• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • SRH vs KKR: ಟಾಸ್​ ಗೆದ್ದ ಕೋಲ್ಕತ್ತಾ ಬೌಲಿಂಗ್​ ಆಯ್ಕೆ, ನಂಬರ್​ 1 ಸ್ಥಾನದ ಮೇಲೆ ಕೆಕೆಆರ್​ ಕಣ್ಣು!

SRH vs KKR: ಟಾಸ್​ ಗೆದ್ದ ಕೋಲ್ಕತ್ತಾ ಬೌಲಿಂಗ್​ ಆಯ್ಕೆ, ನಂಬರ್​ 1 ಸ್ಥಾನದ ಮೇಲೆ ಕೆಕೆಆರ್​ ಕಣ್ಣು!

ಕೋಲ್ಕತ್ತಾ - ಹೈದರಾಬಾದ್​

ಕೋಲ್ಕತ್ತಾ - ಹೈದರಾಬಾದ್​

KKR vs SRH: ಟಾಸ್​ ಈಗಾಗಲೇ ಆಗಿದ್ದು, ಟಾಸ್​ ಗೆದ್ದ ಕೋಲ್ಕತ್ತಾ ತಂಡ ಮೊದಲು ಬೌಲಿಂಗ್​ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ಹೈದರಾಬಾದ್​ ತಂಡವು ಬ್ಯಾಟಿಂಗ್​ ಆರಂಭಿಸಿಲಿದೆ.

  • Share this:

ಐಪಿಎಲ್ 2023ರ 19ನೇ ಪಂದ್ಯವು ಸನ್ ರೈಸರ್ಸ್ ಹೈದರಾಬಾದ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (SRH vs KKR) ನಡುವೆ ಆರಂಭವಾಗಿದೆ. ಎರಡೂ ತಂಡಗಳು ತಮ್ಮ ಕೊನೆಯ ಪಂದ್ಯವನ್ನು ಗೆದ್ದ ನಂತರ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ. ರಿಂಕು ಸಿಂಗ್ (Rinku Singh) ಅಮೋಘ ಬ್ಯಾಟಿಂಗ್ ಮೂಲಕ ಗುಜರಾತ್ ವಿರುದ್ಧ ಕೆಕೆಆರ್ ಗೆಲುವಿಗೆ ಕಾರಣರಾದರು. ಅದೇ ರೀತಿ ಸನ್ ರೈಸರ್ಸ್ ಹೈದರಾಬಾದ್ ತಂಡ ಪಂಜಾಬ್ ತಂಡವನ್ನು ಸೋಲಿಸುವ ಮೂಲಕ ಟೂರ್ನಿಯಲ್ಲಿ ಮೊದಲ ಜಯ ದಾಖಲಿಸಿತು. ಇಂದಿನ ಪಂದ್ಯದ ಟಾಸ್​ ಈಗಾಗಲೇ ಆಗಿದ್ದು, ಟಾಸ್​ ಗೆದ್ದ ಕೋಲ್ಕತ್ತಾ ತಂಡ ಮೊದಲು ಬೌಲಿಂಗ್​ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ಹೈದರಾಬಾದ್​ ತಂಡವು ಬ್ಯಾಟಿಂಗ್​ ಆರಂಭಿಸಿಲಿದೆ.


ಹೈದರಾಬಾದ್​ - ಕೋಲ್ಕತ್ತಾ ಹೆಡ್​ ಟು ಹೆಡ್​:


ಹೈದರಾಬಾದ್ ಮತ್ತು ಕೋಲ್ಕತ್ತಾ ತಂಡಗಳು ಇದುವರೆಗೆ 23 ಬಾರಿ ಮುಖಾಮುಖಿಯಾಗಿವೆ. ಕೋಲ್ಕತ್ತಾ ನೈಟ್ ರೈಡರ್ಸ್ 23 ಪಂದ್ಯಗಳಲ್ಲಿ ಮೇಲುಗೈ ಸಾಧಿಸಿದೆ. ಅವರು 15 ಪಂದ್ಯಗಳನ್ನು ಗೆದ್ದಿದ್ದಾರೆ. ಆದರೆ ಹೈದರಾಬಾದ್ ಕೇವಲ 8 ಪಂದ್ಯಗಳನ್ನು ಗೆದ್ದಿದೆ. ತಂಡದ ಪ್ರಕಾರ, ಕೋಲ್ಕತ್ತಾ ತಂಡ ಹೈದರಾಬಾದ್ ತಂಡಕ್ಕಿಂತ ಬಲಿಷ್ಠವಾಗಿದೆ. ನೈಟ್ ರೈಡರ್ಸ್ ಈ ಋತುವಿನಲ್ಲಿ 3 ಪಂದ್ಯಗಳಲ್ಲಿ 2 ಗೆದ್ದಿದೆ.



ಐಪಿಎಲ್ ಅಂಕಪಟ್ಟಿ:


ಪಾಯಿಂಟ್ ಪಟ್ಟಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಎರಡು ಅಂಕಗಳೊಂದಿಗೆ ಒಂಬತ್ತನೇ ಸ್ಥಾನದಲ್ಲಿದೆ. ಟೂರ್ನಿಯಲ್ಲಿ ಹೈದರಾಬಾದ್ ಮೂರು ಪಂದ್ಯಗಳನ್ನು ಆಡಿದೆ. ಇದೇ ವೇಳೆ ತಂಡ ಕೇವಲ ಒಂದು ಪಂದ್ಯವನ್ನು ಗೆದ್ದಿದೆ. ಅದೇ ಸಮಯದಲ್ಲಿ, ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ನಡೆಯುತ್ತಿರುವ ಪಂದ್ಯಾವಳಿಯಲ್ಲಿ ಮೂರು ಪಂದ್ಯಗಳನ್ನು ಆಡಿದೆ. ಈ ನಡುವೆ ಕೆಕೆಆರ್ ಎರಡು ಪಂದ್ಯಗಳಲ್ಲಿ ಯಶಸ್ಸು ಕಂಡಿದೆ. ತಂಡವು ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ.


ಇದನ್ನೂ ಓದಿ: Ambati Rayudu: ರಾಜ್ಯ ರಾಜಕೀಯಕ್ಕೆ ಟೀಂ ಇಂಡಿಯಾ ಆಟಗಾರ ಎಂಟ್ರಿ! ಯಾವ ಪಕ್ಷಕ್ಕೆ ಸೇರ್ತಾರೆ ಸ್ಟಾರ್​ ಪ್ಲೇಯರ್​?


ಕೋಲ್ಕತ್ತಾ ಬಲಾಬಲ:


ಕೆಕೆಆರ್ ತಂಡವು ಸುನಿಲ್ ನರೈನ್, ವರುಣ್ ಚಕ್ರವರ್ತಿ ಮತ್ತು ಸುಯಾಶ್ ಶರ್ಮಾ ರೂಪದಲ್ಲಿ ಮೂವರು ಸ್ಪಿನ್ನರ್‌ಗಳನ್ನು ಹೊಂದಿದೆ. ಅಂದರೆ 12 ಓವರ್ ಗಳಿಗೆ ಸನ್ ರೈಸರ್ಸ್ ಆಟಗಾರರು ಸ್ಪಿನ್ ಎದುರಿಸಬೇಕಾಗುತ್ತದೆ. ಸನ್ ರೈಸರ್ಸ್ ಸಮರ್ಥವಾಗಿ ಆಡಿದರೆ ಮಾತ್ರ ದೊಡ್ಡ ಮೊತ್ತ ಗಳಿಸುವ ಅವಕಾಶವಿದೆ. ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ರಿಂಕು ಸಿಂಗ್ ಒಂದು ರೇಂಜ್ ನಲ್ಲಿ ಸಿಡಿದಿದ್ದಾರೆ. ಅವರು ಅಸಾಧ್ಯವಾದುದನ್ನು ಸಾಧ್ಯವಾಗಿಸಿದರು. ಫಿನಿಶರ್ ಆಗಿ ರಿಂಕು ಸಿಂಗ್ ಸೂಪರ್ ಫಾರ್ಮ್ ನಲ್ಲಿದ್ದಾರೆ. ಅವರನ್ನೂ ಕಡಿಮೆ ಸ್ಕೋರ್‌ಗೆ ಔಟ್ ಮಾಡಬೇಕು.




ಹೈದರಾಬಾದ್​ - ಕೋಲ್ಕತ್ತಾ ಪ್ಲೇಯಿಂಗ್​ 11:


ಸನ್‌ರೈಸರ್ಸ್ ಹೈದರಾಬಾದ್ ಪ್ಲೇಯಿಂಗ್​ 11: ಮಯಾಂಕ್ ಅಗರ್ವಾಲ್, ಹ್ಯಾರಿ ಬ್ರೂಕ್, ರಾಹುಲ್ ತ್ರಿಪಾಠಿ, ಐಡೆನ್ ಮಾರ್ಕ್ರಾಮ್ (ನಾಯಕ), ಹೆನ್ರಿಚ್ ಕ್ಲಾಸೆನ್, ಅಭಿಷೇಕ್ ಶರ್ಮಾ, ಮಾರ್ಕೊ ಯಾನ್ಸೆನ್, ಮಯಾಂಕ್ ಮಾರ್ಕಂಡೇ, ಭುವನೇಶ್ವರ್ ಕುಮಾರ್, ಟಿ ನಟರಾಜನ್, ಉಮ್ರಾನ್ ಮಲಿಕ್.


ಕೋಲ್ಕತ್ತಾ ನೈಟ್ ರೈಡರ್ಸ್ ಪ್ಲೇಯಿಂಗ್​ 11: ರಹಮಾನುಲ್ಲಾ ಗುರ್ಬಾಜ್, ನಿತೀಶ್ ರಾಣಾ (ನಾಯಕ), ಆಂಡ್ರೆ ರಸೆಲ್, ಶಾರ್ದೂಲ್ ಠಾಕೂರ್, ಸುನಿಲ್ ನರೈನ್, ವೆಂಕಟೇಶ್ ಅಯ್ಯರ್, ಲಾಕಿ ಫರ್ಗುಸನ್, ಸುಯೇಶ್ ಶರ್ಮಾ, ಉಮೇಶ್ ಯಾದವ್, ವರುಣ್ ಚಕ್ರವರ್ತಿ, ಎನ್. ಜಗದೀಶನ್

top videos
    First published: