• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • RR vs RCB: ಪಂದ್ಯದ ಗತಿಯನ್ನೇ ಬದಲಿಸಿದ ಆ ಒಂದು ರನೌಟ್​, ರಾಜಸ್ಥಾನ್​ ವಿರುದ್ಧ ಆರ್​ಸಿಬಿಗೆ ರೋಚಕ ಜಯ

RR vs RCB: ಪಂದ್ಯದ ಗತಿಯನ್ನೇ ಬದಲಿಸಿದ ಆ ಒಂದು ರನೌಟ್​, ರಾಜಸ್ಥಾನ್​ ವಿರುದ್ಧ ಆರ್​ಸಿಬಿಗೆ ರೋಚಕ ಜಯ

ಆರ್​ಸಿಬಿಗೆ ರೋಚಕ ಜಯ

ಆರ್​ಸಿಬಿಗೆ ರೋಚಕ ಜಯ

RR vs RCB: ರಾಜಸ್ಥಾನ್​ ತಂಡವು ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 182 ರನ್​ ಗಳಿಸುವ ಮೂಲಕ  7 ರನ್​ಗಳ ರೋಚಕ ಗೆಲುವು ದಾಖಲಿಸಿತು.

  • Share this:

ರಾಯಲ್​ ಚಾಲೆಂಜರ್ಸ್​ ಮತ್ತು ರಾಜಸ್ಥಾನ (RCB vs RR) ನಡುವಿನ ಪಂದ್ಯವು ಅಭಿಮಾನಿಗಳಿಗೆ ಸಖತ್​ ಥ್ರಿಲ್​ ನಡೆಯಿತು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಗೋಲ್ಡನ್ ಡಕ್ ನಂತರ ಫಾಫ್ ಡು ಪ್ಲೆಸಿಸ್ ಹಾಗೂ ಗ್ಲೆನ್ ಮ್ಯಾಕ್ಸ್ ವೆಲ್ ಅಬ್ಬರದ ಬ್ಯಾಟಿಂಗ್​ ಮಾಡಿದರು. ಈ ಮೂಲಕ ಆರ್​ಸಿಬಿ 20 ಓವರ್​ಗೆ 9 ವಿಕೆಟ್​ ನಷ್ಟಕ್ಕೆ 189 ರನ್ ಗಳಿಸಿತು. ಈ ಮೊತ್ತ ಬೆನ್ನಟ್ಟಿದ ರಾಜಸ್ಥಾನ್​ ತಂಡವು ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 182 ರನ್​ ಗಳಿಸಿತು. ಈ ಮೂಲಕ ಆರ್​ಸಿಬಿ ತಂಡ  7 ರನ್​ಗಳ ರೋಚಕ ಗೆಲುವು ದಾಖಲಿಸಿತು.


ದೇವದತ್​ ಪಡ್ಡಿಕಲ್​ ಹೋರಾಟ್ ವ್ಯರ್ಥ:


ಇನ್ನು, ಆರ್​ಸಿಬಿ ನೀಡಿದ ಟಾರ್ಗೆಟ್​​ ಬೆನ್ನಟ್ಟಿದ ರಾಜಸ್ಥಾನ್​ ತಂಡ 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 182 ರನ್ ಗಳಿಸಿತು. ಆರ್​ಆರ್​ ಪರ, ಜೋಸ್ ಬಟ್ಲರ್ ಶೂನ್ಯ, ಯಶಸ್ವಿ ಜೈಸ್ವಾಲ್ 47 ರನ್, ಸಂಜು ಸ್ಯಾಮ್ಸನ್ 22 ರನ್, ದೇವದತ್ ಪಡಿಕ್ಕಲ್ 52 ರನ್, ಶಿಮ್ರಾನ್ ಹೆಟ್ಮೆಯರ್ 3 ರನ್, ಧ್ರುವ್ ಜುರೆಲ್ 34 ರನ್, ರವಿಚಂದ್ರನ್ ಅಶ್ವಿನ್ 12 ರನ್ ಮತ್ತು ಅಬ್ದುಲ್​ ಬಾಸಿತ್​ 1 ರನ್ ಗಳಿಸಿದರು.



ಆರ್​ಸಿಬಿ ಭರ್ಜರಿ ಬೌಲಿಂಗ್:


ಇನ್ನು, ಆರ್​ಸಿಬಿ ತಂಡದ ಬೌಲರ್​ಗಳು ಇಂದು ಉತ್ತಮ ಬೌಲಿಂಗ್​ ಪ್ರದರ್ಶನ ನೀಡಿದರು. ಆರ್​ಸಿಬಿ ಪರ ಹರ್ಷಲ್​ ಪಟೇಲ್​ 4 ಓವರ್​ ಬೌಲ್ ಮಾಡಿ 32 ರನ್ ನೀಡಿ 3 ವಿಕೆಟ್​ ಪಡೆದರು. ಉಳಿಂದತೆ ಮೊಹಮ್ಮದ್ ಸಿರಾಜ್, ಡೇವಿಡ್ ವಿಲ್ಲಿ ತಲಾ 1 ವಿಕೆಟ್​ ಪಡೆದರು.


ಇದನ್ನೂ ಓದಿ: IPL 2023: ಜಸ್ಟ್​ ಒಂದೇ ಒಂದು ಥ್ರೋ, ಆರ್​ಸಿಬಿ ಇಂದ ಬಿಸಿಸಿಐಗೆ ಲಕ್ಷ ಲಕ್ಷ ಲಾಸ್​!


3ನೇ ಶತಕದ ಜೊತೆಯಾಟ:


ಫಾಫ್ ಡು ಪ್ಲೆಸಿಸ್ 39 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 8 ಬೌಂಡರಿಗಳ ನೆರವಿನಿಂದ 62 ರನ್ ಗಳಿಸಿದರೆ, ಮ್ಯಾಕ್ಸ್‌ವೆಲ್ 44 ಎಸೆತಗಳಲ್ಲಿ 72 ರನ್ ಗಳಿಸಿದರು. ಈ ಇನ್ನಿಂಗ್ಸ್‌ನಲ್ಲಿ ಮ್ಯಾಕ್ಸ್‌ವೆಲ್ ಅವರ ಬ್ಯಾಟ್‌ನಿಂದ 4 ಸಿಕ್ಸರ್ ಮತ್ತು 6 ಬೌಂಡರಿಗಳು ಹೊರಬಂದವು. ಐಪಿಎಲ್ 2023 ರಲ್ಲಿ ಇಲ್ಲಿಯವರೆಗೆ, ಆರ್‌ಸಿಬಿಯ ಬ್ಯಾಟಿಂಗ್ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಫಾಫ್ ಡು ಪ್ಲೆಸಿಸ್ ಮೇಲೆ ಅವಲಂಬಿತವಾಗಿದೆ. ಈ ಬ್ಯಾಟ್ಸ್‌ಮನ್‌ಗಳು ಔಟಾದ ಕೂಡಲೇ ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬ್ಯಾಟಿಂಗ್‌ ಮತ್ತೊಮ್ಮೆ ತತ್ತರಿಸಿತು.




16ನೇ ಋತುವಿನಲ್ಲಿ ಇಬ್ಬರು ಬ್ಯಾಟ್ಸ್‌ಮನ್‌ಗಳ ನಡುವೆ ಅದ್ಭುತ ಜೊತೆಯಾಟ ಕಂಡುಬಂದಿದೆ. ಡು ಪ್ಲೆಸಿಸ್ ಮತ್ತು ಮ್ಯಾಕ್ಸ್‌ವೆಲ್ ಇದುವರೆಗೆ 7 ಪಂದ್ಯಗಳಲ್ಲಿ 3 ಶತಕಗಳ ಜೊತೆಯಾಟವಾಡಿದ್ದಾರೆ. ಇದಕ್ಕೂ ಮುನ್ನ ಇಬ್ಬರೂ ಲಕ್ನೋ ವಿರುದ್ಧ ಒಟ್ಟಿಗೆ 115 ರನ್ ಗಳಿಸಿದ್ದರು. ಆ ಬಳಿಕ ಚೆನ್ನೈ ಕೂಡ 126 ರನ್ ಗಳ ಜೊತೆಯಾಟ ಮತ್ತು ರಾಜಸ್ಥಾನ ವಿರುದ್ಧ 127 ರನ್‌ಗಳ ಜೊತೆಯಾಟ ನೀಡಿದ್ದಾರೆ. ಉಳಿದಂತೆ ಮಹಿಪಾಲ್ ಲೊಮ್ರೋರ್ 8 ರನ್, ಸುಯಶ್ ಪ್ರಭುದೇಸಾಯಿ ಶೂನ್ಯ, ವನಿಂದು ಹಸರಂಗ 6 ರನ್, ದಿನೇಶ್​ ಕಾರ್ತಿಕ್​ 16 ರನ್, ವೈಶಾಕ್​ ವಿಜಯ್​ಕುಮಾರ್ 0 ರನ್​ ಗಳಸಿದರು.


ಮಿಂಚಿದ ಟ್ರೆಂಟ್​ ಬೌಲ್ಟ್:


ರಾಜಸ್ಥಾನ್​ ಪರ ಟ್ರೆಂಟ್​ ಬೌಲ್ಟ್​ ಆರ್​ಸಿಬಿ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಯಶಸ್ವಿಯಾದರು. ಬೋಲ್ಟ್ 4 ಓವರ್​ಗೆ 41 ರನ್ ನೀಡಿ 2 ವಿಕೆಟ್​ ಪಡೆದರು. ಉಳಿದಂತೆ ರವಿಚಂದ್ರನ್​ ಅಶ್ವಿನ್​ ಮತ್ತು ಚಹಾಲ್​ ತಲಾ 1 ವಿಕೆಟ್​ ಪಡೆದು ಮಿಂಚಿದರು.

top videos
    First published: