• Home
  • »
  • News
  • »
  • sports
  • »
  • RCB ಅಭಿಮಾನಿಗಳಿಗೆ ಗುಡ್​ ನ್ಯೂಸ್, IPL 2023ಗಾಗಿ ಆರ್​ಸಿಬಿ ಹೊಸ ಹಾಡು ಬಿಡುಗಡೆ

RCB ಅಭಿಮಾನಿಗಳಿಗೆ ಗುಡ್​ ನ್ಯೂಸ್, IPL 2023ಗಾಗಿ ಆರ್​ಸಿಬಿ ಹೊಸ ಹಾಡು ಬಿಡುಗಡೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

IPL 2023 RCB: ಐಪಿಎಲ್​ 2023ಕ್ಕೆ ಮುಂಚಿತವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೊಸ ಹಾಡನ್ನು ಬಿಡುಗಡೆ ಮಾಡಿದೆ. ಇದರಲ್ಲಿ ವಿರಾಟ್​ ಕೊಹ್ಲಿ ಸಹ ಕಾಣಿಸಿಕೊಂಡಿದ್ದು, ವಿಡಿಯೋ ಸಖತ್ ವೈರಲ್ ಆಗುತ್ತಿದೆ.

  • Share this:

ವಿರಾಟ್ ಕೊಹ್ಲಿ ಸದ್ಯ ಕ್ರಿಕೆಟ್ ಕ್ಷೇತ್ರದಿಂದ ದೂರವಿರಬಹುದು. ಆದರೆ ಚರ್ಚೆಯಲ್ಲಿ ಉಳಿದಿದ್ದಾರೆ. ಹೌದು, ಕೊಹ್ಲಿ (Virat Kohli) ಮ್ಯೂಸಿಕ್ ವಿಡಿಯೋದಲ್ಲಿ ಸಂಪೂರ್ಣ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋ ಐಪಿಎಲ್ (IPL) ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಸಂಬಂಧಿಸಿದೆ. RCB ಗಾಗಿ 'ನಯಾ ಶೇರ್' ಹೆಸರಿನ ಹೊಸ ಹಾಡನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಖ್ಯಾತ ರಾಪರ್ ಡಿವೈನ್ (Divine) ಮತ್ತು ಗಾಯಕಿ ಜೊನಿತಾ ಗಾಂಧಿ ಅವರೊಂದಿಗೆ ವಿರಾಟ್ ಕೊಹ್ಲಿ ಸಹ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋ RCB ಅಭಿಮಾನಿಗಳಿಗೆ ಸಖತ್​ ಸಂತಸ ನೀಡಿದ್ದು, ಸಖತ್ ವೈರಲ್ ಸಹ ಆಗುತ್ತಿದೆ.


ನಯಾ ಶೇರ್​ ವಿಡಿಯೋ ರಿಲೀಸ್:


2 ನಿಮಿಷ 23 ಸೆಕೆಂಡುಗಳ ಈ ವಿಡಿಯೋದಲ್ಲಿ ಕೊಹ್ಲಿ ರಾಪರ್ ಡಿವೈನ್ ಮತ್ತು ಜೊನಿತಾ ಗಾಂಧಿ ಅವರೊಂದಿಗೆ ಹಿಪ್ ಹಾಪ್ ಮಾಡುತ್ತಿರುವುದನ್ನು ಕಾಣಬಹುದು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ವಿಡಿಯೋವನ್ನು ತನ್ನ ಅಧಿಕೃತ ಯೂಟ್ಯೂಬ್ ಖಾತೆಯಲ್ಲಿ ಹಂಚಿಕೊಂಡಿದೆ. ಇದರೊಂದಿಗೆ ಶೀರ್ಷಿಕೆಯಲ್ಲಿ , 'ಇದು ನಿಮ್ಮದೇ ಹಾದಿಯನ್ನು ಆರಿಸಿಕೊಳ್ಳಲು ಮತ್ತು ನಿಮ್ಮದೇ ಆಟವನ್ನು ಆಡುವ ಸಮಯ‘ ಎಂದು ಬರೆದುಕೊಂಡಿದೆ. ಈ ವಿಡಿಯೋ ಆರ್‌ಸಿಬಿಯ ಯೂಟ್ಯೂಬ್ ಖಾತೆಯಿಂದ ಶೇರ್ ಆದ ತಕ್ಷಣ ವೈರಲ್ ಆಗಿದೆ. ಇಲ್ಲಿಯವರೆಗೆ ಲಕ್ಷಾಂತರ ಜನರು ಇದನ್ನು ನೋಡಿದ್ದಾರೆ ಮತ್ತು RCB ಅಭಿಮಾನಿಗಳು ಇದನ್ನು ತುಂಬಾ ಇಷ್ಟಪಟ್ಟಿದ್ದಾರೆ.
ಉತ್ತಮ ಆಟಗಾರನಾಗಲು ಬಯಸುವೆ:


ಈ ಸಂದರ್ಭದಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ, 'ನಾನು ಯಾವಾಗಲೂ ಉತ್ತಮ ಆಟಗಾರನಾಗಲು ಬಯಸುತ್ತೇನೆ. ಮೈದಾನದ ಒಳಗೆ ಅಥವಾ ಹೊರಗೆ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ಹಿಂದೆ ಸರಿಯುವುದಿಲ್ಲ. ನಾನು ಅದೇ ಮನೋಭಾವವನ್ನು ಅಳವಡಿಸಿಕೊಳ್ಳುತ್ತೇನೆ, ಅದು ನನಗೆ ಸಹಾಯ ಮಾಡುತ್ತದೆ‘ ಎಂದು ಹೇಳಿಕೊಂಡಿದ್ದಾರೆ.


ಐಪಿಎಲ್ ಪ್ರಶಸ್ತಿ ಮೇಲೆ ಆರ್‌ಸಿಬಿ ಕಣ್ಣು:


ಇದು ಹೊಸ ಯುಗ ಮತ್ತು ಹೊಸ ವರ್ಷವಾಗಿರಬಹುದು. ಆದರೆ, ಟ್ರೋಫಿ ಬರ ನೀಗಿಸುವತ್ತ ತಂಡದ ಗಮನವಿರುತ್ತದೆ. ಈ ವೀಡಿಯೋದಲ್ಲಿ ಕೊಹ್ಲಿ, ಯಾವುದೇ ಸಂದರ್ಭ ಬಂದರೂ ತಂಡವನ್ನು ಹುರಿದುಂಬಿಸುವಂತೆ ಅಭಿಮಾನಿಗಳಿಗೆ ಮನವಿ ಮಾಡುತ್ತಿರುವುದು ಕಂಡುಬಂದಿದೆ. IPL 2023ರಲ್ಲಿ ಆರ್​ಸಿಬಿ ತಂಡ ಚೊಚ್ಚಲ ಬಾರಿಗೆ ಪ್ರಶಸ್ತಿಗೆ ಮುತ್ತಿಕ್ಕಲು ಹವಣಿಸುತ್ತಿದೆ. ಇದರ ನಡುವೆ ವಿರಾಟ್ ಮತ್ತೆ ಫಾರ್ಮ್​ಗೆ ಬಂದಿರುವುದು ಆರ್‌ಸಿಬಿ ಪಾಲಿಗೆ ಉತ್ತಮ ವಿಷಯವಾಗಿದೆ.


ಇದನ್ನೂ ಓದಿ: RCB 2023: ಹೊಸ ಜೋಶ್, ಹೊಸ ಲೋಗೋ ಜೊತೆ ಐಪಿಎಲ್‌ಗೆ ಬರಲಿದೆ RCB! ಈ ಸಲನಾದ್ರೂ ಕಪ್ ನಮ್ಮದಾಗಲಿ ಅಂತಿದ್ದಾರೆ ಫ್ಯಾನ್ಸ್!


ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಕೊಹ್ಲಿ ಟೀಂ ಇಂಡಿಯಾದಿಂದ ದೂರವಿದ್ದಾರೆ. ಆದರೆ ಮುಂದಿನ ವಾರ ಆರಂಭವಾಗಲಿರುವ 3 ಏಕದಿನ ಸರಣಿಯಲ್ಲಿ ಕೊಹ್ಲಿ ಮತ್ತೆ ಕಂಬ್ಯಾಕ್​ ಮಾಡಲಿದ್ದಾರೆ. ಸದ್ಯ ವಿರಾಮದಲ್ಲಿರುವ ಅವರು ಪತ್ನಿ ಅನುಷ್ಕಾ ಶರ್ಮಾ ಮತ್ತು ಮಗಳು ವಾಮಿಕಾ ಅವರೊಂದಿಗೆ ರಜೆಯಲ್ಲಿದ್ದಾರೆ.Published by:shrikrishna bhat
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು