• ಹೋಂ
 • »
 • ನ್ಯೂಸ್
 • »
 • ಕ್ರೀಡೆ
 • »
 • LSG vs RR: ಟಾಸ್​ ಗೆದ್ದ ರಾಜಸ್ಥಾನ್​ ಬೌಲಿಂಗ್​ ಆಯ್ಕೆ, ಸಂಜು ಗೆಲುವಿನ ಓಟಕ್ಕೆ ಬ್ರೇಕ್​ ಹಾಕ್ತಾರಾ ರಾಹುಲ್?

LSG vs RR: ಟಾಸ್​ ಗೆದ್ದ ರಾಜಸ್ಥಾನ್​ ಬೌಲಿಂಗ್​ ಆಯ್ಕೆ, ಸಂಜು ಗೆಲುವಿನ ಓಟಕ್ಕೆ ಬ್ರೇಕ್​ ಹಾಕ್ತಾರಾ ರಾಹುಲ್?

ಲಕ್ನೋ - ರಾಜಸ್ಥಾನ್​

ಲಕ್ನೋ - ರಾಜಸ್ಥಾನ್​

LSG vs RR: ಟಾಸ್​ ಆಗಿದ್ದು, ಟಾಸ್​ ಗೆದ್ದ ರಾಜಸ್ಥಾನ್​ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್​ ಮೊದಲು ಬೌಲಿಂಗ್​ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ಲಕ್ನೋ ಜೈಂಟ್ಸ್ ಬ್ಯಾಟಿಂಗ್​ ಆರಂಭಿಸಲಿದೆ.

 • Share this:

ಇಂಡಿಯನ್ ಪ್ರೀಮಿಯರ್ ಲೀಗ್ 2023ರ (IPl 2023) 26ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವು ಲಕ್ನೋ ಸೂಪರ್ ಜೈಂಟ್ಸ್ (RR vs LSG) ಅನ್ನು ಎದುರಿಸಲಿದೆ. ಸಂಜು ಸ್ಯಾಮ್ಸನ್ (Sanju Samson) ತಂಡದ ಮುಂದೆ ಕೆಎಲ್ ರಾಹುಲ್ (KL Rahul) ಪಡೆ ಕಣಕ್ಕಿಳಿಯಲಿದೆ. ಪಾಯಿಂಟ್ ಪಟ್ಟಿಯಲ್ಲಿ ಮೊದಲ ಮತ್ತು ಎರಡನೇ ಸ್ಥಾನದಲ್ಲಿರುವ ತಂಡಗಳ ನಡುವೆ ಈ ಪಂದ್ಯ ನಡೆಯಲಿದೆ. ರಾಜಸ್ಥಾನ ತಂಡ ಜೈಪುರದ ತನ್ನ ತವರು ಮೈದಾನ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ (Sawai Mansingh Stadium) ಆಡಲಿದೆ. ಈಗಾಗಲೇ ಟಾಸ್​ ಆಗಿದ್ದು, ಟಾಸ್​ ಗೆದ್ದ ರಾಜಸ್ಥಾನ್​ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್​ ಮೊದಲು ಬೌಲಿಂಗ್​ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ಲಕ್ನೋ ಜೈಂಟ್ಸ್ ಬ್ಯಾಟಿಂಗ್​ ಆರಂಭಿಸಲಿದೆ.


ಐಪಿಎಲ್​ 2023 ಅಂಕಪಟ್ಟಿ:


ಇಂಡಿಯನ್ ಪ್ರೀಮಿಯರ್ ಲೀಗ್‌ನ ಈ ಸೀಸನ್‌ನಲ್ಲಿ ಕಳೆದ ಸೀಸನ್‌ನಲ್ಲಿ ರನ್ನರ್ ಅಪ್ ಆಗಿದ್ದ ತಂಡ ತನ್ನ ಹೆಸರಿಗೆ ತಕ್ಕಂತೆ ಪ್ರದರ್ಶನ ನೀಡುತ್ತಿದೆ. 5 ಪಂದ್ಯಗಳನ್ನು ಆಡಿದ ರಾಜಸ್ಥಾನ ತಂಡ ಒಟ್ಟು 4 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಅದೇ ಸಮಯದಲ್ಲಿ, ಲಕ್ನೋ ತಂಡದ ಖಾತೆಯಲ್ಲಿ 5 ಪಂದ್ಯಗಳನ್ನು ಆಡಿದ ನಂತರ, 3 ಗೆಲುವು ಕಂಡಿದೆ. ಕಳೆದ ಮೂರು ಪಂದ್ಯಗಳಲ್ಲಿ ರಾಜಸ್ಥಾನ ತಂಡ ಗೆಲುವು ಸಾಧಿಸಿದೆ. ಕಳೆದ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಲಕ್ನೋ ಸೋಲನ್ನು ಎದುರಿಸಬೇಕಾಯಿತು.ಪಿಚ್ ವರದಿ:


ರಾಜಸ್ಥಾನದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ಇಂದಿನ ಪಂದ್ಯ ನಡೆಯಲಿದ್ದು, ಈ ಮೈದಾನ ಬ್ಯಾಟಿಂಗ್​ ಹಾಗೂ ಬೌಲಿಂಗ್​ ಎರಡಕ್ಕೂ ಹೆಚ್ಚು ಸಹಕಾರಿ ಆಗಲಿದೆ. ಹುಲ್ಲಿನ ಹೊದಿಕೆ ಇರುವುದರಿಂದ ಸಾಕಷ್ಟು ಬೌನ್ಸ್ ಬರುತ್ತದೆ. ಆಟದ ಮೊದಲಾರ್ಧ ಸ್ಪಿನ್ನರ್‌ಗಳಿಗೆ ಸಹಾಯಕವಾಗಿದೆ. ಆದರೂ ಒಂದು ಉತ್ತಮ ಸ್ಕೋರಿಂಗ್​ ಪಂದ್ಯವನ್ನು ವೀಕ್ಷಿಸಬಹುದು.


ಇದನ್ನೂ ಓದಿ: IPL 2023: ಚೆನ್ನೈ ವಿರುದ್ಧದ ಪಂದ್ಯದಲ್ಲಿ RCB ತಂಡಕ್ಕೆ ಮತ್ತೆ ಮೋಸ! ಗೆಲ್ಲೋ ಪಂದ್ಯ ಸೋಲಲು ಇದೇ ಕಾರಣವಾಯ್ತಾ?


ರಾಜಸ್ಥಾನ್ ರಾಯಲ್ಸ್ ತನ್ನ ಮೊದಲ ಎರಡು ತವರು ಪಂದ್ಯಗಳನ್ನು ಗುವಾಹಟಿಯಲ್ಲಿ ಆಡಿತು ಮತ್ತು ತಂಡವು ಪ್ರಸ್ತುತ ಋತುವಿನಲ್ಲಿ ಮೊದಲ ಬಾರಿಗೆ ತಮ್ಮ ತವರು ಮೈದಾನ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ಆಡಲಿದೆ. ಇಲ್ಲಿನ ಮೈದಾನ ದೊಡ್ಡದಾಗಿದ್ದು, ಸ್ಪಿನ್ನರ್ ಗಳಿಗೆ ಹೆಚ್ಚು ಸಹಾಯಕವಾಗಿದೆ. ಇದರಿಂದ ನಾನು ಖುಷಿಯಾಗಿದ್ದೇನೆ ಎಂದು ಯುಜ್ವೇಂದ್ರ ಚಹಾಲ್ ಹೇಳಿದ್ದಾರೆ.


ರಾಜಸ್ಥಾನ್​ ರಾಯಲ್ಸ್ - ಲಕ್ನೋ ಸೂಪರ್​ ಜೈಂಟ್ಸ್ ಪ್ಲೇಯಿಂಗ್​ 11:


ರಾಜಸ್ಥಾನ ರಾಯಲ್ಸ್‌ನ ಪ್ಲೇಯಿಂಗ್​ 11: ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ನಾಯಕ, ವಿಕೆಟ್ ಕೀಪರ್), ರಿಯಾನ್ ಪರಾಗ್, ಶಿಮ್ರಾನ್ ಹೆಟ್ಮೆಯರ್, ಧ್ರುವ ಜುರೆಲ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಜೇಸನ್ ಹೋಲ್ಡರ್, ಸಂದೀಪ್ ಶರ್ಮಾ, ಯುಜ್ವೇಂದ್ರ ಚಾಹಲ್.

top videos


  ಲಕ್ನೋ ಸೂಪರ್​ ಜೈಂಟ್ಸ್ ಪ್ಲೇಯಿಂಗ್​ 11: ಕೆಎಲ್ ರಾಹುಲ್ (ನಾಯಕ), ಕೈಲ್ ಮೇಯರ್ಸ್, ದೀಪಕ್ ಹೂಡಾ, ಮಾರ್ಕಸ್ ಸ್ಟೊಯಿನಿಸ್, ಕೃನಾಲ್ ಪಾಂಡ್ಯ, ನಿಕೋಲಸ್ ಪೂರನ್ (ವಿಕೆಟ್ ಕೀಪರ್), ಆಯುಷ್ ಬಡೋನಿ, ಅವೇಶ್ ಖಾನ್, ಯುದ್ಧವೀರ್ ಸಿಂಗ್ ಚರಕ್, ನವೀನ್-ಉಲ್-ಹಕ್, ರವಿ ಬಿಷ್ಣೋಯ್.

  First published: