ಐಪಿಎಲ್ 2023ರ ಲೀಗ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ (LSG vs SRH) ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯ ಲಕ್ನೋದ ತವರು ಮೈದಾನ ಎಕಾನಾ ಸ್ಟೇಡಿಯಂನಲ್ಲಿ (Ekana Sports City) ನಡೆಯುತ್ತಿದೆ. ಪ್ರಸಕ್ತ ಋತುವಿನಲ್ಲಿ ಲಖನೌಗೆ ಇದು ಮೂರನೇ ಪಂದ್ಯವಾಗಿದ್ದು, ಹೈದರಾಬಾದ್ ತನ್ನ ಎರಡನೇ ಪಂದ್ಯವನ್ನು ಆಡುತ್ತಿದೆ. ಹೈದರಾಬಾದ್ ಮೊದಲ ಗೆಲುವಿಗಾಗಿ ಕಾಯುತ್ತಿದೆ. ಮೊದಲ ಪಂದ್ಯದಲ್ಲಿ ಹೈದರಾಬಾದ್ ತಂಡದ ನಾಯಕತ್ವವನ್ನು ಭುವನೇಶ್ವರ್ ಕುಮಾರ್ (Bhuvneshwar Kumar) ನಿಭಾಯಿಸಿದ್ದರು. ಇದೀಗ ಹೈದರಾಬಾದ್ ತಂಡದ ನಾಯಕ ಏಡನ್ ಮಾರ್ಕ್ರಾಮ್ ಭಾರತಕ್ಕೆ ಬಂದಿದ್ದು, ಲಕ್ನೋ ವಿರುದ್ಧದ ಈ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಮುನ್ನಡೆಸಲಿದ್ದಾರೆ. ಈಗಾಗಲೇ ಟಾಸ್ ಗೆದ್ದ ಸನ್ ರೈಸರ್ಸ್ ಹೈದರಾಬಾದ್ ನಾಯಕ ಮೊದಲು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಉಭಯ ತಂಡಗಳ ಬಲಾಬಲ:
ಲಕ್ನೋ ಸೂಪರ್ ಜೈಂಟ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಐಪಿಎಲ್‌ನಲ್ಲಿ ಇದುವರೆಗೆ 1 ಬಾರಿ ಮುಖಾಮುಖಿಯಾಗಿದ್ದು, ಅಲ್ಲಿ ಹೊಸ ತಂಡ ಲಕ್ನೋ ಸೂಪರ್ ಜೈಂಟ್ಸ್ ಗೆದ್ದಿತ್ತು. ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಉಭಯ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕೆಎಲ್ ರಾಹುಲ್ ನೇತೃತ್ವದ ತಂಡ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು 12 ರನ್ ಗಳಿಂದ ಸೋಲಿಸಿತು. ಲಕ್ನೋ ಸೂಪರ್ ಜೈಂಟ್ಸ್ ತನ್ನ ಕೊನೆಯ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಸೋಲಿಸಿದ್ದರೆ, ಸನ್ ರೈಸರ್ಸ್ ಹೈದರಾಬಾದ್ ತನ್ನ ಕೊನೆಯ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 72 ರನ್ ಗಳಿಂದ ಸೋಲಿಸಲ್ಪಟ್ಟಿತು.
#SRH have won the toss and elect to bat first against #LSG at Lucknow.
Live - https://t.co/07o0jVbgvA #TATAIPL #LSGvSRH #IPL2023 pic.twitter.com/qIVKQ8uO7J
— IndianPremierLeague (@IPL) April 7, 2023
ಲಕ್ನೋದ ಏಕಾನಾ ಕ್ರೀಡಾಂಗಣದಲ್ಲಿ 12 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಲಾಗಿದೆ. ಇಲ್ಲಿ ಕಪ್ಪು ಮಣ್ಣಿನ ಪಿಚ್ ಆಗಿದೆ. ಆರಂಭದಲ್ಲಿ, ವೇಗದ ಬೌಲರ್‌ಗಳು ಇಲ್ಲಿ ಮೇಲುಗೈ ಸಾಧಿಸಿದ್ದಾರೆ. ಪಂದ್ಯ ಮುಂದುವರಿದಂತೆ ಪಿಚ್ ಸ್ಪಿನ್ ಬೌಲರ್ ಗಳಿಗೆ ಸಹಕಾರಿಯಾಗಲಿದೆ. ಎರಡನೇ ಇನ್ನಿಂಗ್ಸ್‌ನಲ್ಲಿ ಇಬ್ಬನಿ ಪ್ರಮುಖ ಪಾತ್ರ ವಹಿಸಬಹುದು.
ಇದನ್ನೂ ಓದಿ: IPL 2023: ಆರ್ಸಿಬಿ ಕಪ್ ಗೆಲ್ಲಬೇಕಾದ್ರೆ ಈ ಭಾರತೀಯ ಆಟಗಾರನನ್ನು ಹೊರಗಿಡಿ, ಶಾಕಿಂಗ್ ಹೇಳಿಕೆ ನೀಡಿದ ಸೆಹ್ವಾಗ್!
ಎಆರ್ಎಚ್ಗೆ ವಿದೇಶಿ ಆಟಗಾರರು ಕಂಬ್ಯಾಕ್:
ಮೊದಲ ಪಂದ್ಯದಿಂದ ಹೊರಗುಳಿದಿದ್ದ ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕ ಏಡೆನ್ ಮಾರ್ಕ್ರಂ, ವಿಕೆಟ್ ಕೀಪರ್ ಹೆನ್ರಿಚ್ ಕ್ಲಾಸೆನ್ ಮತ್ತು ಮಾರ್ಕೊ ಜಾನ್ಸೆನ್ ಈ ಪಂದ್ಯದಲ್ಲಿ ರೀ ಎಂಟ್ರಿ ಕೊಡಲಿದ್ದಾರೆ. ಇದು ತಂಡಕ್ಕೆ ಪ್ಲಸ್ ಪಾಯಿಂಟ್ ಆಗಿರಲಿದೆ. ನೆದರ್ಲೆಂಡ್ಸ್‌ನೊಂದಿಗೆ ಕೊನೆಗೊಂಡ ODI ಸರಣಿ ಮುಗಿಸಿ ಇದೀಗ ಹೈದರಾಬಾದ್ ತಂಡವನ್ನು ಸೇರಿಕೊಳ್ಳಲಿದ್ದಾರೆ. ಮಾರ್ಕ್ರಂ ಮೂರನೇ ಏಕದಿನ ಪಂದ್ಯದಲ್ಲಿ 175 ರನ್ ಸಿಡಿಸಿದ್ದರು. ಆದರೆ ಇತ್ತ ಲಕ್ನೋ ತಂಡದ ನಾಯಕ ಕನ್ನಡಿಗ ಕೆಎಲ್ ರಾಹುಲ್ ಫಾರ್ಮ್ನಲ್ಲಿ ಇರದಿರುವುದು ತಂಡಕ್ಕೆ ದೊಡ್ಡ ಚಿಂತೆಯಾಗಿದೆ.
ಲಕ್ನೋ - ಹೈದರಾಬಾದ್ ಪ್ಲೇಯಿಂಗ್ 11:
ಸನ್‌ರೈಸರ್ಸ್ ಹೈದರಾಬಾದ್ ಪ್ಲೇಯಿಂಗ್ 11: ಮಯಾಂಕ್ ಅಗರ್ವಾಲ್, ಅನ್ಮೋಲ್‌ಪ್ರೀತ್ ಸಿಂಗ್ (WK), ರಾಹುಲ್ ತ್ರಿಪಾಠಿ, ಐಡೆನ್ ಮಾರ್ಕ್ರಾಮ್ (C), ಹ್ಯಾರಿ ಬ್ರೂಕ್, ವಾಷಿಂಗ್ಟನ್ ಸುಂದರ್, ಅಬ್ದುಲ್ ಸಮದ್, ಭುವನೇಶ್ವರ್ ಕುಮಾರ್, ಟಿ ನಟರಾಜನ್, ಉಮ್ರಾನ್ ಮಲಿಕ್ ಮತ್ತು ಆದಿಲ್ ರಶೀದ್.
ಲಕ್ನೋ ಸೂಪರ್ ಜೈಂಟ್ಸ್ ಪ್ಲೇಯಿಂಗ್ 11: ಕೆಎಲ್ ರಾಹುಲ್ (C), ಮೇನ್ ಮೈಯರ್ಸ್, ದೀಪಕ್ ಹೂಡಾ, ಮಾರ್ಕಸ್ ಸ್ಟೊಯಿನಿಸ್, ನಿಕೋಲಸ್ ಪೂರನ್ (WK), ರೊಮಾರಿಯೋ ಶೆಫರ್ಡ್, ಕೃನಾಲ್ ಪಾಂಡ್ಯ, ಅಮಿತ್ ಮಿಶ್ರಾ, ಯಶ್ ಠಾಕೂರ್, ಜಯದೇವ್ ಉನದ್ಕತ್ ರವಿ ಬಿಷ್ಣೋಯಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ