RCB vs RR: ಆರ್​ಸಿಬಿಗೆ ಭರ್ಜರಿ ಜಯ, ಪ್ಲೇಆಫ್​ ಕನಸು ಇನ್ನೂ ಜೀವಂತ

ಆರ್​ಸಿಬಿಗೆ ಭರ್ಜರಿ ಗೆಲುವು

ಆರ್​ಸಿಬಿಗೆ ಭರ್ಜರಿ ಗೆಲುವು

RCB vs RR: ರಾಜಸ್ಥಾನ್​ ರಾಯಲ್ಸ್ ತಂಡವು 10.3 ಓವರ್​ಗಳಲ್ಲಿ 10 ವಿಕೆಟ್​ ನಷ್ಟಕ್ಕೆ 59 ರನ್​ ಗಳಿಸುವ ಮೂಲಕ 112  ರನ್​ ಗಳಿಂದ ಹೀನಾಯವಾಗಿ ಸೋಲನ್ನಪ್ಪಿತು. ಈ ಮೂಲಕ ಆರ್​ಸಿಬಿ ತಂಡದ ಪ್ಲೇಆಫ್​ ಕನಸು ಇನ್ನೂ ಜೀವಂತವಾಗಿದೆ.

  • Share this:

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ (RCB vs RR) ವಿರುದ್ಧ ನಡೆದ ಪಂದ್ಯದಲ್ಲಿ ಆರ್​ಸಿಬಿ ತಂಡ ಭರ್ಜರಿ ಜಯ ದಾಖಲಿಸಿತು. ಈ ಮೂಲಕ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ RCB 20 ಓವರ್‌ಗಳಲ್ಲಿ 5 ವಿಕೆಟ್‌ಗೆ 171 ರನ್ ಗಳಿಸಿತು. ಈ ಮೊತ್ತ ಬೆನ್ನಟ್ಟಿದ ರಾಜಸ್ಥಾನ್​ ರಾಯಲ್ಸ್ ತಂಡವು 10.3 ಓವರ್​ಗಳಲ್ಲಿ 10 ವಿಕೆಟ್​ ನಷ್ಟಕ್ಕೆ 59 ರನ್​ ಗಳಿಸುವ ಮೂಲಕ 112  ರನ್​ ಗಳಿಂ ಹೀನಾಯವಾಗಿ ಸೋಲನ್ನಪ್ಪಿತು. ಈ ಮೂಲಕ ಆರ್​ಸಿಬಿ ತಂಡದ ಪ್ಲೇಆಫ್​ ಕನಸು ಇನ್ನೂ ಜೀವಂತವಾಗಿದೆ.


ಆರ್​ಸಿಬಿ ಪ್ಲೇಆಫ್​ ಸನಿಹಕ್ಕೆ:


ಇನ್ನು, ಆರ್​ಸಿಬಿ ತಂಡ ರಾಜಸ್ಥಾನ್​ ತಂಡದ ವಿರುದ್ಧ ಭರ್ಜರಿ ಜಯ ದಾಖಲಿಸಿದರು. ಈ ಮೂಲಕ ಪ್ಲೇಆಫ್​ ಕನಸು ಇನ್ನೂ ಜೀವಂತವಾಗಿದೆ. 112 ರನ್​ಗಳ ದಾಖಲೆಯ ವಿಜಯ ದಾಖಲಿಸಿದ ಬಳಿಕ ಆರ್​ಸಿಬಿ 12 ಪಂದ್ಯಗಳಲ್ಲಿ 6ರಲ್ಲಿ ಸೋತು 6ರಲ್ಲಿ ಗೆದ್ದು 12 ಅಂಕ ಗಳಿಸಿದೆ. ಈ ವೇಳೆ +0.116 ನೆಟ್​ ರನ್​ರೇಟ್​ ಮೂಲಕ 5ನೇ ಸ್ಥಾನಕ್ಕೇರಿದೆ. ಈ ಮೂಲಕ ರಾಜಸ್ಥಾನ್​ ತಂಡವು 6ನೇ ಸ್ಥಾನಕ್ಕೆ ಕುಸಿದಿದೆ.



ಆರ್​ಸಿಬಿ ಬೊಂಬಾಟ್​ ಬೌಲಿಂಗ್​:


ಐಪಿಎಲ್ 2023ರ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ, ರಾಜಸ್ಥಾನ ರಾಯಲ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 112 ರನ್‌ಗಳ ಹೀನಾಯ ಸೋಲನ್ನು ಎದುರಿಸಬೇಕಾಯಿತು. ಈ ಸೋಲಿನೊಂದಿಗೆ ರಾಜಸ್ತಾನದ ಪ್ಲೇಆಫ್‌ನ ಆಸೆಗೆ ಕಂಟಕ ಎದುರಾಗಿದೆ. ಈಗ ಅವರು ಮುಂದಿನ ಹಂತವನ್ನು ತಲುಪಲು ಇತರ ತಂಡಗಳ ಪ್ರದರ್ಶನದ ಮೇಲೆ ಅವಲಂಬಿತರಾಗಿದ್ದಾರೆ. ಆರ್‌ಸಿಬಿ ಪರ ವೇಯ್ನ್ ಪಾರ್ನೆಲ್ 3 ವಿಕೆಟ್ ಪಡೆದರು. ಅದೇ ಸಮಯದಲ್ಲಿ ಮೈಕಲ್ ಬ್ರೇಸ್‌ವೆಲ್ ಮತ್ತು ಕರಣ್​ ಶರ್ಮಾ ತಲಾ 2 ವಿಕೆಟ್ ಪಡೆದರು. ಇದಕ್ಕೂ ಮುನ್ನ ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಅರ್ಧಶತಕ ಗಳಿಸಿದ್ದರು.


ಇದನ್ನೂ ಓದಿ: IPL 2023: ಕೊಹ್ಲಿ ಬಿಟ್ರೂ ಫ್ಯಾನ್ಸ್​ ಬಿಡ್ತಿಲ್ಲ, ವಿರಾಟ್ ಅಭಿಮಾನಿಗಳ ಅಬ್ಬರಕ್ಕೆ ಅಫ್ಘಾನ್​ ಬೌಲರ್​ ಸುಸ್ತು!


ಫಾಫ್​- ಮ್ಯಾಕ್ಸಿ ಭರ್ಜರಿ ಬ್ಯಾಟಿಂಗ್​:


ಮೊದಲು ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 171 ರನ್ ಗಳಿಸಿತು. ಗ್ಲೆನ್ ಮ್ಯಾಕ್ಸ್ ವೆಲ್ (33 ಎಸೆತಗಳಲ್ಲಿ 54; 5 ಬೌಂಡರಿ, 3 ಸಿಕ್ಸರ್) ಮತ್ತು ನಾಯಕ ಫಾಫ್ ಡು ಪ್ಲೆಸಿಸ್ (44 ಎಸೆತಗಳಲ್ಲಿ 55; 3 ಬೌಂಡರಿ, 2 ಸಿಕ್ಸರ್) ಮತ್ತೊಮ್ಮೆ ತಂಡಕ್ಕೆ ಆಸರೆಯಾದರು. ಕೊನೆಯಲ್ಲಿ ಅನುಜ್ ರಾವತ್ (11 ಎಸೆತಗಳಲ್ಲಿ ಔಟಾಗದೆ 29; 3 ಬೌಂಡರಿ, 2 ಸಿಕ್ಸರ್) ಆಕ್ರಮಣಕಾರಿ ಆಟವಾಡಿದರು.


ಇದನ್ನೂ ಓದಿ: IPL 2023: ಕೊಹ್ಲಿ ಬಿಟ್ರೂ ಫ್ಯಾನ್ಸ್​ ಬಿಡ್ತಿಲ್ಲ, ವಿರಾಟ್ ಅಭಿಮಾನಿಗಳ ಅಬ್ಬರಕ್ಕೆ ಅಫ್ಘಾನ್​ ಬೌಲರ್​ ಸುಸ್ತು!


ಆಡಮ್ ಝಂಪಾ ಮತ್ತು ಆಸಿಫ್ ತಲಾ 2 ವಿಕೆಟ್ ಪಡೆದು ಮಿಂಚಿದರು. ವಿಕೆಟ್ ನಿಧಾನವಾಗಿದ್ದ ಕಾರಣ ಡು ಪ್ಲೆಸಿಸ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಕೊಹ್ಲಿ (18) ಮತ್ತು ಡು ಪ್ಲೆಸಿಸ್ ಆರ್‌ಸಿಬಿ ಇನ್ನಿಂಗ್ಸ್ ಆರಂಭಿಸಿದರು. ಆರಂಭದಲ್ಲಿ ಇಬ್ಬರೂ ಬಹಳ ಎಚ್ಚರಿಕೆಯಿಂದ ಆಡಿದರು. ರನ್‌ಗಳು ವೇಗವಾಗಿ ಬರಲಿಲ್ಲ. ಇವರಿಬ್ಬರು 50 ರನ್ ಸೇರಿಸಿದ ಬಳಿಕ ಕೊಹ್ಲಿ ಔಟಾದರು.




ಒನ್ ಡೌನ್ ನಲ್ಲಿ ಬ್ಯಾಟಿಂಗ್ ಗೆ ಬಂದ ಗ್ಲೆನ್ ಮ್ಯಾಕ್ಸ್ ವೆಲ್ ಬಂದ ತಕ್ಷಣ aಬ್ಬರಿಸಲು ಆರಂಭಿಸಿದರು. ಅವರು ವಿಶೇಷವಾಗಿ ಸ್ಪಿನ್ನರ್‌ಗಳ ವಿರುದ್ಧ ಆಟವಾಡಿದರು. ಇನ್ನೊಂದು ತುದಿಯಲ್ಲಿ ಅಲ್ಲಿಯವರೆಗೆ ನಿಧಾನವಾಗಿ ಆಡುತ್ತಿದ್ದ ಡು ಪ್ಲೆಸಿಸ್ ಕೂಡ ವೇಗ ಹೆಚ್ಚಿಸಿದರು. ಇದರೊಂದಿಗೆ RCB ಸ್ಕೋರ್ ಬೋರ್ಡ್ ವೇಗವಾಗಿ ಚಲಿಸಿತು. ಇವರಿಬ್ಬರು ಎರಡನೇ ವಿಕೆಟ್‌ಗೆ 69 ರನ್ ಸೇರಿಸಿದ ನಂತರ ಡು ಪ್ಲೆಸಿಸ್ ಔಟಾದರು. ಲೊಮ್ರೋರ್ (1) ಮತ್ತು ದಿನೇಶ್ ಕಾರ್ತಿಕ್ (0) ಬೇಗನೇ ಔಟಾದರು. ಗ್ಲೆನ್ ಮ್ಯಾಕ್ಸ್‌ವೆಲ್ ಕೂಡ ನಿರ್ಣಾಯಕ ಸಮಯದಲ್ಲಿ ಸ್ವಿಚ್ ಹಿಟ್‌ಗೆ ಹೋಗಿ ಕ್ಲೀನ್ ಬೌಲ್ಡ್ ಆದರು.

First published: