2023ರ ಐಪಿಎಲ್ (Indian Premier League) ಟೂರ್ನಿಗಾಗಿ ಆರ್ಸಿಬಿ (Royal Challengers Bangalore) ತಂಡ ದೊಡ್ಡ ಬದಲಾವಣೆಗಳನ್ನು ಮಾಡಿಲ್ಲ. ಕಳೆದ ವರ್ಷದ ಕೋರ್ಟೀಂಅನ್ನು ರಿಟೈನ್ ಮಾಡಿಕೊಂಡಿರವ ಆರ್ಸಿಬಿ ತಂಡ, ಐವರು ಆಟಗಾರರನ್ನು ಮಾತ್ರ ಮಿನಿ ಹರಾಜಿಗೆ (IPL Mini Auction) ಬಿಡುಗಡೆ ಮಾಡಿತ್ತು. ಕಳೆದ ಆವೃತ್ತಿಯಲ್ಲಿ ಆರ್ಸಿಬಿ ತಂಡದ ಪ್ರದರ್ಶನ ಉತ್ತಮವಾಗಿದ್ದು, ಇದನ್ನೇ ಮುಂಬರುವ ಟೂರ್ನಿಯಲ್ಲೂ ಮುಂದುವರಿಸಿಬೇಕು ಎಂದು ಫ್ರಾಂಚೈಸಿ ಯೋಜಿಸಿದೆ. ಆದರೆ ವರ್ಷಗಳೇ ಕಳೆಯುತ್ತಿದ್ದರು ತಂಡದ ಟೈಟಲ್ ಗೆಲುವಿನ (IPL Title Win) ಕನಸು ಮಾತ್ರ ನನಸಾಗಿಲ್ಲ.
ತಂಡದ ನಾಯಕರು ಬದಲಾದರು, ತಂಡದಲ್ಲಿ ಭಾರೀ ಬದಲಾವಣೆ ಮಾಡುತ್ತಾ ಸ್ಫೋಟಕ ಆಟಗಾರರನ್ನು ಹೊಂದಿದ್ದರು ಟೈಟಲ್ ಮಾತ್ರ ಇದುವರೆಗೂ ಸಿಕ್ಕಿಲ್ಲ. ಐಪಿಎಲ್ 2022ರ ಟೂರ್ನಿಯಲ್ಲಿ ಕ್ಯಾಪ್ಟನ್ ಫಾಫ್ ಡು ಪ್ಲೆಸಿಸ್ ನಾಯಕತ್ವದ ತಂಡ ಉತ್ತಮ ಪ್ರದರ್ಶನ ನೀಡಿದರೂ, ಪ್ಲೇ ಆಫ್ನಲ್ಲಿ ಸೋಲುಂಡು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿತ್ತು.
ಈ ಬಾರಿ ಟೈಟಲ್ ಗೆಲ್ಲಲೇಬೇಕು ಎಂಬ ಉದ್ದೇಶದೊಂದಿಗೆ ತಂಡ ಸಿದ್ಧತೆಗಳನ್ನು ಶುರು ಮಾಡಿದೆ. ಈ ನಡುವೆ ತಂಡದಲ್ಲಿರೋ ಈ ಮೂವರು ಅಂಡರ್ ರೇಟೆಡ್ ಪ್ಲೇಯರ್ಗಳು ಮುಂಬರುವ ಆವೃತ್ತಿಯಲ್ಲಿ ತಂಡದ ಕೀ ಪ್ಲೇಯರ್ ಆಗುವುದರಲ್ಲಿ ಸಂಶಯವೇ ಇಲ್ಲ ಎಂದು ಕ್ರಿಕೆಟ್ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.
ರಜತ್ ಪಾಟಿದಾರ್
ಐಪಿಎಲ್ 2022ರ ಟೂರ್ನಿಯಲ್ಲಿ ಅನೂಹ್ಯವಾಗಿ ತಂಡಕ್ಕೆ ಎಂಟ್ರಿ ಕೊಟ್ಟಿದ್ದ ರಜತ್ ಪಾಟಿದಾರ್, ತನ್ನ ಬ್ಯಾಟಿಂಗ್ ಪ್ರದರ್ಶನದ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಲುವ್ನಿತ್ ಸಿಸೋಡಿಯಾ ಗಾಯಗೊಂಡ ಕಾರಣದಿಂದ ಹರಾಜಿನಲ್ಲಿ ಖರೀದಿಯಾಗದೆ ಉಳಿದಿದ್ದ ರಜತ್ ಪಾಟಿದಾರ್ಗೆ ಆರ್ಸಿಬಿ ಅವಕಾಶ ನೀಡಿತ್ತು.
ಆಡುವ ಬಳಗದಲ್ಲಿ ಸ್ಥಾನ ಪಡೆದುಕೊಂಡಿದ್ದ ಪಾಟಿದಾರ್ ಬ್ಯಾಟಿಂಗ್ನಲ್ಲಿ ಮಿಂಚಿದ್ದರು. ಕಳೆದ ಆವೃತ್ತಿಯಲ್ಲಿ 8 ಪಂದ್ಯಗಳಲ್ಲಿ 55.5ರ ಸರಾಸರಿಯಲ್ಲಿ 333 ರನ್ ಗಳಿಸಿದ್ದಾರೆ. ಲಕ್ನೋ ತಂಡದ ವಿರುದ್ಧ ಎಲಿಮಿನೇಟರ್ ಪಂದ್ಯದಲ್ಲಿ ಸೆಂಚುರಿ ಸಿಡಿಸಿ ಮಿಂಚಿದ್ದರು.
ಇಡೀ ತಂಡವೇ ವಿಫಲವಾದ ಸಂದರ್ಭದಲ್ಲಿ ರಜತ್ ಪಾಟಿದಾರ್ ತೋರಿದ ಏಕಾಂಗಿ ಹೋರಾಟ ಎಲ್ಲರ ಗಮನ ಸೆಳೆದಿತ್ತು. ಇದರ ಪರಿಣಾಮ ಎಂಬಂತೆ ಪಾಟಿದಾರ್ಗೆ ಟೀಂ ಇಂಡಿಯಾದಲ್ಲಿ ಆಡಲು ಅವಕಾಶ ಕೂಡ ಸಿಕ್ಕಿತ್ತು. ಈ ಅವಕಾಶವನ್ನು ಬಳಸಿಕೊಂಡ ಪಾಟಿದಾರ್ ಟೀಂ ಇಂಡಿಯಾ-ಎ ತಂಡದಲ್ಲಿ ಸ್ಥಿರ ಪ್ರದರ್ಶನ ನೀಡಿದ್ದರು.
ಅಲ್ಲದೇ ದೇಶೀಯ ಕ್ರಿಕೆಟ್ನಲ್ಲೂ ತಮ್ಮ ಸಾಮರ್ಥ್ಯ ಸಾಬೀತು ಪಡಿಸಿದ್ದಾರೆ. ಇದರ ಪರಿಣಾಮ ಆರ್ಸಿಬಿ ಬೇರೆ ಯೋಚನೆ ಮಾಡದೆ ಪಾಟಿದಾರ್ರನ್ನು ರಿಟೈನ್ ಮಾಡಿಕೊಂಡಿದೆ. ಮುಂಬರುವ ಟೂರ್ನಿಯಲ್ಲಿ ಆರ್ಸಿಬಿ ತಂಡದಲ್ಲಿ ಪಾಟಿದಾರ್ ಕೀ ಪ್ಲೇಯರ್ ಆಗಲಿದ್ದಾರೆ.
Joining RCB’s #ClassOf2022:
Name: David Willey
Price: 2 CR
Welcome to the family! 🤩#PlayBold #WeAreChallengers #IPLMegaAuction #IPL2022 #IPLAuction pic.twitter.com/chzuGnfe6m
— Royal Challengers Bangalore (@RCBTweets) February 13, 2022
ಐಪಿಎಲ್ 2022ರ ಆವೃತ್ತಿಯಲ್ಲಿ ಆರ್ಸಿಬಿ ತಂಡ ಇಂಗ್ಲೆಂಡ್ ತಂಡದ ವೇಗದ ಬೌಲರ್ಅನ್ನು ಬರೋಬ್ಬರಿ 2 ಕೋಟಿ ರೂಪಾಯಿ ಕೊಟ್ಟು ಖರೀದಿ ಮಾಡಿತ್ತು. ಆದರೆ ಆತನನ್ನು ಆವೃತ್ತಿಯಲ್ಲಿ ಬ್ಯಾಕ್ ಅಪ್ ಬೌಲರ್ ಆಗಿ ಮಾತ್ರ ಬಳಕೆ ಮಾಡಿಕೊಂಡಿತ್ತು. ಪರಿಣಾಮ ಆವೃತ್ತಿಯಲ್ಲಿ ನಾಲ್ಕು ಪಂದ್ಯಗಳನ್ನು ಆಡಿದ್ದ ವಿಲ್ಲೆ, 6.55ರ ಎಕಾನಮಿಯೊಂದಿಗೆ ಒಂದು ವಿಕೆಟ್ ಗಳಿಸಿದ್ದರು.
ಬೌಲಿಂಗ್ ಮಾತ್ರವಲ್ಲದೇ ಬ್ಯಾಟಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿರೋ ವಿಲ್ಲೆ, ಕೇವಲ 18 ಮಾತ್ರ ಗಳಿಸಿದ್ದರು. ಆದರೆ ಆರ್ಸಿಬಿ ತಂಡ ವಿಲ್ಲೆಗೆ ಹೆಚ್ಚಿನ ಅವಕಾಶಗಳನ್ನು ನೀಡದೇ ಇರೋದು, ಆತನನ್ನು ಕಡೆಗಣಿಸಿದ್ದ ಕಾರಣ ಆತ ತನ್ನ ಸಾಮರ್ಥ್ಯವನ್ನು ನಿರೂಪಿಸಲು ಆಗಲಿಲ್ಲ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಆದರೆ, ಇತ್ತೀಚೆಗೆ ಮುಕ್ತಾಯವಾದ ಟಿ20 ವಿಶ್ವಕಪ್ನಲ್ಲಿ ಇಂಗ್ಲೆಂಡ್ ತಂಡ ಚಾಂಪಿಯನ್ ಆಗುವ ಹಿಂದೆ ವಿಲ್ಲೆ ಅವರ ಕೊಡುಗೆ ಸಾಕಷ್ಟಿದೆ. ಸತತವಾಗಿ ಎದುರಾಳಿ ವಿಕೆಟ್ ಕಬಳಿಸಿದ್ದು, ಕಡಿಮೆ ರನ್ ಬಿಟ್ಟು ಕೊಟ್ಟು ಗಮನ ಸೆಳೆದಿದ್ದರು. ಅಲ್ಲದೇ ಕೆಳ ಕ್ರಮಾಂಕದಲ್ಲಿ ಉತ್ತಮವಾಗಿ ಬ್ಯಾಟ್ ಮಾಡಿದ್ದರು.
ವಿಲ್ಲೆ ಆರ್ಸಿಬಿ ತಂಡದಲ್ಲಿರೋ ಏಕೈಕ ಲೆಫ್ಟ್ ಆರ್ಮ್ ಬೌಲರ್ ಆಗಿರೋದು ಮತ್ತೊಂದು ವಿಶೇಷ. ಆದರೆ ಪಂದ್ಯದಲ್ಲಿ ನಾಲ್ವರು ವಿದೇಶಿ ಆಟಗಾರರನ್ನು ಮಾತ್ರ ಆಡಿಸಬೇಕು ಎಂಬ ನಿಯಮ ವಿಲ್ಲೆ ಅವರಿಗೆ ಅವಕಾಶಗಳು ಕಡಿಮೆ ಸಿಗಲು ಕಾರಣ ಎನ್ನಲಾಗಿದೆ.
ಕ್ಯಾಪ್ಟನ್ ಫಾಫ್ ಡು ಪ್ಲೆಸಿಸ್, ಜೋಶ್ ಹಜಲ್ ವುಡ್, ಗ್ಲೆನ್ ಮ್ಯಾಕ್ಸ್ವೆಲ್, ವನಿಂದು ಹರಸಂಗ ವಿದೇಶಿ ಆಟಗಾರರ ಸಾಲಿನಲ್ಲಿರುವ ಕಾರಣ ವಿಲ್ಲೆಗೆ ಅವಕಾಶ ಲಭ್ಯವಾಗುತ್ತಿಲ್ಲ ಎನ್ನಬಹುದು. ತಂಡದಲ್ಲಿ ಯಾರಾದರು ಆಟಗಾರರು ಗಾಯಗೊಂಡರೇ ಇಂಗ್ಲೀಷ್ ಪ್ಲೇಯರ್ಗೆ ಅವಕಾಶ ಸಿಗುವ ಸಾಧ್ಯತೆಗಳಿದೆ. ಅವಕಾಶ ಸಿಕ್ಕರೆ ವಿಲ್ಲೆ ಎದುರಾಳಿ ತಂಡಕ್ಕೆ ಕಂಟಕವಾಗಿ ಪರಿಣಾಮಿಸಲಿದ್ದಾರೆ.
Joining RCB’s #ClassOf2022:
Name: Mahipal Lomror
Price: 95 Lakhs
Welcome to the family! 🤩#PlayBold #WeAreChallengers #IPLMegaAuction #IPL2022 pic.twitter.com/kzosOvj93K
— Royal Challengers Bangalore (@RCBTweets) February 13, 2022
ಕಳೆದ ಆವೃತ್ತಿಯಲ್ಲಿ ಮಧ್ಯಮ ಕ್ರಮಾಂಕದಲ್ಲಿ ಸ್ಪಿನ್ನರ್ಗಳ ವಿರುದ್ಧ ಬಿಗ್ ಹಿಟ್ ಸಿಡಿಸಬಲ್ಲ ಆಟಗಾರರ ಕೊರತೆಯಿಂದ ಆರ್ಸಿಬಿ ಸಮಸ್ಯೆ ಎದುರಿಸಿತ್ತು. ಫಾಫ್ ಡು ಪ್ಲೆಸಿಸ್, ವಿರಾಟ್ ಕೊಹ್ಲಿ ಕೂಡ ಲೆಗ್ ಸ್ಪಿನ್ ವಿರುದ್ಧ ಬಿಗ್ಹಿಟ್ ಸಾಧಿಸಲು ಆಗಿರಲಿಲ್ಲ.
ಮಹಿಪಾಲ್ ಕೂಡ ಸಿಕ್ಕ ಅವಕಾಶಗಳಲ್ಲೂ ಬಳಸಿಕೊಳ್ಳಲು ವಿಫಲರಾಗಿದ್ದರು. ಏಳು ಪಂದ್ಯದಲ್ಲಿ 150.88 ಸ್ಟ್ರೈಕ್ ರೇಟ್ನೊಂದಿಗೆ 86 ರನ್ ಗಳಿಸಿದ್ದರು. ಆದರೆ ಆ ಬಳಿಕ ಆಡಿದ ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಮುಂದಿನ ಟೂರ್ನಿಯಲ್ಲಿ ಆರ್ಸಿಬಿ ಫ್ರಾಂಚೈಸಿ ಮಹಿಪಾಲ್ಗೆ ಹೆಚ್ಚಿನ ಅವಕಾಶಗಳನ್ನು ನೀಡಿರುವ ಸಾಧ್ಯತೆ ಇದೆ. ಆದರೆ ತಂಡದಲ್ಲಿ ಈತನಿಗೆ ಶಹಬಾಜ್ ಅಹ್ಮದ್ ತೀವ್ರ ಪೈಪೋಟಿ ನೀಡುತ್ತಿದ್ದು, ಅವಕಾಶ ಸಿಕ್ಕರೆ ಮಾತ್ರ ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಲು ಮಹಿಪಾಲ್ ಸಿದ್ಧರಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ