗಿ ಆರಂಭವಾದರೂ 18 ಎಸೆತಗಳಲ್ಲಿ 21 ರನ್ ಗಳಿಸಿ ಪೆವಿಲಿಯನ್ಗೆ ಮರಳಿದರು. ಅವರನ್ನು ಸುನಿಲ್ ನರೇನ್ ಬೌಲ್ಡ್ ಮಾಡಿದರು. ಆರ್‌ಸಿಬಿ ಸೋಲಿನ ನಂತರ, ವಿರಾಟ್ ಕೊಹ್ಲಿ ಮತ್ತು ನಟ ಹಾಗೂ ಕೆಕೆಆರ್ ಸಹ-ಮಾಲೀಕ ಶಾರುಖ್ ಖಾನ್ (Shah Rukh Khan) ಅವರೊಂದಿಗೆ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ. ಇದಿಗ ಇದರ ವಿಡಿಯೋ ಸಖತ್ ವೈರಲ್ ಆಗಿದೆ.
ಶಾರುಖ್-ಕೊಹ್ಲಿ ಭರ್ಜರಿ ಡ್ಯಾನ್ಸ್:
ಐಪಿಎಲ್‌ನ 9ನೇ ಪಂದ್ಯದಲ್ಲಿ ಕೆಕೆಆರ್ ಆರ್‌ಸಿಬಿಯನ್ನು 81 ರನ್‌ಗಳಿಂದ ಸೋಲಿಸಿದೆ. ಪ್ರಸಕ್ತ ಋತುವಿನಲ್ಲಿ ಕೆಕೆಆರ್‌ಗೆ ಎರಡು ಪಂದ್ಯಗಳಲ್ಲಿ ಇದು ಮೊದಲ ಗೆಲುವು ಆದರೆ ಇದು ಎರಡು ಪಂದ್ಯಗಳಲ್ಲಿ ಆರ್‌ಸಿಬಿಗೆ ಮೊದಲ ಸೋಲು. ಈ ಪಂದ್ಯದಲ್ಲಿ ಶಾರುಖ್ ಖಾನ್ ತಂಡವನ್ನು ಹುರಿದುಂಬಿಸಲು ಈಡನ್ ಗಾರ್ಡನ್ಸ್ ಸ್ಟೇಡಿಯಂಗೆ ಆಗಮಿಸಿದ್ದರು. ಪಂದ್ಯದ ನಂತರ ಶಾರುಖ್ ಖಾನ್ ಅವರು ವಿರಾಟ್ ಕೊಹ್ಲಿಯನ್ನು ಮೈದಾನದಲ್ಲಿ ಭೇಟಿಯಾದರು.
Shahrukh Khan & Virat Kohli dancing on steps of 'Jhoome Jo Pathan' song 🔥❤️💯
pic.twitter.com/kPc3LYuHWb
— M (@AngryPakistan) April 6, 2023
Proof that Sports & Entertainment make the perfect match 🤌#PlayBold #ನಮ್ಮRCB #IPL2023 #KKRvRCB @imVkohli @iamsrk pic.twitter.com/DJg2NUSoBq
— Royal Challengers Bangalore (@RCBTweets) April 7, 2023
ಶಾರ್ದೂಲ್ ಠಾಕೂರ್ 20 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಇದಕ್ಕೆ ಉತ್ತರವಾಗಿ ಆರ್‌ಸಿಬಿ ತಂಡ 20 ಓವರ್‌ಗಳನ್ನು ಆಡಲು ಸಾಧ್ಯವಾಗದೆ 123 ರನ್ ಗಳಿಸಿ ಆಲೌಟ್ ಆಯಿತು. RCB ನಿಯಮಿತ ಅಂತರದಲ್ಲಿ ವಿಕೆಟ್‌ಗಳನ್ನು ಕಳೆದುಕೊಂಡಿತು. ಹೀಗಾಗಿ ಆರ್‌ಸಿಬಿ ತಂಡವು ದೊಡ್ಡ ಅಂತರದಿಂದ ಸೋಲನ್ನು ಎದುರಿಸಬೇಕಾಯಿತು. ನಾಯಕ ಫಾಫ್ ಡುಪ್ಲೆಸಿ 23 ರನ್ ಗಳಿಸಿದರೆ, ವಿರಾಟ್ ಕೊಹ್ಲಿ 21 ರನ್ ಗಳಿಸಿದರು.
ಇದನ್ನೂ ಓದಿ: IPL 2023: ಆರ್‌ಸಿಬಿಗೆ ಸೇರ್ಪಡೆಯಾದ ಮತ್ತೊಬ್ಬ ಕನ್ನಡಿಗ, ಶುರುವಾಯ್ತು ಎದುರಾಳಿ ತಂಡದಲ್ಲಿ ನಡುಕ!
205 ರನ್ ಗಳ ಗುರಿ ಬೆನ್ನತ್ತಿದ ಆರ್ ಸಿಬಿ ತಂಡ 54 ರನ್ ಗಳಿಗೆ 4 ಹಿನ್ನಡೆ ಅನುಭವಿಸಿತ್ತು. ಕೆಕೆಆರ್‌ನ 3 ಸ್ಪಿನ್ ಬೌಲರ್‌ಗಳು ಆರ್‌ಸಿಬಿಯ ಒಟ್ಟು 9 ವಿಕೆಟ್‌ಗಳನ್ನು ಕಬಳಿಸಿದರು. ಅನುಭವಿ ಸ್ಪಿನ್ನರ್ ವರುಣ್ ಚಕ್ರವರ್ತಿ 15 ರನ್ ನೀಡಿ 4 ವಿಕೆಟ್ ಪಡೆದರೆ, ಚೊಚ್ಚಲ ಆಟಗಾರ ಸುಯಶ್ ಶರ್ಮಾ 30 ರನ್ ನೀಡಿ 3 ವಿಕೆಟ್ ಪಡೆದರು. ಸುನಿಲ್ ನರೇನ್ 16 ರನ್ ನೀಡಿ 2 ವಿಕೆಟ್ ಪಡೆದರು.
ಶಾರುಖ್-ವಿರಾಟ್ ಫ್ಯಾನ್ಸ್ ವಾರ್:
ಇನ್ನು, ಶಾರುಖ್ ಖಾನ್ ಹಾಗೂ ವಿರಾಟ್ ಕೊಹ್ಲಿ ಫ್ಯಾನ್ಸ್ ನಡುವೆ ಕಲಹ ಏರ್ಪಟ್ಟಿದ್ದು ಟ್ವಿಟರ್ ವೇದಿಕೆಯಲ್ಲಿ ಇದೇ ಚರ್ಚೆ ಆಗುತ್ತಿತ್ತು. ಎಸ್‌ಆರ್‌ಕೆ ಫ್ಯಾನ್ಸ್ ಐಪಿಎಲ್‌ನಲ್ಲಿ ಆರ್‌ಸಿಬಿಯ ಕಳಪೆ ಪ್ರದರ್ಶನ ನೋಡಿ ಹಿಗ್ಗಾಮುಗ್ಗಾ ಲೇವಡಿ ಮಾಡಿದ್ದರೆ. ಇನ್ನು ಕೊಹ್ಲಿ ಬೆಂಬಲಿಗರು ಕೂಡ ತಾವು ಕಡಿಮೆ ಇಲ್ಲ ಎಂಬಂತೆ ಶಾರುಖ್‌ಗಿಂತ ಕೊಹ್ಲಿ ಇನ್‌ಸ್ಟಾದಲ್ಲಿ ಅತ್ಯಧಿಕ ಫಾಲೋವರ್ಸ್ ಹೊಂದಿದ್ದಾರೆ ಎಂಬ ಬಾಣ ಬಿಟ್ಟಿದ್ದಾರೆ. ಇಬ್ಬರಲ್ಲಿ ಯಾರು ಸಮರ್ಥರು ಅಥವಾ ಪ್ರತಿಭಾವಂತರು ಎಂಬುದನ್ನು ಲೆಕ್ಕಹಾಕುವುದು ಅಷ್ಟೊಂದು ಸುಲಭದ ಮಾತಾಗಿಲ್ಲದಿದ್ದರೂ ಫ್ಯಾನ್ಸ್‌ಗಳು ಮಾತ್ರ ಪರಸ್ಪರ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡು ಯಾರು ಮೇಲೆ ಯಾರು ಕೀಳು ಎಂದು ಮಾತನಾಡುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ