ಐಪಿಎಲ್ 2023ರ (IPL 2023) 40ನೇ ಪಂದ್ಯ ದೆಹಲಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ (DC vs SRH) ನಡುವೆ ನಡೆಯಿತು. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡವು 20 ಓವರ್ನಲ್ಲಿ 6 ವಿಕೆಟ್ ನಷ್ಟಕ್ಕೆ 197 ರನ್ ಗಳಿಸಿತು. ಈ ಮೊತ್ತ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ನಿಗದಿತ 20 ಓವರ್ನಲ್ಲಿ 6 ವಿಕೆಟ್ ನಷ್ಟಕ್ಕೆ 188 ರನ್ ಗಳಿಸುವ ಮೂಲಕ 9 ರನ್ ಗಳಿಂದ ಸೋಲನ್ನಪ್ಪಿತು. ಈ ಮೂಲಕ ಡೆಲ್ಲಿ ತಂಡಕ್ಕೆ ಈ ಬಾರಿಯ ಫ್ಲೇಆಫ್ ಹಾದಿ ಇನ್ನಷ್ಟು ಕಠಿಣವಾಗಿದೆ.
ಬ್ಯಾಟಿಂಗ್ನಲ್ಲೂ ಅಬ್ಬರಿಸಿದ ಮಾರ್ಷ್:
ಇನ್ನು, ಹೈದರಾಬಾದ್ ನೀಡಿದ ಬಿಗ್ ಟಾರ್ಗೆಟ್ ಬೆನ್ನಟ್ಟಿದ ಡೆಲ್ಲಿ ತಂಡವು 20 ಓವರ್ನಲ್ಲಿ 6 ವಿಕೆಟ್ ನಷ್ಟಕ್ಕೆ 188 ರನ್ ಗಳಿಸಿತು. ಡೆಲ್ಲಿ ಕ್ಯಾಪಿಟಲ್ಸ್ ಪರ ಡೇವಿಡ್ ವಾರ್ನರ್ ಶೂನ್ಯಕ್ಕೆ ಔಟ್, ಫಿಲಿಪ್ ಸಾಲ್ಟ್ 35 ಎಸೆತದಲ್ಲಿ 9 ಫೊರ್ ಮೂಲಕ 59 ರನ್, ಮಿಚೆಲ್ ಮಾರ್ಷ್ 39 ಎಸೆತದಲ್ಲಿ 6 ಸಿಕ್ಸ್ ಮತ್ತು 1 ಫೊರ್ ಮೂಲಕ 63 ರನ್, ಮನೀಶ್ ಪಾಂಡೆ 1 ರನ್ ಗಳಿಸುವ ಮೂಲಕ ಮತ್ತೊಮ್ಮೆ ನಿರಾಸೆ ಮೂಡಿಸಿದರು, ಪ್ರಿಯಮ್ ಗಾರ್ಗ್ 12 ರನ್, ಅಕ್ಷರ್ ಪಟೇಲ್ 29 ರನ್, ರಿಪಾಲ್ ಪಟೇಲ್ 11 ರನ್ ಗಳಿಸಿದರು.
ಹೈದರಾಬಾದ್ ಸಂಘಟಿತ ಬೌಲಿಂಗ್ ದಾಳಿ:
ಬೃಹತ್ ಮೊತ್ತ ನೀಡುವ ಮೂಲಕ ಬ್ಯಾಟಿಂಗ್‌ನಲ್ಲಿ ಮಿಂಚಿದ ಹೈದರಾಬಾದ್ ತಂಡವು ಬೌಲಿಂಗ್ನಲ್ಲಿಯೂ ಸಂಘಟಿತ ದಾಳಿ ನಡೆಸಿದರು. ಹೈದರಾಬಾದ್ ಪರ ಇಂದು ಅಕೇಲ್ ಹೊಸೈನ್ 4 ಓವರ್ಗೆ 40 ರನ್ ನೀಡಿ 1 ವಿಕೆಟ್, ಮಾಯಾಂಕ ಮಾರ್ಕಂಡೆ 4 ಓವರ್ಗೆ 20 ರನ್ ನೀಡಿ 2 ವಿಕೆಟ್, ಅಭಿಷೇಕ್ ಶರ್ಮಾ 3 ಓವರ್ಗೆ 26 ರನ್ ನೀಡಿ 1 ವಿಕೆಟ್ ಟಿ. ನಟರಾಜನ್ 4 ಓವರ್ ಮಾಡಿ 1 ವಿಕೆಟ್ ಹಾಗೂ ಭುವನೇಶ್ವರ್ ಕುಮಾರ್ 1 ವಿಕೆಟ್ ಪಡೆದು ಮಿಂಚಿದರು.
ಅಭಿಷೇಕ್ ಶರ್ಮಾ ಭರ್ಜರಿ ಬ್ಯಾಟಿಂಗ್:
ಸನ್ ರೈಸರ್ಸ್ ಹೈದರಾಬಾದ್ ಪರ ಅಭಿಷೇಕ್ ಶರ್ಮಾ 200.00 ಸ್ಟ್ರೈಕ್ ರೇಟ್‌ನೊಂದಿಗೆ ಐಪಿಎಲ್ ವೃತ್ತಿಜೀವನದ ನಾಲ್ಕನೇ ಅರ್ಧಶತಕವನ್ನು ಪೂರ್ಣಗೊಳಿಸಿದರು. ಅವರು 36 ಎಸೆತದಲ್ಲಿ 12 ಫೋರ್ ಮತ್ತು 1 ಸಿಕ್ಸ್ ಮೂಲಕ 186.11 ಸ್ಟ್ರೈಕ್ ರೇಟ್‌ನೊಂದಿಗೆ 67 ರನ್ ಗಳಿಸಿದರು. ಇನ್ನಿಂಗ್ಸ್ ಆರಂಭಿಸಿದ ಮಯಾಂಕ್ ಅಗರ್ವಾಲ್ ಮತ್ತೊಮ್ಮೆ ಬ್ಯಾಟಿಂಗ್‌ನಲ್ಲಿ ವಿಫಲರಾದರು. ಡೆಲ್ಲಿ ವಿರುದ್ಧ ಒಟ್ಟು ಆರು ಎಸೆತಗಳನ್ನು ಎದುರಿಸಿದ ಅವರು 5 ರನ್ ಗಳಿಸಿದರು.
ಅಗರ್ವಾಲ್ ಮಾತ್ರವಲ್ಲ, ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಬಂದ ರಾಹುಲ್ ತ್ರಿಪಾಠಿ ಕೂಡ ಹೆಚ್ಚಿನ ಉತ್ಸಾಹ ತೋರದೆ ಪೆವಿಲಿಯನ್ ಗೆ ಮರಳಿದರು. ದೆಹಲಿ ವಿರುದ್ಧ ಒಟ್ಟು ಆರು ಎಸೆತಗಳನ್ನು ಎದುರಿಸಿದ ಅವರು 10 ರನ್ ಗಳಿಸಿದರು. ಉಳಿದಂತೆ ಅಡೇನ್ ಮಾರ್ಕರಮ್ 8 ರನ್, ಹ್ಯಾರಿ ಬ್ರೂಕ್ ಶೂನ್ಯ, ಹೆನ್ರಿಚ್ ಕ್ಲಾಸಿನ್ 53 ರನ್, ಅಬ್ದುಲ್ ಸಮ್ಮದ್ 28 ರನ್ ಮತ್ತು ಅಕೇಲ್ ಹೋಸಿನ್ 16 ರನ್ ಗಳಿಸಿದರು.
ಮಿಚೆಲ್ ಮಾರ್ಷ್ ಸೂಪರ್ ಬೌಲಿಂಗ್:
ಇನ್ನು, ಟಾಸ್ ಸೋತು ಮೊದಲು ಬೌಲಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಆರಂಭದಲ್ಲಿ ಉತ್ತಮ ಬೌಲಿಂಗ್ ದಾಳಿ ನಡೆಸಿತು. ಡೆಲ್ಲಿ ಪರ ಇಂದು ಮಿಚೆಲ್ ಮಾರ್ಷಲ್ 4 ಓವರ್ ಮಾಡಿ 27 ರನ್ ನೀಡಿ 4 ವಿಕೆಟ್ ಪಡೆದು ಮಿಂಚಿದರು. ಉಳಿಂದತೆ ಇಶಾಂತ್ ಶರ್ಮಾ 3 ಓವರ್ಗೆ 1 ವಿಕೆಟ್ ಮತ್ತು ಅಕ್ಷರ್ ಪಟೇಲ್ 4 ಓವರ್ಗೆ 29 ರನ್ ನೀಡಿ 1 ವಿಕೆಟ್ ಪಡೆದು ಮಿಂಚಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ