• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • RCB vs KKR: ಆರ್​ಸಿಬಿ ವಿರುದ್ಧ ಕೋಲ್ಕತ್ತಾ ತಂಡವೇ ಬಲಿಷ್ಠವಂತೆ! ಅಂಕಿಅಂಶ ನೋಡಿದ್ರೆ ಶಾಕ್​ ಆಗ್ತೀರಾ

RCB vs KKR: ಆರ್​ಸಿಬಿ ವಿರುದ್ಧ ಕೋಲ್ಕತ್ತಾ ತಂಡವೇ ಬಲಿಷ್ಠವಂತೆ! ಅಂಕಿಅಂಶ ನೋಡಿದ್ರೆ ಶಾಕ್​ ಆಗ್ತೀರಾ

RCB vs KKR

RCB vs KKR

IPL 2023, RCB vs KKR: ಐಪಿಎಲ್ 2023ರ ಒಂಬತ್ತನೇ ಪಂದ್ಯದಲ್ಲಿ, ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಹಣಾಹಣಿ ನಡೆಯಲಿದೆ.

  • Share this:

ಐಪಿಎಲ್ 2023ರ (IPL 2023) ಒಂಬತ್ತನೇ ಪಂದ್ಯದಲ್ಲಿ, ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಪಂದ್ಯ ನಡೆಯಲಿದೆ. ಉಭಯ ತಂಡಗಳ ನಡುವಿನ ಈ ರೋಚಕ ಪಂದ್ಯ ಐತಿಹಾಸಿಕ ಕ್ರಿಕೆಟ್ ಮೈದಾನ ಈಡನ್ ಗಾರ್ಡನ್ಸ್ ನಲ್ಲಿ (Eden Gardens) ರಾತ್ರಿ 7ರಿಂದ ನಡೆಯಲಿದೆ. ಕೋಲ್ಕತ್ತಾ ನೈಟ್​ ರೈಡರ್ಸ್​ ಈ ಪಂದ್ಯವನ್ನು ಗೆಲ್ಲಲು ಮತ್ತು ಈ ಋತುವಿನ ಮೊದಲ ಜಯವನ್ನು ಪಡೆಯಲು ಸಿದ್ಧವಾಗಿದೆ. ಮತ್ತೊಂದೆಡೆ, RCB ತಂಡವು ಈ ಪಂದ್ಯವನ್ನು ಗೆದ್ದು ಈ ಋತುವಿನ ಎರಡನೇ ಯಶಸ್ಸನ್ನು ಸಾಧಿಸಲು ರೆಡಿಯಾಗಿದೆ. ಪಂದ್ಯದ ಆರಂಭಕ್ಕೂ ಮುನ್ನ ಐಪಿಎಲ್ ಇತಿಹಾಸದಲ್ಲಿ ಉಭಯ ತಂಡಗಳು ನಡುವೆ ಎಷ್ಟು ಬಾರಿ ಮುಖಾಮುಖಿ ಆಗಿದ್ದವು, ಯಾವ ತಂಡ ಬಲಿಷ್ಠವಾಗಿದೆ ಎಂದು ನೋಡೋಣ ಬನ್ನಿ.


ಆರ್​ಸಿಬಿಗಿಂತ ಕೋಲ್ಕತ್ತಾ ಬಲಿಷ್ಠ:


ಐಪಿಎಲ್‌ನಲ್ಲಿ ಇದುವರೆಗೆ ಕೆಕೆಆರ್ ಮತ್ತು ಆರ್‌ಸಿಬಿ ನಡುವೆ ಒಟ್ಟು 30 ಪಂದ್ಯಗಳು ನಡೆದಿವೆ. ಈ ವೇಳೆ ಆರ್‌ಸಿಬಿ ವಿರುದ್ಧ ಕೆಕೆಆರ್‌ ಮೇಲುಗೈ ಸಾಧಿಸಿದೆ. ಕೆಕೆಆರ್ ಆರ್‌ಸಿಬಿ ವಿರುದ್ಧ 16 ಪಂದ್ಯಗಳನ್ನು ಗೆದ್ದಿದೆ. ಅದೇ ಸಮಯದಲ್ಲಿ, ಆರ್​ಸಿಬಿ ತಂಡವು ಕೋಲ್ಕತ್ತಾ ವಿರುದ್ಧ 14 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಇದಲ್ಲದೇ, ಸೋಲಿನ ಬಗ್ಗೆ ನೋಡುವುದಾದರೆ, ಕೆಕೆಆರ್ ಇದುವರೆಗೆ ಒಟ್ಟು 14 ಪಂದ್ಯಗಳಲ್ಲಿ ಆರ್‌ಸಿಬಿ ವಿರುದ್ಧ ಸೋಲು ಕಂಡಿದೆ.


ಇದಲ್ಲದೇ ಆರ್‌ಸಿಬಿ ತಂಡ ಕೆಕೆಆರ್ ವಿರುದ್ಧ 16 ಪಂದ್ಯಗಳಲ್ಲಿ ಸೋಲನುಭವಿಸಬೇಕಿದೆ. ಹೀಗಾಗಿ ಐಪಿಎಲ್​ ಅಂಕಿಅಂಶಗಳ ಪ್ರಕಾರ ನೋಡುವುದಾದರೆ, ಆರ್​ಸಿಬಿ ವಿರುದ್ಧ ಕೆಕೆಆರ್​ ಬಲಿಷ್ಠವಾಗಿ ಕಾಣುತ್ತಿದೆ. ಆದರೆ ಈ ಸೀಸನ್​ನಲ್ಲಿ ಕೋಲ್ಕತ್ತಾಗಿಂತ ಬೆಂಗಳೂರು ತಂಡವು ಹೆಚ್ಚು ಬಲಿಷ್ಠವಾಗಿದ್ದು, ಇಂದಿನ ಪಂದ್ಯ ಗೆಲ್ಲುವ ಹಾಟ್​ ಫೇವರೆಟ್​ ಟೀಂ ಆಗಿದೆ.


ಇದನ್ನೂ ಓದಿ: IPL 2023: ಕೋಲ್ಕತ್ತಾ ವಿರುದ್ಧ ಪಂದ್ಯಕ್ಕೆ RCB ನಾಲ್ವರು ಆಟಗಾರರು ಅಲಭ್ಯ, ಹೀಗಿರಲಿದೆ ಬೆಂಗಳೂರು ತಂಡದ ಪ್ಲೇಯಿಂಗ್​ 11


ಈಡನ್​ ಗಾರ್ಡನ್​ ಅಂಕಿಅಂಶ:


ಇನ್ನು, ತಂಡಗಳ ಅಂಕಿಅಂಶದ ಬಳಿಕ ಪಂದ್ಯ ನಡೆಯಲಿರುವ ಕೋಲ್ಕತ್ತಾದ ಈಡನ್​ ಗಾರ್ಡನ್​ ಮೈದಾನದ ಬಗ್ಗೆ ನೋಡೋಣ ಬನ್ನಿ. ಇಲ್ಲಿ ಬಾಂಗ್ಲಾದೇಶದ ವಿರುದ್ಧ ಪಾಕಿಸ್ತಾನವು 201/5 ಸ್ಕೋರ್ ಗರಿಷ್ಠ ಮೊತ್ತವಾಗಿದೆ. ಅಲ್ಲದೇ ಈ ಪಿಚ್​ ಹೆಚ್ಚು ಬ್ಯಾಟ್ಸ್​ಮನ್​ಗಳಿಗೆ ಸಹಕಾರಿಯಾಗಿದೆ. ಜೊತೆಗೆ 2019ರಲ್ಲಿ ಆರ್​ಸಿಬಿ ಮತ್ತು ಕೋಲ್ಕತ್ತಾ ನಡುವೆ ನಡೆದ ಪಂದ್ಯದಲ್ಲಿ ಆರ್​ಸಿಬಿ ತಂಡ 10 ರನ್​ಗಳಿಂದ ಗೆಲುವು ದಾಖಲಿಸಿತ್ತು. ಆ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದ್ದರು.




ಹೀಗಾಗಿ ಇಂದು ಟಾಸ್ ಗೆದ್ದ ನಾಯಕ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಇನ್ನು, ಹವಾಮಾನ ಮುನ್ಸೂಚನೆ ನೋಡುವುದಾದರೆ, ಇಂದು ಕೋಲ್ಕತ್ತಾದಲ್ಲಿ ಗರಿಷ್ಠ ತಾಪಮಾನವು 37 ° C ಹಾಗೂ ತೇವಾಂಶವು ಶೇ.44ರಷ್ಟಿರುತ್ತದೆ. ಮಳೆ ಬರುವ ಸಾಧ್ಯತೆ ಇಲ್ಲ.


RCB vs KKR ಸಂಭಾವ್ಯ ಪ್ಲೇಯಿಂಗ್​ 11:


ಆರ್​ಸಿಬಿ ಸಂಭಾವ್ಯ ಪ್ಲೇಯಿಂಗ್ 11: ಫಾಫ್ ಡುಪ್ಲೆಸಿಸ್ (C), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮೈಕಲ್ ಬ್ರೇಸ್‌ವೆಲ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್ (WK), ಕರ್ಣ್ ಶರ್ಮಾ, ಹರ್ಷಲ್ ಪಟೇಲ್, ಆಕಾಶ್ ದೀಪ್, ಡೇವಿಡ್ ವಿಲ್ಲಿ, ಮೊಹಮ್ಮದ್ ಸಿರಾಜ್.


ಕೊಲ್ಕತ್ತಾ ಸಂಭಾವ್ಯ ಪ್ಲೇಯಿಂಗ್ 11: ರಹಮಾನುಲ್ಲಾ ಗುರ್ಬಾಜ್, ಮಂದೀಪ್ ಸಿಂಗ್, ನಿತೀಶ್ ರಾಣಾ (ನಾಯಕ), ರಿಂಕು ಸಿಂಗ್, ಆಂಡ್ರೆ ರಸೆಲ್, ಶಾರ್ದೂಲ್ ಠಾಕೂರ್, ಸುನಿಲ್ ನರೇನ್, ಲಾಕಿ ಫರ್ಗುಸನ್, ಅಂಕುಲ್ ರಾಯ್, ಉಮೇಶ್ ಯಾದವ್, ವರುಣ್ ಚಕ್ರವರ್ತಿ.

First published: