ಮುಂದಿನ ವರ್ಷ ಅಂದರೆ 2023ರಿಂದ ಇಂಡಿಯನ್ ಪ್ರೀಮಿಯರ್ ಲೀಗ್‌ನ (IPL 2023) ಸ್ವರೂಪದಲ್ಲಿ ಬದಲಾವಣೆಯಾಗಲಿದೆ. ಕೊರೋನಾ ಕಾರಣದಿಂದ ಐಪಿಎಲ್ ದೇಶಿಯ ಮಟ್ಟದಲ್ಲಿ ನಡೆಯುತ್ತಿರಲಿಲ್ಲ. 2 ಸೀಸನ್ಗಳು ದುಬೈನಲ್ಲಿ ನಡೆದಿತ್ತು. ಮತ್ತು ಕಳೆದ ಸೀಸನ್ ಮುಂಬೈ ಸೇರಿದಂತೆ ಆಯ್ದ ಜಾಗದಲ್ಲಿ ಆಯೋಜಿಸಲಾಗಿತ್ತು. ಆದರೆ ಇದೀಗ ಕೊರೋನಾ ತಗ್ಗಿರುವ ಕಾರಣ ಐಪಿಎಲ್ 2023 ತನ್ನ ಹಳೆಯ ಸ್ವರೂಪಕ್ಕೆ ಮರಳುತ್ತಿದೆ. ಇದನ್ನು ಬಿಸಿಸಿಐ (BCCI) ಅಧ್ಯಕ್ಷ ಸೌರವ್ ಗಂಗೂಲಿ (Sourav Ganguly) ಖಚಿತಪಡಿಸಿದ್ದಾರೆ. 2023ರಲ್ಲಿ, IPL 16ನೇ ಸೀಸನ್ ಭಾರತದ ಎಲ್ಲಾ ಮೈದಾನಗಳಲ್ಲಿ ನಡೆಯಲಿದೆ. ಅಂದರೆ, ಎಲ್ಲಾ 10 ತಂಡಗಳು ತಮ್ಮ ಹೋಂ ಪಿಚ್ನಲ್ಲಿ ಮತ್ತು ಎದುರಾಳಿ ತಂಡದ ಮೈದಾನದಲ್ಲಿ ಪಂದ್ಯಗಳನ್ನು ಆಡುತ್ತವೆ. ಈ ಬಗ್ಗೆ ಗಂಗೂಲಿ ಎಲ್ಲಾ ಕ್ರಿಕೆಟ್ ಸಂಸ್ಥೆಗಳು ಮತ್ತು ಮಧ್ಯಸ್ಥಗಾರರಿಗೆ ತಿಳಿಸಿದ್ದಾರೆ.
ವಿದೇಶಗಳಲ್ಲಿ ಆಯೋಜನೆಗೊಂಡಿದ್ದ ಐಪಿಎಲ್:
ಹೌದು, ಕೊರೋನಾ ಕಾರಣ 2020ರಲ್ಲಿ ಯುಎಇ, ದುಬೈ, ಶಾರ್ಜಾ ಮತ್ತು ಅಬುಧಾಬಿಯ ಮೂರು ನಗರಗಳಲ್ಲಿ ಪ್ರೇಕ್ಷಕರಿಲ್ಲದೆ ಐಪಿಎಲ್ ಅನ್ನು ನಡೆಸಲಾಯಿತು. ಅದೇ ಸಮಯದಲ್ಲಿ, 2021ರಲ್ಲಿ ಐಪಿಎಲ್ ಅನ್ನು ಭಾರತದಲ್ಲಿ ಆಯೋಜಿಸಲಾಯಿತು. ಆದರೆ, ನಾಲ್ಕು ನಗರಗಳಾದ ದೆಹಲಿ, ಅಹಮದಾಬಾದ್, ಮುಂಬೈ ಮತ್ತು ಚೆನ್ನೈನಲ್ಲಿ ಪಂದ್ಯಗಳು ನಡೆದವು. IPL-2022 ರ ಲೀಗ್ ಹಂತದ ಎಲ್ಲಾ ಪಂದ್ಯಗಳು ಮುಂಬೈ ಮತ್ತು ಪುಣೆಯಲ್ಲಿ ನಡೆದವು.
ಇದರ ಜೊತೆಗೆ, ಕ್ವಾಲಿಫೈಯರ್, ಎಲಿಮಿನೇಟರ್ ಮತ್ತು ಫೈನಲ್ ಪಂದ್ಯಗಳನ್ನು ಕೋಲ್ಕತ್ತಾ ಮತ್ತು ಅಹಮದಾಬಾದ್‌ನಲ್ಲಿ ಆಡಲಾಯಿತು. ಆದರೆ, ಈಗ ಕೊರೊನಾ ಮಹಾಮಾರಿಯನ್ನು ಸಾಕಷ್ಟು ಪ್ರಮಾಣದಲ್ಲಿ ನಿಯಂತ್ರಿಸಲಾಗಿದೆ. ಈ ಕಾರಣಕ್ಕಾಗಿ, ಈ ಲೀಗ್ ಹಳೆಯ ಮಾದರಿಯ ತವರು ಮೈದಾನದಲ್ಲಿ ಮತ್ತು ಎದುರಾಳಿ ತಂಡದ ಮೈದಾನದಲ್ಲಿ ನಡೆಯಲಿದೆ.
ಇದನ್ನೂ ಓದಿ: Mohammad Amir: ಜೈಲಿನಲ್ಲಿ ಪ್ರೀತಿ, ವಕೀಲೆ ಜೊತೆ ಮದುವೆ; ಮೂರನೇ ಬಾರಿಗೆ ತಂದೆಯಾದ ಕ್ರಿಕೆಟಿಗ!
2023ರಲ್ಲಿ ಐಪಿಎಲ್ ತವರು ಮೈದಾನದಲ್ಲಿ ನಡೆಯಲಿದೆ:
ಇನ್ನು, ಗಂಗೂಲಿ ರಾಜ್ಯ ಅಸೋಸಿಯೇಷನ್‌ಗೆ ಕಳುಹಿಸಿರುವ ಸಂದೇಶದಲ್ಲಿ, ‘ಮುಂದಿನ ವರ್ಷದಿಂದ ತವರು ನೆಲದಲ್ಲಿ ಮತ್ತು ಎದುರಾಳಿ ತಂಡದ ಮೈದಾನದಲ್ಲಿ ಪಂದ್ಯಗಳನ್ನು ಆಡುವ ಮಾದರಿಯಲ್ಲಿ ಐಪಿಎಲ್ ಆಯೋಜಿಸಲಾಗುವುದು. ಎಲ್ಲಾ 10 ತಂಡಗಳು ತಮ್ಮ ತವರು ಪಂದ್ಯಗಳನ್ನು ತಮ್ಮ ಗೊತ್ತುಪಡಿಸಿದ ಸ್ಥಳದಲ್ಲಿ ಆಡುತ್ತವೆ‘ ಎಂದು ತಿಳಿಸಿದ್ದಾರಂತೆ.
ಆರ್ಸಿಬಿ ಅಭಿಮಾನಿಗಳಿಗೆ ಗುಡ್ ನ್ಯೂಸ್:
ಕೊರೋನಾ ಕಾರಣ ಕಳೆದ 2 ಸೀಸನ್ಗಳು ಬೆಂಗಳೂರಿನಲ್ಲಿ ನಡೆಯಲಿಲ್ಲ. ಇದರಿಂದಾಗಿ ಆರ್ಸಿಬಿ ಅಭಿಮಾನಿಗಳಿಗೆ ತೀರ್ವ ನಿರಾಸೆ ಉಂಟಾಗಿತ್ತು. ಆದರೆ 2023 ಐಪಿಎಲ್ ಎಲ್ಲಾ ತಂಡಗಳ ತವರಿನಲ್ಲಿಯೂ ನಡೆಯುವ ಕಾರಣ ಆರ್ಸಿಬಿ ಪಂದ್ಯಗಳು ಬೆಂಗಳೂರಿನಲ್ಲಿ ನಡೆಯಲಿದೆ. ಇದಿಂದಾಗಿ 2ವರ್ಷಗಳ ನಂತರ ಅಭಿಮಾನಿಗಳಿಗೆ ತಮ್ಮ ಮೆಚ್ಚಿನ ತಂಡವನ್ನು ಚಿಯರ್ಸ್ ಮಾಡುವ ಅವಕಾಶ ದೊರಕುತ್ತಿದೆ.
ಇದನ್ನೂ ಓದಿ: IND vs AUS: ನಾಳೆ ಭಾರತ-ಆಸ್ಟ್ರೇಲಿಯಾ 2ನೇ ಪಂದ್ಯ, ಡು ಆರ್ ಡೈ ಪಂದ್ಯದಲ್ಲಿ ಟೀಂ ಇಂಡಿಯಾ ಪ್ಲೇಯಿಂಗ್ 11
2023ರಲ್ಲಿ ಮಹಿಳಾ ಐಪಿಎಲ್:
BCCI 2020 ರಿಂದ ಮೊದಲ ಬಾರಿಗೆ ತನ್ನ ಸಂಪೂರ್ಣ ದೇಶೀಯ ಋತುವನ್ನು ಆಯೋಜಿಸುತ್ತಿದೆ, ತಂಡಗಳು ಹಳೆಯ ಮಾದರಿಯ ತವರು ಮತ್ತು ಎದುರಾಳಿ ಮೈದಾನದಲ್ಲಿ ಆಡುತ್ತವೆ. ಇದಲ್ಲದೆ, ಮುಂದಿನ ವರ್ಷದ ಆರಂಭದಲ್ಲಿ ಬಹುನಿರೀಕ್ಷಿತ ಮಹಿಳಾ ಐಪಿಎಲ್ ಅನ್ನು ಆಯೋಜಿಸಲು ಬಿಸಿಸಿಐ ಯೋಜಿಸುತ್ತಿದೆ. ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಮಹಿಳಾ ಟಿ20 ವಿಶ್ವಕಪ್ ನಂತರ ಮಾರ್ಚ್‌ನಲ್ಲಿ ಮಹಿಳಾ ಐಪಿಎಲ್ ಆಯೋಜಿಸಬಹುದು ಎಂದು ವರದಿಯಾಗಿದೆ.
ಐಪಿಎಲ್ ಜೊತೆಗೆ ಮಂಡಳಿಯು ಬಾಲಕಿಯರಿಗಾಗಿ 15 ವರ್ಷದೊಳಗಿನ ಪಂದ್ಯಾವಳಿಯನ್ನು ಸಹ ಪ್ರಾರಂಭಿಸುತ್ತದೆ. ನಾವು ಈ ಪಂದ್ಯಾವಳಿಯನ್ನು ಹುಡುಗಿಯರಿಗಾಗಿ ಪ್ರಾರಂಭಿಸುತ್ತೇವೆ ಎಂದು ನಮಗೆ ಸಂತೋಷವಾಗಿದೆ. ನಮ್ಮ ರಾಷ್ಟ್ರೀಯ ತಂಡವು ಉತ್ತಮ ಪ್ರದರ್ಶನ ನೀಡುತ್ತಿದೆ ಮತ್ತು ಈ ಪಂದ್ಯಾವಳಿಯು ನಮ್ಮ ಹುಡುಗಿಯರಿಗೆ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಲು ದಾರಿ ಮಾಡಿಕೊಡಲಿದೆ ಎಂದು ಗಂಗೂಲಿ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ