ಐಪಿಎಲ್ 2023 (IPL 2023) ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್ರೈಎರ್ಸ್ ಹೈದರಾಬಾದ್ (KKR vs SRH) ತಂಡಗಳು ಈಡನ್ ಗಾರ್ಡನ್ಸ್‌ನಲ್ಲಿ ಸೆಣಸಾಡುತ್ತಿದೆ. ಈ ಪಂದ್ಯದಲ್ಲಿ ಕೆಕೆಆರ್ ನಾಯಕ ನಿತೀಶ್ ರಾಣಾ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದರು. ಮಯಾಂಕ್ ಅಗರ್ವಾಲ್ ಅವರೊಂದಿಗೆ ಹ್ಯಾರಿ ಬ್ರೂಕ್ (Harry Brook) ಹೈದರಾಬಾದ್ ಇನ್ನಿಂಗ್ಸ್ ಆರಂಭಿಸಿದರು. ಇಲ್ಲಿಯವರೆಗೆ ಬ್ರೂಕ್ ಮಧ್ಯಮ ಕ್ರಮಾಂಕದಲ್ಲಿ ಆಡುತ್ತಿದ್ದರು. ಆದರೆ, ಕೆಕೆಆರ್ ವಿರುದ್ಧದ ಪಂದ್ಯದಲ್ಲಿ, ಈ ಯುವ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಓಪನಿಂಗ್ ಬರುವ ಮೂಲಕ ಭರ್ಜರಿ ಶತಕ ಸಿಡಿಸಿದರು. ಸನ್ ರೈಸರ್ಸ್ ಹೈದರಾಬಾದ್ ತಂಡದ ಆರಂಭಿಕ ಬ್ಯಾಟ್ಸ್ ಮನ್ ಹ್ಯಾರಿ ಬ್ರೂಕ್ ಕೆಕೆಆರ್ ವಿರುದ್ಧ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ ಶತಕ ಸಿಡಿಸಿದ್ದಾರೆ.
ಅವರ ತಂಡದ ಪರವಾಗಿ, ಅವರು 55 ಎಸೆತಗಳಲ್ಲಿ 12 ಬೌಂಡರಿ ಮತ್ತು ಮೂರು ಸಿಕ್ಸರ್‌ಗಳ ಸಹಾಯದಿಂದ 100 ರನ್ ಗಳಿಸಿ ಗಳಿಸುವ ಮೂಲಕ ಈ ಬಾರಿಯ ಚೊಚ್ಚಲ ಶತಕ ಸಿಡಿಸಿದರು. ಈ ಮೂಲಕ ಹೈದರಾಬಾದ್ ನಿಗದಿತ 20 ಓವರ್ನಲ್ಲಿ 4 ಓವರ್ಗೆ 228 ರನ್ ಗಳಿಸುವ ಮೂಲಕ 229 ರನ್ಗಳ ಬೃಹತ್ ಮೊತ್ತದ ಟಾರ್ಗೆಟ್ ನೀಡಿದೆ.
ಬ್ರೂಕ್ ಅಬ್ಬರದ ಶತಕ:
ಈಡನ್ ಗಾರ್ಡನ್ ಮೈದಾನದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡ ನಿಗದಿತ ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 228 ರನ್ ಗಳಿಸಲಷ್ಟೇ ಶಕ್ತವಾಯಿತು. ಹ್ಯಾರಿ ಬ್ರೂಕ್ 55 ಎಸೆತಗಳಲ್ಲಿ 100 ರನ್ ಗಳಿಸಿ ಅಜೇಯ ಶತಕವನ್ನು ಬಾರಿಸಿದರು. ಇದಲ್ಲದೇ ನಾಯಕ ಈಡನ್ ಮಾರ್ಕ್ರಾಮ್ 26 ಎಸೆತಗಳಲ್ಲಿ 50 ರನ್ ಕೊಡುಗೆ ನೀಡಿದರು. ಉಳಿಂದತೆ ಮಾಯಾಂಕ್ ಅರ್ಗವಾಲ್ 9 ರನ್, ಅಭಿಷೇಕ್ ಶರ್ಮಾ 32 ರನ್, ಹೆನ್ರಿಚ್ 16 ರನ್ ಗಳಿಸಿದರು.
𝐌𝐚𝐢𝐝𝐞𝐧 𝐂𝐞𝐧𝐭𝐮𝐫𝐢𝐨𝐧 𝐨𝐟 #𝐓𝐀𝐓𝐀𝐈𝐏𝐋 𝟐𝟎𝟐𝟑 💯
First 💯 in IPL for Harry Brook 🙌
What an incredible knock this has been 👏 👏
Follow the match ▶️ https://t.co/odv5HZvk4p#TATAIPL | #KKRvSRH pic.twitter.com/DGWDjSQMbo
— IndianPremierLeague (@IPL) April 14, 2023
ಇನ್ನು, ಐಪಿಎಲ್ 2023ರ ಮಿನಿ ಹರಾಜಿನಲ್ಲಿ ಹ್ಯಾರಿ ಬ್ರೂಕ್ ಅವರನ್ನು 13.25 ಕೋಟಿಗೆ ಸನ್‌ರೈಸರ್ಸ್ ಹೈದರಾಬಾದ್ ಖರೀದಿಸಿತು. ಐಪಿಎಲ್ ಇತಿಹಾಸದಲ್ಲಿ ಹರಾಜಿನಲ್ಲಿ ಹೈದರಾಬಾದ್ ತಂಡ ಖರೀದಿಸಿದ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡರು. ಬ್ರೂಕ್ ಅನ್ನು ಖರೀದಿಸುವ ಹಿಂದೆ ಹೈದರಾಬಾದ್‌ನ ಉದ್ದೇಶವು ತನ್ನ ಮಧ್ಯಮ ಕ್ರಮಾಂಕವನ್ನು ಬಲಪಡಿಸುವುದಾಗಿತ್ತು.
ಆದರೆ, ಭಾರತದ ನಿಧಾನಗತಿಯ ಪಿಚ್‌ಗಳಲ್ಲಿ ಬ್ರೂಕ್ ಮಧ್ಯಮ ಕ್ರಮಾಂಕದಲ್ಲಿ ರನ್ ಗಳಿಸಲು ಹೆಣಗಾಡುತ್ತಿದ್ದರು. ಆದರೆ ಇಂದು ಅವರು ಆರಂಭಿಕರಾಗಿ ಕಣಕ್ಕಿಳಿದು ಹೊಸ ದಾಖಲೆ ನಿರ್ಮಿಸಿದರು. ಬ್ರೂಕ್ 55 ಎಸೆತಗಳಲ್ಲಿ 12 ಬೌಂಡರಿ ಮತ್ತು ಮೂರು ಸಿಕ್ಸರ್‌ಗಳ ಸಹಾಯದಿಂದ 100 ರನ್ ಗಳಿಸಿದರು.
ಹೈದರಾಬಾದ್ - ಕೋಲ್ಕತ್ತಾ ಪ್ಲೇಯಿಂಗ್ 11:
ಸನ್‌ರೈಸರ್ಸ್ ಹೈದರಾಬಾದ್ ಪ್ಲೇಯಿಂಗ್ 11: ಮಯಾಂಕ್ ಅಗರ್ವಾಲ್, ಹ್ಯಾರಿ ಬ್ರೂಕ್, ರಾಹುಲ್ ತ್ರಿಪಾಠಿ, ಐಡೆನ್ ಮಾರ್ಕ್ರಾಮ್ (ನಾಯಕ), ಹೆನ್ರಿಚ್ ಕ್ಲಾಸೆನ್, ಅಭಿಷೇಕ್ ಶರ್ಮಾ, ಮಾರ್ಕೊ ಯಾನ್ಸೆನ್, ಮಯಾಂಕ್ ಮಾರ್ಕಂಡೇ, ಭುವನೇಶ್ವರ್ ಕುಮಾರ್, ಟಿ ನಟರಾಜನ್, ಉಮ್ರಾನ್ ಮಲಿಕ್.
ಕೋಲ್ಕತ್ತಾ ನೈಟ್ ರೈಡರ್ಸ್ ಪ್ಲೇಯಿಂಗ್ 11: ರಹಮಾನುಲ್ಲಾ ಗುರ್ಬಾಜ್, ನಿತೀಶ್ ರಾಣಾ (ನಾಯಕ), ಆಂಡ್ರೆ ರಸೆಲ್, ಶಾರ್ದೂಲ್ ಠಾಕೂರ್, ಸುನಿಲ್ ನರೈನ್, ವೆಂಕಟೇಶ್ ಅಯ್ಯರ್, ಲಾಕಿ ಫರ್ಗುಸನ್, ಸುಯೇಶ್ ಶರ್ಮಾ, ಉಮೇಶ್ ಯಾದವ್, ವರುಣ್ ಚಕ್ರವರ್ತಿ, ಎನ್. ಜಗದೀಶನ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ