ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ (KKR vs RR) ತಂಡಗಳು ಐಪಿಎಲ್ 2023ರ (IPl 2023) 12ನೇ ಲೀಗ್ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ. ಉಭಯ ತಂಡಗಳು ಈ ಪಂದ್ಯವನ್ನು ಗೆದ್ದು ಅಗ್ರ 4 ರೊಳಗೆ ಪ್ರವೇಶಿಸಲು ಸಿದ್ಧವಾಗಿದೆ. ಎರಡೂ ತಂಡಗಳು 10-10 ಅಂಕಗಳನ್ನು ಹೊಂದಿವೆ. ಕಳೆದ 3 ಪಂದ್ಯಗಳಿಂದ ರಾಜಸ್ಥಾನ್ ರಾಯಲ್ಸ್ ಸೋಲನ್ನು ಎದುರಿಸಬೇಕಾಗಿದೆ. ತವರಿನಲ್ಲಿ ಕೆಕೆಆರ್ ತಂಡವನ್ನು ಸೋಲಿಸುವುದು ರಾಜಸ್ಥಾನಕ್ಕೆ ಸುಲಭವಲ್ಲ. ಈಗಾಗಲೇ ಟಾಸ್ ಆಗಿದ್ದು, ಟಾಸ್ ಗೆದ್ದ, ರಾಜಸ್ಥಾನ್ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಈ ಪಂದ್ಯ ಉಭಯ ತಂಡಗಳಿಗೆ ಮಾತ್ರವಲ್ಲದೇ RCB ತಂಡಕ್ಕೂ ಮುಖ್ಯವಾಗಿದೆ.
ಆರ್ಸಿಬಿ ತಂಡಕ್ಕೆ ಕೆಕೆಆರ್ ಗೆಲ್ಲಬೇಕು:
ಹೌದು, ಇಂದಿನ ಪಂದ್ಯವು ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳಿಗೆ ಅತ್ಯಂತ ಮಹತ್ವದ್ದಾಗಿದೆ. ಅದರಲ್ಲಿಯೂ ಉಭಯ ತಂಡಗಳಿಗೆ ಈ ಪಂದ್ಯ ಗೆಲ್ಲುವ ಮೂಲಕ ಪ್ಲೇಆಫ್ ರೇಸ್ನಲ್ಲಿ ಜೀವಂತವಾಗಿರಲು ಸಿದ್ಧವಾಗಿದೆ. ಆದರೆ ಇತ್ತ ಇಂದಿನ ಪಂದ್ಯದಲ್ಲಿ ಕೋಲ್ಕತ್ತಾ ತಂಡ ಗೆದ್ದರೆ ಕೋಲ್ಕತ್ತಾಕ್ಕಿಂತ ಹೆಚ್ಚು ಆರ್ಸಿಬಿ ತಂಡಕ್ಕೆ ಲಾಭವಾಗಲಿದೆ. ಹೌದು, 5ನೇ ಸ್ಥಾನದಲ್ಲಿರುವ ರಾಜಸ್ಥಾನ್ ತಂಡ ಇಂದು ಗೆದ್ದರೆ 4ನೇ ಸ್ಥಾನಕ್ಕೇರಲಿದೆ. ಒಂದು ವೇಳೆ ಸೋತರೆ ಆರ್ಸಿಬಿ ಪ್ಲೇಆಫ್ ಕನಸು ಇನ್ನಷ್ಟು ಜೀವಂತವಾಗಿರಲಿದೆ. ಕಾರಣ ಆರ್ಸಿಬಿ ಮುಂದಿನ ಎದುರಾಳಿ ರಾಜಸ್ಥಾನ್ ತಂಡವಾಗಿದೆ.
ಅಲ್ಲದೇ ರಾಜಸ್ಥಾನ್ ತಂಡವು ಕೆಕೆಆರ್ ಮತ್ತು ಆರ್ಸಿಬಿ ವಿರುದ್ಧ ಸೋತರೆ ಪ್ಲೇಆಫ್ ರೇಸ್ನಿಮದ ಹೊರಬೀಳಲಿದೆ. ಆಗ ಆರ್ಸಿಬಿ ಮುಂದಿನ ಪಂದ್ಯ ಗೆದ್ದರೆ ನೇರವಾಗಿ 4ನೇ ಸ್ಥಾನಕ್ಕೇರಲಿದೆ. ಇನ್ನೂ ಚೆನ್ನೈ ತಂಡದ ಮುಂದಿನ ಎದುರಾಳಿ ಕೆಕೆಆರ್ ಆಗಿದ್ದು, ಕೆಕೆಆರ್ ಇಂದು ರಾಜಸ್ಥಾನ್ ವಿರುದ್ಧ ಗೆದ್ದು ಚೆನ್ನೈ ವಿರುದ್ಧ ಸೋತರೆ ಆರ್ಸಿಬಿ ತಂಡಕ್ಕೆ ದೊಡ್ಡ ವರದಾನವಾಗಲಿದೆ. ಒಟ್ಟಾರೆಯಾಗಿ ಆರ್ಸಿಬಿ ಪ್ಲೇಆಫ್ ಆಸೆ ಜೀವಂತವಾಗಿರಲು ಇಂದು ಆರ್ಆರ್ ವಿರುದ್ಧ ಕೆಕೆಆರ್ ಗೆಲ್ಲಬೇಕೆಕಾಗಿದೆ.
ಇದನ್ನೂ ಓದಿ: IPL 2023: ಆ ಬೌಲರ್ನನ್ನು ತಂಡದಿಂದ ಕೈಬಿಡಿ, ಆರ್ಸಿಬಿ ವಿರುದ್ಧ ಫ್ಯಾನ್ಸ್ ಗರಂ
ಉಭಯ ತಂಡಗಳ ಹೆಡ್ ಟು ಹೆಡ್:
ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಅಂಕಿಅಂಶಗಳ ಬಗ್ಗೆ ನೋಡುವುದಾದರೆ, ಉಭಯ ತಂಡಗಳ ನಡುವೆ ಇದುವರೆಗೆ 27 ಪಂದ್ಯಗಳು ನಡೆದಿದ್ದು, ಇದರಲ್ಲಿ ಕೋಲ್ಕತ್ತಾ 14 ಪಂದ್ಯಗಳನ್ನು ಗೆದ್ದಿದ್ದರೆ, ರಾಜಸ್ಥಾನ 12 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಸದ್ಯಕ್ಕೆ ಕೆಕೆಆರ್ ಸ್ಪಿನ್ನರ್‌ಗಳು ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಮಿಸ್ಟರಿ ಸ್ಪಿನ್ನರ್‌ಗಳಾದ ವರುಣ್ ಚಕ್ರವರ್ತಿ ಮತ್ತು ಸುಯ್ಯಾಶ್ ಶರ್ಮಾ ಸ್ಪಿನ್ ವಿಭಾಗದಲ್ಲಿ ಪ್ರಸ್ತುತ ಉತ್ತಮ ಬೌಲಿಂಗ್ ಮಾಡುತ್ತಿದ್ದಾರೆ. ಸುನೀಲ್ ನರೇನ್ ಇದುವರೆಗೆ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ.
ಐಪಿಎಲ್ 2023 ಅಂಕಪಟ್ಟಿ:
ಪಾಯಿಂಟ್ಸ್ ಪಟ್ಟಿಯಲ್ಲಿ ರಾಜಸ್ಥಾನ್ ರಾಯಲ್ಸ್ ಬಲಿಷ್ಠವಾಗಿದೆ. 11 ಪಂದ್ಯಗಳಲ್ಲಿ ಒಟ್ಟು 5 ಪಂದ್ಯಗಳನ್ನು ಗೆದ್ದಿದ್ದಾರೆ. 10 ಅಂಕಗಳೊಂದಿಗೆ 5ನೇ ಸ್ಥಾನದಲ್ಲಿದ್ದಾರೆ. ಅದೇ ಸಮಯದಲ್ಲಿ, ಕೋಲ್ಕತ್ತಾ ತಂಡವು ರಾಯಲ್ಸ್‌ಗಿಂತ ಒಂದು ಸ್ಥಾನ ಕೆಳಗೆ ಅಂದರೆ ಆರನೇ ಸ್ಥಾನದಲ್ಲಿದೆ. ಅವರ ಖಾತೆಯಲ್ಲಿ 10 ಅಂಕಗಳೂ ಇವೆ. ಆದರೆ ಕಳಪೆ ರನ್ ರೇಟ್ ನಿಂದಾಗಿ ರಾಜಸ್ಥಾನಕ್ಕಿಂತ ಕೆಳಗಿದ್ದಾರೆ.
ಕೋಲ್ಕತ್ತಾ - ರಾಜಸ್ಥಾನ್ ಪ್ಲೇಯಿಂಗ್ 11:
ಕೋಲ್ಕತ್ತಾ ನೈಟ್ ರೈಡರ್ಸ್ ಪ್ಲೇಯಿಂಗ್ 11: ರಹಮಾನುಲ್ಲಾ ಗುರ್ಬಾಜ್ (WK), ಜೇಸನ್ ರಾಯ್, ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ (ನಾಯಕ), ಆಂಡ್ರೆ ರಸೆಲ್, ರಿಂಕು ಸಿಂಗ್, ಸುನಿಲ್ ನರೈನ್, ಶಾರ್ದೂಲ್ ಠಾಕೂರ್, ಅನುಕೂಲ್ ರಾಯ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ.
ರಾಜಸ್ಥಾನ ರಾಯಲ್ಸ್ ಪ್ಲೇಯಿಂಗ್ 11: ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (ವಿಕೆ/ನಾಯಕ), ಜೋ ರೂಟ್, ಧ್ರುವ್ ಜುರೆಲ್, ಶಿಮ್ರಾನ್ ಹೆಟ್ಮೆಯರ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಸಂದೀಪ್ ಶರ್ಮಾ, ಕೆಎಂ ಆಸಿಫ್, ಯುಜ್ವೇಂದ್ರ ಚಾಹಲ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ