ಐಪಿಎಲ್ 2023 (IPL 2023) ಮಾರ್ಚ್ 31 ರಿಂದ ಪ್ರಾರಂಭವಾಗಲಿದೆ. ಟಿ20 ಲೀಗ್‌ನ ಹೊಸ ಋತುವಿನ ವೇಳಾಪಟ್ಟಿಯನ್ನು ಬಿಸಿಸಿಐ (BCCI) ಬಿಡುಗಡೆ ಮಾಡಿದೆ. ಟಿ20 ಲೀಗ್ ಒಟ್ಟು 52 ದಿನಗಳ ಕಾಲ ನಡೆಯಲಿದ್ದು, 74 ಪಂದ್ಯಗಳು ನಡೆಯಲಿವೆ. ಇನ್ನು, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತನ್ನ ಐಪಿಎಲ್ 2023ರ ಆರಂಭಿಕ ಪಂದ್ಯವನ್ನು ಏಪ್ರಿಲ್ 2 ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ (RCB vs MI) ವಿರುದ್ಧ ಆಡಲಿದೆ. ಕೊನೆಯ ಸೀಸನ್ನಲ್ಲಿ ಫಾಫ್ ಡು ಪ್ಲೆಸಿಸ್ ನೇತೃತ್ವದ ಬೆಂಗಳೂರು ತಂಡವು ಎರಡನೇ ಕ್ವಾಲಿಫೈಯರ್‌ನಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಸೋತಿತ್ತು. ಹಾಗಿದ್ದರೆ ಈ ಬಾರಿ ಬೆಂಗಳೂರು ತಂಡದ ಪಂದ್ಯಗಳು ಎಲ್ಲಿ? ಯಾವಾಗ? ನಡೆಯಲಿದೆ ಎಂಬ ಸಂಪೂರ್ಣ ವಿವರ ಇಲ್ಲಿದೆ ನೋಡಿ.
RCB ತಂಡದ ಸಂಪೂರ್ಣ ವೇಳಾಪಟ್ಟಿ:
ಏಪ್ರಿಲ್ 2 - RCB vs MI - ಚಿನ್ನಸ್ವಾಮಿ ಕ್ರೀಡಾಂಗಣ (ಸಂಜೆ 7:30)
ಏಪ್ರಿಲ್ 6 - KKR vs RCB - ಕೋಲ್ಕತ್ತಾ (ಸಂಜೆ 7:30)
ಏಪ್ರಿಲ್ 10 - RCB vs LSG - ಚಿನ್ನಸ್ವಾಮಿ ಕ್ರೀಡಾಂಗಣ (ಮಧ್ಯಾಹ್ನ 3:30)
ಏಪ್ರಿಲ್ 15 - RCB vs DC - ಬೆಂಗಳೂರು (ಮಧ್ಯಾಹ್ನ 3:30)
ಏಪ್ರಿಲ್ 17 - RCB vs CSK - ಬೆಂಗಳೂರು (ಸಂಜೆ 7:30)
ಏಪ್ರಿಲ್ 20 - PBKS vs RCB - ಮೊಹಾಲಿ (ಮಧ್ಯಾಹ್ನ 3:30)
ಏಪ್ರಿಲ್ 23 - RCB vs RR - ಬೆಂಗಳೂರು (ಮಧ್ಯಾಹ್ನ 3:30)
ಇದನ್ನೂ ಓದಿ: Prithvi Shaw: ಟೀಂ ಇಂಡಿಯಾ ಆಟಗಾರನ ಮೇಲೆ ಹಲ್ಲೆಗೆ ಯತ್ನಿಸಿದ ನಟಿ, ಹೀರೋಯಿನ್ ಸಪ್ನಾ ಗಿಲ್ ಬಂಧನ
ಏಪ್ರಿಲ್ 26 - RCB vs KKR - ಬೆಂಗಳೂರು (ಸಂಜೆ 7:30)
ಮೇ 1 - LSG vs RCB ಲಕ್ನೋ (ಸಂಜೆ 7:30)
ಮೇ 6 - DC vs RCB - ದೆಹಲಿ (ಸಂಜೆ 7:30)
ಮೇ 9 - MI vs RCB - ಮುಂಬೈ (ಸಂಜೆ 7:30)
ಮೇ 14 - RR vs RCB - ಜೈಪುರ (ಮಧ್ಯಾಹ್ನ 3:30)
ಮೇ 18 - SRH vs RCB - ಹೈದರಾಬಾದ್ (ಸಂಜೆ 7:30)
ಮೇ 21 - RCB vs GT - ಬೆಂಗಳೂರು (ಸಂಜೆ 7:30)
𝐑𝐂𝐁’𝐬 𝐈𝐏𝐋 𝟐𝟎𝟐𝟑 𝐅𝐢𝐱𝐭𝐮𝐫𝐞𝐬:
The moment we've all been waiting for. The summer of '23 is officially a go! 🙌 🔥#PlayBold #WeAreChallengers #IPL2023 pic.twitter.com/QOGEusHIYK
— Royal Challengers Bangalore (@RCBTweets) February 17, 2023
ರಾಯಲ್ ಚಾಲೆಂಜರ್ಸ್ ಬೆಂಗಳೂರು
ಚೆನ್ನೈ ಸೂಪರ್ ಕಿಂಗ್ಸ್
ಗುಜರಾತ್ ಟೈಟನ್ಸ್
ಪಂಜಾಬ್ ಕಿಂಗ್ಸ್
ಸನ್ ರೈಸರ್ಸ್ ಹೈದರಾಬಾದ್
12 ಮೈದಾನಗಳಲ್ಲಿ ಪಂದ್ಯಗಳು ನಡೆಯಲಿವೆ. ಐಪಿಎಲ್ನ ಮೊದಲ ಹಾಗೂ ಅಂತಿಮ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಮೇ 21ರಂದು ಕೊನೆಯ ಲೀಗ್ ಪಂದ್ಯ ನಡೆಯಲಿದೆ. ಒಟ್ಟು 18 ಡಬಲ್ ಹೆಡರ್ ಪಂದ್ಯಗಳು ನಡೆಯಲಿವೆ. ಪ್ರತಿ ತಂಡ ತಲಾ 7 ಪಂದ್ಯಗಳನ್ನು ತವರು ನೆಲದಲ್ಲಿ ಮತ್ತು 7 ಪಂದ್ಯಗಳನ್ನು ಬೇರೆ ಮೈದಾನದಲ್ಲಿ ಆಡಲಿದೆ.
ಬೆಂಗಳೂರು ತಂಡ:
ಫಾಫ್ ಡು ಪ್ಲೆಸಿಸ್ (ಸಿ), ಫಿನ್ ಅಲೆನ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಸುಯಶ್ ಪ್ರಭುದೇಸಾಯಿ, ವಿಲ್ ಜ್ಯಾಕ್ಸ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ವನಿಂದು ಹಸರಂಗ, ಮಹಿಪಾಲ್ ಲೊಮ್ರೋರ್, ಗ್ಲೆನ್ ಮ್ಯಾಕ್ಸ್‌ವೆಲ್, ಶಹಬಾಜ್ ಅಹ್ಮದ್, ಸೋನು ಯಾದವ್, ಮನೋಜ್ ಭಾಂಡಗೆ, ಆಕಾಶ್ ಭಾಂಡಗೆ, ಜೋ ಹ್ಯಾಜಲ್‌ವುಡ್, ಸಿದ್ದಾರ್ಥ್ ಕೌಲ್, ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್, ಕರ್ಣ್ ಶರ್ಮಾ, ಡೇವಿಡ್ ವಿಲ್ಲಿ (ಇಎನ್‌ಜಿ), ಅವಿನಾಶ್ ಸಿಂಗ್, ರಾಜನ್ ಕುಮಾರ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ