• Home
  • »
  • News
  • »
  • sports
  • »
  • IPL 2023 CSK: ಚೆನ್ನೈ ಸೂಪರ್ ಕಿಂಗ್ಸ್‌ನ ಮುಂದಿನ ನಾಯಕ ಯಾರು? ಈ ಆಟಗಾರನಿಗೆ ಸಿಗುತ್ತಾ CSK ಚುಕ್ಕಾಣಿ?

IPL 2023 CSK: ಚೆನ್ನೈ ಸೂಪರ್ ಕಿಂಗ್ಸ್‌ನ ಮುಂದಿನ ನಾಯಕ ಯಾರು? ಈ ಆಟಗಾರನಿಗೆ ಸಿಗುತ್ತಾ CSK ಚುಕ್ಕಾಣಿ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

IPL 2023 CSK: ಕಳೆದ ಋತುವಿನಲ್ಲಿ ರವೀಂದ್ರ ಜಡೇಜಾ ನಾಯಕತ್ವದಲ್ಲಿ ಸಿಎಸ್‌ಕೆ ಪ್ರದರ್ಶನ ತೀರಾ ಕಳಪೆಯಾಗಿತ್ತು. ಭಾರತದ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ಮುಂಬರುವ ಋತುವಿನಲ್ಲಿ ಸಿಎಸ್‌ಕೆ ನಾಯಕತ್ವ ವಹಿಸುವ ಭಾರತೀಯ ಆಟಗಾರನ ಹೆಸರನ್ನು ಸೂಚಿಸಿದ್ದಾರೆ.

  • News18 Kannada
  • Last Updated :
  • New Delhi, India
  • Share this:

ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) 2020ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. ಅವರು ಈಗ ಐಪಿಎಲ್‌ನಲ್ಲಿ ಮಾತ್ರ ಆಡುತ್ತಿದ್ದಾರೆ. 2023ರ ಐಪಿಎಲ್ (IPL 2023) ಅವರ ಕೊನೆಯದು ಎಂದು ನಿರೀಕ್ಷಿಸಲಾಗಿದೆ. 2022ರ ಐಪಿಎಲ್‌ನಲ್ಲಿ ಅವರು ಮೊದಲ ಆರಂಭದ ನಾಯಕತ್ವದಲ್ಲಿ ನಾಯಕತ್ವ ವಹಿಸಿರಲಿಲ್ಲ. ಅವರ ಸ್ಥಾನಕ್ಕೆ ತಂಡದ ಅನುಭವಿ ಆಲ್‌ರೌಂಡರ್ ರವೀಂದ್ರ ಜಡೇಜಾ (Ravindra Jadeja) ಅವರಿಗೆ ನಾಯಕತ್ವ ನೀಡಲಾಗಿತ್ತು. ಆದರೆ ಅವರ ನಾಯಕತ್ವದಲ್ಲಿ ಫಲಿತಾಂಶಗಳು ಉತ್ತಮವಾಗಿ ಬರಲಿಲ್ಲ. ಅದರ ನಂತರ ಅವರು ನಾಯಕತ್ವದಿಂದ ಹೊರಬಂದರು. ನಂತರ ಮತ್ತೆ ಧೊನಿ (Dhoni) ಅವರು ನಾಯಕತ್ವವನ್ನು ವಹಿಸಿಕೊಂಡರು. ಹೀಗಾಗಿ ಚೆನ್ನೈ ತಂಡದಲ್ಲಿ ಧೊನಿ ನಂತರ ಯಾರಿಗೆ ನಾಯಕತ್ವ ನೀಡಲಾಗುತ್ತದೆ ಎಂಬ ದೊಡ್ಡ ಚರ್ಚೆ ನಡೆಯುತ್ತಿದೆ.


ಸಿಎಸ್​ಕೆ ನಾಯಕನನ್ನು ಹೆಸರಿಸಿದ ವಾಸಿಂ ಜಾಫರ್:


ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್‌ನ ಹೊಸ ಕೋಚ್ ವಾಸಿಂ ಜಾಫರ್ ಅವರು ಸಿಎಸ್‌ಕೆಯನ್ನು ಮುನ್ನಡೆಸಲು ಧೋನಿಯನ್ನು ಹೊರತುಪಡಿಸಿ ಮತ್ತೊರ್ವ ಭಾರತೀಯ ಆಟಗಾರನ ಹೆಸರನ್ನು ಸೂಚಿಸಿದ್ದಾರೆ. ಇಎಸ್‌ಪಿಎನ್ ಕ್ರಿಕ್‌ಇನ್‌ಫೋ ಜೊತೆ ಮಾತನಾಡಿದ ಜಾಫರ್, 'CSK ಮುಂದಿನ ನಾಯಕ ಯಾರು ಎಂದು ನನಗೆ ತಿಳಿದಿಲ್ಲ, ಆದರೆ MS ಧೋನಿ ಬೇರೆ ಆಟಗಾರನನ್ನು ನೋಡಿದರೆ ಅದು ರಿತುರಾಜ್ ಗಾಯಕ್ವಾಡ್ ಆಗಿರಬಹುದು. ಗಾಯಕ್ವಾಡ್ ಅವರು ಧೋನಿ ನಂತರ ತಂಡವನ್ನು ಮುನ್ನಡೆಸಬಹುದು ಮತ್ತು ಅವರಿಗೆ ಸ್ವಲ್ಪ ಜವಾಬ್ದಾರಿ ನೀಡಬಹುದು ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಅವರು ಚಿಕ್ಕವನು. ಅವರು ಮಹಾರಾಷ್ಟ್ರ ಕ್ರಿಕೆಟ್ ತಂಡದ ನಾಯಕರೂ ಆಗಿದ್ದಾರೆ. ಅವರನ್ನು ಮುಂದಿನ ನಾಯಕನನ್ನಾಗಿ ಬೆಳೆಸಬಹುದು‘ ಎಂದು ಹೇಳಿದ್ದಾರೆ.


ಗಾಯಕ್ವಾಡರನ್ನು ಉಳಿಸಿಕೊಂಡ CSK:


ಈ ವರ್ಷ ಚೆನ್ನೈ ಸೂಪರ್ ಕಿಂಗ್ಸ್ ಉಳಿಸಿಕೊಂಡಿದೆ. ರಿತುರಾಜ್ ಗಾಯಕ್ವಾಡ್ 2021 ರ ಐಪಿಎಲ್‌ನಲ್ಲಿ ಆರೆಂಜ್ ಕ್ಯಾಪ್ ಗೆದ್ದ ಆಟಗಾರ. 2022ರ ಐಪಿಎಲ್‌ನಲ್ಲಿ ಅವರನ್ನು ಸಿಎಸ್‌ಕೆ 6 ಕೋಟಿ ರೂ.ಗೆ ಉಳಿಸಿಕೊಂಡಿತ್ತು. ಆದರೆ ಋತುವಿನಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಅವರು 14 ಪಂದ್ಯಗಳಲ್ಲಿ 26.28 ಸರಾಸರಿಯಲ್ಲಿ 368 ರನ್ ಗಳಿಸಿದರು. ಈ ವೇಳೆ ಅವರ ಸ್ಟ್ರೈಕ್ ರೇಟ್ ಕೂಡ 130ಕ್ಕಿಂತ ಕಡಿಮೆ ಇತ್ತು. ಈ ವರ್ಷ CSK ಗಾಯಕ್ವಾಡ್ ಅವರಿಂದ ಅತ್ಯುತ್ತಮ ಪ್ರದರ್ಶನವನ್ನು ನಿರೀಕ್ಷಿಸುತ್ತಿದೆ.


ಇದನ್ನೂ ಓದಿ: RCB ಅಭಿಮಾನಿಗಳಿಗೆ ಭರ್ಜರಿ ಗುಡ್​ ನ್ಯೂಸ್​, ಐಪಿಎಲ್​ 2023ಕ್ಕೆ ಸ್ಟಾರ್​ ಆಲ್​ರೌಂಡರ್​ ತಂಡಕ್ಕೆ ಕಂಬ್ಯಾಕ್​!


ಸ್ಯಾಮ್​ ಮುಂದಿನ ನಾಯಕ ಎಂದ ಬಾಲಾಜಿ:


ಇನ್ನು, ಸಿಎಸ್​ಕೆ ತಂಡದ ಬೌಲಿಂಗ್ ಕೋಚ್ ಆಗಿರುವಂತಹ ಬಾಲಾಜಿ ಅವರೂ ಸಹ ಚೆನ್ನೈ ತಂಡದ ಮುಂದಿನ ನಾಯಕ ಯಾರು ಎನ್ನುವುದರ ಕುರಿತು ಮಾತನಾಡಿದ್ದಾರೆ ಅದರಂತೆ ಅವರು ಚೆನ್ನೈ ತಂಡ ಈ ಬಾರಿ ಹರಾಜಿನಲ್ಲಿ ಇಂಗ್ಲೆಂಡ್​ ನ ಆಲ್​ರೌಂಡರ್ ಆದ ಸ್ಯಾಮ್ ಕರನ್ ಅವರನ್ನು ಖರೀದಿಸಿದರೆ ಮುಂದಿನ ಧೊನಿ ನಂತರ ಸ್ಯಾಮ್​ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಬಹುದು. ಅವರು ಇನ್ನೂ ಚಿಕ್ಕವರು ಲಾಗ್​ ಟರ್ಮ್​ನಲ್ಲಿ ತಂಡವನ್ನು ಮುನ್ನಡೆಸಲು ಅವಕಾಶವಿದೆ ಎಂದು ಹೇಳಿದ್ದಾರೆ.


ಇದನ್ನೂ ಓದಿ: ICC World Cup 2023: ಏಕದಿನ ವಿಶ್ವಕಪ್​ 2023 ಸಂಭಾವ್ಯ ವೇಳಾಪಟ್ಟಿ, ಭಾರತದ ಯಾವ ಸ್ಥಳಗಳಲ್ಲಿ ನಡೆಯಲಿದೆ ಮೆಗಾ ಟೂರ್ನಿ


ಚೆನ್ನೈ ತಂಡ ಉಳಿಸಿಕೊಂಡ-ಕೈಬಿಟ್ಟ ಆಟಗಾರರು:Published by:shrikrishna bhat
First published: