• Home
  • »
  • News
  • »
  • sports
  • »
  • IPL 2023: ಐಪಿಎಲ್​ 2023ರ ಹರಾಜಿನಲ್ಲಿ ಈ ಆಟಗಾರರು ಮಾರಾಟವಾಗೋದು ಡೌಟ್​ ಅಂತೆ!

IPL 2023: ಐಪಿಎಲ್​ 2023ರ ಹರಾಜಿನಲ್ಲಿ ಈ ಆಟಗಾರರು ಮಾರಾಟವಾಗೋದು ಡೌಟ್​ ಅಂತೆ!

IPL 2023

IPL 2023

IPL 2023: ಐಪಿಎಲ್ ಫ್ರಾಂಚೈಸಿಗಳು 16ನೇ (IPL 2023) ಆವೃತ್ತಿಯ ಲಾಭದಾಯಕ ಟಿ20 (T20 Cricket) ಪಂದ್ಯಾವಳಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈಗಾಗಲೇ ಹೊಸತನಕ್ಕೆ ನಾಂದಿ ಹಾಡಿದೆ.

  • Share this:

ಐಪಿಎಲ್ ಫ್ರಾಂಚೈಸಿಗಳು 16ನೇ (IPL 2023) ಆವೃತ್ತಿಯ ಲಾಭದಾಯಕ ಟಿ20 (T20 Cricket) ಪಂದ್ಯಾವಳಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈಗಾಗಲೇ ಹೊಸತನಕ್ಕೆ ನಾಂದಿ ಹಾಡಿದೆ. ತಮ್ಮ ತಂಡಗಳನ್ನು ನವೀಕರಣಗೊಳಿಸುವ ನಿಟ್ಟಿನಲ್ಲಿ ಕೆಲ ಆಟಗಾರರನ್ನು ಕೈಬಿಟ್ಟಿವೆ. ಆದರೆ ಡ್ವೇನ್ ಬ್ರಾವೋ (Dwayne Bravoಮತ್ತು ಕೇನ್ ವಿಲಮ್ಸನ್ (Kane Williamson) ಅವರಂತಹ ಉತ್ತಮ ಆಟಗಾರರನ್ನು ತಂಡದಿಂದ ಹೊರಹಾಕಿರುವುದು ಅಭಿಮಾನಿಗಳಲ್ಲಿ ಆಯ್ಕೆಯ ಅಪನಂಬಿಕೆಯನ್ನು ಹುಟ್ಟುಹಾಕಿದೆ. ಬಿಡುಗಡೆಯಾದ ಆಟಗಾರರ ಪಟ್ಟಿಯು ಕಡಿಮೆ ಸ್ವರೂಪದ ಆಟಗಾರರನ್ನು ಒಳಗೊಂಡಿದ್ದು ಅವರಲ್ಲಿ ಕೆಲವರು IPL 2023 ಹರಾಜಿನಲ್ಲಿ ಹೆಚ್ಚಿನ ಬೇಡಿಕೆಯನ್ನು ನಿರೀಕ್ಷಿಸುತ್ತಾರೆ. ಫ್ರಾಂಚೈಸಿಗಳಿಂದ ಯಾವುದೇ ಆಸಕ್ತಿಯನ್ನು ಪಡೆಯದ ಕೆಲವರು ಆಟಗಾರರಿದ್ದು ಮುಂಬರುವ ಹರಾಜಿನಲ್ಲಿ ಈ ಆಟಗಾರರು ಮಾರಾಟವಾಗದೆ ಇರುವ ಸಾಧ್ಯತೆ ಇದೆ.


ಮಾರಾಟವಾಗದೇ ಉಳಿವ ಆಟಗಾರರು?:


ವರುಣ್ ಆರೋನ್: ವರುಣ್ ಆರೋನ್ ಒಂದು ದಶಕದಿಂದ ಐಪಿಎಲ್‌ನಲ್ಲಿ ಮಿಂಚುತ್ತಿದ್ದಾರೆ. 2014 ಸಮಯದಲ್ಲಿ ವರುಣ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರವಾಗಿ 8.15 ಇಕನಾಮಿಯಲ್ಲಿ 10 ಪಂದ್ಯಗಳಲ್ಲಿ 16 ವಿಕೆಟ್‌ಗಳನ್ನು ಉರುಳಿಸಿದ್ದರು. ಆದರೆ ಟಿ20 ಯ ಏಳನೇ ಆವೃತ್ತಿಯನ್ನು ಹೊರತುಪಡಿಸಿ, 33ರ ಹರೆಯದ ಬೌಲರ್ ವರುಣ್ ಯಾವುದೇ ಹೆಚ್ಚಿನ ಬೌಲಿಂಗ್ ಪ್ರದರ್ಶನವನ್ನು ನೀಡಲಿಲ್ಲ. ಹಲವು ಪಂದ್ಯಗಳಲ್ಲಿ ಎರಡು ವಿಕೆಟ್‌ಗಳನ್ನು ಪಡೆದುಕೊಂಡಿದ್ದರೂ 10.40 ಇಕನಾಮಿಯಲ್ಲಿ ರನ್‌ಗಳನ್ನು ಕೈಚೆಲ್ಲಿದರು ಹೀಗಾಗಿ ತಂಡದಿಂದ ಕೈಬಿಡಲಾಯಿತು. ಡಿಸೆಂಬರ್‌ನಲ್ಲಿ ನಿಗದಿಪಡಿಸಲಾದ ಈವೆಂಟ್‌ನಲ್ಲಿ ವರುಣ್ ಆಯ್ಕೆಯಾಗದೇ ಹೋದರೆ ಹೆಚ್ಚು ಆಶ್ಚರ್ಯಪಡಬೇಕಾಗಿಲ್ಲ.


ಟಿಮ್ ಸೆಫರ್ಟ್: 27 ವರ್ಷ ವಯಸ್ಸಿನ ಟಿಮ್ ಸೆಫರ್ಟ್, 159 ಪಂದ್ಯಗಳಲ್ಲಿ ಅತ್ಯಂತ ಕಡಿಮೆ ಪ್ರದರ್ಶನ ನೀಡಿದ್ದಾರೆ. 125.56 ಸ್ಟ್ರೈಕ್ ರೇಟ್‌ನಲ್ಲಿ 3143 ರನ್‌ಗಳನ್ನು ಗಳಿಸಿದ್ದಾರೆ. ಡೇವಿಡ್ ವಾರ್ನರ್ ಅನುಪಸ್ಥಿತಿಯಲ್ಲಿ ಟಿಮ್‌ಗೆ ಅವಕಾಶ ನೀಡಲಾಗಿದ್ದರೂ ಕಿವೀಸ್ ಆಟಗಾರ ಮಂಕಾದ ಪ್ರದರ್ಶನವನ್ನು ನೀಡಿದ್ದಾರೆ. ಎರಡು ಪಂದ್ಯಗಳಲ್ಲಿ ಕೇವಲ 24 ರನ್ ಗಳಿಸಲು ಮಾತ್ರ ಅವರಿಗೆ ಸಾಧ್ಯವಾಗಿದೆ. ಹೀಗಾಗಿ ಮುಂಬರುವ ಹರಾಜಿನಲ್ಲಿ ಅವರನ್ನು ಆಯ್ಕೆ ಮಾಡಲು ಐಪಿಎಲ್ ಫ್ರಾಂಚೈಸಿಗಳು ಆಸಕ್ತಿ ತೋರಿಸದಿರಬಹುದು.


ಅಜಿಂಕ್ಯ ರಹಾನೆ: 34 ವರ್ಷ ವಯಸ್ಸಿನ ಅಜಿಂಕ್ಯ ಉತ್ತಮ ಪ್ರದರ್ಶನ ತೋರಿರುವ ಆಟಗಾರ ಎಂದೆನಿಸಿದ್ದು 2008 ರಲ್ಲಿ ಐಪಿಎಲ್ ಆರಂಭವಾದಾಗಿನಿಂದ ಲಾಭದಾಯಕ T20 ಪಂದ್ಯಾವಳಿಯ ಭಾಗವಾಗಿದ್ದಾರೆ ಮತ್ತು 158 ಪಂದ್ಯಗಳಲ್ಲಿ 120.68 ಸ್ಟ್ರೈಕ್ ರೇಟ್‌ನಲ್ಲಿ 4074 ರನ್‌ಗಳನ್ನು ಸಂಗ್ರಹಿಸಿದ್ದಾರೆ. ಕೋಲ್ಕತ್ತಾ ತಂಡವನ್ನು ಸೇರಿಕೊಂಡ ನಂತರ ಅಜಿಂಕ್ಯ ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಮತ್ತು ಏಳು ಪಂದ್ಯಗಳಲ್ಲಿ 103.91 ಸ್ಟ್ರೈಕ್ ರೇಟ್‌ನಲ್ಲಿ 133 ರನ್‌ಗಳನ್ನು ಮಾತ್ರ ಗಳಿಸಿದ್ದರು. ಮುಂಬರುವ ಹರಾಜಿನಲ್ಲಿ ಫ್ರಾಂಚೈಸಿಗಳು ಅಜಿಂಕ್ಯಾಗೆ ಮಣೆಹಾಕದಿರಲು ನಿರ್ಧರಿಸಲೂಬಹುದು.


ಅಂಜಿಕ್ಯ ರಹಾನೆ


ಕ್ರಿಸ್ ಜೋರ್ಡನ್: ಕ್ರಿಸ್ ಜೋರ್ಡನ್ ಬೌಲಿಂಗ್ ಪರಾಮಕ್ರಕ್ಕಾಗಿ ಹೆಸರು ಗಿಟ್ಟಿಸಿಕೊಂಡವರು. ಅವರು 84 T20I ಗಳಲ್ಲಿ ಕಾಣಿಸಿಕೊಂಡಿದ್ದು ಮತ್ತು 8.72 ರ ಆರ್ಥಿಕತೆಯಲ್ಲಿ 95 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಬ್ಯಾಟಿಂಗ್ ವಿಭಾಗದಲ್ಲೂ ಉತ್ತಮ ಪ್ರದರ್ಶನ ತೋರಿರುವ ಕ್ರಿಸ್, 136.56 ಸ್ಟೈಕ್ ರೇಟ್‌ನಲ್ಲಿ 472 ರನ್ ಸಿಡಿಸಿದ್ದಾರೆ.


ಚೆನ್ನೈ ಸೂಪರ್ ಕಿಂಗ್ಸ್ ಹಿಂದಿನ ಐಪಿಎಲ್ ಹರಾಜಿನಲ್ಲಿ ಕ್ರಿಸ್‌ ಅನ್ನು ತಂಡಕ್ಕೆ ಸೇರಿಸಿಕೊಂಡಿತು ಆದರೆ ಕ್ರಿಸ್ ತಂಡದ ನಂಬಿಕೆಯನ್ನು ಉಳಿಸಿಕೊಳ್ಳಲಾಗಲಿಲ್ಲ. ಬರೇ ಎರಡು ವಿಕೆಟ್‌ಗಳನ್ನು ಪಡೆಯಲು ಶಕ್ತರಾಗಿದ್ದರು. ಜೋರ್ಡನ್‌ರ ಕಳಪೆ ಪ್ರದರ್ಶನದಿಂದ ಮುಂಬರುವ ಋತುವಿನಲ್ಲಿ ಅವರನ್ನು ಕೈಬಿಟ್ಟಿದೆ. 2022ರ ಸೀಸನ್‌ನಲ್ಲಿ ಕೂಡ ಜೋರ್ಡನ್ ಮುಗ್ಗರಿಸಿದರೆ IPL ತಂಡಗಳು ಮುಂದಿನ ಋತುವಿನಲ್ಲಿ ಅವರನ್ನು ತಮ್ಮ ತಂಡಗಳಲ್ಲಿ ಸೇರಿಸಿಕೊಳ್ಳಲು ಬಯಸುವುದಿಲ್ಲ ಎಂಬುದಂತೂ ನಿಜ.


ಇದನ್ನೂ ಓದಿ:  FIFA World Cup 2022: ಒಂದೇ ಒಂದು ಪಂದ್ಯ ಗೆದ್ದಿದ್ದಕ್ಕೆ ದೇಶಕ್ಕೆ ರಜೆ ಘೋಷಿಸಿದ ದೊರೆ, ಇನ್ನು ಕಪ್​ ಗೆದ್ರೆ ಏನ್​ ಕಥೆ ಎಂದ ನೆಟ್ಟಿಗರು


ಮೊಹಮ್ಮದ್ ನಬಿ: ಟಿ20 ಸರ್ಕ್ಯೂಟ್‌ನಲ್ಲಿ ಉತ್ತಮ ಆಟಗಾರ ಎಂದೆನಿಸಿರುವ ಮೊಹಮ್ಮದ್ ನಬಿ, ವಿಶ್ವದಾದ್ಯಂತ ಟಿ20 ಲೀಗ್‌ಗಳಲ್ಲಿ ತಮ್ಮ ಆಲ್‌ರೌಂಡ್ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. 37ರ ಹರೆಯದ ನಬಿ, 355 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದು 137.64 ಸ್ಟ್ರೈಕ್ ರೇಟ್‌ನಲ್ಲಿ 5203 ರನ್‌ಗಳ ಹೊಳೆ ಹರಿಸಿದ ಆಟಗಾರ. ಬೌಲಿಂಗ್‌ನಲ್ಲಿ ಕೂಡ 6.99 ರ ಇಕನಾಮಿಯಲ್ಲಿ 322 ವಿಕೆಟ್ ಕಬಳಿಸಿದ ಪ್ರಚಂಡ ಆಟಗಾರ.


ಕೋಲ್ಕತ್ತಾ ಪಡೆಯನ್ನು ಸೇರಿಕೊಂಡ ಅನುಭವಿ ಆಟಗಾರ ಒಬ್ಬ ವಿಫಲ ಆಟಗಾರನೆಂಬ ಪಟ್ಟಕ್ಕೆ ಗುರಿಯಾಗಬೇಕಾಯಿತು. ಅಪ್ಘಾನಿಸ್ತಾನದ ಕ್ರಿಕೆಟ್ ಪಟು, ಕೆಕೆಆರ್‌ನ ಮುಂದಿನ ನಿರ್ಧಾರಗಳಿಗೆ ಒಗ್ಗಿಕೊಳ್ಳದ ಆಟಗಾರ ಎಂದೆನಿಸಿದರು ಹಾಗೂ ಮುಂಬರುವ ಹರಾಜಿನ ಮೊದಲು ಫ್ರಾಂಚೈಸಿ ಅವರನ್ನು ಬಿಡುಗಡೆ ಮಾಡಿತು. ಐಪಿಎಲ್ 2023 ರ ಹರಾಜಿನಲ್ಲಿ ಫ್ರಾಂಚೈಸಿಗಳು ಈ ಆಟಗಾರನನ್ನು ಬಿಡ್ ಮಾಡಲು ಹಿಂದೇಟು ಹಾಕಿದ್ದು ಈ ಹಿಂದಿನ ಫಾರ್ಮ್‌ನಲ್ಲಿ ನಬಿ ಇಲ್ಲ ಎಂಬುದೇ ಇದಕ್ಕೆ ಕಾರಣವಾಗಿದೆ.

Published by:shrikrishna bhat
First published: