ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (IPL 2023) ಏಪ್ರಿಲ್ 16 ರ ಭಾನುವಾರದಂದು ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (MI vs KKR) ನಡುವೆ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ವಿಶೇಷವೆಂದರೆ, ತಂಡದ ನಿಯಮಿತ ನಾಯಕ ರೋಹಿತ್ ಶರ್ಮಾ (Rohit Sharma) ಅವರನ್ನು ಬದಲಿ ಆಟಗಾರನಾಗಿ ಬಳಸಿಕೊಂಡರೆ, ನಾಯಕತ್ವವನ್ನು ಸೂರ್ಯಕುಮಾರ್ ಯಾದವ್ ವಹಿಸಿಕೊಂಡಿದ್ದರು. ಮುಂಬೈ ಇಂಡಿಯನ್ಸ್‌ನ ಈ ಪಂದ್ಯವನ್ನು ವೀಕ್ಷಿಸಲು ವಿಶೇಷ ಪ್ರೇಕ್ಷಕರು ಸೇರಿದ್ದರು. ಜೊತೆಗೆ ಜೂಲನ್ ಗೋಸ್ವಾಮಿ ಮತ್ತು ಹರ್ಮನ್‌ಪ್ರೀತ್ ಕೌರ್ ಪಂದ್ಯವನ್ನು ಆನಂದಿಸಿದರು. ಜೊತೆಗೆ ರಿಲಯನ್ಸ್ ಫೌಂಡೇಶನ್‌ನ ಅಧ್ಯಕ್ಷೆ ಆಗಿರುವ ನೀತಾ ಅಂಬಾನಿ (Nita Ambani) ಸಹ ಮೈದಾನದಲ್ಲಿ ಕಾಣಿಸಿಕೊಂಡರು.
ಹೆಣ್ಣುಮಕ್ಕಳಿಗೆ ಶಿಕ್ಷಣ ಮತ್ತು ಕ್ರೀಡೆ ಎರಡರಲ್ಲೂ ಹಕ್ಕಿದೆ:
ಪಂದ್ಯದ ವೇಳೆ ರಿಲಯನ್ಸ್ ಫೌಂಡೇಶನ್‌ನ ಅಧ್ಯಕ್ಷೆ ಮತ್ತು ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ಮಾಲೀಕರಾದ ನೀತಾ ಅಂಬಾನಿ ಅವರೂ ಸಹ ಹಾಜರಿದ್ದರು. ಈ ವೇಳೆ ಮಾತನಾಡಿದ ಅವರು, ‘ಈ ಸಮಯದಲ್ಲಿ ಇಲ್ಲಿ ಕ್ರೀಡಾಂಗಣದಲ್ಲಿ ಇರುವ ಶಕ್ತಿ ಮತ್ತು ಉತ್ಸಾಹವನ್ನು ನೋಡಿ ಸಂತಸವಾಗುತ್ತಿದೆ. ಪಂದ್ಯಕ್ಕೆ ವಿಶೇಷ ಪ್ರೇಕ್ಷಕರಾಗಿ ಹಾಜರಿದ್ದ ಬಾಲಕಿಯರು ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ವರ್ಷ, ನಾವು ಕ್ರೀಡಾಂಗಣದಲ್ಲಿ ವಿವಿಧ ಎನ್‌ಜಿಒಗಳಿಂದ ಸುಮಾರು 19,000 ಹುಡುಗಿಯರನ್ನು ಕ್ರಿಕೆಟ್ ನೋಡಲು ಹಾಜರುಪಡಿಸಿದ್ದೇವೆ. ಈ ಸಮಯದಲ್ಲಿ, ಅನೇಕ ಹುಡುಗಿಯರು ಮೊದಲ ಬಾರಿಗೆ ಲೈವ್ ಕ್ರಿಕೆಟ್ ಪಂದ್ಯವನ್ನು ಆನಂದಿಸಿದರು. ಈ ದಿನ ನಮಗೆ ತುಂಬಾ ಭಾವನಾತ್ಮಕವಾಗಿದೆ.
As a lively #MIvKKR match played out today, over 19,000 girls light up Wankhede Stadium with their enthusiasm and energy. 💥💙
Mrs. Nita M. Ambani, Founder-Chairperson, Reliance Foundation, who has been vocal about encouraging participation of women in sports, joined the girls… pic.twitter.com/qx51RQmGnT
— Reliance Foundation (@ril_foundation) April 16, 2023
ಇದನ್ನೂ ಓದಿ: MI vs KKR: ವ್ಯರ್ಥವಾದ ಅಯ್ಯರ್ ಶತಕ, ಕೊಲ್ಕತ್ತಾ ವಿರುದ್ಧ ಮುಂಬೈಗೆ ಭರ್ಜರಿ ಜಯ
ಈ ಸಮಯದಲ್ಲಿ ಈ ಕ್ರೀಡಾಂಗಣದಲ್ಲಿ ಇರುವ ಎಲ್ಲಾ ಹುಡುಗಿಯರಲ್ಲಿ, ಯಾರಾದರೂ ಜೂಲನ್ ಗೋಸ್ವಾಮಿ ಅಥವಾ ಹರ್ಮನ್‌ಪ್ರೀತ್ ಆಗಿರಬಹುದು. ಅಂದಹಾಗೆ, ಕ್ರಿಕೆಟ್ ಮಾತ್ರವಲ್ಲ, ಭವಿಷ್ಯದಲ್ಲಿ ಯಾವುದೇ ಕ್ರೀಡೆಯೂ ಸೂಪರ್ ಸ್ಟಾರ್ ಆಗಿ ಹೊರಹೊಮ್ಮಬಹುದು. ಪ್ರಪಂಚದಾದ್ಯಂತ ತನ್ನ ಕ್ರೀಡೆಗಳಲ್ಲಿ ಯಶಸ್ಸನ್ನು ಸಾಧಿಸುವ ಮೂಲಕ ಅವರು ಭಾರತಕ್ಕೆ ಪ್ರಶಸ್ತಿಗಳನ್ನು ತರಬಹುದು.
ಮುಂಬೈ ಇಂಡಿಯನ್ಸ್ಗೆ ಭರ್ಜರಿ ಗೆಲುವು:
ಇನ್ನು, ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಸೆಣಸಾಡಿದವು. ಟಾಸ್ ಸೋತು ಮೊದಲ ಬ್ಯಾಟ್ ಮಾಡಿದ ಕೋಲ್ಕತ್ತಾ ತಂಡವು ನಿಗದಿತ 20 ಓವರ್ನಲ್ಲಿ 6 ವಿಕೆಟ್ ನಷ್ಟಕ್ಕೆ 185 ರನ್ ಗಳಿಸುವ ಮೂಲಕ ಮುಂಬೈ ತಂಡಕ್ಕೆ 186 ರನ್ ಟಾರ್ಗೆಟ್ ನೀಡಿತು. ಈ ಮೊತ್ತ ಬೆನ್ನಟ್ಟಿದ ಮುಂಬೈ ತಂಡ ನಿಗದಿತ 17.4 ಓವರ್ಗೆ 5 ವಿಕೆಟ್ ನಷ್ಟಕ್ಕೆ 186 ರನ್ ಗಳಿಸುವ ಮೂಲಕ 5 ವಿಕೆಟ್ಗಳ ಭರ್ಜರಿ ಜಯ ದಾಖಲಸಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ